wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-4. ಮೃಗ ಮತ್ತು ಸುಂದರಿ

Total questions: 40

Worksheet time: 20mins

Name
Class
Date
1.
'ಮೃಗ ಮತ್ತು ಸುಂದರಿ' ಕಥೆಯ ಅನುವಾದಕರು
a)
ಪಿ.ಲಂಕೇಶ್
b)
ಜಿ.ರಾಮಕೃಷ್ಣ
c)
ವಿಜಯಶ್ರೀ ಸಬರದ
d)
ದೇವನೂರು ಮಹಾದೇವ
2.
' ಮೃಗ ಮತ್ತು ಸುಂದರಿ ' ಎಂಬ ಕಥೆಯನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ ?
a)
ಸಂಕ್ರಾಂತಿ
b)
ಈಡಿಪಸ್
c)
ಕಲ್ಲು ಕರಗುವ ಸಮಯ
d)
ಮಂಜು ಕವಿದ ಸಂಜೆ
3.
ವರ್ತಕನ ಗುಣಗಳು ಹೇಗಿದ್ದವು ?
a)
ಮೃದು ಸ್ವಭಾವದವನಾಗಿದ್ದನು
b)
ಧರ್ಮವಂತನಾಗಿದ್ದನು.
c)
ಜೀವನ ಸರಳವಾಗಿತ್ತು.
d)
ಇವೆಲ್ಲವೂ
4.
ವರ್ತಕನಿಗೆ ಎಷ್ಟು ಜನ ಹೆಣ್ಣು ಮಕ್ಕಳಿದ್ದರು ?
a)
3
b)
4
c)
5
d)
6
5.
ವರ್ತಕನ ಹಿರಿಯ ಇಬ್ಬರು ಮಕ್ಕಳ ವರ್ತನೆಗಳು ಹೇಗಿದ್ದವು ?
a)
ಬಿಂಕ ,ಬಡಿವಾರದವರಾಗಿದ್ದರು
b)
ಫ್ಯಾಷನ್, ಪಾರ್ಟಿ ಮಾಡುವವರಾಗಿದ್ದರು
c)
ಗೆಳೆಯರೆಂದರೆ ಅವರಿಗೆ ಪಂಚಪ್ರಾಣವಾಗಿತ್ತು.
d)
ಈ ಎಲ್ಲಾ ವರ್ತನೆಗಳಿದ್ದವು.
6.
ಸುಂದರಿಯ ಗುಣಗಳು ಹೇಗಿದ್ದವು ?
a)
ತಂದೆಯಷ್ಟೆ ಮೃದು ಸ್ವಭಾವದವಳಾಗಿದ್ದಳು
b)
ಆಕೆಯ ತಂದೆಯ ನೆಮ್ಮದಿ ಮುಖ್ಯವಾಗಿತ್ತು
c)
ರೂಪವತಿಯಾಗಿದ್ದು, ಅವಳ ಜೀವನ ಸರಳವಾಗಿತ್ತು.
d)
ಇವೆಲ್ಲವೂ
7.
ವರ್ತಕನಿಗೆ ಕಷ್ಟಗಳು ಶುರುವಾಗಲು ಕಾರಣ
a)
ವರ್ತಕನ ವ್ಯಾಪಾರ ಕುಸಿದು ಬಿದ್ದಿದ್ದರಿಂದ
b)
ಸರಕುಗಳನ್ನು ತರಲು ದೂರದ ದೇಶಕ್ಕೆ ಪ್ರಯಾಣಿಸಿದ್ದ ಹಡಗುಗಳು ಹಿಂತಿರುಗದೆ ಇದ್ದದ್ದು
c)
ಬರಬೇಕಾದ ಹಣ ಬರದೆ ಇದ್ದದ್ದು ಮತ್ತು ಸಾಲಗಳು ಬಾಧಿಸತೊಡಗಿದ್ದು
d)
ಇವೆಲ್ಲವುಗಳಿಂದ
8.
"ನಾವಿನ್ನು ನಗರದಲ್ಲಿ ವಾಸಿಸುವುದು ಕಷ್ಟ ಆದ್ದರಿಂದ ಹಳ್ಳಿಗೆ ಹೋಗಬೇಕಾಗಿದೆ ದಯಮಾಡಿ ಸಹಕರಿಸಿ" ಎಂದು ಯಾರು ಯಾರಿಗೆ ಹೇಳಿದರು ?
a)
ಸುಂದರಿ - ತನ್ನ ಸಹೋದರಿಯರಿಗೆ
b)
ವರ್ತಕ - ತನ್ನ ಮಕ್ಕಳಿಗೆ
c)
ಸುಂದರಿ - ವರ್ತಕನಿಗೆ
d)
ರಾಜಕುಮಾರ - ಸುಂದರಿಗೆ
9.
