wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 02:By Nataraj &Bhagwat

Total questions: 10

Worksheet time: 5mins

Name
Class
Date
1.

1780ರಲ್ಲಿ ಪ್ರಾರಂಭವಾದ ಎರಡನೇ ಮೈಸೂರು ಯುದ್ಧದ ಘಟನೆ ಗುರುತಿಸಿ

a)

ಯುದ್ಧದ ಪ್ರಾರಂಭದಲ್ಲಿ ಹೈದರ್ ಮುನ್ನಡೆ ಸಾಧಿಸಿ ಕರ್ನಾಟಕ ಪ್ರಾಂತ್ಯದ ಅನೇಕ ಕೋಟೆಗಳನ್ನು ವಶಪಡಿಸಿಕೊಂಡನು

b)

ಕಾಂಚೀಪುರಂ ವಶವಾಯಿತು. ಕೋರಮಂಡಲ ತೀರದವರೆವಿಗೂ ತನ್ನ ಸೈನ್ಯವನ್ನು ಮುನ್ನುಗಿಸಿದನು. ಇದು ಮದರಾಸಿನ ಬ್ರಿಟಿಷ ಸೈನ್ಯಾಧಿಕಾರಿಗಳಲ್ಲಿ ನಡುಕವನ್ನು ತಂದಿತು. ಹೈದರ್ ಆರ್ಕಾಟಿಗೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡನು.

c)

ಸರ್ ಐರ್‍ಕೂಟ್‍ನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯ ಸಜ್ಜುಗೊಂಡಿತು. ಹೈದರ್ ಈ

ಅವಧಿಯಲ್ಲಿ ವೆಲ್ಲೂರು ಮತ್ತು ವಾಂಡಿವಾಶ್‍ಗಳನ್ನು ಮುತ್ತುವುದಾಗಿ ಬೆದರಿಸಿದನು. ಹೈದರನ ಸೈನ್ಯವನ್ನು ಸರ್ ಐರ್‍ಕೂಟ್ ಪಾಂಡಿಚೇರಿಯವರೆವಿಗೂ ಹಿಂಬಾಲಿಸಿದನು. ಫ್ರೆಂಚರು ಹೈದರನಿಗೆ ಬ್ರಿಟಿಷರ ವಿರುದ್ಧ ಸಹಕರಿಸಲು ನಿರಾಕರಿಸಿದರು. ಹೈದರ್, ಇದರಿಂದಾಗಿ ಯುದ್ಧಗತಿಯನ್ನು ಬದಲಿಸಿದನು. ಹೈದರ್ ಬ್ರಿಟಿಷರ ಹತೋಟಿಯಲ್ಲಿನ ಪ್ರದೇಶಗಳಿಗೆ ಮುತ್ತಿಗೆ ಹಾಕಿ ಕೊಳ್ಳೆಹೊಡೆದು ಅಪಾರ ಸಂಪತ್ತು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದನು.

d)

ಕೊಟ್ಟಿರುವ ಎಲ್ಲವೂ

2.

ಎರಡನೇ ಮೈಸೂರು ಯುದ್ದದಲ್ಲಿ ಹೈದರ ಇಲ್ಲಿ ಸೋತದ್ದು ಯುದ್ಧದ ಗತಿಯನ್ನು ಬದಲಾಯಿಸಿತು ಮತ್ತು ಬ್ರಿಟಿಷರಲ್ಲಿ ಸ್ಥೈರ್ಯವನ್ನು ಹೆಚ್ಚಿಸಿತು

a)

ಪೋರ್ಟನೋವೋ ಎಂಬಲ್ಲಿ ನಡೆದ ಕದನ

b)

ಮಾಹೆಯ ಬಳಿ ನಡೆದ ಕದನ

c)

ಆರ್ಕಾಟ್ ಬಳಿ ನಡೆದ ಕದನ

d)

ಕೊಟ್ಟಿರುವ ಯಾವುದೂ ಅಲ್ಲ

3.

ಎರಡನೇ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರು ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹೈದರನ ಒಕ್ಕೂಟದಿಂದ ಮರಾಠರು ಹಾಗೂ ನಿಜಾಮನನ್ನು ಸೆಳೆಯುವಲ್ಲಿ ಸಫಲರಾದರು.

a)

ಮಂಗಳೂರು

b)

ಮದ್ರಾಸ್

c)

ಸಾಲ್ಬಾಯ್

d)

ಶ್ರೀರಂಗಪಟ್ಟಣ

4.

