wayground logo

Free Printable Worksheets

NEW

Font size

S
M
L
XL
Worksheets

10ನೇ.ಸವಿ:ರಾಜ್ಯಶಾಸ್ತ್ರ:ಘ:05:ಭಾಗ:02:by ನಟರಾಜ &ಭಾಗ್ವತ್

Total questions: 15

Worksheet time: 8mins

Name
Class
Date
1.

ವಿಶ್ವ ಸಂಸ್ಥೆಯ ಧ್ಯೇಯೋದ್ಧೇಶಗಳು ಈ ಕೆಳಗಿನಂತಿವೆ

a)

ಅಂತರರಾಷ್ಟ್ರೀಯ ಶಾಂತಿ ಮತ್ತು ಸುಭಧ್ರತೆಯನ್ನು ಕಾಪಾಡುವುದು& ರಾಷ್ಟ್ರಗಳ ಮಧ್ಯೆ ಪರಸ್ಪರ ಮೈತ್ರಿಯನ್ನು ಬೆಳೆಸುವುದು,


.

ಅಂತರರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವುದು ಹಾಗೂ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು

b)

ಮಾನವನ ಮೂಲಭೂತ ಹಕ್ಕುಗಳ ಬಗೆಗೆ ನಂಬುಗೆಯನ್ನು ಹೆಚ್ಚಿಸುವುದು,

& ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ ಅಥವಾ ಮಾನವೀಯ ನೆಲೆಯಸಮಸ್ಯೆಗಳಿಗೆ ಅಂತರರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡು ಕೊಳ್ಳುವುದು

c)

ಮೇಲಿನ ಎಲ್ಲಾ

2.

ವಿಶ್ವದ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಇದಾಗಿದೆ.

a)

ಸಾಮಾನ್ಯ ಸಭೆ

b)

ಭದ್ರತಾ ಸಮಿತಿ

c)

ಸಚಿವಾಲಯ

d)

ಆರ್ಥಿಕ ಹಾಗೂ ಸಾಮಾಜಿಕ ಸಮಿತಿ

3.

ಸಾಮಾನ್ಯ ಸಭೆ ಗೆ ಸಂಬಂಧಿಸಿದಂತೆ ಇದು ಸಂಬಂಧಿಸಿಲ್ಲ

a)

ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗ ಸಂಸ್ಥೆ

b)

ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ಇದು ನೇಮಕ ಮಾಡುತ್ತದೆ

c)

ಪ್ರತಿಯೊಂದು ಸದಸ್ಯ ರಾಷ್ಟ್ರವು 5 ಸದಸ್ಯರನ್ನು ಇದಕ್ಕೆ ಕಳುಹಿಸಿಕೊಡುತ್ತದೆ. ಆದರೆ

ಪ್ರತಿ ಸದಸ್ಯ ರಾಷ್ಟ್ರಕ್ಕೆ ಒಂದು ಮತದ ಹಕ್ಕು ಮಾತ್ರ ಇರುತ್ತದೆ.

d)

ಸಾಮಾನ್ಯ ಸಭೆಯ ಅಧಿವೇಶನ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳಲ್ಲಿ

ಆರಂಭಗೊಂಡು ಡಿಸಂಬರ್ ಮಧ್ಯಭಾಗದವರೆಗೆ ಜರಗುತ್ತದೆ.

4.

ಭದ್ರತಾಸಮಿತಿಗೆ ಸಂಬಂಧಿಸಿದಂತೆ ತಪ್ಪಾದ ಮಾಹಿತಿಯನ್ನು ಗುರುತಿಸಿ

a)

ಇದು ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿದ್ದು ಅತ್ಯಂತ

ಪ್ರಭಾವಿ ಅಂಗವೆನಿಸಿದೆ

b)

15 ಮಂದಿ ಸದಸ್ಯರಿದ್ದು, ಅವರ ಪೈಕಿ ಅಮೆರಿಕಾ ಸಂಯುಕ್ತ ಸಂಸ್ಥಾನ,

ರಷ್ಯ, ಬ್ರಿಟನ್, ಫ್ರಾನ್ಸ್ ಹಾಗೂ ಚೈನಾ ಖಾಯಂ ಸದಸ್ಯತ್ವ ಹೊಂದಿದ ರಾಷ್ಟ್ರಗಳೆನಿಸಿವೆ,

c)

10 ಮಂದಿ ಹಂಗಾಮಿ ಸದಸ್ಯರನ್ನು 2 ವರ್ಷಗಳ ಅವಧಿಗೆ ಸಾಮಾನ್ಯ ಸಭೆ ಆರಿಸುತ್ತದೆ. ಇವರು ಪ್ರಪಂಚದ ವಿವಿಧ ಭೌಗೋಳಿಕ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ.

d)

ವಾರ್ಷಿಕ ಆಯವ್ಯಯ ಪಟ್ಟಿಗೆ ಭದ್ರತಾಸಮಿತಿ ಒಪ್ಪಿಗೆ ಪಡೆಯಬೇಕಾಗುತ್ತದೆ.