ಸರಕುಗಳನ್ನು ತರಲು ದೂರದ ದೇಶಕ್ಕೆ ಪ್ರಯಾಣಿಸಿದ್ದವರು
a)
ವರ್ತಕ
b)
ರಾಜಕುಮಾರ
c)
ಹಡಗುಗಳು
d)
ವಿಮಾನಗಳು
10.
ವರ್ತಕ "ಹಳ್ಳಿಗೆ ಹೋಗಬೇಕಾಗಿದೆ ದಯಮಾಡಿ ಸಹಕರಿಸಿ" ಎಂದಾಗ ಆಘಾತ ಮತ್ತು ನಿರಾಸೆಯಿಂದ ಹಳ್ಳಿಗೆ ಬರುವುದಿಲ್ಲವೆಂದು ಹಠ ಹಿಡಿದವರು
a)
ಸುಂದರಿ
b)
ವರ್ತಕನ ಮೊದಲ ಇಬ್ಬರು ಮಕ್ಕಳು
c)
ರಾಜಕುಮಾರ
d)
ಮೃಗ
11.
ಬಡತನದಿಂದ ವರ್ತಕನಿಗೆ ಮತ್ತು ಸುಂದರಿಗೆ ತೊಂದರೆ ಆಗಲಿಲ್ಲ ಕಾರಣ
a)
ಅವರ ಜೀವನ ಸರಳವಾಗಿತ್ತು
b)
ಅವರಿಗೆ ಸಾಲ ಸಿಕ್ಕಿತು
c)
ಅವರಿಗೆ ವ್ಯಾಪಾರ ಹೆಚ್ಚಾಯಿತು
d)
ಈ ಎಲ್ಲವೂ ಕಾರಣ
12.
ವರ್ತಕನಿಗೆ ಹಿರಿಯ ಮಕ್ಕಳು ಏನು ತರಲು ಕೇಳಿಕೊಂಡರು ?
a)
ಬಟ್ಟೆಗಳು
b)
ಒಡವೆಗಳು
c)
ಅಲಂಕಾರದ ವಸ್ತುಗಳು
d)
ಈ ಎಲ್ಲವೂ
13.
ವರ್ತಕ ಹಡಗನ್ನು ಸ್ವಾಗತಿಸಲು ಹೊರಟಾಗ ಸುಂದರಿ ತನಗೆ ಏನು ತರಬೇಕೆಂದು ಕೇಳಿಕೊಂಡಳು ?
a)
ಬಟ್ಟೆಗಳು
b)
ಒಡವೆಗಳು
c)
ಅಲಂಕಾರದ ವಸ್ತುಗಳು
d)
ಗುಲಾಬಿ ಹೂಗಳ ಗೊಂಚಲು
14.
ವರ್ತಕ ತನ್ನ ಮಗಳು ಸುಂದರಿಗಾಗಿ ಏನನ್ನು ಕಿತ್ತುಕೊಂಡನು ?
a)
ಗುಲಾಬಿ ಹೂಗಳ ಗೊಂಚಲು
b)
ಹಣ್ಣುಗಳನ್ನು
c)
ಎಲೆಗಳನ್ನು
d)
ಆಹಾರವನ್ನು
15.
ವರ್ತಕ ನನ್ನನ್ನು ಕೊಲ್ಲಲು ಕುತ್ತಿಗೆಗೆ ಕೈ ಹಾಕಿದವರು ?
a)
ಕಳ್ಳರು
b)
ಮೃಗ
c)
ವರ್ತಕನ ಹಿರಿಯ ಮಕ್ಕಳು
d)
ಸುಂದರಿ
16.
"ಅಯ್ಯಾ ನನ್ನನ್ನು ಕೊಲ್ಲಬೇಡ, ನನ್ನನ್ನು ಮೇಲೆ ಕರುಣೆದೋರು" ಎಂದು ವರ್ತಕ ಯಾರಲ್ಲಿ ಬೇಡಿಕೊಂಡನು ?
a)
ಆಳುಗಳಲ್ಲಿ
b)
ಮೃಗನಲ್ಲಿ
c)
ದುಷ್ಟಬುದ್ಧಿಯಲ್ಲಿ
d)
ಹುಲಿರಾಯನಲ್ಲಿ
17.