1784ರ ಈ ಒಪ್ಪಂದದ ಮೂಲಕ ಎರಡನೆಯ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.

a)

ಮಂಗಳೂರು ಒಪ್ಪಂದ

b)

ಶ್ರೀರಂಗಪಟ್ಟಣ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಸಾಲ್ಬಾಯ್ ಒಪ್ಪಂದ

5.

ಕೆಳಗೆ ಕೊಟ್ಟಿರುವ ಯಾವ ಅರಸ/ಹೋರಾಟಗಾರನು ಬ್ರಿಟಿಷರಿಗೆ ವ್ಯಾಪಾರದಲ್ಲಿ ನಷ್ಟವಾದಲ್ಲಿ ಅದು ಅವರ ರಾಜಕೀಯ ಸ್ವಾಮ್ಯವನ್ನು ಕುಂದಿಸುತ್ತದೆ ಎಂದೂ ಅರಿತು ಬ್ರಿಟಿಷರನ್ನು ವಿರೋಧಿಸುತ್ತಿದ್ದವರನ್ನು ಸಂಘಟಿಸುವ ಮತ್ತು ಅವರ ನೆರವನ್ನು ಅಪೇಕ್ಷಿಸಲು ಪ್ರಯತ್ನಿಸಿದನು. ಅವರಿಗೆ ವ್ಯಾಪಾರದಲ್ಲಿ ಲಾಭವಾಗದಂತೆ ನೋಡಿಕೊಳ್ಳುವ ಮೂಲಕ ವ್ಯಾಪಾರದ ಮೇಲೆ ಅವರು ಸಾಧಿಸಿದ್ದ ಏಕಸ್ವಾಮ್ಯವನ್ನು ಮುರಿಯುವ ಪ್ರಯತ್ನಗಳನ್ನು ನಡೆಸಿದನು?

a)

ದೊಂಡಿಯವಾಘ

b)

ಟಿಪ್ಪು ಸುಲ್ತಾನ್

c)

ಸಂಗೊಳ್ಳಿ ರಾಯಣ್ಣ

d)

ವೆಂಕಟಪ್ಪ ನಾಯಕ

6.

ಮೂರನೆಯ ಆಂಗ್ಲೋ-ಮೈಸೂರು ಯುದ್ಧ : ಈ ಯುದ್ಧಕ್ಕೆ ನೇರ ಕಾರಣ ಯಾವುದೆಂದರೆ

a)

ಸಹಾಯಕ ಸೈನ್ಯ ಪದ್ಧತಿಗೆ ಟಿಪ್ಪು ನಿರಾಕರಿಸಿದ್ದು

b)

ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ

c)

ಟಿಪ್ಪು ಪ್ರೆಂಚರಿಂದ ಸೈನ್ಯ ತರಬೇತಿ ಗೊಳಿಸಿದ್ದು

d)

ಕೊಟ್ಟಿರುವ ಯಾವುದೂ ಅಲ್ಲ

7.

ಮೂರನೇ ಆಂಗ್ಲೋ ಮೈಸೂರು ಯುದ್ಧದ ಪ್ರಮುಖ ಘಟನೆ ಗುರುತಿಸಿ

a)

ಟಿಪ್ಪು ಬಾರಾಮಹಲ್ ಪ್ರಾಂತ್ಯವನ್ನು ಮುತ್ತಿ ಸತ್ಯಮಂಗಲವನ್ನು ವಶಪಡಿಸಿಕೊಂಡನು.

b)

ಬ್ರಿಟಿಷ್ ಸೈನ್ಯ ಕಾರ್ನ್‍ವಾಲೀಸನ ನೇತೃತ್ವದಲ್ಲಿ ಕೋಲಾರ ಮತ್ತು ಹೊಸಕೋಟೆಗಳನ್ನು ವಶಪಡಿಸಿಕೊಂಡು ಬೆಂಗಳೂರಿನತ್ತ ಮುನ್ನುಗಿತು. ಬೆಂಗಳೂರನ್ನು ವಶಪಡಿಸಿಕೊಂಡು ಕೋಟೆಯನ್ನು ಹಾಳುಗೆಡವಿತು.

c)

