wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ರಾಶಾ:ಅಧ್ಯಾಯ:03 ನೇ ಭಾಗ:02:by Nataraj&Bhagwat

Total questions: 15

Worksheet time: 8mins

Name
Class
Date
1.

ನಮ್ಮ ಸಂವಿಧಾನದ ಈ -----ಭಾಗದಲ್ಲಿ ರಾಜ್ಯನೀತಿ

ನಿರ್ದೇಶಕ ತತ್ವಗಳಡಿಯಲ್ಲಿನ -------- ನೇ ವಿಧಿಯಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆಯ ಕುರಿತು ತಿಳಿಸಲಾಗಿದೆ.

a)

04 ನೇ ಭಾಗ 51 ನೇ ವಿಧಿ

b)

02 ನೇ ಭಾಗ 21 ನೇ ವಿಧಿ

c)

05 ನೇ ಭಾಗ 51 ನೇ ವಿಧಿ

d)

04 ನೇ ಭಾಗ 56 ನೇ ವಿಧಿ

2.

ಭಾರತ ಮತ್ತು ಚೀನಾಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ ಗುರುತಿಸಿ

a)

ಚೀನಾ ಭಾರತ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ

ರಾಷ್ಟ್ರವಾಗಿದೆ.

b)

ಭಾರತ ಮತ್ತು ಚೀನಾಗಳ ಸಂಬಂಧವನ್ನು ಸಿಂಧೂ ನದಿ ಬಯಲಿನ ನಾಗರೀಕತೆ ಮತ್ತು ಮೆಸಪಟೋಮಿಯಾ ನಾಗರಿಕತೆಯ ಜೊತೆ ಗುರುತಿಸಲಾಗುತ್ತದೆ

c)

ಪಂಚಶೀಲ ತತ್ವಗಳ ಮೂಲಕ ಎರಡು ರಾಷ್ಟ್ರಗಳ

ಸಂಬಂಧಗಳನ್ನು ವೃದ್ಧಿಸುವ ಪ್ರಯತ್ನ ಮಾಡಲಾಯಿತು.

d)

ಚೀನಾವು ಭಾರತದ ಭಾಗವಾಗಿರುವ ಕಾಶ್ಮೀರವು

ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವುದು ಎರಡು ರಾಷ್ಟ್ರಗಳ ಸಂಬಂಧಗಳನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

3.

ಭಾರತ ಮತ್ತು ಚೀನಾಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಹೇಳಿಕೆ ಯಾವುದು?

a)

ಚೀನಾವು ಭಾರತದ ಭಾಗವಾಗಿರುವ ಅರುಣಾಚಲ ಪ್ರದೇಶ

ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವುದು ಎರಡು ರಾಷ್ಟ್ರಗಳ ಸಂಬಂಧಗಳನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

b)

ಭಾರತ ಮತ್ತು ಚೀನಾ ನಡುವೆ ಗಡೀ ವಿವಾಧ ಇದ್ದರೂ ಕೂಡ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷಿಯೂ ರಾಯಭಾರ ಸಂಬಂಧಗಳು ನಿರಂತರವಾಗಿ ಮುಂದುವರೆದಿವೆ.

c)

ಭಾರತ ಮತ್ತು ಚೀನಾ ದೇಶಗಳು

ಜಗತ್ತಿನಲ್ಲಿಯೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವುದಲ್ಲದೇ ವಿಶ್ವದ ಅಭಿವೃದ್ಧಿ ಮುಂಚೂಣಿಯಲ್ಲಿರುವ ಎರಡು ಪ್ರಮುಖ ರಾಷ್ಟ್ರಗಳಾಗಿ ಗುರುತಿಸಲ್ಪಟ್ಟಿವೆ

d)

ಎಲ್ಲಾ ಅಂಶಗಳೂ ಸರಿ

4.

