wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:10 (ಭಾಗ 01)-ನಟರಾಜ &ಭಾಗ್ವತ್

Total questions: 15

Worksheet time: 8mins

Name
Class
Date
1.

ಕಚ್ಚಾ ವಸ್ತುಗಳನ್ನು ಹೆಚ್ಚು ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು

a)

ಕೈಗಾರಿಕೆ ಎನ್ನುವರು.

b)

ಕೃಷಿ ಎನ್ನುವರು

c)

ಶುದ್ಧೀಕರಣ ಎನ್ನುವರು

d)

ಕೊಟ್ಟಿರುವ ಯಾವುದೂ ಅಲ್ಲ

2.

"ಕೈಗಾರಿಕೆಗಳು ನಮ್ಮ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ" ಇದಕ್ಕೆ ಸಂಬಂಧ ಪಡದ ಅಂಶ ಯಾವುದು? ಗುರುತಿಸಿ

a)

ಕೈಗಾರಿಕೆಗಳ ಅಭಿವೃದ್ಧಿಯಿಂದ ಪ್ರಾಥಮಿಕ ಸರಕುಗಳ ಅವಲಂಬನೆ ಮತ್ತು ಆಮದು ಕಡಿಮೆಯಾಗುತ್ತದೆ.

b)

ಕೈಗಾರಿಕೆಯಿಂದ ರಾಷ್ಟ್ರಾದಾಯ ಮತ್ತು ತಲಾದಾಯ ಹೆಚ್ಚಾಗುತ್ತದೆ.

c)

ಕೈಗಾರಿಕೆಯಿಂದ ವಿದೇಶೀ ವಿನಿಮಯ ಗಳಿಕೆಯಲ್ಲಿ ವೃದ್ಧಿ, ಉದ್ಯೋಗಾವಕಾಶ, ಜಿಡಿಪಿ ಮತ್ತು ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗುವುದು.

d)

ಕೊಟ್ಟಿರುವ ಎಲ್ಲಾ ಅಂಶಗಳು ಪೂರಕವಾಗಿವೆ.

3.

"ಕೈಗಾರಿಕೆಗಳ ಸ್ಥಾನೀಕರಣ ಮತ್ತು ಅಭಿವೃದ್ಧಿಯನ್ನು ಹಲವು ಅಂಶಗಳು ನಿರ್ಧರಿಸುತ್ತವೆ".ಕೊಟ್ಟಿರುವ ಯಾವ ಅಂಶ/ಅಂಶಗಳು ಈ ಹೇಳಿಕೆಯನ್ನು ಸಮರ್ಥಿಸುತ್ತವೆ?

a)

ಕಚ್ಚಾ ವಸ್ತುಗಳ ಸರಬರಾಜು, ಕಾರ್ಮಿಕರು ಮತ್ತು ನೀರು ದೊರೆಯುವಿಕೆ, ಸೂಕ್ತ ವಾಯುಗುಣ,

b)

ಶಕ್ತಿ ಸಂಪನ್ಮೂಲಗಳ ಪೂರೈಕೆ, ಬಂಡವಾಳ, ಸರ್ಕಾರದ ನೀತಿ ನಿಯಮಗಳು

c)

ಸಾರಿಗೆ ಮತ್ತು ಸಂಪರ್ಕದ ವ್ಯವಸ್ಥೆ, ,ಮಾರುಕಟ್ಟೆ ಸೌಲಭ್ಯ,

d)

ಕೊಟ್ಟಿರುವ ಎಲ್ಲ ಅಂಶಗಳು ಕೈಗಾರಿಕೆಗಳ ಸ್ಥಾನೀಕರಣ ಮತ್ತು ಅಭಿವೃದ್ಧಿಯನ್ನು ನಿರ್ಧರಿಸುತ್ತವೆ

4.

ಒಂದೇ ಬಗೆಯ ಅಥವಾ ವಿವಿಧ ಬಗೆಯ ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ ಕೇಂದ್ರೀಕೃತಗೊಂಡ ಪ್ರದೇಶವನ್ನು

a)

ಮಾರುಕಟ್ಟೆ ಎನ್ನುವರು

b)

‘ಕೈಗಾರಿಕಾ ಪ್ರದೇಶ’ ಎನ್ನುವರು

c)

ಕೈಗಾರಿಕೆ ಎನ್ನುವರು

d)

ಕೊಟ್ಟಿರುವ ಯಾವುದೂ ಅಲ್ಲ

5.