"ನಾನು ಮನುಷ್ಯನೂ ಅಲ್ಲ ನನ್ನಲ್ಲಿ ಕರುಣೆ ಇಲ್ಲ " ಎಂದು ಯಾರು ಯಾರಿಗೆ ಹೇಳಿದರು ?
a)
ವರ್ತಕ - ಮೃಗಕ್ಕೆ
b)
ಮೃಗ - ವರ್ತಕನಿಗೆ
c)
ಸುಂದರಿ - ಮೃಗಕ್ಕೆ
d)
ಮೃಗ - ಸುಂದರಿಗೆ
18.
"ನನ್ನ ಮಗಳಿಗಾಗಿ ಒಂದು ಗೊಂಚಲು ಗುಲಾಬಿ ತೆಗೆದುಕೊಂಡಿದ್ದು ಅಪರಾಧವೆ ?" ಯಾರು ಯಾರಿಗೆ ಹೇಳಿದರು ?
a)
ವರ್ತಕ - ಮೃಗಕ್ಕೆ
b)
ಮೃಗ - ವರ್ತಕನಿಗೆ
c)
ಸುಂದರಿ - ಮೃಗಕ್ಕೆ
d)
ಮೃಗ - ಸುಂದರಿಗೆ
19.
"ತಿಂದಿದ್ದೀ ; ತೇಗಿದ್ದೀ ; ಗುಲಾಬಿ ಕಿತ್ತಿದ್ದೀ " ಎಂದು ಸಿಟ್ಟಿನಿಂದ ಅಬ್ಬರಿಸಿದವರು
a)
ವರ್ತಕ
b)
ಮೃಗ
c)
ವರ್ತಕನ ಹಿರಿಯ ಮಕ್ಕಳು
d)
ಸುಂದರಿ
20.
ಮೃಗ ಏನನ್ನು ಕೊಟ್ಟರೆ ವರ್ತಕರನ್ನು ಕೊಲ್ಲುವುದಿಲ್ಲ ಎಂದು ಹೇಳಿತು ?
a)
ಗುಲಾಬಿ ಹೂವಿನ ಗೊಂಚಲನ್ನು
b)
ವರ್ತಕನ ಮುದ್ದು ಮಗಳನ್ನು
c)
ವರ್ತಕನ ಹಿರಿಯ ಮಕ್ಕಳನ್ನು
d)
ಊಟ ಮಾಡಿದ್ದನ್ನು
21.
ಮೃಗದ ಅರಮನೆಗೆ ಹೋಗಲು ಒಪ್ಪಿದವರು
a)
ವರ್ತಕನ ಮೊದಲ ಇಬ್ಬರು ಮಕ್ಕಳು
b)
ವರ್ತಕ
c)
ಸುಂದರಿ
d)
ರಾಜಕುಮಾರ
22.
ವರ್ತಕನಿಗೆ ಮೃಗವು ಕೊಟ್ಟ ಬುಟ್ಟಿಯಲ್ಲಿ ಏನಿದ್ದವು ?
a)
ವಜ್ರ - ವೈಡೂರ್ಯಗಳು
b)
ಮುತ್ತುಗಳು
c)
ರತ್ನಗಳು
d)
ಇವೆಲ್ಲವೂ
23.
ಸುಂದರಿ ಅರಮನೆಯನ್ನು ಹೇಗೆ ಪ್ರವೇಶಿಸಿದಳು ?
a)
ಸಂತೋಷದಿಂದ
b)
ಸಂಭ್ರಮದಿಂದ
c)
ಅಳುತ್ತಾ
d)
ಭಯದಿಂದ
24.
ಸುಂದರಿಯ ನೆಚ್ಚಿನ ಪುಸ್ತಕ ಭಂಡಾರ ಮತ್ತು ಸಂಗೀತದ ಇಂಪು ಎಲ್ಲಿತ್ತು ?
a)
ಮೃಗದ ಗೃಹದಲ್ಲಿ
b)
ವರ್ತಕನ ಮನೆಯಲ್ಲಿ
c)
ಕಾಡಿನಲ್ಲಿ
d)
ಹಡಗಿನಲ್ಲಿ
25.
