wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 03:ನಟರಾಜ &ಭಾಗ್ವತ್

Total questions: 10

Worksheet time: 5mins

Name
Class
Date
1.

ಆರ್ಯ ಸಮಾಜವು ಈ ಕೆಳಗಿನ ಉದ್ದೇಶಗಳನ್ನು ಹೊಂದಿತ್ತು.

a)

ಎಲ್ಲ ಹಿಂದುಗಳು ರೂಪವಿಲ್ಲದ ಒಬ್ಬನೇ ದೇವರಲ್ಲಿ ನಂಬಿಕೆಯಿಡಬೇಕು. ಹುಟ್ಟಿನಿಂದ ಯಾರೂ ಶೂದ್ರರೂ ಅಲ್ಲ ಅಥವಾ ಬ್ರಾಹ್ಮಣರೂ ಅಲ್ಲವೆಂದು ಜಾತಿ ಆಧಾರವನ್ನು ತಿರಸ್ಕರಿಸಿರು.

b)

ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸುವುದು. ಬಹುಪತ್ನಿತ್ವ ಮತ್ತು ಬಾಲ್ಯವಿವಾಹ ಪದ್ಧತಿಯನ್ನು ತಿರಸ್ಕರಿಸುವುದು.

c)

ಸ್ತ್ರೀ ಮತ್ತು ಪುರುಷರು ಸಮಾನರು. . ವೇದಗಳು ಮಾತ್ರ ಶ್ರೇಷ್ಠ. ಪ್ರಾಚೀನ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಮತ್ತು ಬೋಧಿಸಬೇಕು.

d)

ಕೊಟ್ಟಿರುವ ಎಲ್ಲವೂ

2.

ಹಿಂದೂಧರ್ಮದಿಂದ ಇಸ್ಲಾಂ ಮತ್ತು ಕ್ರೈಸ್ತಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ‘ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವ ಇದು ಆರ್ಯ ಸಮಾಜದ ಮತ್ತೊಂದು ಪ್ರಮುಖ ಕಾರ್ಯಸೂಚಿ

a)

‘ಶುದ್ಧಿ’ ಚಳವಳಿ.

b)

ಯುವ ಬಂಗಾಳಿ ಚಳುವಳಿ

c)

ಸಾಮಾಜಿಕ ಚಳುವಳಿ

d)

ಕೊಟ್ಟಿರುವ ಯಾವುದೂ ಅಲ್ಲ

3.

ಭಾರತೀಯ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ತೀವ್ರವಾದಿಗಳಾದ ಲಾಲಾ ಲಜಪತ್‍ರಾಯ್ ಅವರು ಈ ಸಮಾಜದ ತತ್ವಗಳಿಂದ ಪ್ರೇರಣೆ ಪಡೆದಿದ್ದರು.

a)

ಪ್ರಾರ್ಥನಾ ಸಮಾಜ

b)

ಆರ್ಯ ಸಮಾಜ

c)

ಬ್ರಹ್ಮ ಸಮಾಜ

d)

ಯುವ ಬಂಗಾಳಿ ಚಳುವಳಿ

4.

ಬ್ರಹ್ಮಸಮಾಜದ ತಾತ್ವಿಕ ಪ್ರಭಾವದಿಂದ ಈ ಸಮಾಜವು ಸಮಾಜ ಸುಧಾರಣಾ

ಚಳವಳಿಯನ್ನು ರೂಪಿಸಿತು

a)

ಪ್ರಾರ್ಥನಾ ಸಮಾಜ

b)

ಆರ್ಯ ಸಮಾಜ

c)

ಯುವ ಬಂಗಾಳಿ ಚಳುವಳಿ

d)

ಸತ್ಯ ಶೋಧಕ ಸಮಾಜ

5.

ಮಹಿಳೆಯರ ಸಮಸ್ಯೆಗಳನ್ನಷ್ಟೇ ಅಲ್ಲದೆ ಶೂದ್ರಾತಿಶೂದ್ರ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಡಾ. ಆತ್ಮಾರಾಮ್ ಪಾಂಡುರಂಗ ಅವರ ನೇತೃತ್ವದಲ್ಲಿ ಮುಂಬೈಯಲ್ಲಿ ಪ್ರಾರಂಭವಾದ ಸಂಘಟನೆ

a)

ಆರ್ಯ ಸಮಾಜ

b)

ಪ್ರಾರ್ಥನಾ ಸಮಾಜ

c)

ಸತ್ಯಶೋಧಕ ಸಮಾಜ

d)

ಅಲಿಘರ್ ಚಳುವಳಿ

6.

