NEW
Font size
Worksheets10th SS:Soc:Unit:04:ರಚನೆ:ನಟರಾಜ್ &ಭಾಗ್ವತ್
Total questions: 25
Worksheet time: 13mins
ಸಂವಿಧಾನದ ಈ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ.
23 ನೇ
25 ನೇ
24 ನೇ
26 ನೇ
ಬಾಲ್ಯವಿವಾಹ ನಿಷೇಧ ಕಾಯಿದೆ’ ಜಾರಿಗೆ ಬಂದ ವರ್ಷ.
2007
2005
2008
2006
ಬಾಲಕಾರ್ಮಿಕರ ಕಲ್ಯಾಣಕ್ಕಾಗಿ ಯಾವಾಗ ‘ರಾಷ್ಟ್ರೀಯ ನೀತಿ’ ಜಾರಿಗೊಳಿಸಿತು.
1987
1988
1989
1990
ಹೆಣ್ಣುಭ್ರೂಣ ಹತ್ಯೆಯನ್ನು ನಿಷೇಧಿಸಿದ ಕಾಯಿದೆ ಯಾವಾಗ ಜಾರಿಗೆ ಬಂದಿತು.
1993
1994
1995
1996
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ಯಾವಾಗ ಜಾರಿಗೆ ಬಂದಿತು.
2011
2012
2015
2017
ಸಾಮಾನ್ಯವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಹೀಗೆ ಕರೆಯಲಾಗುತ್ತಿದೆ.
ಜೀತ
ಕೂಲಿರಹಿತ
ಬಾಲಕಾರ್ಮಿಕತನ
ಕೂಲಿಸಹಿತ
2016ರಲ್ಲಿ ಬಾಲಕಾರ್ಮಿಕರ ಕಾನೂನು ತಿದ್ದುಪಡಿಯಾಗಿ ಇದನ್ನು ಜಾರಿಗೆ ತಂದಿದೆ.
ಕಡ್ಡಾಯ ಶಿಕ್ಷಣ
ಬಾಲಕಾರ್ಮಿಕರ ದುಡಿಮೆಗೆ ಶಿಕ್ಷೆ
ಸರ್ವ ಶಿಕ್ಷಣ ಅಭಿಯಾನ
ಹದಿಹರೆಯದವರ ದುಡಿಮೆ ನಿಷೇಧ
ಈ ಪರಿಚ್ಛೇದದ ಪ್ರಕಾರ ಮಕ್ಕಳನ್ನು ದುಡಿಮೆಯಲ್ಲಿ ಇಟ್ಟು ಕೊಳ್ಳುವವರಿಗೆ, 2 ವರ್ಷದ ತನಕ ಜೈಲು ಮತ್ತು ರೂ. 50,000 ತನಕ ದಂಡ ವಿಧಿಸಲಾಗುತ್ತದೆ.
15
14
16
18
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಶಾಲೆಗಳಲ್ಲಿ, ಕುಟುಂಬಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ದಿಕ್ಕಿನಲ್ಲಿ 2012’ ಈ ಕಾಯಿದೆ ಜಾರಿಗೆ ತರಲಾಗಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ
ಹದಿಹರೆಯದವರ ದುಡಿಮೆ ನಿಷೇಧ
ಬಾಲ್ಯವಿವಾಹ ನಿಷೇದ
ಕಡ್ಡಾಯ ಶಿಕ್ಷಣ
ಇದನ್ನು ಹತ್ತಿಕ್ಕಲು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವುದು, ಮುಖ್ಯವಾಗುತ್ತದೆ.
ಶಿಶು ಹತ್ಯೆ
ವರದಕ್ಷಿಣೆ ಪದ್ಧತಿ
ಹೆಣ್ಣು ಭ್ರೂಣಹತ್ಯೆ
ಲಿಂಗತಾರತಮ್ಯ
ಪೋಷಕಾಂಶಗಳ ಅಭಾವವನ್ನು ಹೀಗೆನ್ನುತ್ತಾರೆ.
ಕಾಣದ ಹಸಿವು
ಬಡತನ
ಹಸಿವು
ಅನಾರೋಗ್ಯ
ಮಹಿಳೆಯರು ಹಾಗೂ ಪುರುಷರು ಎಂದು ಗುರುತಿಸಿಕೊಳ್ಳುವುದಕ್ಕಾಗಿ ಇರುವ ಪರಿಕಲ್ಪನೆ.