ಕೈಗಾರಿಕಾ ಪ್ರದೇಶ’ ಕ್ಕೆ ಸಂಬಂಧಿಸಿದ ಹಾಗೆ ಕೊಟ್ಟಿರುವ ಯಾವೆಲ್ಲ ಸೂಕ್ತವಾಗಿವೆ?

a)

ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳು ಹೆಚ್ಚು

ಕಂಡುಬರುವ ಪ್ರದೇಶ.

b)

ಸಾಮಾನ್ಯವಾಗಿ ಅದು ನಗರ ಪ್ರದೇಶವೂ ಆಗಿರುತ್ತದೆ.

c)

ಇವು ಕೈಗಾರಿಕಾ ಸ್ಥಾನೀಕರಣದ ಅಂಶಗಳು ಪೂರಕವಾಗಿರುವ ಕಡೆ ಕಂಡುಬರುತ್ತದೆ.

d)

ಕೊಟ್ಟಿರುವ ಎಲ್ಲಾ ಅಂಶಗಳು ಸೂಕ್ತವಾಗಿವೆ

6.

ಭಾರತದಲ್ಲಿನ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನುನೀಡಿದ್ದು ಗುಂಪಿಗೆ ಸೇರದ್ದನ್ನು /ತಪ್ಪಾದದ್ದನ್ನು ಗುರುತಿಸಿ.

a)

ಹೂಗ್ಲಿ-ಕೊಲ್ಕತ ಪ್ರದೇಶ.ಛೋಟಾನಾಗಪುರ ಪ್ರಸ್ಥಭೂಮಿ ಪ್ರದೇಶ.ಮುಂಬಯಿ-ಪುಣೆ ಪ್ರದೇಶ.

b)

ಮುಂಬಯಿ-ಪುಣೆ ಪ್ರದೇಶ.ಅಹ್ಮದಾಬಾದ್-ವಡೋದರ ಪ್ರದೇಶ.ದೆಹಲಿ-ಮೀರತ್ ಪ್ರದೇಶ.

c)

ಅಹ್ಮದಾಬಾದ್-ವಡೋದರ ಪ್ರದೇಶ.ಕೊಲ್ಲಂ-ತಿರುವನಂತಪುರ

d)

ಮಧುರೈ-ತುಮಕೂರು,ಚಿತ್ರದುರ್ಗ ,ಉತ್ತರ ಕ ನ್ನಡ

7.

ಕೊಟ್ಟಿರುವ ಯಾವುದು ಭಾರತದ ಕೈಗಾರಿಕೆ ಪ್ರದೇಶಗಳಿಗೆ ಸೇರಿದೆ?

a)

ಕೊಯಮತ್ತೂರು-ಬೆಂಗಳೂರು ಪ್ರದೇಶ,ಛೋಟಾನಾಗಪುರ ಪ್ರಸ್ಥಭೂಮಿ ಪ್ರದೇಶ.

b)

ದೆಹಲಿ-ಮೀರತ್ ಪ್ರದೇಶ. ವಿಶಾಖಪಟ್ಟಣ-ಗುಂಟೂರು ಪ್ರದೇಶ.

c)

ಕೊಲ್ಲಂ-ತಿರುವನಂತಪುರ

d)

ಕೊಟ್ಟಿರುವ ಎಲ್ಲವೂ ಸೇರಿವೆ

8.

ಇದು ಇತರೆ ಕೈಗಾರಿಕೆಗಳಿಗೆಲ್ಲ ಮೂಲ ಕೈಗಾರಿಕೆಯಾಗಿದೆ. ಎಂಜನೀಯರಿಂಗ್, ರೈಲ್ವೆ ಎಂಜಿನ್, ಯಂತ್ರೋಪಕರಣ, ಸ್ವಚಾಲಿತ ವಾಹನ, ಕೃಷಿ ಉಪಕರಣ ಮೊದಲಾದ ಕೈಗಾರಿಕೆಗಳು ಈ ಕೈಗಾರಿಕೆಯನ್ನಾಧರಿಸಿರುತ್ತವೆ.

a)

ಕಬ್ಬಿಣ ಮತ್ತು ಉಕ್ಕು

b)

ಅಲ್ಯೂಮಿನಿಯಂ ಕೈಗಾರಿಕೆ

c)

ಹತ್ತಿಬಟ್ಟೆ ಕೈಗಾರಿಕೆ

d)

ಜ್ಞಾನಾಧಾರಿತ ಕೈಗಾರಿಕೆಗಳು

9.