ಪಶ್ಚಿಮದ ಆಧುನಿಕ ಆಲೋಚನೆಗಳ ಹಿನ್ನೆಲೆಯಲ್ಲಿ ಹಿಂದೂ ಧರ್ಮವನ್ನು ಪುನರ್ ವಿಮರ್ಶಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸಂಘಟನೆ

a)

ಬ್ರಹ್ಮ ಸಮಾಜ

b)

ಆರ್ಯ ಸಮಾಜ

c)

ಪ್ರಾರ್ಥನಾ ಸಮಾಜ

d)

ಯುವ ಬಂಗಾಳಿ ಚಳುವಳಿ

7.

ಪ್ರಾರ್ಥನಾ ಸಮಾಜದ ಕಾರ್ಯಗಳನ್ನು ಗುರುತಿಸಿ

a)

ಪಶ್ಚಿಮದ ಆಧುನಿಕ ಆಲೋಚನೆಗಳ ಹಿನ್ನೆಲೆಯಲ್ಲಿ ಹಿಂದೂ ಧರ್ಮವನ್ನು ಪುನರ್ ವಿಮರ್ಶಿಸಿಕೊಳ್ಳುವ ಅಗತ್ಯವಿದೆ ಎಂದು ಈ ಸಂಘಟನೆಯು

ಪ್ರತಿಪಾದಿಸಿತು.

b)

ಸಮಾಜ ಸುಧಾರಣೆಯೆಂಬುದು ಕೇವಲ ನಂಬಿಕೆಯಾಗಿ ಉಳಿಯದೆ ವಾಸ್ತವದಲ್ಲಿ

ಅನುಷ್ಠಾನಗೊಳ್ಳಬೇಕು ಎಂದು ಒತ್ತಾಯಿಸಿತು.

c)

ಸ್ತ್ರೀಯರ ಶಿಕ್ಷಣ, ನಿರ್ಗತಿಕರಿಗೆ ಬದುಕುವ ಆಸರೆಯನ್ನು ಕಲ್ಪಿಸುವುದು ಮುಂತಾದ ಕಾರ್ಯಕ್ರಮಗಳು ಅನುಷ್ಠಾನಗೊಂಡವು

d)

ಕೊಟ್ಟಿರುವ ಎಲ್ಲವೂ

8.

ಬಾಲ್ಯವಿವಾಹ, ವಿಧವೆಯರನ್ನು ತಿರಸ್ಕೃತ ಬದುಕಿನಿಂದ ಹೊರತರುವುದು, ಉನ್ನತಜಾತಿಗಳಲ್ಲಿ ವಿಧವಾ ಪುನರ್ ವಿವಾಹ ನಿಷೇಧಗಳನ್ನು ಸುಧಾರಣೆಗೆ ಕಾನೂನಿನ ಕ್ರಮ ಅತ್ಯವಶ್ಯವೆಂದು ಭಾವಿಸಿ ಈ ಹಿನ್ನೆಲೆಯಲ್ಲಿ ಬ್ರಿಟಿಷ ಸರಕಾರದ ನೆರವನ್ನು ಪಡೆಯುವುದು ಸರಿಯಾದ ಕ್ರಮವೆಂದ ನಾಯಕರು

a)

ಎನ್.ಜಿ. ಚಂದಾವರ್ಕರ್

b)

ಆರ್.ಜಿ. ಭಂಡಾರ್ಕರ್

c)

ಮಹದೇವ ಗೋವಿಂದ ರಾನಡೆ

d)

ರಾಜಾರಾಮ ಮೋಹನರಾಯರು

9.

1873ರಲ್ಲಿ ಹುಟ್ಟಿದ ಈ ಸಮಾಜವು ಬ್ರಾಹ್ಮಣೇತರ ವರ್ಗಗಳಿಗೆ ಮತ್ತು ಸ್ತ್ರೀಯರಿಗೆ ಸಮಾನತೆಯ ಹಕ್ಕುಗಳನ್ನು ದೊರಕಿಸಿಕೊಡುವ ಚಳವಳಿಯನ್ನು ಪ್ರಾರಂಭಿಸಿತು

a)

ಸತ್ಯಶೋಧಕ ಸಮಾಜ

b)

ಆರ್ಯ ಸಮಾಜ

c)

ಪ್ರಾರ್ಥನಾ ಸಮಾಜ

d)

ಕೊಟ್ಟಿರುವ ಯಾವುದೂ ಅಲ್ಲ

10.

ಸತ್ಯಶೋಧಕ ಸಮಾಜದ ಸ್ಥಾಪಕರು

a)

ದಯಾನಂದ ಸರಸ್ವತಿ

b)

ಮಹದೇವ ಗೋವಿಂದ ರಾನಡೆ

c)

ಆತ್ಮಾರಾಂ ಪಾಂಡುರಂಗ

d)

ಜ್ಯೋತಿಭಾ ಫುಲೆ