ಮೃಗದ ಬಾಹ್ಯ ಆಕಾರ ಹೇಗಿತ್ತು ?
a)
ಕೋರೆಹಲ್ಲು, ಹಂದಿಯ ದೇಹವನ್ನು ಹೊಂದಿತ್ತು
b)
ತೋಳದ ಚಲನೆಯನ್ನು ಪಡೆದಿತ್ತು
c)
ಭೀಕರವಾಗಿ ಕರ್ಕಶ ಸದ್ದು ಮಾಡುತ್ತಿತ್ತು
d)
ಎಲ್ಲಾ ರೀತಿಯಿಂದ ಇತ್ತು
26.
"ನೀನು ಸಂತೋಷದಿಂದ ಬಂದೆಯಾ" ಎಂದು ಯಾರು ಯಾರಿಗೆ ಕೇಳಿದರು ?
a)
ವರ್ತಕ - ಸುಂದರಿಗೆ
b)
ಸುಂದರಿ - ವರ್ತಕನಿಗೆ
c)
ಮೃಗ - ಸುಂದರಿಗೆ
d)
ಸುಂದರಿ - ಮೃಗಕ್ಕೆ
27.
ಮೃಗ ನಾನು ನಿನಗೆ ಇಷ್ಟವಾ ? ಕೇಳಿದಾಗ ಸುಂದರಿಯ ಪ್ರತಿಕ್ರಿಯೆ
a)
ನಾನು ಸುಳ್ಳು ಹೇಳಲಾರೆ
b)
ನೀನು ಕುರೂಪಿ
c)
ಆದರೂ ನೀನು ತುಂಬಾ ಒಳ್ಳೆಯವನು ಅಂತಿದ್ದೆ
d)
ಈ ಎಲ್ಲ ರೀತಿಯಲ್ಲಿ ಪ್ರತಿಕ್ರಿಯೆ ಹೇಳಿದಳು
28.
"ಜಗತ್ತಿನ ಅನೇಕ ಮನುಷ್ಯರು ಸುಂದರ ಆಕಾರ ಪಡೆದು ಮೃಗದ ಹೃದಯ ಹೊಂದಿರುತ್ತಾರೆ " ಎಂದು ಯಾರು ಯಾರಿಗೆ ಹೇಳಿದರು ?
a)
ವರ್ತಕ - ಸುಂದರಿಗೆ
b)
ಸುಂದರಿ - ವರ್ತಕನಿಗೆ
c)
ಮೃಗ - ಸುಂದರಿಗೆ
d)
ಸುಂದರಿ - ಮೃಗಕ್ಕೆ
29.
ಮೃಗದ ಒರಟು ಮಾತು, ತಿಕ್ಕಲು ನಡವಳಿಕೆ ಯಾರ ಮನಸ್ಸಿನಲ್ಲಿ ನಗುತ್ತಿದ್ದವು ?
a)
ವರ್ತಕ
b)
ಸುಂದರಿ
c)
ರಾಜಕುಮಾರ
d)
ದೇವತೆ
30.
ಮೃಗದ ಕಾಳಜಿಯನ್ನು ನೆನೆದು ಯಾರ ಮನ ಕರಗುತ್ತಿತ್ತು ?
a)
ವರ್ತಕ
b)
ಸುಂದರಿ
c)
ವರ್ತಕನ ಹಿರಿಯ ಮಕ್ಕಳು
d)
ದೇವತೆ
31.
ಮೃಗ ನಿರಾಶನಾಗಿ ನಿಟ್ಟುಸಿರು ಬಿಡಲು ಕಾರಣ
a)
ಮದುವೆಗೆ ನಿರಾಕರಿಸಿದ್ದು
b)
ಮನೆಗೆ ಹೋಗಲು ಕೇಳಿದ್ದು
c)
ವಜ್ರ ವೈಢೂರ್ಯಗಳನ್ನು ಕೇಳಿದ್ದು
d)
ಇವೆಲ್ಲವೂ
32.
ಸುಂದರಿಗೆ ಮೃಗವನ್ನು ನೋಡಬೇಕೆಂಬ ಆಶೆ ಏಕೆ ಉಂಟಾಯಿತು ?
a)
ಮೃಗದ ಮುಖ, ಚಲನವಲನ ನೆನಪಾಗಿದ್ದರಿಂದ
b)
ಮೃಗ ಎಂದು ತನ್ನ ವಚನ ಮುರಿದಿರಲಿಲ್ಲ ಎಂಬ ಭಾವನೆಯಿಂದ
c)
ಮನ ನೋಯಿಸದೆ ತನ್ನನ್ನು ನೆಮ್ಮದಿಯಾಗಿ ಇಡುವುದೇ ಅದರ ಸುಖವಾಗಿದ್ದರಿಂದ
d)
ಈ ಎಲ್ಲಾ ಕಾರಣಗಳಿಂದ
33.
