NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ ( ವಾಕ್ಯ ಪ್ರಕಾರ,ಲೇಖನ ಚಿಹ್ನ)
Total questions: 50
Worksheet time: 25mins
Name
Class
Date
1.
ಒಂದು ಪೂರ್ಣ ಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯ
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಪ್ರಶ್ನಾರ್ಥಕ ವಾಕ್ಯ
2.
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣ ಅಭಿಪ್ರಾಯದ ವಾಕ್ಯವಾಗಿದ್ದರೆ ಅದು
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಪ್ರಶ್ನಾರ್ಥಕ ವಾಕ್ಯ
3.
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅದಿನಗಳಾಗಿದ್ದರೆ ಅಂತಹ ವಾಕ್ಯವು
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಪ್ರಶ್ನಾರ್ಥಕ ವಾಕ್ಯ
4.
ಕಾರವಾರದಲ್ಲಿ ಮಲೇರಿಯಾ ವ್ಯಾಪಕವಾಗಿ ಹಬ್ಬಿತ್ತು- ಈ ವಾಕ್ಯವು
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಪ್ರಶ್ನಾರ್ಥಕ ವಾಕ್ಯ
5.
ಕಾರವಾರದಲ್ಲಿ ಮಲೇರಿಯಾ ಹಬ್ಬಿತ್ತು ; ಆದ್ದರಿಂದ ವೀರೇಶ್ವರ ಪಾಠಕ್ ರವರು ಮಲೇರಿಯಾದಿಂದ ಬರಬೇಕಾಯಿತು.
a)
ಮಿಶ್ರ ವಾಕ್ಯ
b)
ಸಾಮಾನ್ಯ ವಾಕ್ಯ
c)
ಸಂಭವನಾರ್ಥಕ ವಾಕ್ಯ
d)
ಸಂಯೋಜಿತ ವಾಕ್ಯ
6.
“ರಾಹಿಲ್‍ನ ದೇಹದಲ್ಲಿ ಹೊಸರಕ್ತ ಸಂಚಾರವಾಗಿ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ, ಬಲವಾಗಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ದಡ ಸೇರಿ ದೀರ್ಘವಾದ ನಿಟ್ಟುಸಿರು ಬಿಟ್ಟನು.”- ಈ ವಾಕ್ಯ
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ನಿಷೇಧಾರ್ಥದ ವಾಕ್ಯ
7.
ವಿಶ್ವೇಶ್ವರಯ್ಯನವರನ್ನು ರಸ್ತೆ ಮತ್ತು ಕಟ್ಟಡಗಳ ಮೇಲ್ವಿಚಾರಣೆಯ ವಿಭಾಗಕ್ಕೆ ವರ್ಗ ಮಾಡಿದರು.
a)
ಸಾಮಾನ್ಯ ವಾಕ್ಯ
b)
ಮಿಶ್ರ ವಾಕ್ಯ
c)
ಸಂಯೋಜಿತ ವಾಕ್ಯ
d)
ಭಾವಾರ್ಥಕ ವಾಕ್ಯ
8.
ಶ್ರೀರಾಮನ ಅಶ್ವಮೇಧಯಾಗದ ಕುದುರೆ ವಾಲ್ಮೀಕಿಗಳ ಪುಣ್ಯಾಶ್ರಮದ ಉಪವನವನ್ನು ಹೊಕ್ಕಿತು ; ಆಗ ತೋಟದ ಕಾವಲಿದ್ದ ಲವನು ಅದನ್ನು ಕಟ್ಟಿ ಹಾಕಿದನು ; ಆದ್ದರಿಂದ ಅವನನ್ನು ಭಟರು ಹಿಡಿದು ಕೊಂಡು ಹೋದರು.- ಈ ವಾಕ್ಯ
a)
ಸಂಯೋಜಿತ ವಾಕ್ಯ
b)
ಸಾಮಾನ್ಯ ವಾಕ್ಯ
c)
ಮಿಶ್ರ ವಾಕ್ಯ
d)
ಸಂಭವನಾರ್ಥಕ ವಾಕ್ಯ
9.
ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆ ಮಂಚಮ್ಮ ಇಂದು ಪೂಜಿಸಲಾಗುತ್ತಿದ್ದಾಳೆ. - ಇದೊಂದು
a)
ಸಂಯೋಜಿತ ವಾಕ್ಯ
b)
ಪ್ರಶ್ನಾರ್ಥಕ ವಾಕ್ಯ
c)
ಭಾವನಾರ್ಥಕ ವಾಕ್ಯ
d)
ಸಾಮಾನ್ಯ ವಾಕ್ಯ
10.
ಬೆನ್ನು ತಿರುಗಿಸಿದಾಗ ಕೊಲ್ಲುವುದು ಧರ್ಮವಲ್ಲ ; ಆದ್ದರಿಂದ ಹೇಗಾದರೂ ಮಾಡಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕು - ಈ ವಾಕ್ಯವು
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಪ್ರಶ್ನಾರ್ಥಕ ವಾಕ್ಯ
11.
ಒಂದು ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಬಳಸುವ ಚಿಹ್ನೆ
a)
ಪೂರ್ಣವಿರಾಮ
b)
ಅರ್ಧ ವಿರಾಮ
c)
ಅಲ್ಪವಿರಾಮ
d)
ಭಾವಸೂಚಕ
12.
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಬಳಸುವ ಲೇಖನ ಚಿನ್ನೆ
a)
ಪೂರ್ಣವಿರಾಮ
b)
ಅರ್ಧ ವಿರಾಮ
c)
ಅಲ್ಪವಿರಾಮ
d)
ಭಾವಸೂಚಕ
13.
ಕರ್ತೃ, ಕರ್ಮ, ಕ್ರಿಯಾ ಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ ಬಳಸುವ ಲೇಖನ ಚಿನ್ನೆ
a)
ಪೂರ್ಣವಿರಾಮ
b)
ಅರ್ಧ ವಿರಾಮ
c)
ಅಲ್ಪವಿರಾಮ
d)
ಭಾವಸೂಚಕ
14.
ಪ್ರಶ್ನೆರೂಪದ ಪದ ಮತ್ತು ವಾಕ್ಯಗಳ ಮುಂದೆ ಬಳಸುವ ಲೇಖನ ಚಿಹ್ನೆ
a)
ಪ್ರಶ್ನಾರ್ಥಕ ಚಿಹ್ನೆ
b)
ಭಾವಸೂಚಕ ಚಿಹ್ನೆ
c)
ಉದ್ಧರಣ ಚಿಹ್ನೆ
d)
ವಾಕ್ಯವೇಷ್ಟನ ಚಿಹ್ನೆ
15.
ಹರ್ಷ,ಆಶ್ಚರ್ಯ, ಸಂತೋಷ, ವಿಷಾದ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಬಳಸುವ ಚಿಹ್ನೆ
a)
ವಿವರಣಾತ್ಮಕ ಚಿಹ್ನೆ
b)
ಪೂರ್ಣ ವಿರಾಮ ಚಿಹ್ನೆ
c)
ಅಲ್ಪವಿರಾಮ ಚಿಹ್ನೆ
d)
ಭಾವಸೂಚಕ ಚಿಹ್ನೆ
16.
ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು
a)
ಪ್ರಶ್ನಾರ್ಥಕ ಚಿಹ್ನೆ
b)
ವಾಕ್ಯವೇಷ್ಟನ ಚಿಹ್ನೆ
c)
ಉದ್ಧರಣ ಚಿಹ್ನೆ
d)
ಪೂರ್ಣವಿರಾಮ ಚಿಹ್ನೆ
17.
ಪಾರಿಭಾಷಿಕ ಮತ್ತು ಅನ್ಯಭಾಷೆಯ ಪದಗಳನ್ನು ಬಳಸುವಾಗ ಉಪಯೋಗಿಸುವ ಲೇಖನ ಚಿಹ್ನೆ
a)
ಅರ್ಧ ವಿರಾಮ
b)
ಅಲ್ಪವಿರಾಮ ಚಿಹ್ನೆ
c)
ವಾಕ್ಯವೇಷ್ಟನ ಚಿಹ್ನೆ
d)
ವಿವರಣಾತ್ಮಕ ಚಿಹ್ನೆ
18.
