wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:11 (ಭಾಗ 01)-ನಟರಾಜ &ಭಾಗ್ವತ್

Total questions: 15

Worksheet time: 8mins

Name
Class
Date
1.

ಭೂಆಂತರಿಕ ಕ್ರಿಯೆಗಳಿಂದ ಸಂಭವಿಸದ ನೈಸರ್ಗಿಕ ವಿಪತ್ತು ಯಾವುದು?

a)

ಭೂಕಂಪ,

b)

ಜ್ವಾಲಾಮುಖಿ

c)

ಬರಗಾಲ

d)

ಭೂಕುಸಿತ

2.

ವಾಯುಗೋಳಕ್ಕೆ ಸಂಬಧಿಸಿದ ನೈಸರ್ಗಿಕ ವಿಪತ್ತು ಯಾವುದು?

a)

ಪ್ರವಾಹ

b)

ಸುನಾಮಿ

c)

ಭೂಕುಸಿತ

d)

ಹಿಮಪಾತಗಳು

3.

ಗುಂಪಿಗೆ ಸೇರದ್ದನ್ನು ಗುರುತಿಸಿ

a)

ಭೂಕಂಪ, ಜ್ವಾಲಾಮುಖಿ, ಸುನಾಮಿ,

b)

ಭೂಕುಸಿತ ಮತ್ತು ಹಿಮಪಾತಗಳು , ಸುನಾಮಿ

c)

ಆವರ್ತಮಾರುತ (ಸೈಕ್ಲೋನ್), ಬರಗಾಲ, ಪ್ರವಾಹ

d)

ಭೂಕುಸಿತ , ಸುನಾಮಿ,ಜ್ವಾಲಾಮುಖಿ

4.

ಕಡಿಮೆ ಒತ್ತಡವುಳ್ಳ ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವುದರಿಂದ ಸಂಭವಿಸುವ ವಾಯುಗೋಳಕ್ಕೆ ಸಂಭಂಧಿಸಿದ ವಿಪತ್ತು

a)

ಕಡಲಕೊರೆತ

b)

ಭೂಕುಸಿತ

c)

ಸುನಾಮಿ

d)

ಆವರ್ತಮಾರುತ

5.

ಭಾರತದಲ್ಲಿ ಹೆಚ್ಚಾಗಿ ಯಾವ ವಲಯದ ಆವರ್ತಮಾರುತಗಳು ಸಂಭವಿಸುವವು?

a)

ಉಷ್ಣವಲಯದ

b)

ಶೀತವಲಯದ

c)

ಸಮಶೀತೋಷ್ಣ ವಲಯದ

d)

ಕೊಟ್ಟಿರುವ ಯಾವುದೂ ಅಲ್ಲ

6.

ಭಾರತದಲ್ಲಿ ಸಂಭವಿಸುವ ಉಷ್ಣವಲಯದ ಆವರ್ತಮಾರುತಗಳ ಉಗಮ ಮತ್ತು ಬೆಳವಣಿಗೆಗೆ ಕಾರಣವಾದ ಪರಿಸ್ಥಿತಿಗಳೆಂದರೆ;

a)

ಅಧಿಕ ಉಷ್ಣಾಂಶ

b)

ಪ್ರಶಾಂತ ವಾಯು ಮತ್ತು

c)

ಹೆಚ್ಚು ತೇವಾಂಶ ಭರಿತ ವಾಯು.

d)

ಕೊಟ್ಟಿರುವ ಎಲ್ಲಾ ಅಂಶಗಳು

7.