ಈ ಕೆಳಗಿನ ಯಾವ ಅಂಶವು ಭಾರತ ಮತ್ತು ಚೀನಾದ ನಡುವಿನ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಿದೆ?

a)

ಚೀನಾ ಭಾರತದೊಂದಿಗೆ ದೊಡ್ಡ ಮಟ್ಟದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಸಂಪರ್ಕವನ್ನು ಹೊಂದಿರುವ ರಾಷ್ಟ್ರವಾಗಿ ಬೆಳೆದಿರುವುದು

b)

2015ರ ನಂತರ ಭಾರತ &ಚೀನಾಗಳ ಪ್ರಯತ್ನದ ಫಲವಾಗಿ BRICS ರಾಷ್ಟ್ರಗಳ ಗುಂಪು ಪ್ರಾರಂಭಗೊಂಡಿರುವುದು

c)

ಸಾರ್ಕ ರಾಷ್ಟ್ರಗಳ ಆರಂಭದಿಂದ

d)

ಟಿಬೆಟ್ ವಿವಾದದಿಂದ

5.

ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಸಮಸ್ಯೆಯ ಅಂಶ ಗುರುತಿಸಿ

a)

ಜಮ್ಮು-ಕಾಶ್ಮೀರ ಸಮಸ್ಯೆ

b)

ಭಯೋತ್ಪಾದನೆ,

c)

ನೀರಿನ ಹಂಚಿಕೆ ಮುಂತಾದ ಸಮಸ್ಯೆ

d)

ಎಲ್ಲಾ ಅಂಶಗಳು ಸೂಕ್ತವಾಗಿವೆ

6.

ಈ ಎರಡು ರಾಷ್ಟ್ರಗಳ ನಡುವೆ ಉತ್ತಮ ಭಾಂಧವ್ಯ ಹೊಂದಲು ತಾಷ್ಕೆಂಟ್ ಒಪ್ಪಂದ,

ಸಿಮ್ಲಾ ಒಪ್ಪಂದ, ಲಾಹೋರ್ ಬಸ್ ಯಾತ್ರೆ, ಆಗ್ರಾ ಶೃಂಗಸಭೆಯಂತಹ ದ್ವಿಪಕ್ಷಿಯ ಮಾತುಕತೆಗಳನ್ನು ನಡೆಸಲಾಗಿದೆ.

a)

ಭಾರತ -ಚೀನಾ

b)

ಚೀನಾ-ಅಮೆರಿಕ

c)

ಭಾರತ-ಪಾಕಿಸ್ತಾನ

d)

ಭಾರತ-ರಷ್ಯ

7.

ಭಾರತ-ಪಾಕಿಸ್ತಾನ ಈ ಎರಡು ರಾಷ್ಟ್ರಗಳು ನಿರಂತರವಾಗಿ ದ್ವಿಪಕ್ಷಿಯ ಮಾತುಕತೆಗಳನ್ನು ನಡೆಸಿ ಒಪ್ಪಂದ ಮಾಡಿಕೊಂಡಿದ್ದರೂ ಈ ರೀತಿಯ ಒಪ್ಪಂದಗಳು ನಿರೀಕ್ಷಿತ ಯಶಸ್ಸನ್ನು ಸಾಧಿಸಲು ವಿಫಲವಾಗಿದ್ದು ಪರಸ್ಪರ ಸಂಬಂಧಗಳ ವೃದ್ದಿಗೆ ಹಿನ್ನಡೆಯನ್ನು ಉಂಟುಮಾಡಿರುವ ಅಂಶಗಳು

a)

2001ರಲ್ಲಿ ಭಾರತ ಸಂಸತ್ತಿನ ಮೇಲಿನ ದಾಳಿ,

b)

2008ರ ಮುಂಬೈನ ದಾಳಿ

c)

2016ರ ಪಠಾಣ್ ಕೋಟ್ದಾ ಳಿಗಳು

d)