ಒಂದು ಪದವನ್ನೋ, ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದ ಅಥವಾ ವಾಕ್ಯವನ್ನು ಹೇಳುವಾಗ ಬಳಸುವ ಲೇಖನ ಚಿನ್ನೆ
a)
ಉದ್ಧರಣ ಚಿಹ್ನೆ
b)
ಆವರಣ ಚಿಹ್ನೆ
c)
ವಾಕ್ಯವೇಷ್ಟನ ಚಿಹ್ನೆ
d)
ಅಲ್ಪವಿರಾಮ ಚಿಹ್ನೆ
19.
ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಬಳಸುವ ಲೇಖನ ಚಿನ್ನೆ
a)
ವಿವರಣಾತ್ಮಕ ಚಿಹ್ನೆ
b)
ಉದ್ಧರಣ ಚಿಹ್ನೆ
c)
ಆವರಣ ಚಿಹ್ನೆ
d)
ವಾಕ್ಯವೇಷ್ಟನ ಚಿಹ್ನೆ
20.
ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ. - ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿನ್ನೆ
a)
ಪೂರ್ಣವಿರಾಮ
b)
ಅರ್ಧ ವಿರಾಮ
c)
ಅಲ್ಪವಿರಾಮ
d)
ಆವರಣ
21.
ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ - ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿನ್ನೆ
a)
ಆವರಣ ಚಿಹ್ನೆ
b)
ಅರ್ಧ ವಿರಾಮ ಚಿಹ್ನೆ
c)
ವಿವರಣಾತ್ಮಕ ಚಿಹ್ನೆ
d)
ವಾಕ್ಯವೇಷ್ಟನ ಚಿಹ್ನೆ
22.
ಬಟ್ಟೆಗಿರಣಿ,ರಟ್ಟು,ಪೆನ್ಸಿಲ್, ಬೆಂಕಿಕಡ್ಡಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ -ಈ ವಾಕ್ಯದಲ್ಲಿ ಉಪಯೋಗಿಸಿದ ಲೇಖನ ಚಿನ್ನೆ
a)
ಅರ್ಧ ವಿರಾಮ
b)
ಅಲ್ಪವಿರಾಮ
c)
ಆವರಣ
d)
ಪೂರ್ಣವಿರಾಮ
23.
ದಾಶರಥಿ ಯಾರು ? - ಈ ವಾಕ್ಯದಲ್ಲಿ ಬಳಸಿದ ಲೇಖನ ಚಿನ್ನೆ
a)
ವಿವರಣಾತ್ಮಕ ಚಿಹ್ನೆ
b)
ವಾಕ್ಯವೇಷ್ಟನ ಚಿಹ್ನೆ
c)
ಅಲ್ಪವಿರಾಮ ಚಿಹ್ನೆ
d)
ಪ್ರಶ್ನಾರ್ಥಕ ಚಿಹ್ನೆ
24.
ಅಯ್ಯೋ ! ಹೀಗಾಗಬಾರದಿತ್ತು ! - ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿನ್ನೆ
a)
ವಾಕ್ಯವೇಷ್ಟನ ಚಿಹ್ನೆ
b)
ಪ್ರಶ್ನಾರ್ಥಕ ಚಿಹ್ನೆ
c)
ಭಾವಸೂಚಕ ಚಿಹ್ನೆ
d)
ವಿವರಣಾತ್ಮಕ ಚಿಹ್ನೆ
25.
"ಶಿಕ್ಷಣವು ಕೆಲವೇ ಜನರ ಸ್ವತ್ತಾಗಿದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು" ವಿಶ್ವೇಶ್ವರಯ್ಯನವರು ಹೇಳಿದರು ಈ ವಾಕ್ಯದಲ್ಲಿ ಬಳಕೆಯಾದ ಲೇಖನ ಚಿನ್ನೆ
a)
ವಿವರಣಾತ್ಮಕ ಚಿಹ್ನೆ
b)
ವಾಕ್ಯವೇಷ್ಟನ ಚಿಹ್ನೆ
c)
ಅರ್ಧ ವಿರಾಮ ಚಿಹ್ನೆ
d)
ಉದ್ಧರಣ ಚಿಹ್ನೆ
26.