5.

ನಿಷೇಧಾತ್ಮಕ ಮತಚಲಾವಣೆ ಅಧಿಕಾರ ಹೊಂದಿರುವ ರಾಷ್ಟ್ರಗಳ ಸರಿಯಾದ ಗುಂಪು

a)

ಅಮೆರಿಕಾ ಸಂಯುಕ್ತ ಸಂಸ್ಥಾನ, ಭಾರತ, ಬ್ರಿಟನ್, ಫ್ರಾನ್ಸ್ ಹಾಗೂ ಚೈನಾ

b)

ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯ, ಬ್ರಿಟನ್, ಫ್ರಾನ್ಸ್ ಹಾಗೂ ಚೈನಾ

c)

ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯ, ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಚೈನಾ

d)

ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯ, ಬ್ರಿಟನ್, ಭಾರತ ಹಾಗೂ ಚೈನಾ

6.

ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡುವ ಹಾಗೂ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಉಮೇದುವಾರಿಕೆಗೆ ಹೆಸರು ಸೂಚಿಸುವ ಅಧಿಕಾರ ಈ ಸಮಿತಿಗೆ ಇದೆ

a)

ಸಾಮಾನ್ಯ ಸಭೆ

b)

ಸಚಿವಾಲಯ

c)

ಭದ್ರತಾ ಸಮಿತಿ

d)

ಧರ್ಮದರ್ಶಿ ಸಮಿತಿ

7.

ವಿಶ್ವಸಂಸ್ಥೆಯ ಈ ಸಮಿತಿಯಲ್ಲಿ 54 ಮಂದಿ ಸದಸ್ಯರಿದ್ದಾರೆ. ಇವರ ಪೈಕಿ

18 ಮಂದಿ ಸದಸ್ಯರು ಪ್ರತಿ 3 ವರ್ಷಕ್ಕೊಮ್ಮೆ ಆರಿಸಲ್ಪಡುತ್ತಾರೆ

a)

ಸಾಮಾನ್ಯಸಭೆ

b)

ಭದ್ರತಾಸಮಿತಿ

c)

ಆರ್ಥಿಕ ಹಾಗೂ ಸಾಮಾಜಿಕ ಸಮಿತಿ

d)

ದತ್ತಿ ಸಮಿತಿ

8.

ವಿಶ್ವ ಸಂಸ್ಥೆಯ ಈ ಅಂಗಸಂಸ್ಥೆಯು ವಿಶೇಷ ಪ್ರಾವಿಣ್ಯತೆಯ ಅಂಗ ಸಂಸ್ಥೆಗಳಾದ ಅಂತರರಾಷ್ಟ್ರೀಯ ಕಾರ್ಮಿಕ ಸಂಘ (ಐ.ಎಲ್.ಒ),ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ), ಜಾಗತಿಕ ಆರೋಗ್ಯ ಸಂಸ್ಥೆ (ಡಬ್ಲ್ಯೂ ಹೆಚ್.ಒ) ಮುಂತಾದವುಗಳ ಕಾರ್ಯಗಳನ್ನು ಸಮನ್ವಯ ಮಾಡುವುದು.

a)

ಭದ್ರತಾ ಸಮಿತಿ

b)

ಸಾಮಾಜಿಕ & ಆರ್ಥಿಕ ಸಂಸ್ಥೆ

c)

ದತ್ತಿ ಸಮಿತಿ

d)

ಸಚಿವಾಲಯ

9.