ಎಲ್ಲಾ ಆಂಶಗಳು ಸರಿ

8.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ಘರ್ಷಣೆ ಮುಂದುವರೆದಿದ್ದರೂ ಕೂಡ ಕೆಲವು ವಿಷಯಗಳಲ್ಲಿ ಈ ಎರಡು ರಾಷ್ಟ್ರಗಳು ಸಾಮ್ಯತೆಯನ್ನು ಹೊಂದಿರುವುದನ್ನು ಗುರುತಿಸಬಹುದಾಗಿದೆ. ಹಾಗಾದರೆ ಅದಕ್ಕೆ ಪೂರಕವಾದ ಅಂಶಗಳು

a)

ಸಂಸ್ಕøತಿ ಮತ್ತು ಆರ್ಥಿಕ ವಿಷಯಗಳಲ್ಲಿ ಪರಸ್ಪರ ವಿನಿಮಯ ಕಾರ್ಯಗಳು

b)

ವ್ಯಾಪಾರ, ವಾಣಿಜ್ಯ, ಸಂಬಂಧಗಳು

c)

ಕ್ರೀಡೆ, ಸಾಂಸ್ಕøತಿಕ, ವ್ಯವಹಾರಗಳಲ್ಲಿ, ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭಗಳಲ್ಲಿ ಸೌಹಾರ್ಧಯುತವಾದ ಮತ್ತು ಪರಸ್ಪರ ಸಹಕಾರ

d)

ಎಲ್ಲಾ ಅಂಶಗಳು ಸೂಕ್ತವಾಗಿವೆ

9.

ಭಾರತ-ಸೋವಿಯತ್ ರಷ್ಯಗಳ ನಡುವಿನ ಉತ್ತಮ ಸಂಬಂಧಕ್ಕೆಸಂಬಂಧಪಡದ ಅಥವಾ ತಪ್ಪಾದ ಅಂಶ ಗುರುತಿಸಿ

a)

1947 ರ ಬಳಿಕ ಈ ಎರಡು ರಾಷ್ಟ್ರಗಳ ಸಂಬಂಧ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿ ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ.

b)

1961 ರಲ್ಲಿ ಗೋವಾ ವಿಮೋಚನೆಯ ಸಂದರ್ಭದಲ್ಲಿ ಸೋವಿಯತ್ ರಷ್ಯ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಸಹಕಾರ ನೀಡಿತ್ತು.

c)

1962ರಲ್ಲಿನ ಚೈನಾ ದಾಳಿಯನ್ನು ಸೋವಿಯತ್ ರಷ್ಯ ಖಂಡಿಸಿತ್ತು.

d)

1966ರ ತಾಷ್ಕೆಂಟಿನಲ್ಲಿ ಭಾರತ-ಪಾಕಿಸ್ತಾನಗಳ ಮಧ್ಯೆ ಒಪ್ಪಂದಕ್ಕೆ ರಷ್ಯ

ಸಹಕರಿಸಿತು.

10.

ಭಾರತ ಹಾಗೂ ರಷ್ಯಗಳ ಉತ್ತಮ ಸಂಬಂಧಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಅಂಶಗಳು ಸರಿಯಾಗಿವೆ? ಗುರುತಿಸಿ

a)

1971 ರಲ್ಲಿ ಭಾರತ ಮತ್ತು ರಷ್ಯ 20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿವೆ.

b)

ಭಾರತದ ಭಿಲೈ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ಸೋವಿಯತ್ ರಷ್ಯ

ಸಹಕರಿಸಿತ್ತು

c)

ನಮ್ಮ ರಾಷ್ಟ್ರದ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಗೆ ರಷ್ಯದಿಂದ ಹೆಚ್ಚಿನ ನೆರವು ಪಡೆದಿದ್ದೇವೆ. ಹಾಗೂ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ರಷ್ಯ ಪ್ರತಿಪಾದಿಸುತ್ತಿದೆ.

d)

ಎಲ್ಲಾ ಅಂಶಗಳು ಸರಿಯಾಗಿವೆ

11.

