wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 01:By Nataraj &Bhagwat

Total questions: 10

Worksheet time: 5mins

Name
Class
Date
1.

ಇವರ ಪ್ರಯತ್ನ ಕರ್ನಾಟಕದಲ್ಲಿ ಬ್ರಿಟಿಷ್ ವಿರೋಧಿ ಬಂಡಾಯದ ಆರಂಭಿಕ ಅಧ್ಯಾಯ.

a)

ಹೈದರಾಲಿ-ಟಿಪ್ಪು ಸುಲ್ತಾನ

b)

ದೋಂಡಿಯ ವಾಘ

c)

ಕಿತ್ತೂರು ಚೆನ್ನಮ್ಮ

d)

ಸುರಪುರ ನಾಯಕರು

2.

ಭಾರತದ ಚರಿತ್ರೆಯಲ್ಲಿ 18ನೇ ಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ವೆಂದೇ ಚಿತ್ರಿಸಲ್ಪಟ್ಟಿದೆ. ಇದಕ್ಕೆ ಪ್ರಮುಖ ಕಾರಣವಾಗಿದೆ.

a)

ಮರಾಠರ ಅವನತಿ

b)

ಮೊಘಲ್ ಚಕ್ರವರ್ತಿ ಔರಂಗಜೇಬ್‍ನ ಮರಣ 1707ರಲ್ಲಿ ಸಂಭವಿಸಿದ್ದು

c)

ಪ್ಲಾಸಿ ಕಾಳಗ

d)

ಬಕ್ಸಾರ್ ಕಾಳಗ

3.

ಮೈಸೂರು ರಾಜ್ಯದ ರಾಜಕೀಯ ಬೆಳವಣಿಗೆಯ ಮೇಲೆ ದುಷ್ಟರಿಣಾಮಗಳನ್ನು ಬೀರಿದ ಘಟನೆ

a)

ಹೈದರಾಲಿ ಮರಣ

b)

ಟಿಪ್ಪುವಿನ ಮರಣ

c)

1704ರಲ್ಲಿ ಸಂಭವಿಸಿದ ಚಿಕ್ಕದೇವರಾಜ ಒಡೆಯರ ಮರಣ

d)

ಈಸ್ಟ ಇಂಡಿಯಾ ಕಂಪನಿ ಅವನತಿ

4.

ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು

ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ

ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.

a)

ದೊಂಡಿಯ ವಾಘ

b)

ಹೈದರಾಲಿ

c)

ಟಿಪ್ಪು ಸುಲ್ತಾನ್

d)

ವೆಂಕಟಪ್ಪ ನಾಯಕ

5.

ಚುರುಕಿನ ಸೈನಿಕ ಕಾರ್ಯಾಚರಣೆಗಳ ಮೂಲಕ ದಳವಾಯಿಗಳ ಬಲ ಕುಂದಿಸಿ,

ಅರಸರಾಗಿದ್ದ ಕೃಷ್ಣರಾಜ ಒಡೆಯರವರನ್ನು ಮೂಲೆಗುಂಪಾಗಿಸಿ ಅಧಿಕಾರದ

ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿದನು.

a)

ಹೈದರಾಲಿ

b)

ಸಂಗೊಳ್ಳಿ ರಾಯಣ್ಣ

c)

ದೊಂಡಿಯ ವಾಘ

d)

ಟಿಪ್ಪು ಸುಲ್ತಾನ್

6.

ಮೊದಲನೇ ಆಂಗ್ಲೋ -ಮೈಸೂರು ಯುದ್ಧ ಆರಂಭವಾಗಲು ಕಾರಣವಾದ ಘಟನೆ

a)

1767ರಲ್ಲಿ ಹೈದರಾಲಿ ಮತ್ತು ನಿಜಾಮ, ಬ್ರಿಟಿಷರ ಆಶ್ರಿತ ದೇಶೀಯ ರಾಜ್ಯವಾಗಿದ್ದ ಆರ್ಕಾಟಿಗೆ ಮುತ್ತಿಗೆ ಹಾಕಿದರು.

b)

ಹೈದರಾಲಿ ಮರಾಠರ ಜೊತೆ ಒಪ್ಪಂದ ಮಾಡಿಕೊಂಡನು

c)

ಹೈದರಾಲಿ ಹೈದ್ರಾಬಾದ್ ನಿಜಾಮನ ಜೊತೆ ಒಪ್ಪಂದ ಮಾಡಿಕೊಂಡನು

d)

ಕೊಟ್ಟಿರುವ ಯಾವುದೂ ಅಲ್ಲ

7.