ಕಡಿಮೆ ಒತ್ತಡಕೋಶದ ಸುತ್ತಲೂ ಸಾಪೇಕ್ಷವಾದ ಅಧಿಕ ಒತ್ತಡವಿದ್ದು ಸುತ್ತಲಿನ ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡದ ಕೇಂದ್ರದ ಕಡೆಗೆ ಚಕ್ರಾಕಾರದಲ್ಲಿ ಮಾರುತಗಳು ಬೀಸುವುದರಿಂದ ಸಂಭವಿಸುವುದು

a)

ಆವರ್ತಮಾರುತ ಅಥವಾ ಸೈಕ್ಲೋನ್‍ಗಳು

b)

ಸುನಾಮಿ

c)

ಭೂಕಂಪ

d)

ಭೂ ಕುಸಿತ

8.

ಕೊಟ್ಟಿರುವುದರಲ್ಲಿ ಆವರ್ತ ಮಾರುತಗಳ ಪರಿಣಾಮಗಳು ಯಾವುವು?

a)

ಅವು ಸಾವು ಮತ್ತು ಆಸ್ತಿಗಳಿಗೆ ಹಾನಿಯನ್ನುಂಟುಮಾಡುತ್ತವೆ,

b)

ಕಟ್ಟಡಗಳಿಗೆ ಧಕ್ಕೆ, ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳನ್ನು

ಅಸ್ತವ್ಯಸ್ತಗೊಳಿಸುತ್ತವೆ.

c)

ವಿದ್ಯುತ್ ಸರಬರಾಜಿಗೆ ಅಡಚಣೆ, ಬೆಳೆಗಳು, ಸ್ವಾಭಾವಿಕ ಸಸ್ಯವರ್ಗ, ಪ್ರಾಣಿ ಸಂಕುಲ

ಮೊದಲಾದವುಗಳಿಗೂ ಹಾನಿಯನ್ನುಂಟುಮಾಡುವವು

d)

ಕೊಟ್ಟಿರುವ ಎಲ್ಲವೂ

9.

ಭಾರತದಲ್ಲಿ ಉಷ್ಣವಲಯದ ಆವರ್ತಮಾರುತಗಳು ಬಹುವಾಗಿ ಬಂಗಾಳಕೊಲ್ಲಿಯಲ್ಲಿ

ಸಂಭವಿಸುವುದರಿಂದ -----

a)

ದೇಶದ ಪಶ್ಚಿಮ ಕರಾವಳಿಯು ಆವರ್ತಮಾರುತ ಪೀಡಿತ ಪರಿಣಮಿಸುತ್ತದೆ

b)

ದೇಶದ ಪೂರ್ವಕರಾವಳಿಯು ಆವರ್ತಮಾರುತ ಪೀಡಿತ ಪರಿಣಮಿಸುತ್ತದೆ

c)

ದೇಶದ ದಕ್ಷಿಣ ಕರಾವಳಿಯು ಆವರ್ತಮಾರುತ ಪೀಡಿತ

ಪರಿಣಮಿಸುತ್ತದೆ

d)

ದೇಶಧ ಉತ್ತರ ಭಾಗವು ಆವರ್ತಮಾರುತ ಪೀಡಿತ

ಪರಿಣಮಿಸುತ್ತದೆ

10.

ಭಾರತದಲ್ಲಿ ಉಷ್ಣವಲಯದ ಆವರ್ತಮಾರುತಗಳು ಹೆಚ್ಚಾಗಿ ಕೆಳಗಿನ ಯಾವ ಕಾಲದಲ್ಲಿ ಸಂಭವಿಸುವವು?

a)

ನೈರುತ್ಯ ಮಾನ್ಸೂನ್ ಮಾರುತಗಳ

b)

ಈಶಾನ್ಯ ಮಾನ್ಸೂನ್ ಮಾರುತಗಳ

c)

ಬೇಸಿಗೆಯ ಅವಧಿಯಲ್ಲಿ

d)

ಕೊಟ್ಟಿರುವ ಯಾವುದೂ ಅಲ್ಲ

11.

