wayground logo

Free Printable Worksheets

Font size

S
M
L
XL
Worksheets

10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:11 (ಭಾಗ 02)-ನಟರಾಜ &ಭಾಗ್ವತ್

Total questions: 15

Worksheet time: 8mins

Name
Class
Date
1.

ಪ್ರವಾಹಕ್ಕೆಸಂಬಂಧಿಸಿದ ಹಾಗೆ ಕೆಳಗಿನ ಯಾವುದು ಮಾನವ ಕೃತ್ಯವಲ್ಲ?

a)

ಅರಣ್ಯನಾಶ, ಅವೈಜ್ಞಾನಿಕ ನೀರಾವರಿ ವ್ಯವಸ್ಥೆ ಮತ್ತು ಕೃಷಿ ಪದ್ಧತಿ,

b)

ಹಿಮಕರಗುವಿಕೆ, ಆವರ್ತಮಾರುತ, ಮೇಘಸ್ಫೋಟ

c)

ಒಡ್ಡು ಮತ್ತು ಅಣೆಕಟ್ಟುಗಳು ಒಡೆದು ಹೋಗುವುದು

d)

ಶೀಘ್ರಗತಿಯ ನಗರೀಕರಣ .

2.

ಭಾರತದಲ್ಲಿ ಪ್ರವಾಹ ಪೀಡಿತ ಪ್ರದೇಶಗಳು

a)

ಗಂಗ ಮತ್ತು ಬ್ರಹ್ಮಪುತ್ರ ನದಿ ಬಯಲುಗಳು. ( ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ಭಾಗಗಳನ್ನೊಳಗೊಂಡಿವೆ.)

b)

ಸಟ್ಲೇಜ್, ಬಿಯಾಸ್, ರಾವಿ ಮತ್ತು ಚೀನಾಬ್ ಬಯಲುಗಳು. ( ಜಮ್ಮು- ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳ ಕೆಲವು ಭಾಗಗಳನ್ನೊಳಗೊಂಡಿವೆ.)

c)

ಪರ್ಯಾಯ ಪ್ರಸ್ಥಭೂಮಿ, ನದಿಮುಖಜ ಭೂಮಿಗಳು. (ಮಹಾನದಿ,

ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿ ಮುಖಜ ಭಾಗಗಳು. ಅವು ಒಡಿಶಾ, ಮಧ್ಯಪ್ರದೇಶ, ಛತ್ತಿಸ್‍ಗರ್,ತಮಿಳುನಾಡು ಮತ್ತು ಆಂಧ್ರಪ್ರದೇಶ

d)

ಕೊಟ್ಟಿರುವ ಎಲ್ಲಾ ಪ್ರದೇಶಗಳು

3.

ಈ ಭಾಗಗಳಲ್ಲಿ ಪ್ರವಾಹಗಳು ಅಪರೂಪ. ಇಲ್ಲಿ ಒಮ್ಮೆಲೆ ಅತ್ಯಧಿಕ ಮಳೆ ಬಿದ್ದಾಗ ಪ್ರವಾಹಗಳು ಸಂಭವಿಸುತ್ತವೆ.

a)

ನರ್ಮದಾ ಮತ್ತು ತಪತಿ ನದಿಗಳ ತಗ್ಗು ಭಾಗಗಳು. ಉದಾ: ಗುಜರಾತ್.

b)

ಪರ್ಯಾಯ ಪ್ರಸ್ಥಭೂಮಿ, ನದಿಮುಖಜ ಭೂಮಿಗಳು. ಉದಾ: ಮಹಾನದಿ,

ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿ ಮುಖಜ ಭಾಗಗಳು

c)

ಗಂಗ ಮತ್ತು ಬ್ರಹ್ಮಪುತ್ರ ನದಿ ಬಯಲುಗಳು.

d)

ಸಟ್ಲೇಜ್, ಬಿಯಾಸ್, ರಾವಿ ಮತ್ತು ಚೀನಾಬ್ ಬಯಲುಗಳು

4.

ಪ್ರವಾಹ ನಿಯಂತ್ರಣ ಕ್ರಮಗಳನ್ನು ಕೆಳಗೆ ನೀಡಲಾಗಿದೆ. ಯಾವೆಲ್ಲವುಗಳನ್ನು ಅನುಸರಿಸಬಹುದು?

a)

ಜಲಾನಯನ ಪ್ರದೇಶದಲ್ಲಿ ಅರಣ್ಯ ಬೆಳೆಸುವುದು ಮತ್ತು ವೇಗವಾದ ನೀರಿನ ಹರಿವು ನಿಯಂತ್ರಣ.

b)

ಅಣೆಕಟ್ಟುಗಳನ್ನು ನಿರ್ಮಿಸಿ ಜಲಾಶಯಗಳಲ್ಲಿ ನೀರು ಸಂಗ್ರಹಿಸಿ ನದಿ ನೀರಿನ ಪ್ರಮಾಣವನ್ನು ಕಡಿಮೆಮಾಡುವುದು. ಸಂಗ್ರಹಿಸಿದ ನೀರನ್ನು ನೀರಾವರಿ ಮೊದಲಾದ ಉದ್ದೇಶಗಳಿಗಾಗಿ ಬಳಕೆ.

