wayground logo

Free Printable Worksheets

NEW

Font size

S
M
L
XL
Worksheets

ಪದ್ಯ ಪಾಠ - 5 ಗುರಿ

Total questions: 15

Worksheet time: 3mins

Name
Class
Date
1.

ಬದುಕಿಗೊಂದು ಗುರಿಯಿಲ್ಲದಿದ್ದರೆ ಹೇಗಾಗುತ್ತದೆ?

a)

ಚುಕ್ಕಾಣಿ ಇರುವ ನೌಕೆಯಂತೆ

b)

ಚುಕ್ಕಾಣಿ ಇಲ್ಲದ ನೌಕೆಯಂತೆ

c)

ಬಿರುಗಾಳಿಗೆ ಸಿಕ್ಕ ಹಸಿ ಎಲೆಯಂತೆ.

d)

ಇವಾವವೂ ಅಲ್ಲ

2.

ಮನುಷ್ಯನ ಮನಸ್ಸು ಯಾವ ಸುಳಿಗೆ ಸಿಲುಕಬಾರದು?

a)

ನಿರಾಸೆಗಳ

b)

ಆಸೆಯಿಲ್ಲದ

c)

ಕೆಟ್ಟ ಆಸೆಗಳ

d)

ಒಳ್ಳೆ ಬಯಕೆಗಳ

3.

ಕೆಸರಲ್ಲಿರುವ ಕಮಲವೂ ಯಾವ ಸಿರಿಯನ್ನು ನೋಡಿ ವಿಜೃಂಬಿಸುತ್ತದೆ?

a)

ದೀಪದ ಕಿರಣಗಳ ಸಿರಿಗೆ

b)

ಚಂದ್ರನ ಕಿರಣಗಳ ಸಿರಿಗೆ

c)

ಸೂರ್ಯಕಿರಣಗಳ ಸಿರಿಗೆ

d)

ಇವ್ಯಾವದಕ್ಕೂ ಅಲ್ಲ

4.

ಹಿಡಿದ ಒಳ್ಳೆಯ ದಾರಿಯಲ್ಲಿ ಕೊನೆಯವರೆಗೆ ಹೇಗೆ ಸಾಗಬೇಕು?

a)

ಹೇಡಿತನ ಹೊನಲೊಳಗೆ

b)

ಹೆಣ್ತನದ ಹೊನಲೊಳಗೆ

c)

ಸೋಲಿನ ಹೊನಲೊಳಗೆ

d)

ಪೌರುಷದ ಹೊನಲೊಳಗೆ

5.

ಯಾವುದಕ್ಕಾಗಿ ಹಗಲಿರುಳು ಹೋರಾಡಬೇಕು?

a)

ಒಂದು ಹೆಗ್ಗುರಿಗಾಗಿ

b)

ಒಂದು ಅಧಿಕಾರಕ್ಕಾಗಿ

c)

ಒಂದು ಪ್ರಶಸ್ತಿಗಾಗಿ

d)

ಒಂದು ಜೀವನಕ್ಕಾಗಿ

6.

ನಾರಾಯಣನ ರೂಪವನ್ನು ಯಾವುದರಲ್ಲಿ ಕಾಣಬೇಕು?

a)

ಪ್ರಾಣಿಗಳಲ್ಲಿ

b)

ಗಿಡ ಮರಗಳಲ್ಲಿ

c)

ನರನಲ್ಲಿ

d)

ಪಕ್ಷಿಗಳಲ್ಲಿ

7.

ಎಲ್ಲಿ ದೇವಲೋಕದ ಸುಖವನ್ನು ಅನುಭವಿಸಬೇಕು?

a)

ನರಕದಲ್ಲಿ

b)

ಸ್ವರ್ಗದಲ್ಲಿ

c)

ಭೂಮಿಯಲ್ಲಿ

d)

ಇಲ್ಲೆಲ್ಲಿಯೂ ಅಲ್ಲ

8.

ಅಡಿಗರ ಪ್ರಕಾರ ಜೀವನ ಎಂದರೆ ಯಾವುದು?

a)

ಮತ್ತೊಬ್ಬರ ಒಳಿತನ್ನು ಬಯಸದೆ ಇರುವುದು.

b)

ಮತ್ತೊಬ್ಬರ ಒಳಿತನ್ನು ಬಯಸುವುದು.

c)

ಬೇರೆಯವರಿಗೆ ಕೆಟ್ಟದ್ದನ್ನು ಮಾಡುವುದು.

d)

ಬೇರೆಯವರಿಗೆ ಮೋಸ ಮಾಡುವುದು.

9.

ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ನೀಡುವ ರಾಜ್ಯ ಯಾವುದು?

a)

ಕೇರಳ

b)

ಕರ್ನಾಟಕ

c)

ಮಹಾರಾಷ್ಟ್ರ

d)

ಮಧ್ಯಪ್ರದೇಶ

10.

ಗುರಿ ಪದ್ಯವನ್ನು ಯಾವ ಕೃತಿಯಿಂದ ಆರಿಸಲಾಗಿದೆ.

a)

ಭಾವತರಂಗ

b)

ಭೂಮಿಗೀತ

c)

ಸಮಗ್ರ ಕಾವ್ಯ

d)

ಅನಾಥೆ

11.

ಆಳ್ವೆಸ - ಇದು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಲೋಪಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಗುಣ ಸಂಧಿ

12.

ಸುರಪುರ - ಪದದ ಅರ್ಥ ಹೇಳಿ.

a)

ನರಕಲೋಕ

b)

ದೇವಲೋಕ

c)

ಭೂಲೋಕ

d)

ಪಾತಾಳಲೋಕ

13.

ಹಿಡಿದೊಳ್ದಾರಿ - ಪದ ಬಿಡಿಸಿ ಬರೆದಾಗ.

a)

ಹಿಡಿದ + ಉಳ್ದಾರಿ

b)

ಹಿಡಿದೊಳ್ + ದಾಋಇ

c)

ಹಿಡಿದ + ಒಳ್ದಾರಿ

d)

ಹಿಡಿದು + ವಳ್ದಾರಿ

14.

ಮನುಷ್ಯನ ದುಡಿಮೆಗೆ ಫಲ ಸಿಗಬೇಕಾದರೆ ಯಾವುದು ನಿರ್ದಿಷ್ಟವಾಗಿರಬೇಕು?

a)

ಆಸೆ

b)

ಬಯಕೆ

c)

ಉತ್ಸಾಹ

d)

ಗುರಿ

15.

ಬಸ - ಪದದ ತತ್ಸಮ ಪದವೇನು?

a)

ಜಸ

b)

ಬಸ

c)

ವಶ

d)

ವ್ಯಸನ