NEW
Font size
Worksheets10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ 06:By Nataraj &Bhagwat
Total questions: 15
Worksheet time: 8mins
ವೈಸರಾಯ್ ಕೌನ್ಸಿಲ್‍ಗೆ ಭಾರತೀಯರನ್ನು ಅಧಿಕಾರೇತರ ಸದಸ್ಯರಾಗಿ ನಾಮಕರಣ ಮಾಡುವ ಹಾಗೂ ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಅಧಿಕಾರವನ್ನು ಗವರ್ನರ್ ಜನರಲ್‍ಗೆ ನೀಡಿದ ಶಾಸನ
1909ರ ಭಾರತೀಯ ಪರಿಷತ್ ಕಾಯ್ದೆ
1861ರ ಭಾರತೀಯ ಪರಿಷತ್ ಕಾಯ್ದೆ
1892 ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
ಯಾವ ಕಾಯ್ದೆಯು ಕಾಂಗ್ರೆಸ್ ಸಂಘಟನೆಯು
ಬ್ರಿಟಿಷರ ಆಡಳಿತದ ಬಗ್ಗೆ ತಳೆದ ವಿಮರ್ಶಾತ್ಮಕ ನಿಲುವಿನ ಹಿನ್ನಲೆಯಲ್ಲಿ ಭಾರತೀಯರಿಗಿದ್ದ ಶಾಸನ ಸಭೆಗಳ ಪ್ರಾತಿನಿಧ್ಯವನ್ನು ಮತ್ತಷ್ಟು ವಿಸ್ತರಿಸಿತು.
1892 ರ ಭಾರತೀಯ ಪರಿಷತ್ ಕಾಯ್ದೆ
1858 ರ ಭಾರತ ಸರ್ಕಾರದ ಕಾಯ್ದೆ
1909ರ ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1892ರ ಭಾರತೀಯ ಪರಿಷತ್ ಕಾಯ್ದೆಯ ಅಂಶಗಳನ್ನು ಗುರುತಿಸಿ
ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆಗಳಲ್ಲಿ ಹೆಚ್ಚುವರಿ ಸದಸ್ಯರ ಸಂಖ್ಯೆಯನ್ನು
ಅಧಿಕಗೊಳಿಸಲಾಯಿತು.
ಶಾಸನ ಸಭೆಯ (ಲೆಜಿಸ್ಲೇಟಿವ್ ಕೌನ್ಸಿಲ್) ಅಧಿಕಾರವನ್ನು ಹೆಚ್ಚಿಸಿ ಅವುಗಳಲ್ಲಿ ಬಜೆಟ್ ಬಗ್ಗೆ ಚರ್ಚಿಸುವ ಅಧಿಕಾರವನ್ನು ನೀಡಲಾಯಿತು.
ಆರು ದಿನಗಳ ಮುಂಚೆ ಮುನ್ಸೂಚನೆ ನೀಡಿ ಸಾರ್ವಜನಿಕ ಆಸಕ್ತಿಯ ವಿಷಯಗಳ ಬಗ್ಗೆ ಸರಕಾರವನ್ನು ಪ್ರಶ್ನಿಸುವ ಹಕ್ಕನ್ನು ನೀಡಲಾಯಿತು.
ಕೊಟ್ಟಿರುವ ಎಲ್ಲವೂ
ಬ್ರಿಟಿಷರು ಭಾರತೀಯರನ್ನು ಒಡೆದು ಆಳಲು ಈ ಕಾಯ್ದೆಯನ್ನು ಬಳಸಿಕೊಂಡರು.
1909 ಭಾರತೀಯ ಪರಿಷತ್ ಕಾಯ್ದೆ
1919 ಭಾರತೀಯ ಪರಿಷತ್ ಕಾಯ್ದೆ
1935 ಭಾರತ ಸರ್ಕಾರದ ಕಾಯ್ದೆ
1861 ಭಾರತೀಯ ಪರಿಷತ್ ಕಾಯ್ದೆ
ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಜಾರಿಗೆ ತರಲಾದ ಕಾಯ್ದೆ
1919 ಭಾರತೀಯ ಪರಿಷತ್ ಕಾಯ್ದೆ
1909 ಭಾರತೀಯ ಪರಿಷತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
1892 ರ ಭಾರತೀಯ ಪರಿಷತ್ ಕಾಯ್ದೆ
ಕೆಳಗಿನ ಯಾವುದು 1909ರ ಭಾರತೀಯ ಪರಿಷತ್ ಕಾಯ್ದೆಯ ಅಂಶಗಳಾಗಿವೆ?