ಕನ್ನಡ ಭಾಷೆಯಲ್ಲಿ 'ಇಂಗ್ಲಿಷ್', 'ಪರ್ಷಿಯನ್', 'ಪೋರ್ಚುಗೀಸ್' ಭಾಷೆಯ ಪದಗಳನ್ನು ಬಳಸಲಾಗಿದೆ. - ಈ ವಾಕ್ಯದಲ್ಲಿ ಬಳಸಲಾಗಿರುವ ಲೇಖನ ಚಿನ್ನೆ
a)
ವಾಕ್ಯವೇಷ್ಟನ ಚಿಹ್ನೆ
b)
ಅಲ್ಪವಿರಾಮ ಚಿಹ್ನೆ
c)
ಪೂರ್ಣ ವಿರಾಮ ಚಿಹ್ನೆ
d)
ಈ ಮೂರು ಚಿಹ್ನೆಗಳನ್ನು ಬಳಸಲಾಗಿದೆ.
27.
ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್)ಉತ್ಪತ್ತಿಯಾಗುತ್ತದೆ - ಈ ವಾಕ್ಯದಲ್ಲಿ ಬಳಸಿದ ಲೇಖನ ಚಿನ್ನೆ
a)
ವಾಕ್ಯವೇಷ್ಟನ ಚಿಹ್ನೆ
b)
ಆವರಣ ಚಿಹ್ನೆ
c)
ಅರ್ಧ ವಿರಾಮ ಚಿಹ್ನೆ
d)
ಉದ್ಧರಣ ಚಿಹ್ನೆ
28.
ಇರಸಾಲು : ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವುದು - ಇಲ್ಲಿ ಬಳಸಿ ಲೇಖನ ಚಿನ್ನೆ
a)
ವಿವರಣಾತ್ಮಕ ಚಿಹ್ನೆ
b)
ವಾಕ್ಯವೇಷ್ಟನ ಚಿಹ್ನೆ
c)
ಉದ್ಧರಣ ಚಿಹ್ನೆ
d)
ಅಲ್ಪವಿರಾಮ ಚಿಹ್ನೆ
29.
ಸರಿಯಾದ ಲೇಖನ ಚಿಹ್ನೆಗಳ ಜೋಡಿ
a)
ಪ್ರಶ್ನಾರ್ಥಕ ಲೇಖನ ಚಿನ್ನೆ : ???
b)
ಉದ್ಧರಣ ಚಿಹ್ನೆ : "____ "
c)
ಭಾವಸೂಚಕ ಚಿಹ್ನೆ : !!!
d)
ಎಲ್ಲವೂ ಸರಿಯಾಗಿವೆ.
30.
ಆವರಣ ಚಿಹ್ನೆ : ( ) : : ಅರ್ಧವಿರಾಮ ಚಿಹ್ನೆ : _______
a)
;
b)
!!!
c)
:
d)
' '
31.
ಗಡಿಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಬ್ಲಾಕ್ ಔಟ್ ನಿಯಮ ಪಾಲಿಸಲಾಗುತ್ತಿದೆ. - ಇಲ್ಲಿ ಬ್ಲಾಕ್ ಔಟ್ ಪದಕ್ಕೆ ಬಳಸಬೇಕಾದ ಲೇಖನ ಚಿನ್ನೆ
a)
ಉದ್ಧರಣ ಚಿಹ್ನೆ
b)
ಅಲ್ಪವಿರಾಮ ಚಿಹ್ನೆ
c)
ವಿವರಣಾತ್ಮಕ ಚಿಹ್ನೆ
d)
ವಾಕ್ಯವೇಷ್ಟನ ಚಿಹ್ನೆ
32.
ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ ಸಂಕಷ್ಟಕ್ಕೆ ಈಡಾದ ಮನುಷ್ಯರ ಕಡೆಯವನು ಎಂದು ರಾಹಿಲ್ ಗಂಭೀರವಾಗಿ ನುಡಿದನು - ಈ ವಾಕ್ಯದಲ್ಲಿ ಬಳಸಬೇಕಾಗಿದ್ದ ಲೇಖನ ಚಿನ್ನೆ
a)
ಉದ್ಧರಣ ಚಿಹ್ನೆ
b)
ವಿವರಣಾತ್ಮಕ ಚಿಹ್ನೆ
c)
ಆವರಣ ಚಿಹ್ನೆ
d)
ಭಾವಸೂಚಕ ಚಿಹ್ನೆ
33.