ಉದ್ಯೋಗ
ಜೆಂಡರ್ ಅಥವಾ ಲಿಂಗತ್ವ
ಶಿಕ್ಷಣ
ಯೋಗ್ಯತೆ
ಮಾನವ ಸಮಾಜದಲ್ಲಿ ಇದು ಸಂತಾನೋತ್ಪತಿ ಪ್ರಕ್ರಿಯೆಯ ಪ್ರಮುಖ ಭಾಗ .
ಶಿಕ್ಷಣ
ವಿವಾಹ
ದುಡಿಮೆ
ವರದಕ್ಷಿಣೆ
ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣ
ವಯಸ್ಸು
ಬಡತನ
ಲಿಂಗ ತಾರತಮ್ಯ
ಅನಕ್ಷರತೆ
ಬಾಲ್ಯ ವಿವಾಹ ತಡೆಗಟ್ಟಲು ಕರ್ನಾಟಕ ರಾಜ್ಯ ಸರ್ಕಾರ ಸುಮಾರು 47 ವಿವಿಧ ಹಂತದ ಅಧಿಕಾರಿಗಳನ್ನು ಹೀಗೆ ನಿಗದಿಪಡಿಸಿದೆ.
ಬಾಲ್ಯ ವಿವಾಹಾಧಿಕಾರಿಗಳು
ಬಾಲ್ಯವಿವಾಹ ನಿಷೇಧಾಧಿಕಾರಿಗಳು
ಬಾಲ್ಯ ವಿವಾಹ ನೋದಣಿ ಅಧಿಕಾರಿಗಳು
ಮೇಲಿನ ಯಾರೂ ಅಲ್ಲ
ಇಂದು ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಕಳ್ಳ ವ್ಯವಹಾರದ ನಂತರ ಎರಡನೇ ಅತ್ಯಂತ ದೊಡ್ಡ ವ್ಯವಹಾರ ಅಥವಾ ಮಾರಾಟ ಎಂದರೆ.
ಮಾನವ ಕಳ್ಳ ಸಾಗಾಣಿಕೆ
ಮರಗಳ ಕಳ್ಳ ಸಾಗಾಣಿಕೆ
ಖನಿಜಗಳ ಕಳ್ಳ ಸಾಗಾಣಿಕೆ
ಕಪ್ಪು ಹಣ ಕಳ್ಳ ಸಾಗಾಣಿಕೆ
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಹಲವಾರು ದೇಶಗಳಲ್ಲಿ ಇದು ಒಂದು ಸಾಮಾಜಿಕ ಸಮಸ್ಯೆ.
ಮಕ್ಕಳ ದುರ್ಬಳಕೆ ಹಾಗೂ ದುಡಿತ
ವರದಕ್ಷಿಣೆ
ಬಡತನ
ಮೇಲಿನ ಯಾವುದೂ ಅಲ್ಲ
ಮಕ್ಕಳ ದುಡಿಮೆಯಿಂದ
ಅವರ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಕುಂಠಿತವಾಗುತ್ತದೆ.
ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಅವರ ಕೌಶಲ್ಯವು ವಿಕಾಸವಾಗುವ ಮೊದಲೇ ನಶಿಸುತ್ತದೆ.
ಎ&ಬಿ ಎರಡೂ
ಎ ಮಾತ್ರ
14 ವರ್ಷದೊಳಗಿನ ಯಾವ ಮಕ್ಕಳು ಶಾಲೆಯಿಂದ ಹೊರಗಿದ್ದಾರೋ ಅವರೆಲ್ಲರೂ ಬಾಲಕಾರ್ಮಿಕರ ಎಂದು ಸಮರ್ಥಿಸುವ ಅಂಶ
ಅವರು ದುಡಿಯಲಿ, ದುಡಿಯದೇ ಇರಲಿ, ಬಾಲಕಾರ್ಮಿಕರು
ಮನೆಯಲ್ಲಿ ಇರಲಿ, ಹೊರಗೆ ಇರಲಿ, ಅವರು ಬಾಲಕಾರ್ಮಿಕರು
ಶಾಲೆಗೆ ದಾಖಲಾಗಿ ನಿತ್ಯ ಶಾಲೆಗೆ ಹೋಗದಿದ್ದರೆ ಅವರೆಲ್ಲರೂ ಬಾಲಕಾರ್ಮಿಕರು
ಮೇಲಿನ ಎಲ್ಲಾ
ಯಾವುದೇ ಕುಟುಂಬದವರೂ ಕೂಡ ಅವರ ಹೊಲ, ಗದ್ದೆ, ವ್ಯಾಪಾರಗಳು ಅವರ 14 ವರ್ಷದೊಳಗಿನ ಅವರ ಸ್ವಂತ ಮಕ್ಕಳನ್ನು ಕೂಡ “ಶಾಲಾ” ಅವಧಿಯಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಇಟ್ಟುಕೊಂಡರೆ ಮಕ್ಕಳ ತಂದೆ, ತಾಯಿ ಅಥವಾ ಕುಟುಂಬಸ್ಥರೇ ಮಾಲೀಕರಾಗಿ ಅಪರಾಧಿಗಳಾಗುತ್ತಾರೆ.ಆಗ ಅವರಿಗೆ ವಿಧಿಸುವ ದಂಡ