c)

ಒಡ್ಡುಗಳ ನಿರ್ಮಾಣ.ಪ್ರವಾಹಗಳ ಬಗ್ಗೆ ಮುನ್ಸೂಚನೆ ಮತ್ತು ಸಕಾಲಿಕ ಮುನ್ನೆಚ್ಚರಿಕೆ ನೀಡುವುದು.

d)

ಕೊಟ್ಟಿರುವ ಎಲ್ಲಾ ಅಂಶಗಳನ್ನು ಅನುಸರಿಬಹುದು

5.

ಇದು ಭೂ ಗುರುತ್ವಾಶಕ್ತಿಯಿಂದ ಮಣ್ಣು, ಕಲ್ಲು ಮತ್ತು ಭಗ್ನಾವಿಶೇಷಗಳು ಕೆಳಗೆ ಬೀಳುವ ಅಥವಾ ಜರುಗುವ ಕ್ರಿಯೆಯನ್ನೊಳಗೊಂಡಿದ್ದು ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವುದು

a)

ಪ್ರವಾಹ

b)

ಭೂಕುಸಿತ

c)

ಸುನಾಮಿ

d)

ಭೂಕಂಪ

6.

ಕೊಟ್ಟಿರುವ ಯಾವುದು ಭೂ ಕುಸಿತಕ್ಕೆ ನೈಸರ್ಗಿಕ ಕಾರಣವಲ್ಲ? ಗುರುತಿಸಿ

a)

ಕಡಲ ಕಡಿದಾದ ಬಂಡೆಯ ತಳವನ್ನು ಸಮುದ್ರ ಅಲೆಗಳು ಸವೆಸುವಂತಹ

ಇಳಿಜಾರಿನ ಅಡಿಭಾಗದ ಸವೆತ,

b)

ಅತ್ಯಧಿಕ ಮಳೆ

c)

ಅಣೆಕಟ್ಟು, ಜಲಾಶಯ ಮತ್ತು ಜಲವಿದ್ಯುತ್

d)

ಭೂಕಂಪಗಳು.

7.

ಅರಣ್ಯನಾಶ, ರೈಲು, ರಸ್ತೆಗಳು, ಅಣೆಕಟ್ಟು, ಜಲಾಶಯ ಮತ್ತು ಜಲವಿದ್ಯುತ್

ಯೋಜನೆಗಳ ನಿರ್ಮಾಣ, ತೀವ್ರಗತಿಯ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಇತ್ಯಾದಿ ಮಾನವ ನಿರ್ಮಿತ ಕೃತ್ಯಗಳು ಕೆಳಗಿನ ಯಾವುದಕ್ಕೆ ಕಾರಣವಾಗುತ್ತವೆ?

a)

ಭೂ ಕುಸಿತ

b)

ಸಮುದ್ರ ಸವೆತ

c)

ಆವರ್ತಮಾರುತ

d)

ನದಿ ಪ್ರವಾಹ

8.

ಭೂಕುಸಿತಗಳೂ ಸಹ ನೈಸರ್ಗಿಕ ವಿನಾಶಕಾರಿ ವಿಪತ್ತುಗಳಾಗಿದ್ದು ಇವುಗಳಿಂದಾಗುವ ಮುಖ್ಯ ಪರಿಣಾಮಗಳೆಂದರೆ

a)

ರೈಲುಮಾರ್ಗ, ರಸ್ತೆಗಳಿಗೆ ಅಡಚಣೆ,

b)

ಜನವಸತಿ ಮತ್ತು ಸಸ್ಯವರ್ಗಗಳು ಭೂಗತವಾಗುವುದು.

c)

ಸಾವು-ನೋವು ಮತ್ತು ಆಸ್ತಿಗಳಿಗೆ ಹಾನಿ. ಇವುಗಳಲ್ಲಿ ಆಗಾಗ್ಗೆ ರಸ್ತೆಗಳಿಗೆ ಅಡಚಣೆ

d)

ಕೊಟ್ಟಿರುವ ಎಲ್ಲಾ ಆಯ್ಕೆಗಳು ಸಹ ಭೂ ಕುಸಿತದ ಪರಿಣಾಮಗಳು

9.

ಭಾರತದಲ್ಲಿ ಭೂಕುಸಿತಗಳು ಹೆಚ್ಚಾಗಿರುವ ರಾಜ್ಯಗಳ ಸರಿಯಾದ ಗುಂಪು

a)

ಜಮ್ಮು-ಕಾಶ್ಮೀರ, ರಾಜಸ್ತಾನ, ಹರ್ಯಾನಾ

b)

ಹಿಮಾಚಲ ಪ್ರದೇಶ, ತಮಿಳುನಾಡು, ಕೇರಳ

c)

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳು.

d)

ಮಹಾರಾಷ್ಟ್ರ,ಕರ್ನಾಟಕ,ತಮಿಳುನಾಡು

10.