ಇದರ ಅದಿರು ಕರಗಿಸುವ ಮತ್ತು ಇದನ್ನು ತಯಾರಿಸುವ ಕಲೆ ಭಾರತೀಯರಿಗೆ ಪ್ರಾಚೀನಕಾಲದಿಂದಲೂ ತಿಳಿದಿದ್ದು ಭಾರತದ ಅತಿ ಮುಖ್ಯ ಲೋಹ ಆಧಾರಿತ ಕೈಗಾರಿಕೆಯಾಗಿದೆ

a)

ಕಬ್ಬಿಣ(ಕಬ್ಬಿಣ & ಉಕ್ಕು)

b)

ಅಲ್ಯುಮಿನಿಯಂ

c)

ಮ್ಯಾಂಗನೀಸ್

d)

ಕೊಟ್ಟಿರುವ ಯಾವುದೂ ಅಲ್ಲ

10.

ಭಾರತದಲ್ಲಿ ಮೊಟ್ಟಮೊದಲಿಗೆ ಆಧುನಿಕ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಆರಂಭವಾದ ಸ್ಥಳ

a)

1923ರಲ್ಲಿ ಭದ್ರಾವತಿಯಲ್ಲಿ ಪ್ರಾರಂಭವಾಯಿತು

b)

1907ರಲ್ಲಿ ಜಾರ್ಖಂಡ್ ರಾಜ್ಯದ ಜೆಮ್ ಷೆಡ್ ಪುರದಲ್ಲಿ ಸ್ಥಾಪನೆಗೊಂಡಿತು.

c)

1874ರಲ್ಲಿ ಪಶ್ಚಿಮ ಬಂಗಾಳದ ದುರ್ಗಾಪುರ ಎಂಬಲ್ಲಿ ಸ್ಥಾಪನೆಗೊಂಡಿತು.

d)

1874ರಲ್ಲಿ ಪಶ್ಚಿಮ ಬಂಗಾಳದ ಕುಲ್ಟಿ ಎಂಬಲ್ಲಿ ಸ್ಥಾಪನೆಗೊಂಡಿತು.

11.

ವಾಸ್ತವವಾಗಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯು ಭಾರತದಲ್ಲಿ ಈ ಸ್ಥಳದಲ್ಲಿ ಆರಂಭವಾಯಿತು.

a)

ಜಾರ್ಖಂಡ್ ರಾಜ್ಯದ ಜೆಮ್ ಷೆಡ್ ಪುರದಲ್ಲಿ

b)

ಬಿಹಾರದ ಬೊಕಾರೋದಲ್ಲಿ

c)

ಕರ್ನಾಟಕದ ಭದ್ರಾವತಿಯಲ್ಲಿ

d)

ಪಶ್ಚಿಮ ಬಂಗಾಳಧ ದುರ್ಗಾಪುರದಲ್ಲಿ

12.

ಕೊಟ್ಟಿರುವ ಯಾವ ಅಂಶಗಳು ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಸ್ಥಾನೀಕರಣದ ಮೇಲೆ ಪ್ರಭಾವ ಬೀರುತ್ತವೆ? ಅಥವಾ ನಿರ್ಧರಿಸುತ್ತವೆ?

a)

ಮೂಲ ಕಚ್ಚಾವಸ್ತುವಾದ ಕಬ್ಬಿಣದ ಅದಿರು ಪೂರೈಕೆ. ಹಾಗೂ ಕಡಿಮೆ ಕೂಲಿಗೆ ದುಡಿಯುವ ನುರಿತ ಕಾರ್ಮಿಕರು ,ಬಂಡವಾಳ

b)