ರೂ 10,000
ರೂ 15,000
ರೂ 5,000
ರೂ 20,000
ಬಾಲಕಾರ್ಮಿಕ, ಹದಿಹರೆಯದವರ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ– 1986. 2016ರ ತಿದ್ದುಪಡಿಯಂತೆ 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಹದಿಹರೆಯದವರು ಎಂದು ಹೇಳಲಾಗಿದ್ದು ಜೊತೆಗೆ 15 ರಿಂದ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸುವಂತಿಲ್ಲ. ಒಂದು ವೇಳೆ ದುಡಿಸಿದರೆ
ಎರಡು ವರ್ಷ ಜೈಲು, ರೂ. 50,000 ದಂಡ ವಿಧಿಸಲಾಗುತ್ತದೆ
ಒಂದು ವರ್ಷ ಜೈಲು, ರೂ. 50,000 ದಂಡ ವಿಧಿಸಲಾಗುತ್ತದೆ
ಐದು ವರ್ಷ ಜೈಲು, ರೂ. 10,000 ದಂಡ ವಿಧಿಸಲಾಗುತ್ತದೆ
ಎರಡು ವರ್ಷ ಜೈಲು, ರೂ. 15,000 ದಂಡ ವಿಧಿಸಲಾಗುತ್ತದೆ
ಇವುಗಳಲ್ಲಿ 1948ರ ಕೈಗಾರಿಕೆ ಕಾಯ್ದೆಯಲ್ಲಿ ಬಾಲಕಾರ್ಮಿಕರಿಗೆ ಗುರುತಿಸಿದ ಅಪಾಯಕಾರಿ ಕಾರ್ಯಗಳು
ಗಣಿಗಾರಿಕೆ, ಸ್ಪೋಟಕ ವಸ್ತು ತಯಾರಿಕೆ,
ಉರಿಯುವ ಸಾಮಗ್ರಿಗಳ ಉತ್ಪಾದನಾ ಘಟಕ, ಕಬ್ಬಿಣ ಮತ್ತು ಸ್ಟೀಲ್ ತಯಾರಿಕಾ ಘಟಕ
ಮೋಟಾರ್ ಸೈಕಲ್ ಮತ್ತು ವಾಹನ ರಿಪೇರಿ
ಮೇಲಿನ ಎಲ್ಲಾ
ಇವುಗಳಲ್ಲಿ ಮಕ್ಕಳ ದುಡಿಮೆ ಅಥವಾ ಬಾಲಕಾರ್ಮಿಕತೆಗೆ ಕಾರಣಗಳು
ಮಕ್ಕಳ ಹಕ್ಕುಗಳನ್ನು ಗೌರವಿಸಲು, ಅವುಗಳನ್ನು ರಕ್ಷಣೆ ಮಾಡಲು ಅಗತ್ಯವಾಗಿ ಬೇಕಾದ ಸಾಮಾಜಿಕ ಪರಿಸರವಿಲ್ಲದಿರುವುದು,
ಮಕ್ಕಳ ದುಡಿಮೆ, ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಪ್ರಮುಖವಾದ ಕಾರಣಗಳಾಗಿವೆ.
ಕಡಿಮೆ ಕೂಲಿಗೆ, ಹೆಚ್ಚು ದುಡಿಮೆಯನ್ನು ಬಯಸುವ ಮಾಲೀಕರ ವರ್ಗದ ಸ್ವಾರ್ಥ ಲಾಭಕೋರತನ
ಮೇಲಿನ ಎಲ್ಲಾ
ಇವುಗಳಲ್ಲಿ ಮಕ್ಕಳ ದುಡಿಮೆಯ ದುಷ್ಪರಿಣಾಮಗಳು
ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಅತ್ಯಂತ ಗಂಭೀರವಾದ ಪರಿಣಾಮ
ಶಿಕ್ಷಣದಿಂದ ವಂಚಿತರಾಗಿ ಅನರಕ್ಷರಸ್ಥ
ಕುಟುಂಬಗಳ ಸಾಮಾಜಿಕ ಚಲನೆ, ಆರ್ಥಿಕ ಚಲನೆ ಕುಸಿಯುವಿಕೆ
ಮೇಲಿನ ಎಲ್ಲಾ