ತಾಯಿ ದಾರಿಗರಿಗೆ ಬೀಡಿಲಿ ದೊರೆಯುವುದೇ ? - ಇಲ್ಲಿ ಬಳಕೆಯಾಗಿರುವ ಲೇಖನ ಚಿನ್ನೆ
a)
ಭಾವಸೂಚಕ ಚಿಹ್ನೆ
b)
ಪ್ರಶ್ನಾರ್ಥಕ ಚಿಹ್ನೆ
c)
ಉದ್ಧರಣ ಚಿಹ್ನೆ
d)
ಅರ್ಧ ವಿರಾಮ ಚಿಹ್ನೆ
34.
"ಆವುದೀ ಮರಳು ? ನಮ್ಮೆಡೆಗೆ ಬರುತಿಹದು" - ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆಗಳು
a)
ಉದ್ಧರಣ ಮತ್ತು ಪ್ರಶ್ನಾರ್ಥಕ
b)
ಉದ್ಧರಣ ಮತ್ತು ಅರ್ಧ ವಿರಾಮ
c)
ವಾಕ್ಯವೇಷ್ಟನ ಮತ್ತು ಉದ್ಧರಣ
d)
ವಾಕ್ಯವೇಷ್ಟನ ಮತ್ತು ಪ್ರಶ್ನಾರ್ಥಕ
35.
ಪೇಟೆಯಲ್ಲಿ 'ವೂಲವರ್ಥ' ಎಂಬ 'ಸ್ಟೇಷನರಿ' ಅಂಗಡಿಯು ನೋಡುವ ಹಾಗಿದೆ - ಈ ವಾಕ್ಯದಲ್ಲಿ ಬಳಸಿದ ಲೇಖನ ಚಿನ್ನೆ
a)
ಉದ್ಧರಣ ಚಿಹ್ನೆ
b)
ಅಲ್ಪವಿರಾಮ ಚಿಹ್ನೆ
c)
ವಾಕ್ಯವೇಷ್ಟನ ಚಿಹ್ನೆ
d)
ಪ್ರಶ್ನಾರ್ಥಕ ಚಿಹ್ನೆ
36.
ವೂಲವರ್ಥ ಅಂಗಡಿಯಲ್ಲಿ ಬೂಟು, ಕಾಲುಚೀಲ , ಚಣ್ಣ , ಸಾಬೂನು , ಔಷಧ , ಪುಸ್ತಕ ಮುಂತಾದ ಸಾಮಾನುಗಳು ದೊರೆಯುತ್ತವೆ - ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿನ್ನೆ
a)
ಪೂರ್ಣವಿರಾಮ ಚಿಹ್ನೆ
b)
ಅರ್ಧ ವಿರಾಮ ಚಿಹ್ನೆ
c)
ಅಲ್ಪವಿರಾಮ ಚಿಹ್ನೆ
d)
ಭಾವಸೂಚಕ ಚಿಹ್ನೆ
37.
ಭಾರತ ಸರ್ಕಾರ ವಿಶ್ವೇಶ್ವರಯ್ಯನವರಿಗೆ ದೇಶದ ಅತ್ಯುನ್ನತ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ - ಈ ವಾಕ್ಯದಲ್ಲಿ ಭಾರತರತ್ನ ಪದಕ್ಕೆ ಹಾಕಬೇಕಾದ ಲೇಖನ ಚಿನ್ನೆ
a)
ಅರ್ಧ ವಿರಾಮ ಚಿಹ್ನೆ
b)
ಪ್ರಶ್ನಾರ್ಥಕ ಚಿಹ್ನೆ
c)
ಉದ್ದರಣ ಚಿಹ್ನೆ
d)
ವಾಕ್ಯವೇಷ್ಟನ ಚಿಹ್ನೆ
38.
