NEW
Font size
Worksheets10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ05:By Nataraj &Bhagwat
Total questions: 10
Worksheet time: 5mins
ಚಾರ್ಟರ್ ಕಾಯ್ದೆಗಳ ಪ್ರಮುಖ ಉದ್ದೇಶ
ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಪರವಾನಗಿ (Permit))ಯನ್ನು ವಿಸ್ತರಿಸುವುದು
ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಗೆ ಹೆಚ್ಚಿನ ಅಧಿಕಾರ ಕೊಡುವುದು
ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರ ಮೊಟಕುಗೊಳಿಸುವುದು
ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯನ್ನು ಅಂತ್ಯಗೊಳಿಸುವುದು
ಈ ಕೆಳಗಿನ ಯಾವ ಕಾಯ್ದೆಯ ಪ್ರಕಾರ ಇಚ್ಛೆಯಿದ್ದವರೆಲ್ಲರಿಗೂ ವ್ಯಾಪಾರದ ಅವಕಾಶವನ್ನು ಮುಕ್ತವಾಗಿಸಿದ ಪರಿಣಾಮವಾಗಿ ಮುಕ್ತ ವ್ಯಾಪಾರದ ಹೊಸ ಶಕೆ ಆರಂಭಗೊಂಡಿತು?
1858ರ ಭಾರತ ಸರ್ಕಾರದ ಕಾಯ್ದೆ
1813ರ ಚಾರ್ಟರ್ ಕಾಯ್ದೆ
1833ರ ಚಾರ್ಟರ್ ಕಾಯ್ದೆ
ಕೊಟ್ಟಿರುವ ಯಾವುದೂ ಅಲ್ಲ
1813ರ ಚಾರ್ಟರ್ ಕಾಯ್ದೆಯು ಚಾರಿತ್ರಿಕವಾದದ್ದು, ಏಕೆಂದರೆ
ಮುಕ್ತ ವ್ಯಾಪಾರದ ಹೊಸ ಶಕೆ ಆರಂಭಗೊಂಡಿತು. ಅನುಮತಿ ಮತ್ತು ಪರವಾನಿಗೆಯ ಹೊಸ ಕಾಲ ಆರಂಭವಾಯಿತು.
ಗವರ್ನರ್ ಜನರಲ್ ಮತ್ತು ಸೇನೆಯ ಮಹಾಮುಖ್ಯಸ್ಥರನ್ನು ನಿರ್ದೇಶಕ ಮಂಡಳಿಯು ನೇಮಿಸುವ ಅಧಿಕಾರವನ್ನು ಹೊಂದಿತು.
ಚರ್ಚ್‍ಗಳಿಗೆ ಭಾರತಕ್ಕೆ ಪ್ರವೇಶಿಸುವ ಅಧಿಕೃತ ಅವಕಾಶವನ್ನು ನೀಡಲಾಯಿತು. ಭಾರತೀಯರಲ್ಲಿ ಹೊಸ ಜ್ಞಾನವನ್ನು ಪಸರಿಸುವ, ಅವರ ನೈತಿಕ ಮತ್ತು ಧಾರ್ಮಿಕ ಬದುಕನ್ನು ಎತ್ತರಿಸುವ ಜವಾಬ್ದಾರಿಯನ್ನು ಮಿಶನರಿ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂಬ ನಿರ್ದೇಶನವನ್ನು ನೀಡಲಾಯಿತು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ರೈಸ್ತ ಮಿಶನರಿಗಳು ಭಾರತಕ್ಕೆ ಬರತೊಡಗಿದರು. ಕ್ರೈಸ್ತ ಧರ್ಮದ ಪ್ರಚಾರ ಮತ್ತು ಇಂಗ್ಲಿಷ್ ವಿದ್ಯಾಭ್ಯಾಸದ ವಿಸ್ತರಣೆ ಹೆಚ್ಚಾಯಿತು.