ಭಾರತದಲ್ಲಿ ಭೂಕುಸಿತಗಳು ಯಾವ ರಾಜ್ಯಗಳಲ್ಲಿ ಹೆಚ್ಚು ಸಂಭವಿಸುವವು?

a)

ಕರಾವಳಿ ರಾಜ್ಯಗಳಲ್ಲಿ

b)

ಮರಭೂಮಿ ಹೆಚ್ಚಾಗಿರುವ ರಾಜ್ಯಗಳಲ್ಲಿ

c)

ಬೆಟ್ಟ-ಪರ್ವತಗಳು ಹೆಚ್ಚಾಗಿರುವ ರಾಜ್ಯಗಳಲ್ಲಿ

d)

ನದೀ ಮುಖಜ ಭೂಮಿ ರಾಜ್ಯಗಳಲ್ಲಿ

11.

ಇಳಿಜಾರನ್ನು ತಗ್ಗಿಸುವುದು. ಹೆದ್ದಾರಿಗಳ ಬದಿ ಮತ್ತಿತರ ಇಳಿಜಾರುಗಳಲ್ಲಿ

ಬಂಡೆಗಳು ಬೀಳದಂತೆ ತಡೆಯುವುದು. ಕಡಿದಾದ ಇಳಿಜಾರುಳ್ಳ ಭಾಗ ಮತ್ತು ಜನವಸತಿಗಳ ಭಾಗಗಳಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿ ಚಟುವಟಿಕೆಗಳ ನಿಯಂತ್ರಣ, ಅರಣ್ಯೀಕರಣ ಮೊದಲಾದ ಕ್ರಮಗಳು ಯಾವ ನೈಸರ್ಗಿಕ ವಿಕೋಪದ

ನಿಯಂತ್ರಣಕ್ಕೆ ಅವಶ್ಯ?

a)

ಆವರ್ತಮಾರುತಗಳ

b)

ಪ್ರವಾಹ

c)

ಸಮುದ್ರ ತೀರದ ಸವೆತ

d)

ಭೂಕುಸಿತಗಳ

12.

ಸಮುದ್ರ ಅಲೆಗಳ ಅವಿರತ ಸಂಘರ್ಷಣಾ ಪ್ರಕ್ರಿಯೆಯಿಂದ ತೀರವು ಸವೆಯುವ ಮತ್ತು ವಸ್ತುಗಳ ಒಯ್ಯುವಿಕೆಗೆ

a)

‘ಸಮುದ್ರದ ಕೊರೆತ’ ಎನ್ನುವರು.

b)

ಭೂಕುಸಿತ ಎನ್ನುವರು

c)

ಆವರ್ತ ಮಾರುತ ಎನ್ನುವರು

d)

ಸುನಾಮಿ ಎನ್ನುವರು

13.

ಭಾರತದಲ್ಲಿ ಸಮುದ್ರ ತೀರದ ಸವೆತಕ್ಕೆ ಈ ಕೆಳಕಂಡ ಯಾವುವು ಪ್ರಮುಖವಾದ ಕಾರಣಗಳು

a)

ನೈಋತ್ಯ ಮಾನ್ಸೂನ್ ಮಾರುತಗಳು

b)

ಉಷ್ಣವಲಯದ ಆವರ್ತಮಾರುತಗಳು

c)

ಸುನಾಮಿ

d)

ಕೊಟ್ಟಿರುವ ಎಲ್ಲವೂ

14.

ಭಾರತದ ಪಶ್ಚಿಮ ಕರಾವಳಿಯು ತೀವ್ರಗತಿಯಲ್ಲಿ ಸವೆಸುವುದಕ್ಕೆ ಕಾರಣವಾಗುವುದು

a)

ನೈಋತ್ಯ ಮಾನ್ಸೂನ್ ಮಾರುತಗಳು

b)

ಉಷ್ಣವಲಯದ ಆವರ್ತಮಾರುತಗಳು

c)

ಸುನಾಮಿ

d)

ಕೊಟ್ಟಿರುವ ಎಲ್ಲವೂ

15.

ಗುಜರಾತ್, ಮಹಾರಾಷ್ಟ್ರ, ಗೋವ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ತೀರಗಳು ಹೆಚ್ಚು ಸವೆತಕ್ಕೊಳಗಾಗುವುದಕ್ಕೆ ಕಾರಣ

a)

ನೈಋತ್ಯ ಮಾನ್ಸೂನ್ ಮಾರುತಗಳು

b)

ಉಷ್ಣವಲಯದ ಆವರ್ತಮಾರುತಗಳು

c)

ಸುನಾಮಿ

d)

ಕೊಟ್ಟಿರುವ ಯಾವುದೂ ಅಲ್ಲ