ಕೇಂದ್ರ ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 16 ರಿಂದ 60ಕ್ಕೆ ಹೆಚ್ಚಿಸಲಾಯಿತು.
ಪ್ರಾಂತ್ಯಗಳಲ್ಲೂ ಶಾಸನ ಸಭೆಗಳ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಲಾಯಿತು.
ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಸಭೆಗೆ ಆಯ್ಕೆಯಾಗಲು ಅವಕಾಶ ನೀಡಲಾಯಿತು.ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ಕೊಟ್ಟಿರುವ ಎಲ್ಲವೂ
ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಭಾಗವಹಿಸಲು ಪ್ರೇರೇಪಿಸಿದ ಹಿನ್ನಲೆಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.
1935ರ ಭಾರತ ಸರ್ಕಾರದ ಕಾಯ್ದೆ
1919ರಲ್ಲಿ ಭಾರತೀಯ ಪರಿಷತ್ ಕಾಯ್ದೆ
1909ರಲ್ಲಿ ಭಾರತೀಯ ಪರಿಷತ್ ಕಾಯ್ದೆ
ಕೊಟ್ಟಿರುವ ಯಾವುದೂ ಅಲ್ಲ
ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಮಾಂಟೆಗೋ ಅವರು ಬ್ರಿಟನ್ನಿನ ಸಂಸತ್ತಿನಲ್ಲಿ 20.8.1917 ರಂದು ಮಾಡಿದ ಘೋಷಣೆಯ ಹಿನ್ನಲೆಯಲ್ಲಿ ಈ ಕಾಯ್ದೆ ರೂಪುಗೊಂಡಿತು. ಮಾಂಟೆಗೋ ಅವರು ‘ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರಕಾರವನ್ನು ನೀಡುವುದೇ ಬ್ರಿಟಿಷ ಸರಕಾರದ ಗುರಿ’ ಎಂದು ಘೋಷಿಸಿದರು.ಹಾಗಿದ್ದರೆ ಆ ಕಾಯ್ದೆ
1909ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
1892 ರ ಭಾರತೀಯ ಪರಿಷತ್ ಕಾಯ್ದೆ
ಭಾರತಕ್ಕೆ ಒಬ್ಬ ಹೈಕಮಿಷನರ್ ನ್ನು ನೇಮಕ ಮಾಡಲಾದ ಶಾಸನ
1909ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತೀಯ ಸರ್ಕಾರದ ಕಾಯ್ದೆ
ಕೊಟ್ಟಿರುವ ಯಾವುದೂ ಅಲ್ಲ
ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್‍ರಿಗೆ ವಿಸ್ತರಿಸಿದ ಶಾಸನ
1935ರ ಭಾರತ ಸರ್ಕಾರದ ಕಾಯ್ದೆ
1919ರಲ್ಲಿ ಭಾರತೀಯ ಪರಿಷತ್ ಕಾಯ್ದೆ
1909ರಲ್ಲಿ ಭಾರತೀಯ ಪರಿಷತ್ ಕಾಯ್ದೆ
ಕೊಟ್ಟಿರುವ ಯಾವುದೂ ಅಲ್ಲ
1919ರಲ್ಲಿನ ಭಾರತೀಯ ಪರಿಷತ್ ಕಾಯ್ದೆಯ ಪ್ರಮುಖ ಅಂಶಗಳು ಯಾವುವು? ಗುರುತಿಸಿ
ಕೇಂದ್ರದಲ್ಲಿ ದ್ವಿಸದನ ಶಾಸಕಾಂಗ ರಚನೆಗೆ ಅವಕಾಶ ನೀಡಲಾಯಿತು. ಅವುಗಳೆಂದರೆ, ಶಾಸಕಾಂಗ ಸಭೆ (ಕೆಳಮನೆ) ಮತ್ತು ರಾಜ್ಯಗಳ ಪರಿಷತ್ತು (ಮೇಲ್ಮನೆ) ರಚಿಸಲಾಯಿತು.
ಪ್ರಾಂತ್ಯಗಳಲ್ಲಿ “ದ್ವಿಸರಕಾರ” ಪದ್ದತಿಗೆ ಅವಕಾಶ ನೀಡಲಾಯಿತು. ಭಾರತಕ್ಕೆ ಒಬ್ಬ ಹೈಕಮಿಷನರ್‍ರನ್ನು ನೇಮಕ ಮಾಡಲಾಯಿತು.
ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಭರವಸೆ ನೀಡಲಾಯಿತು. ಕೇಂದ್ರದ ಬಜೆಟ್‍ನಿಂದ ಪ್ರಾಂತ್ಯಗಳ ಬಜೆಟನ್ನು ಬೇರ್ಪಡಿಸಲಾಯಿತು. “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ಮುಸ್ಲಿಂ, ಸಿಖ್, ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್‍ರಿಗೆ ವಿಸ್ತರಿಸಲಾಯಿತು.
ಕೊಟ್ಟಿರುವ ಎಲ್ಲವೂ
ಈ ಕಾಯ್ದೆಯು ಭಾರತ ಸಂವಿಧಾನ ರಚನೆಗೆ ಬುನಾದಿಯಾಗಿದೆ. ಯಾವುದು ಆ ಕಾಯ್ದೆ?
1909ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
1892 ರ ಭಾರತೀಯ ಪರಿಷತ್ ಕಾಯ್ದೆ
ಈ ಕಾಯ್ದೆಯು ರೂಪುಗೊಳ್ಳಲು ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ತಯಾರಾದ 1928ರ ವರದಿಯು ಮುಖ್ಯವಾಗಿದೆ. ಸಂವಿಧಾನದ ಬಹುತೇಕ ಅಂಶಗಳು ಈ ಕಾಯ್ದೆಯನ್ನೇ ಆಧರಿಸಿ ರಚಿಸಲಾಗಿದೆ. ಈ ಕಾಯ್ದೆಯು ಭಾರತಕ್ಕೆ ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚಿಸಲು ಅವಕಾಶ ನೀಡಿತು. ಇದು ಬ್ರಿಟಿಷ ಭಾರತ ಪ್ರಾಂತ್ಯಗಳಿಗೆ ಮಾತ್ರ ಅನ್ವಯವಾಗದೇ ದೇಶಿಯ ಸಂಸ್ಥಾನಗಳಿಗೂ ಅನ್ವಯವಾಗುವ ಅಂಶಗಳನ್ನು ಒಳಗೊಂಡಿದ್ದಿತು. ಕಾಯ್ದೆಯನ್ನು ಗುರುತಿಸಿ
1909ರಲ್ಲಿ ಭಾರತೀಯ ಪರಿಷತ್ ಕಾಯ್ದೆ
1919ರಲ್ಲಿ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯ್ದೆ
ಕೊಟ್ಟಿರುವ ಯಾವುದೂ ಅಲ್ಲ
ಅಖಿಲ ಭಾರತ ಒಕ್ಕೂಟವನ್ನು ರಚಿಸಲು ಅವಕಾಶ ನೀಡಿ ಕೇಂದ್ರದಲ್ಲಿ “ದ್ವಿ ಸರಕಾರ”ವನ್ನು ಸ್ಥಾಪಿಸಲು ಅವಕಾಶ ನೀಡಿದ ಕಾಯ್ದೆ
1919ರ ಮಾಂಟೆಗೋ - ಚೆಮ್ಸ್‍ಫರ್ಡ್ ಸುಧಾರಣಾ ಕಾಯ್ದೆ
1909 ‘ಮಿಂಟೋ ಮಾರ್ಲೆ ಸುಧಾರಣಾ ಕಾಯ್ದೆ’
1935ರ ಭಾರತ ಸರ್ಕಾರದ ಕಾಯ್ದೆ
ಕೊಟ್ಟಿರುವ ಯಾವುದೂ ಅಲ್ಲ
1935ರ ಭಾರತ ಸರ್ಕಾರದ ಕಾಯ್ದೆಯ ಪ್ರಮುಖ ಅಂಶಗಳನ್ನು ಗುರುತಿಸಿ
ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿತು.
ಪ್ರಾಂತ್ಯಗಳಲ್ಲಿ “ದ್ವಿ ಸರಕಾರ” ಪದ್ಧತಿಯನ್ನು ರದ್ದುಗೊಳಿಸಿ, ಪ್ರಾಂತ್ಯಗಳಿಗೆ ಸ್ವಾಯತ್ತತೆ ನೀಡಲಾಯಿತು.
5. ಭಾರತದಲ್ಲಿ “ಫೆಡರಲ್ ಕೋರ್ಟ್” ಸ್ಥಾಪನೆಗೆ ಅವಕಾಶ ನೀಡಲಾಯಿತು.
ಕೊಟ್ಟಿರುವ ಎಲ್ಲವೂ