ಇವೆರಡು ಎರಡು ಬೃಹತ್

ರಾಷ್ಟ್ರಗಳು ಹಾಗೂ ಪ್ರಜಾತಂತ್ರ ವ್ಯವಸ್ಥೆ ಹೊಂದಿದವುಗಳು.

a)

ಭಾರತ-ಚೀನಾ

b)

ಭಾರತ-ರಷ್ಯ

c)

ಭಾರತ-ಅಮೆರಿಕ

d)

ಭಾರತ-ಇಂಗ್ಲೆಂಡ್

12.

ಭಾರತದ ಪಂಚವಾರ್ಷಿಕ ಯೋಜನೆಗೆ ಈ ಕೆಳಗಿನ ದೇಶ ತುಂಬಾ ಸಹಾಯಮಾಡಿದೆ

a)

ಅಮೆರಿಕ

b)

ಚೀನಾ

c)

ರಷ್ಯ

d)

ಪಾಕಿಸ್ತಾನ

13.

1962ರ ಚೀನಾ ಆಕ್ರಮಣ ಸಂದರ್ಭದಲ್ಲಿಯೂ ಈ ದೇಶದ ಸಹಾಯ ನಮಗೆ ತುಂಬಾ ಶಕ್ತಿ ನೀಡಿತು. ಆದರೆ ಆ ಬಳಿಕ ಅಲ್ಲಿನ ರಾಜಕೀಯ ಮುಖಂಡರು ಭಾರತ-ಪಾಕಿಸ್ತಾನ ಯುದ್ಧಗಳ ವೇಳೆ ಪಾಕಿಸ್ತಾನಕ್ಕೆ ಸಹಾಯ ನೀಡಿದರು.ಹಾಗಾದರೆ ಆ ದೇಶ ಯಾವುದು?

a)

ರಷ್ಯ

b)

ಅಮೆರಿಕ

c)

ಶ್ರೀಲಂಕಾ

d)

ಇಂಗ್ಲೆಂಡ್

14.

ವಿಶ್ವಸಂಸ್ಥೆಯನ್ನು ಬಲಪಡಿಸುವ ಹಾಗೂ ಜಾಗತಿಕ ಶಾಂತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಎರಡೂ ರಾಷ್ಟ್ರಗಳು ಸಮಾನ ಧೋರಣೆ ಹೊಂದಿವೆ.ಹಾಗಾದರೆ ಆ ಎರಡು ರಾಷ್ಟ್ರಗಳು ಯಾವುವು?

a)

ಭಾರತ-ಚೀನಾ

b)

ಭಾರತ-ರಷ್ಯ

c)

ಭಾರತ-ಅಮೆರಿಕ

d)

ಬಾರತ-ಶ್ರೀಲಂಕಾ

15.

ಭಾರತ-ಅಮೆರಿಕಾ ನಡುವಿನ ಸಂಬಂಧವನ್ನು ಸೂಕ್ತವಾಗಿ ಗುರುತಿಸಿ

a)

ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಈ ಎರಡು ರಾಷ್ಟ್ರಗಳ ಮಧ್ಯೆ ಸಮಾನ

ಹಿತಾಸಕ್ತಿಯಿದೆ.

b)

ಭಾರತ ವಿದೇಶೀ ವ್ಯಾಪಾರ, ವಿಜ್ಞಾನ ಮತ್ತು ತಾಂತ್ರಿಕತೆ, ಬಾಹ್ಯಾಕಾಶ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಮೆರಿಕಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.

c)

ವಿಶ್ವಸಂಸ್ಥೆಯನ್ನು ಬಲಪಡಿಸುವ ಹಾಗೂ

ಜಾಗತಿಕ ಶಾಂತಿಯನ್ನು ಉಳಿಸುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳು ಸಮಾನ ಧೋರಣೆ ಹೊಂದಿವೆ.

d)

ಎಲ್ಲಾ ಅಂಶಗಳು ಸರಿ