"ನಿಲ್ಸಿ ನನ್ ಮಕ್ಕಳಾ" ಎಂದು ಮಂಚಮ್ಮ ದೇವಿ ಅಬ್ಬರ ಮಾಡುತ್ತಾಳೆ - ಈ ವಾಕ್ಯದಲ್ಲಿನ ಲೇಖನ ಚಿನ್ನೆ
a)
ವಾಕ್ಯವೇಷ್ಟನ ಚಿಹ್ನೆ
b)
ಭಾವಸೂಚಕ ಚಿಹ್ನೆ
c)
ಪ್ರಶ್ನಾರ್ಥಕ ಚಿಹ್ನೆ
d)
ಉದ್ಧರಣ ಚಿಹ್ನೆ
39.
ಶಾನುಭೋಗರು ಉಳಿದಿದ್ದು ಕೀರ್ತಿ ಪುಸ್ತಕದಿಂದಲ್ಲ ; ಹುಲಿಯ ಧರ್ಮಶ್ರದ್ಧೆಯಿಂದ - ಈ ವಾಕ್ಯದಲ್ಲಿ ಇರುವ ಲೇಖನ ಚಿನ್ನೆ
a)
ಭಾವಸೂಚಕ ಚಿಹ್ನೆ
b)
ಅರ್ಧ ವಿರಾಮ ಚಿಹ್ನೆ
c)
ಅಲ್ಪವಿರಾಮ ಚಿಹ್ನೆ
d)
ಪ್ರಶ್ನಾರ್ಥಕ ಚಿಹ್ನೆ
40.
ದುಷ್ಟಬುದ್ಧಿಯು ಸುಳ್ಳುಗಳನ್ನು ಹೇಳಿದನೆ ಹೊರತು ಹೊನ್ನು ಕದ್ದ ವಿಚಾರವನ್ನು ಹೇಳಲಿಲ್ಲ - ಈ ವಾಕ್ಯವು
a)
ಸಾಮಾನ್ಯ ವಾಕ್ಯ
b)
ಮಿಶ್ರ ವಾಕ್ಯ
c)
ಸಂಯೋಜಿತ ವಾಕ್ಯ
d)
ಸಹ ಸಂಬಂಧಿತವಾಕ್ಯ
41.
ರಾಹಿಲನು ನನ್ನ ಸೊಸೆಗೆ ಪರೀಕ್ಷೆ ಮಾಡಲು ಒಪ್ಪಿಕೊಂಡನು, ಆದ್ದರಿಂದ ನನಗೆ ದೈರ್ಯ ಉಂಟಾಯಿತು - ಈ ವಾಕ್ಯವು
a)
ಮಿಶ್ರ ವಾಕ್ಯ
b)
ಸಾಮಾನ್ಯ ವಾಕ್ಯ
c)
ಪ್ರಶ್ನಾರ್ಥಕ ವಾಕ್ಯ
d)
ಸಂಯೋಜಿತ ವಾಕ್ಯ
42.
ತನ್ನ ಹಡಗು ಬಂಡೆಗೆ ತಗುಲಿ ಒಡೆಯಿತೆಂದು ವರ್ತಕನಿಗೆ ತಿಳಿಯಿತು. - ಈ ವಾಕ್ಯ
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಸಂಬೋಧನಾ ವಾಕ್ಯ
43.
ಕೋಟೆಯೊಳಗೆ ಶತ್ರುಗಳು ನುಗ್ಗಿದರು ಎಂಬ ಸುದ್ದಿಯನ್ನು ಕೇಳಿ ಜನರು ತಲ್ಲಣ ಗೊಂಡರು - ಈ ವಾಕ್ಯವು
a)
ಸಾಮಾನ್ಯ ವಾಕ್ಯ
b)
ಮಿಶ್ರ ವಾಕ್ಯ
c)
ಸಂಯೋಜಿತ ವಾಕ್ಯ
d)
ಅಲಿಖಿತ ವಾಕ್ಯ
44.