ಈ ಸಂಸ್ಥೆ ವಾಸ್ತಾವಿಕವಾಗಿ ಸಾಮಾನ್ಯ ಸಭೆಯ ಉಪ

ಸಂಸ್ಥೆ ಅಥವಾ ಸಹಾಯಕ ಸಂಸ್ಥೆ ಎನಿಸಿ ಕಾರ್ಯವೆಸಗುತ್ತದೆ. ಟ್ರಸ್ಟ್ ಆಶ್ರಯಿತ ಪ್ರದೇಶಗಳ ಸಂಖ್ಯೆ ಕಡಿಮೆಯಾದುದರಿಂದ ಈ ಸಮಿತಿಯ ಕಾರ್ಯಕ್ಷೇತ್ರವೂ ಕಡಿಮೆಯಾಗುತ್ತಾ ಸಾಗಿದೆ.

a)

ಭದ್ರತಾ ಸಮಿತಿ

b)

ಸಾಮಾನ್ಯಸಭೆ

c)

ದತ್ತಿಸಮಿತಿ

d)

ಅಂತರಾಷ್ಟ್ರೀಯ ನ್ಯಾಯಾಲಯ

10.

ದಿನ ನಿತ್ಯದ ಆಡಳಿತಾತ್ಮಕ ಕಾರ್ಯನೋಡಿಕೊಳ್ಳುವ ಮಹಾಕಾರ್ಯದರ್ಶಿಯವರು ವಿಶ್ವಸಂಸ್ಥೆಯ ಈ ಕಾರ್ಯಾಂಗದ ಮುಖ್ಯಸ್ಥರು ಎನಿಸಿದ್ದಾರೆ.

a)

ಭದ್ರತಾ ಸಮಿತಿ

b)

ಸಚಿವಾಲಯ

c)

ಸಾಮಾನ್ಯ ಸಭೆ

d)

ದತ್ತಿ ಸಮಿತಿ

11.

ಜಗತ್ತಿನಾದ್ಯಂತ ಬಡತನ, ಹಸಿವು ಹಾಗೂ ಅಪೌಷ್ಟಿಕತೆಯ ವಿರುದ್ಧ ಹೋರಾಡಲು 1945ರಲ್ಲಿ ಉದಯವಾದ ಸಂಸ್ಥೆ

a)

ಆಹಾರ ಮತ್ತು ಕೃಷಿ ಸಂಸ್ಥೆ

b)

ವಿಶ್ವ ಆರೋಗ್ಯ ಸಂಸ್ಥೆ

c)

ಯುನೆಸ್ಕೋ

d)

ಯುನಿಸೆಫ್

12.

ಸಿಡುಬು ರೋಗವನ್ನು ಸಮಗ್ರವಾಗಿ ನಿವಾರಿಸುವಲ್ಲಿ ಈ ಸಂಸ್ಥೆ ಯಶಸ್ಸು ಕಂಡಿದೆ

a)

ಯುನಿಸೆಫ್

b)

ಯುನೆಸ್ಕೋ

c)

ವಿಶ್ವ ಆರೋಗ್ಯ ಸಂಸ್ಥೆ

d)

ಆಹಾರ &ಕೃಷಿ ಸಂಸ್ಥೆ

13.

ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರದ ನಿಟ್ಟಿನಲ್ಲಿ ಇದು ಸರ್ಕಾರಗಳಿಗೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ನೀಡುತ್ತದೆ.

a)

ಯುನೆಸ್ಕೋ

b)

ಯುನಿಸೆಫ್

c)

ಐಎಂಎಫ್

d)

ಎಫ್ಎಒ

14.

ಮಾನವೀಯ ದೃಷ್ಟಿಕೋನ ಹೊಂದಿದ ಇದು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಸ್ಥಾಪನೆಗೊಂಡಿದ್ದು ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಮೂಲ ಉದ್ದೇಶವಾಗಿ ಹೊಂದಿದೆ


.

a)

ವಿಶ್ವ ಆರೋಗ್ಯ ಸಂಸ್ಥೆ

b)

ಯುನೆಸ್ಕೋ

c)

ಯುನಿಸೆಫ್

d)

ಐಎಂಎಫ್

15.

ಸದಸ್ಯ ರಾಷ್ಟ್ರಗಳ ಪರಸ್ಪರ ಅಪನಂಬಿಕೆ, ವಿವಾದಗಳು ಹಾಗೂ ‘ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು’ ಎಂಬ ಸೂತ್ರ ಈ ಒಕ್ಕೂಟದ ಪ್ರಗತಿಗೆ ತೊಡಕಾಗಿದೆ

a)

ಸಾರ್ಕ್

b)

ಯುರೋಪಿಯನ್ ಯೂನಿಯನ್

c)

ಆಸಿಯನ್

d)

ದಿ ಆರ್ಗನೈಸೇಶನ್ ಆಪ್ ಆಫ್ರಿಕನ್ ಯುನಿಟಿ