wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ಇತಿಹಾಸ:ಅಧ್ಯಾಯ:05:ಭಾಗ 01:ನಟರಾಜ &ಭಾಗ್ವತ್

Total questions: 10

Worksheet time: 5mins

Name
Class
Date
1.

ಮಾನವೀಯ ಮೌಲ್ಯಗಳಿಂದ ದೂರವಾಗಿ ಮೇಲು ಕೀಳೆಂಬ ಬೇಧಭಾವಗಳಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಿ ಮೌಢ್ಯಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವ ಪ್ರಯತ್ನವೇ

a)

ಸಮಾಜ ಸುಧಾರಣೆ

b)

ಸಾಮಾಜಿಕ ಕ್ರಾಂತಿ

c)

ಸಾಮಾಜಿಕ ಸ್ತರ ವಿನ್ಯಾಸ

d)

ಕೊಟ್ಟಿರುವ ಯಾವುದೂ ಅಲ್ಲ

2.

ತಮ್ಮನ್ನು ನಾಗರಿಕರು ಎಂದು ಚಿತ್ರಿಸಿಕೊಳ್ಳುತ್ತ ತಾವು ಇಲ್ಲಿಗೆ ಬಂದಿರುವುದೇ ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ಎನ್ನುವ ಬ್ರಿಟಿಷರ ಸಿದ್ಧಾಂತವೇ

a)

ಸಮಾಜ ಸುಧಾರಣೆ ಸಿದ್ಧಾಂತ

b)

ಬಿಳಿಯನ ಮೇಲಿನ ಹೊರೆ’ ಸಿದ್ಧಾಂತ

c)

ಮೂಲಭೂತ ಸಿದ್ಧಾಂತ

d)

ಕೊಟ್ಟಿರುವ ಎಲ್ಲವೂ

3.

19ನೇ ಶತಮಾನವನ್ನು ಭಾರತದ ಚರಿತ್ರೆಯಲ್ಲಿ ಸಮಾಜ ಸುಧಾರಣಾ ಕಾಲ ಮತ್ತು ಭಾರತೀಯ ನವೋದಯ ಕಾಲವೆಂದು ಸಾಮಾನ್ಯವಾಗಿ ಚಿತ್ರಿಸಲಾಗಿದೆ ಏಕೆಂದರೆ

a)

ಬ್ರಿಟಿಷರು ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದ ನಂತರ ಭಾರತೀಯ ಇಂಗ್ಲಿಷ್ ವಿದ್ಯಾವಂತ ವರ್ಗವೊಂದು ಸೃಷ್ಟಿಯಾಯಿತು.

b)

ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಸಮಾನತೆ ಮುಂತಾದ ಯುರೋಪಿಯನ್ ಪರಿಕಲ್ಪನೆಗಳು ಭಾರತೀಯ ಸಮಾಜಕ್ಕೆ ಪರಿಚಯವಾಗಲಾರಂಭಿಸಿದವು.

.

c)

ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪಡೆದ ಅನೇಕ ಭಾರತೀಯರು ತಮ್ಮ ಸಮಾಜವನ್ನು ವಿಶ್ಲೇಷಿಸಲು ಆರಂಭಿಸಿದರು. ಇದರ ಜೊತೆಗೆ ಬ್ರಿಟಿಷರು ಸಮಾಜ ಸುಧಾರಣೆಯಲ್ಲಿ ಆಸಕ್ತಿಯನ್ನು ತಳೆದರು

d)

ಕೊಟ್ಟಿರುವ ಎಲ್ಲವೂ

4.

ಆಧುನಿಕ ಕಾಲ ಘಟ್ಟದಲ್ಲಿ ಭಾರತದಲ್ಲಿ ಸಮಾಜ ಸುಧಾರಣೆಗೆ

ಚಾಲನೆಯನ್ನು ನೀಡಿದವರು

a)

ದಯಾನಂದ ಸರಸ್ವತಿ

b)

ರಾಜಾ ರಾಮಮೋಹನ್‍ರಾಯರು

c)

ಆತ್ಮಾರಾಂ ಫಾಂಡುರಂಗ

d)

ಜ್ಯೋತಿಬಾ ಫುಲೆ

5.