ನಿಜಾಮ ಮತ್ತು ಮರಾಠರ ಸಂಘಟಿತ ಸೈನ್ಯ ಬ್ರಿಟಿಷರೊಂದಿಗೆ ಸೇರುವುದರೊಂದಿಗೆ

ಯುದ್ಧ ತಿರುವನ್ನು ಪಡೆದುಕೊಂಡಿತು. 1792ರಲ್ಲಿ ಸಂಘಟಿತ ಸೈನ್ಯ ಒಂದೊಂದಾಗಿ ಕೋಟೆಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣದ ಕಡೆ ಸಾಗಿತು. ರಾತ್ರಿ ವೇಳೆಯಲ್ಲಿ ಕೋಟೆಯನ್ನು ಹಾಳುಗೆಡವಲಾಯಿತು.

d)

ಕೊಟ್ಟಿರುವ ಎಲ್ಲವೂ

8.

ಈ ಒಪ್ಪಂದದನ್ವಯ 1792 ರಲ್ಲಿ ಮೂರನೇ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು

a)

ಶ್ರೀರಂಗಪಟ್ಟಣ ಒಪ್ಪಂದ

b)

ಮದ್ರಾಸ್ ಒಪ್ಪಂದ

c)

ಮಂಗಳೂರು ಒಪ್ಪಂದ

d)

ಸಾಲ್ಬಾಯ್ ಒಪ್ಪಂದ

9.

ಕೆಳಗಿನ ಯಾವುದು ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳು ?

a)

ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು,

b)

ಮೂರು ಕೋಟಿ ರೂಪಾಯಿಗಳನ್ನು ಯುದ್ಧನಷ್ಟ ಭರ್ತಿಯಾಗಿ ಕೊಡುವುದು, ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು,

c)

ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.

d)

ಕೊಟ್ಟಿರುವ ಎಲ್ಲವೂ

10.

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ ಆರಂಭವಾಗಲು ಕಾರಣ ಗುರುತಿಸಿ

a)

ಟಿಪ್ಪು ಭಾರತೀಯ ರಾಜರ ಒಕ್ಕೂಟವನ್ನು ತನ್ನಡೆಗೆ ಸೆಳೆಯಲು ಮಾಡುತ್ತಿದ್ದ ಪ್ರಯತ್ನಗಳು ಹಾಗೂ ತಮ್ಮ ಬದ್ಧ ವೈರಿಗಳಾದ ಫ್ರೆಂಚರೊಂದಿಗೆ ಟಿಪ್ಪು ಹೊಂದಿದ್ದ ಸಂಬಂಧಗಳು ವೆಲ್ಲೆಸ್ಲಿಯಲ್ಲಿ ಟಿಪ್ಪುವಿನ ವಿಚಾರದಲ್ಲಿ ಮತ್ತಷ್ಟು ದ್ವೇಷ

ಭಾವನೆಗಳನ್ನು ಬೆಳೆಸಿದವು.

b)

ಟಿಪ್ಪು ಬ್ರಿಟಿಷರ ವಿರುದ್ಧವಾಗಿದ್ದ ಫ್ರೆಂಚರ ಸಹಕಾರ ಪಡೆಯಲು ಪ್ರಯತ್ನಿಸಿ

ರಾಯಭಾರಿಯನ್ನು ಕಳುಹಿಸಿದ್ದನು. ಇದು ಬ್ರಿಟಿಷರಿಗೆ ಅಸಮಾಧಾನವನ್ನು ತಂದಿತು. ಟಿಪ್ಪು ಮತ್ತು ಫ್ರೆಂಚರ ನಡುವಿನ ಸ್ನೇಹ ಮುಂದಕ್ಕೆ ತಮ್ಮ ಅಧಿಪತ್ಯಕ್ಕೆ ಮುಳುವಾಗಬಹುದೆಂಬ ಭಾವನೆಗಳು ಬ್ರಿಟಿಷರಲ್ಲಿ ಬೆಳೆಯಿತು.

c)

ಹೊಸ ಷರತ್ತಗಳನ್ನು ಒಳಗೊಂಡಿರುವ ಒಂದು ಒಪ್ಪಂದವನ್ನು ಟಿಪ್ಪುವಿನ ಮೇಲೆ ಹೇರಲಾಯಿತು. ಆದರೆ ಟಿಪ್ಪು ಅಮಾನವೀಯ ಮತ್ತು ಅಸಮಾನ ಷರತ್ತುಗಳನ್ನು ಒಳಗೊಂಡಿದ್ದ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದನು

d)

ಕೊಟ್ಟಿರುವ ಎಲ್ಲವುಗಳಿಂದ