ಭಾರತದಲ್ಲಿ ಈ ತಿಂಗಳುಗಳಲ್ಲಿ ಆವರ್ತ ಮಾರುತಗಳ ತೀವ್ರತೆ ಹೆಚ್ಚು.

a)

ಮೇ ಮತ್ತು ಜೂನ್ ತಿಂಗಳಲ್ಲಿ

b)

ಆಗಸ್ಟ್ & ಸೆಪ್ಟೆಂಬರ್ ತಿಂಗಳಲ್ಲಿ

c)

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ

d)

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ

12.

ಆವರ್ತ ಮಾರುತಗಳಿಂದ ಉಂಟಾಗುವ ದುಷ್ಪರಿಣಾಮ ತಡೆಗಟ್ಟುವ ವಿಧಾನ

a)

ಜನರು ಮುನ್ನೆಚ್ಚರಿಕೆಯ ಕಡೆಗೆ ಲಕ್ಷ್ಯಕೊಡಬಹುದು.

b)

ಆಕಾಶವಾಣಿ, ದೂರದರ್ಶನ ಮತ್ತು ಇತರೆ ಸಂಪರ್ಕಮಾದ್ಯಮಗಳು ಬಿತ್ತರಿಸುವ ಎಚ್ಚರಿಕೆಗಳನ್ನು ಗಮನಿಸಬೇಕು.

c)

ಆವರ್ತಮಾರುತಗಳು ಸಂಭವಿಸಿದ ಸಂದರ್ಭಗಳಲ್ಲಿ ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಬೇಕು.

d)

ಕೊಟ್ಟಿರುವ ಎಲ್ಲಾ

13.

ಆವರ್ತಮಾರುತಗಳ ಹೊಡೆತ ಮತ್ತು ಕಡಲಕೊರತೆಗಳನ್ನು ನಿಯಂತ್ರಿಸುವಂತಹ ಸಲುವಾಗಿ , ಆಳಕ್ಕೆ ಬೇರು ಬಿಡುವ ಇತರೆ ಮರಗಳನ್ನು ಹಾಗೂ ಕೆಳಗಿನ ಯಾವ ಕಾಡುಗಳನ್ನು ಸಮುದ್ರ ತೀರದಲ್ಲಿ ಬೆಳೆಸಬೇಕು?

a)

ಮಾಂಗ್ರೋವ್ ಕಾಡು

b)

ನಿತ್ಯ ಹರಿದ್ವರ್ಣ ಕಾಡು

c)

ಪರ್ವತ ಕಾಡು

d)

ಎಲೆ

14.

ಇದು ಭಾರತದಲ್ಲಿ ಆಗಿಂದಾಗ್ಗೆ ಸಂಭವಿಸುವ ನೈಸರ್ಗಿಕ ವಿಪತ್ತು. ಪ್ರತಿ

ವರ್ಷವೂ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಸಂಭವಿಸುವವು.

a)

ಆವರ್ತಮಾರುತ

b)

ಸುನಾಮಿ

c)

ನದಿ ಪ್ರವಾಹಗಳು

d)

ಕೊಟ್ಟಿರುವ ಯಾವುದೂ ಅಲ್ಲ

15.

ಪ್ರವಾಹಕ್ಕೆ ಈ ಕೆಳಗಿನ ಯಾವುದು ನೈಸರ್ಗಿಕ ಕಾರಣವಲ್ಲ?

a)

ಅತ್ಯಧಿಕ ಮಳೆ, ಹಿಮಕರಗುವಿಕೆ

b)

ಆವರ್ತಮಾರುತ, ಮೇಘಸ್ಫೋಟ,

c)

ಅರಣ್ಯನಾಶ, ಅವೈಜ್ಞಾನಿಕ ನೀರಾವರಿ ವ್ಯವಸ್ಥೆ

d)

ನದಿಸರಾಗವಾಗಿ ಹರಿಯಲಾರದಷ್ಟು ಅಡಚಣೆ, ನದಿ ಪಾತ್ರದಲ್ಲಿ ಹೂಳುತುಂಬುವಿಕೆ