ಕಲ್ಕತ್ತಾದಲ್ಲಿ ‘ಆತ್ಮೀಯ ಸಭಾ’ ಪ್ರಾರಂಭಿಸಿದ ಸಮಾಜಸುಧಾರಕರು

a)

ದಯಾನಂದ ಸರಸ್ವತಿ

b)

ರಾಜಾರಾಮ ಮೋಹನರಾಯರು

c)

ವಿವೇಕಾನಂದ

d)

ರಾಮಕೃಷ್ಣ ಪರಮಹಂಸರು

6.

ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ

ಕೊನೆಗೊಳಿಸುವುದು ಈ ಕೆಳಗಿನ ಯಾವುದರ ಪ್ರಮುಖ ಆಶಯಗಳಾಗಿತ್ತು?

a)

ಪ್ರಾರ್ಥನಾ ಸಮಾಜ

b)

ಆತ್ಮೀಯ ಸಭಾ

c)

ಬ್ರಹ್ಮಸಮಾಜ

d)

ಯುವಬಂಗಾಳಿ ಚಳವಳಿ

7.

ರಾಜಾರಾಮ ಮೋಹನರಾಯರ ಕೊಡುಗೆಯನ್ನು ಗುರುತಿಸಿ

a)

1828ರಲ್ಲಿ ‘ಬ್ರಹ್ಮಸಮಾಜ’ವನ್ನು ಪ್ರಾರಂಭಿಸಿದರು. ಜಾತಿಪದ್ಧತಿ ಮತ್ತು ಮೂಢನಂಬಿಕೆಗಳಿಂದ ಹಿಂದೂ ಧರ್ಮವನ್ನು ಶುದ್ಧಿಗೊಳಿಸುವುದು ಇವರ ಕಾಳಜಿಯಾಗಿತ್ತು.

b)

ಉಪನಿಷತ್‍ಗಳು ಸಾರುವ ತಾತ್ವಿಕ ತಳಹದಿಯ ಮೇಲೆ ಹಿಂದೂ ಸಮಾಜವನ್ನು ಪುನರ್ ರೂಪಿಸುವ ಪ್ರಯತ್ನವನ್ನು ಮಾಡಿದರು. ಇವರ ಪ್ರಯತ್ನದ ಫಲವಾಗಿ ಮತ್ತು ಅಂದಿನ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್‍ನ ಬೆಂಬಲದಿಂದ

1829ರಲ್ಲಿ ಸತಿಪದ್ಧತಿಯ ಆಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಯಿತು.

c)

ಪತ್ರಿಕೋದ್ಯಮದ ಮೂಲಕ ಜನರಲ್ಲಿ ವೈಚಾರಿಕತೆಯನ್ನು ಬೆಳೆಸಲು ಪ್ರಯತ್ನಿಸಿದರು. ಬಂಗಾಳಿ ಭಾಷೆಯಲ್ಲಿ ಸಂವಾದ ಕೌಮುದಿ ಎನ್ನುವ ಪತ್ರಿಕೆಯನ್ನು ಆರಂಭಿಸಿದರು.

d)

ಕೊಟ್ಟಿರುವ ಎಲ್ಲವೂ

8.

ಕೆಳಗೆ ನಿಡಿರುವ ಯಾವುದು ಬ್ರಹ್ಮಸಮಾಜದ ಪ್ರಮುಖ ಅಂಶಗಳಾಗಿವೆ?

a)

ಏಕದೇವತಾರಾಧನೆಯನ್ನು ಪ್ರತಿಪಾದಿಸಿದರು. ಅರ್ಥಹೀನ ಆಚರಣೆಗಳನ್ನು ವಿರೋಧಿಸಿದರು.

b)

ಪ್ರತಿಯೊಬ್ಬ ವ್ಯಕ್ತಿಯು ಘನತೆಯಿಂದ ಬಾಳಬೇಕು ಮತ್ತು ಯಾವ ನಿಯಮ ಮತ್ತು ಆಚರಣೆಗಳು ಇದಕ್ಕೆ ಕೇಡುಂಟು ಮಾಡಬಾರದೆನ್ನುವುದು ಅವರ ನಿಲುವಾಗಿತ್ತು.