ಶಕ್ತಿ ಸಂಪನ್ಮೂಲವಾದ ಕೋಕಿಂಗ್ ಕಲ್ಲಿದ್ದಲು ಹಾಗೂ ಜಲವಿದ್ಯುತ್ ಪೂರೈಕೆ.

c)

ರೈಲು ಸಾರಿಗೆ ಹಾಗೂ ಬಂದರು ಸೌಲಭ್ಯ.& ನೀರು ಪೂರೈಕೆ. ಸ್ಥಳೀಯ ಮಾರುಕಟ್ಟೆ ಸೌಲಭ್ಯ.

d)

ಕೊಟ್ಟಿರುವ ಎಲ್ಲಾ ಅಂಶಗಳು ಪ್ರಭಾವ ಬೀರುತ್ತವೆ ಅಥವಾ ನಿರ್ಧರಿಸುತ್ತವೆ.

13.

ಕೊಟ್ಟಿರುವ ಯಾವುದು ಭಾರತದ ಖಾಸಗೀ ವಲಯಕ್ಕೆ ಸೇರಿಲ್ಲದ ಕಬ್ಬಿಣ &ಉಕ್ಕಿನ ಕೈಗಾರಿಕೆಯಾಗಿದೆ?

a)

ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ ಜೆಮ್ ಷೆಡ್ ಪುರ ಜಾರ್ಖಂಡ್.(TISCO)

b)

ಜಿಂದಾಲ್ ವಿಜಯನಗರ ಉಕ್ಕು ಲಿ. ತೋರಣಗಲ್, ಬಳ್ಳಾರಿ ಜಿಲ್ಲೆ, ಕರ್ನಾಟಕ.(JVSL)

c)

ಇಸ್ಪಾತ್ ಕಬ್ಬಿಣ ಮತ್ತು ಉಕ್ಕು ಲಿ. ದೋಲ್ವಿ, ರತ್ನಗಿರಿಜಲ್ಲೆ, ಮಹಾರಾಷ್ಟ್ರ.

d)

ಭಾರತೀಯ ಕಬ್ಬಿಣ ಮತ್ತು ಉಕ್ಕು ಕಂಪನಿ. ಬರ್ನ್‍ಪುರ, ಪಶ್ಚಿಮ ಬಂಗಾಳ.IISCO

14.

ಕೊಟ್ಟಿರುವ ಕಬ್ಬಿಣ & ಉಕ್ಕಿನ ಕೈಗಾರಿಕೆಗಳಲ್ಲಿ ಯಾವುದು ಭಾರತದಲ್ಲಿ ಸರ್ಕಾರಿ ವಲಯಕ್ಕೆ ಸೇರಿಲ್ಲ? ಗುರುತಿಸಿ

a)

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ. ಭದ್ರಾವತಿ, ಕರ್ನಾಟಕ.VISL

b)

ಹಿಂದೂಸ್ತಾನ್ ಉಕ್ಕು ಲಿಮಿಟಡ್, ಬಿಲಾಯಿ, ದುರ್ಗ್‍ಜಿಲ್ಲೆ, ಛತ್ತೀಸ್‍ಗರ್.

c)

ದುಬಾರಿ ಉಕ್ಕು ಸ್ಥಾವರ, ಗೋಪಾಲ್ಪುರ, ಒಡಿಶಾ.NINL

d)

ಹಿಂದೂಸ್ತಾನ್ ಉಕ್ಕು ಲಿಮಿಟೆಡ್, ರೂರ್ಕೆಲ, ಸುಂದರ್‍ಗಡ ಜಿಲ್ಲೆ, ಒಡಿಶಾ.

15.

ಹಿಂದೂಸ್ತಾನ್ ಉಕ್ಕು ಲಿಮಿಟೆಡ್ ದುರ್ಗಾಪುರ: ಪಶ್ಚಿಮ ಬಂಗಾಳ :: ಬೊಕಾರೊ ಉಕ್ಕು ಸ್ಥಾವರ, ಬೊಕಾರೊ :--------------

a)

ಜಾರ್ಖಂಡ್

b)

ಓಡಿಶಾ

c)

ಕರ್ನಾಟಕ

d)

ತಮಿಳುನಾಡು