ಸುಂದರಿಯ ಮನಸ್ಸಿನಲ್ಲಿ ಯಾವುದು ತುಂಬಿತ್ತು ?
a)
ಅರಮನೆಯ ಸುಖ
b)
ಮೃಗದ ವ್ಯಕ್ತಿತ್ವ
c)
ತವರಿನ ಪ್ರೀತಿ
d)
ತಂದೆಯ ವ್ಯಕ್ತಿತ್ವ
34.
ಸುಂದರಿ ಪುನಹ ಅರಮನೆಗೆ ಹಿಂತಿರುಗಿದಾಗ ಮೃಗದ ಸ್ಥಿತಿ ಹೇಗಿತ್ತು ?
a)
ಮೃಗ ನೆಲಕ್ಕೊರಗಿತ್ತು
b)
ತೇಲುಗಣ್ಣು ಮೇಲುಗಣ್ಣು ಆಗಿ ಮಲಗಿತ್ತು
c)
ದೇಹ ಬಡವಾಗಿ ಹೋಗಿತ್ತು
d)
ಎಲ್ಲಾ ಸ್ಥಿತಿಯಲ್ಲಿತ್ತು
35.
"ನೀನು ನನ್ನವನು ನೀನು ಸಾಯಬಾರದು; ನಾನು ನಿನ್ನನ್ನು ಮದುವೆ ಆಗುತ್ತೇನೆ" ಎಂದು ಕಂಬನಿಗರೆದರು
a)
ಸುಂದರಿ
b)
ದೇವತೆ
c)
ವರ್ತಕನ ಮೊದಲ ಮಗಳು
d)
ವರ್ತಕನ ಎರಡನೆಯ ಮಗಳು
36.
"ನೀನಿಲ್ಲದೆ ನನಗೆ ಊಟ ಸೇರಲಿಲ್ಲ, ನನಗೆ ನಿದ್ರೆ ಬರಲಿಲ್ಲ " ಎಂದು ಹೇಳಿದವರು
a)
ದೇವತೆ
b)
ವರ್ತಕ
c)
ಸುಂದರಿ
d)
ರಾಜಕುಮಾರ
37.
"ನಿನ್ನನ್ನು ಕನ್ಯೆಯೊಬ್ಬಳು ಮನಸಾರೆ ಒಪ್ಪಿ ಪ್ರೀತಿಸುವವರಿಗೆ ಮೃಗವಾಗಿಯೇ ಇರು " ಎಂದು ರಾಜಕುಮಾರನಿಗೆ ಶಾಪ ಹಾಕಿದವರು
a)
ದೇವತೆ
b)
ಸುಂದರಿ
c)
ರಾಜಕುಮಾರ
d)
ಮೃಗ
38.
ರಾಜಕುಮಾರನ ಮೃಗತ್ವ ಯಾರಿಂದ ಕರಗಿತು ?
a)
ವರ್ತಕನಿಂದ
b)
ದೇವತೆಯಿಂದ
c)
ಸುಂದರಿಯಿಂದ
d)
ಮೃಗದಿಂದ
39.
ಯಾರು ಶಾಪಗೊಂಡು ಮೃಗವಾಗಿದ್ದರು ?
a)
ಸುಂದರಿ
b)
ವರ್ತಕ
c)
ರಾಜಕುಮಾರ
d)
ಭಗತ್ ಸಿಂಗ್
40.
ಶಾಪ ವಿಮೋಚನೆಯ ಫಲ
a)
ರಾಜಕುಮಾರನ ಮೃಗತ್ವ ಕರಗಿತು
b)
ಸುಂದರಿ ಮತ್ತು ರಾಜಕುಮಾರರ ಮದುವೆಯಾಯಿತು
c)
ರಾಜಕುಮಾರ ನೆಮ್ಮದಿಯಿಂದ ರಾಜ್ಯಭಾರ ನಡೆಸತೊಡಗಿದನು
d)
ಈ ಎಲ್ಲಾ ಫಲಗಳು