ಈ ಕೋಣೆಯಲ್ಲಿ ಬೆಳಕು ಬಿಡುವುದಿಲ್ಲ ; ಗಾಳಿಯು ಬೀಸುವುದಿಲ್ಲ - ಈ ವಾಕ್ಯವು
a)
ನಿಷೇಧಾರ್ಥಕ ವಾಕ್ಯ
b)
ಸಂಭವನಾರ್ಥಕ ವಾಕ್ಯ
c)
ಸಂಯೋಜಿತ ವಾಕ್ಯ
d)
ಸಾಮಾನ್ಯ ವಾಕ್ಯ
45.
ಸುಂದರಿ ಮೃಗದ ಅರಮನೆಗೆ ಹೋಗಲು ಒಪ್ಪಿದ್ದರಿಂದ ನನಗೆ ಧೈರ್ಯ ಉಂಟಾಯಿತು. ವಾಕ್ಯವು
a)
ಸಾಮಾನ್ಯ ವಾಕ್ಯ
b)
ಮಿಶ್ರ ವಾಕ್ಯ
c)
ಸಂಬಂಧಿತ ವಾಕ್ಯ
d)
ಸಂಯೋಜಿತ ವಾಕ್ಯ
46.
ಶಬರಿಯು ರಾಮ ಲಕ್ಷ್ಮಣರಿಗೆ ಆತಿಥ್ಯವನ್ನು ಮಾಡಿದಳು ಆದ್ದರಿಂದ ಅವರು ಸಂತೋಷಿಗಳಾದರು - ಈ ವಾಕ್ಯವು
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಭಾವ ನಾರ್ಥಕ ವಾಕ್ಯ
47.
ಅಬ್ಬಾ ! ಅಯ್ಯೋ ! : ಭಾವಸೂಚಕ ಚಿಹ್ನೆ : : ಯಾರು ? ಏನು ? : -------
a)
ಉದ್ಧರಣ ಚಿಹ್ನೆ
b)
ಅರ್ಧ ವಿರಾಮ ಚಿಹ್ನೆ
c)
ಪ್ರಶ್ನಾರ್ಥಕ ಚಿಹ್ನೆ
d)
ವಾಕ್ಯವೇಷ್ಟನ ಚಿಹ್ನೆ
48.
ವಿಶ್ವೇಶ್ವರಯ್ಯನವರು "ಕೈಗಾರಿಕರಣ ಇಲ್ಲವೇ ಅವನತಿ" ಎಂಬ ಘೋಷಣೆ ಮಾಡಿದರು - ಇಲ್ಲಿ ಬಳಸಿರುವ ಲೇಖನ
a)
ವಾಕ್ಯವೇಷ್ಟನ ಚಿಹ್ನೆ
b)
ಭಾವಸೂಚಕ ಚಿಹ್ನೆ
c)
ಆವರಣ ಚಿಹ್ನೆ
d)
ಉದ್ಧರಣ ಚಿಹ್ನೆ
49.
ಹನ್ನೆರಡು ವರ್ಷದ ಒಬ್ಬ ಬಾಲಕ ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಮೂಕನಂತೆ ಅತ್ತಿಂದಿತ್ತ ಓಡಾಡುತ್ತಿದ್ದನು.- ಈ ವಾಕ್ಯವು
a)
ಮಿಶ್ರ ವಾಕ್ಯ
b)
ಸಾಮಾನ್ಯ ವಾಕ್ಯ
c)
ಭಾವನಾತ್ಮಕ ವಾಕ್ಯ
d)
ಸಂಯೋಜಿತ ವಾಕ್ಯ
50.
"ಕೊಲ್ಲಬೇಡ ! ನನ್ನ ಮಗಳಿಗಾಗಿ ಒಂದು ಗೊಂಚಲು ಗುಲಾಬಿ ತೆಗೆದುಕೊಂಡಿದ್ದು ಅಪರಾಧವೇ ? " - ಇಲ್ಲಿ ಬಳಕೆಯಾಗಿರುವ ಲೇಖನ ಚಿನ್ನೆ
a)
ಉದ್ಧರಣ ಚಿಹ್ನೆ
b)
ಪ್ರಶ್ನಾರ್ಥಕ ಚಿಹ್ನೆ
c)
ಭಾವಸೂಚಕ ಚಿಹ್ನೆ
d)
ಈ ಎಲ್ಲವೂ ಬಳಕೆಯಾಗಿವೆ.
Reset