ಕೊಟ್ಟಿರುವ ಎಲ್ಲಾ ಕಾರಣಗಳು
ಬಂಗಾಳದ ಗವರ್ನರ್ ಜನರಲ್‍ನನ್ನು ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ ಮಾಡಿದ ಕಾಯ್ದೆ
1773ರ ರೆಗ್ಯುಲೇಟಿಂಗ್ ಕಾಯ್ದೆ
1833ರ ಚಾರ್ಟರ್ ಕಾಯ್ದೆ
1858ರ ಭಾರತ ಸರ್ಕಾರದ ಕಾಯ್ದೆ
1784ರ ಪಿಟ್ಸ್ ಇಂಡಿಯಾ ಕಾಯ್ದೆ
ಭಾರತದ ಎಲ್ಲ ವ್ಯಾಪಾರಿ ಸರಕುಗಳನ್ನು “ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವ” ಅಧಿಕಾರವನ್ನು ಗವರ್ನರ್ ಜನರಲ್ ನಿಗೆ ನೀಡಿದ ಶಾಸನ
1833ರ ಚಾರ್ಟರ್ ಕಾಯ್ದೆ
1813ರ ಚಾರ್ಟರ್ ಕಾಯ್ದೆ
1773ರ ರೆಗುಲ್ಯೇಟಿಂಗ್ ಕಾಯ್ದೆ
1858ರ ಭಾರರ ಸರ್ಕಾರದ ಕಾಯ್ದೆ
ಧರ್ಮ, ಬಣ್ಣ ಮತ್ತು ಹುಟ್ಟಿನ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎನ್ನುವುದನ್ನು ನಿರ್ದೇಶಿಸಿದ ಕಾಯ್ದೆ
1858ರ ರ ಭಾರತ ಸರ್ಕಾರದ ಕಾಯ್ದೆ
1813ರ ಚಾರ್ಟರ್ ಕಾಯ್ದೆ
1833ರ ಚಾರ್ಟರ್ ಕಾಯ್ದೆ
1909ರ ಭಾರತೀಯ ಪರಿಷತ್ ಕಾಯ್ದೆ
ಬ್ರಿಟೀಷ್ ಸರ್ಕಾರದ ನೇರ ಆಳ್ವಿಕೆಯಲ್ಲಿ ಜಾರಿಗೆ ಬರದ ಕಾಯ್ದೆಯನ್ನು ಗುರುತಿಸಿ
1833ರ ಚಾರ್ಟರ್ ಕಾಯ್ದೆ
1858ರ ಭಾರತ ಸರ್ಕಾರದ ಕಾಯ್ದೆ
1909ರ ಭಾರತೀಯ ಪರಿಷತ್ ಕಾಯ್ದೆ
1861 ರ ಭಾರತೀಯ ಪರಿಷತ್ ಕಾಯ್ದೆ
ಕೆಳಗಿನ ಯಾವುದು 1858ರ ಭಾರತ ಸರ್ಕಾರದ ಕಾಯ್ದೆಯ ಪ್ರಮುಖ ಅಂಶವಾಗಿದೆ?
ಈಸ್ಟ್ ಇಂಡಿಯಾ ಕಂಪನಿಯ ಮಾನ್ಯತೆ ರದ್ದುಗೊಳಿಸಿ, ಭಾರತವನ್ನು ರಾಣಿಯವರ ಆಡಳಿತಕ್ಕೆ ವರ್ಗಾಯಿಸಲಾಯಿತು.
ಗವರ್ನರ್ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ “ವೈಸ್‍ರಾಯ್” ಎಂಬ
ಪದನಾಮವನ್ನು ನೀಡಿದರು. ವೈಸರಾಯ್ ಆಗಿ “ಲಾರ್ಡ್ ಕ್ಯಾನಿಂಗ್” ನೇಮಕಗೊಂಡರು.
ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ” ಸ್ಥಾನವನ್ನು ಬ್ರಿಟಿಷ್ ಸರ್ಕಾರ ಸೃಷ್ಟಿಸಿತು. ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದರು.
ಇವರಿಗೆ ಸಹಾಯ ಮಾಡಲು 15 ಸದಸ್ಯರನ್ನೊಳಗೊಂಡ ಭಾರತ ಮಂಡಲಿ (ಕೌನ್ಸಿಲ್ ಆಫ್ಇಂ ಡಿಯಾ) ಅಸ್ತಿತ್ವಕ್ಕೆ ಬಂದಿತು.
ಕೊಟ್ಟಿರುವ ಎಲ್ಲವೂ
ಕೆಳಗಿನ ಯಾವ ಕಾಯ್ದೆಯ ಪ್ರಕಾರ ಭಾರತವು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆಗೆ ಒಳಪಡುವಂತಾಯಿತು?
1909ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತೀಯ ಪರಿಷತ್ ಕಾಯ್ದೆ
1858ರ ಭಾರತ ಸರ್ಕಾರದ ಕಾಯ್ದೆ
ಈ ಕಾಯ್ದೆಯ ಮೂಲಕ ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಾನವನ್ನು ಕಲ್ಪಿಸಲಾಯಿತು. ಭಾರತೀಯರು ಬ್ರಿಟಿಷರ ಬಗೆಗೆ ತಿಳಿದಿರುವ ಅಭಿಪ್ರಾಯಗಳನ್ನು ತಿಳಿಯಲು ಭಾರತೀಯರಿಗೆ ಪ್ರಾತಿನಿದ್ಯ ನೀಡಲಾಯಿತು.
1861ರ ಭಾರತೀಯ ಪರಿಷತ್ ಕಾಯ್ದೆ
1892 ರ ಭಾರತೀಯ ಪರಿಷತ್ ಕಾಯ್ದೆ
1909ರ ಭಾರತೀಯ ಪರಿಷತ್ ಕಾಯ್ದೆ
1919 ರ ಭಾರತೀಯ ಪರಿಷತ್ ಕಾಯ್ದೆ