ಮೊದಲನೇ ಆಂಗ್ಲೋ-ಮೈಸೂರು ಯುದ್ಧದ ಘಟನೆ ಗುರುತಿಸಿ

a)

1767ರಲ್ಲಿ ಹೈದರಾಲಿ ಮತ್ತು ನಿಜಾಮ, ಬ್ರಿಟಿಷರ ಆಶ್ರಿತ ದೇಶೀಯ ರಾಜ್ಯವಾಗಿದ್ದ ಆರ್ಕಾಟಿಗೆ ಮುತ್ತಿಗೆ ಹಾಕಿದರು. ಇದರಿಂದಾಗಿ ಯುದ್ಧ ಪ್ರಾರಂಭವಾಯಿತು.

b)

ತಿರುಚನಾಪಳ್ಳಿ, ತಿರುವಣ್ಣಾಮಲೈ, ಅಂಬೂರು ಮೊದಲಾದ

ಸ್ಥಳಗಳಲ್ಲಿ ಕದನಗಳು ಸಂಭವಿಸಿದವು. ಈ ಸಂದರ್ಭದಲ್ಲಿ ಹೈದರಾಲಿ ಮಿಂಚಿನ ಸೈನಿಕ ಕಾರ್ಯಾಚರಣೆಗಳನ್ನು ನಡೆಸಿದನು. ಬ್ರಿಟಿಷ ಸೈನ್ಯ ಅನೇಕ ಸ್ಥಳಗಳನ್ನು ವಶಪಡಿಸಿಕೊಂಡಿತು.

c)

ಹೈದರ್ ತಾತ್ಕಾಲಿಕ ಹಿನ್ನೆಡೆ ಅನುಭವಿಸಿದನು. ಮುಂಬಯಿಯ ಬ್ರಿಟಿಷ ಸೈನ್ಯ ರಂಗವನ್ನು ಪ್ರವೇಶಿಸಿತು.

d)

ಕೊಟ್ಟಿರುವ ಎಲ್ಲವೂ

8.

ಮೊದಲನೇ ಆಂಗ್ಲೋ-ಮೈಸೂರು ಯುದ್ಧ 1769ರಲ್ಲಿ ಸಹಿ ಹಾಕಲ್ಪಟ್ಟ ಈ ಒಪ್ಪಂದದೊಂದಿಗೆ ಮುಕ್ತಾಯವಾಯಿತು

a)

ಮದ್ರಾಸ್ ಒಪ್ಪಂದದೊಂದಿಗೆ ಕೊನೆಯಾಯಿತು.

b)

ಶ್ರೀರಂಗಪಟ್ಟಣ ಒಪ್ಪಂದದೊಂದಿಗೆ ಮುಕ್ತಾಯ ವಾಯಿತು

c)

ಮಂಗಳೂರು ಒಪ್ಪಂದದೊಂದಿಗೆ ಮುಕ್ತಾಯ ವಾಯಿತು

d)

ಸಾಲ್ಬಾಯ್ ಒಪ್ಪಂದದೊಂದಿಗೆ ಮುಕ್ತಾಯ ವಾಯಿತು

9.

ಎರಡನೆಯ ಆಂಗ್ಲೋ-ಮೈಸೂರು ಯುದ್ಧ ( 1780- 1784 ) :ಈ ಯುದ್ಧಕ್ಕೆ ಕಾರಣವಾದ ಘಟನೆ

a)

ಹೈದರಾಲಿ ಆರ್ಕಾಟ್ ಮೇಲೆ ಧಾಳಿ ಮಾಡಿದ್ದು

b)

ತಿರುವಾಂಕೂರು ಮತ್ತು ತಂಜಾವೂರು ರಾಜ್ಯಗಳಲ್ಲಿನ ರಾಜಕೀಯ ಸನ್ನಿವೇಶಗಳು

c)

ಹೈದರಾಲಿಯ ತ್ರಿಕೂಟ ಒಪ್ಪಂದ ಯತ್ನ

d)

ಕೊಟ್ಟಿರುವ ಯಾವುದೂ ಅಲ್ಲ

10.

ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಈ ಯುದ್ಧಕ್ಕೆ ಕಾರಣವಾಯಿತು.

a)

ಎರಡನೆಯ ಆಂಗ್ಲೋ-ಮೈಸೂರು ಯುದ್ಧ

b)

ಒಂದನೇ ಆಂಗ್ಲೋ-ಮೈಸೂರು ಯುದ್ಧ

c)

ಮೂರನೇ ಆಂಗ್ಲೋ-ಮೈಸೂರು ಯುದ್ಧ

d)

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