ಬಹುಪತ್ನಿತ್ವ ಪದ್ಧತಿಯನ್ನು ವಿರೋಧಿಸುವ ಮೂಲಕ ಸ್ತ್ರೀಯರಿಗೆ ಸಮಾನತೆ ದೊರಕಬೇಕೆಂದು ಬ್ರಹ್ಮಸಮಾಜವು ಆಶಿಸಿತು.

c)

ವಿಧವೆಯರ ದುಸ್ಥಿತಿಯನ್ನು ದೂರ ಮಾಡುವ ಸಲುವಾಗಿ ಅವರಿಗೆ ಆಸ್ತಿಯಲ್ಲಿ ಪಾಲು ಇರಬೇಕೆಂದು ಪ್ರತಿಪಾದಿಸಿತು. ಬ್ರಹ್ಮಸಮಾಜವು ಬಾಲ್ಯವಿವಾಹವನ್ನು

ವಿರೋಧಿಸಿತು. ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು ಎಂದು ಬ್ರಹ್ಮಸಮಾಜವು ಸಾರಿತು

d)

ಕೊಟ್ಟಿರುವ ಎಲ್ಲವೂ ಬ್ರಹ್ಮಸಮಾಜದ ಪ್ರಮುಖ ಅಂಶಗಳೇ ಆಗಿವೆ.

9.

ಸೂಕ್ತವಾಗಿ ಗುರುತಿಸಿ . ಪಶ್ಚಿಮದ ನಾಗರಿಕತೆಯಲ್ಲಿ ಒಳ್ಳೆಯದಿದ್ದರೆ ಅದೂ ಕೂಡ ಸ್ವೀಕಾರಾರ್ಹ ಎನ್ನುವುದು ಇವರ ನಿಲುವಾಗಿದ್ದು ಇಂಗ್ಲೀಷ್ ಶಿಕ್ಷಣಕ್ಕೆ ಒತ್ತು ನೀಡಿ ಪ್ರಗತಿಪರನಾದ ಪಶ್ಚಿಮದ ಆಲೋಚನಾ ಕ್ರಮಗಳನ್ನು ಭಾರತೀಯರು ಸ್ವಾಗತಿಸಬೇಕು ಎಂದು ಹೇಳಿದರು.

a)

ದಯಾನಂದ ಸರಸ್ವತಿ

b)

ರಾಜಾರಾಮ ಮೋಹನರಾಯ

c)

ವಿವೇಕಾನಂದ

d)

ರವೀಂದ್ರನಾಥ ಠಾಗೂರ

10.

ರಾಜಾ ರಾಮಮೋಹನರಾಯರು ಆಧುನಿಕ ಭಾರತದ ಹರಿಕಾರ, ಭಾರತದ ಪುನರುಜ್ಜೀವನದ ಜನಕ ಮತ್ತು ಭಾರತೀಯ ರಾಷ್ಟ್ರೀಯತೆಯ ಪ್ರವಾದಿ’ ಎಂದು ಹೇಳುವ ಮೂಲಕ ರಾಜಾ ರಾಮಮೋಹನ್‍ರಾಯರು ಮತ್ತು ಬ್ರಹ್ಮಸಮಾಜವು ಮಾಡಿದ ಸೇವೆಯನ್ನು ವಿಶ್ಲೇಷಿಸಿದವರು

a)

ಮಹಾತ್ಮಾ ಗಾಂಧಿ

b)

ಆತ್ಮಾರಾಂ ಪಾಂಡುರಂಗ

c)

ಸ್ವಾಮಿ ವಿವೇಕಾನಂದ

d)

ರವೀಂದ್ರನಾಥ ಠಾಗೂರರು