wayground logo

Free Printable Worksheets

NEW

Font size

S
M
L
XL
Worksheets

10 ನೇ ಸವಿ:ಇತಿಹಾಸ:ಅಧ್ಯಾಯ:02:ಭಾಗ 01:By Nataraja &Bhagwat

Total questions: 10

Worksheet time: 5mins

Name
Class
Date
1.

ಯಾವ ಕದನಗಳ ಮೂಲಕ ಬಂಗಾಳ ಪ್ರಾಂತ್ಯದ ಮೇಲೆ ಬ್ರಿಟೀಷರು ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು.

a)

ಪ್ಲಾಸಿ

b)

ಬಕ್ಸಾರ್

c)

ಪ್ಲಾಸಿ &ಬಕ್ಸಾರ್

d)

ಕಾರ್ನಟಿಕ್

2.

ಭಾರತದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಈ ರಾಜ್ಯಗಳು ಪ್ರಬಲರಾಗಿದ್ದ ಕಾರಣ ಅವರ ಆಟಾಟೋಪ ಬಂಗಾಳ ಮತ್ತು ಬೊಂಬಾಯಿಗೆ ಸೀಮಿತಗೊಂಡಿತ್ತು.

a)

ಮರಾಠರು

b)

ಮೈಸೂರು ಒಡೆಯರು

c)

ಸಿಖ್ ರು

d)

ಮೈಸೂರು ಮತ್ತು ಮರಾಠ ರಾಜ್ಯಗಳು

3.

ವಾಯವ್ಯ ಭಾರತದಲ್ಲಿ ಬ್ರಿಟಿಷರ ಪ್ರಬಲ ವಿರೋಧಿಗಳು

a)

ಸಿಖ್ಖರು

b)

ಮರಾಠರು

c)

ಮೈಸೂರು ಒಡೆಯರು

d)

ಟಿಪ್ಪು

4.

ಹತ್ತೊಂಬತ್ತನೇ ಶತಮಾನದ ಆರಂಭದ ದಶಕಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಇವನಉ ಸಿಖ್ಖರನ್ನು ಸಂಘಟಿಸುವಲ್ಲಿ ಯಶಸ್ವಿಯಾದನು.

a)

ಲಾಲ್ ಸಿಂಗ್

b)

ರಣಜಿತ್ ಸಿಂಗನು

c)

ದುಲೀಪಸಿಂಗ್

d)

ಕೊಟ್ಟಿರುವ ಆಯ್ಕೆಗಳು ಸೂಕ್ತವಾಗಿಲ್ಲ

5.

ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಯಾವ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಪಾಯವಾಗಿಯೂ ಭಾರತೀಯ ರಾಜ್ಯಗಳನ್ನು ಕಬಳಿಸಿದರು.

a)

ಸಹಾಯಕ ಸೈನ್ಯ ಪದ್ಧತಿ’ ಮತ್ತು ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ನೀತಿ ಮೂಲಕ

b)

ಯುದ್ಧಗಳ ಮೂಲಕ

c)

ದ್ವಿಮುಖ ಸರ್ಕಾರದ ಮೂಲಕ

d)

ಭೂಕಂದಾಯ ನೀತಿಯ ಮೂಲಕ

6.

ಮೊದಲ ಆಂಗ್ಲೋ-ಮರಾಠ ಯುದ್ಧ (1775-1782): ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವವು ಮನೆಮಾಡಲು ಕಾರಣ

a)

ಬಕ್ಸಾರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಗಲ್ ಚಕ್ರವರ್ತಿ ಎರಡನೇ ಷಾ ಆಲಂನು ಮೊದಲು ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಕೊಟ್ಟನು

b)

ಮರಾಠರು ಮೈಸೂರಿನ ಜೊತೆ ಯುದ್ಧ ಹೂಡಿದರು

c)

ಮರಾಠರು ಮೈಸೂರಿನ ಜೊತೆ ಮಿತ್ರತ್ವ ಬೆಳೆಸಿದರು

d)

ಪೇಶ್ವೆ ಮಾಧವರಾವ್ ಮರಣ

7.

1775-1782ರವರೆಗೆ ಮೊದಲ ಮರಾಠ ಯುದ್ಧ ನಡೆಯಲು ಕಾರಣ

a)

ಮರಾಠ ಪೇಶ್ವೆ ಸ್ಥಾನದ ಆಕಾಂಕ್ಷಿ ರಘೋಬನು ಬ್ರಿಟಿಷರ ಬೆಂಬಲ ಕೋರಿದನು.

b)

ನಾನಾಫಡ್ನವೀಸ್ ಬ್ರಿಟೀಷರ ಬೆಂಬಲ ಕೋರಿದನು

c)

ಮರಾಠರು ಬ್ರಿಟೀಷರ ಮೇಲೆ ಆಕ್ರಮಣ ಮಾಡಿದರು

d)

ಕೊಟ್ಟಿರುವ ಯಾವುದೂ ಅಲ್ಲ

8.

ಮೊದಲನೇ ಆಂಗ್ಲೋ-ಮರಾಠ ಯುದ್ಧದ ಪರಿಣಾಮಗಳು

a)

ಯುದ್ಧದಲ್ಲಿ ಮರಾಠರು ಪ್ರಾರಂಭಿಕ ಯಶಸ್ಸನ್ನು ಸಾಧಿಸಿದರೂ ಅಂತಿಮವಾಗಿ ಅಹಮದಾಬಾದ್ಅನ್ನು ಕಳೆದುಕೊಂಡರು.

b)

ಮರಾಠರು ಬ್ರಿಟಿಷರೊಂದಿಗೆ ಸಾಲ್ಬಾಯ್ ಒಪ್ಪಂದವನ್ನು ಮಾಡಿಕೊಂಡಿತು.

c)

ಎರಡನೇ ಮಾಧವರಾವನನ್ನು ಪೇಶ್ವೆಯಾಗಿ ನೇಮಿಸಲಾಯಿತು.

d)

ಕೊಟ್ಟಿರುವ ಎಲ್ಲವೂ

9.

ಬ್ರಿಟೀಷರ ಈ ಗವರ್ನರ್ ಜನರಲ್ ಬಂದ ನಂತರ ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆಯು ದೊಡ್ಡ ಪ್ರಮಾಣದಲ್ಲಾಯಿತು.

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಕಾರ್ನವಾಲೀಸ್

c)

ಲಾರ್ಡ್ ಡಾಲ್ ಹೌಸಿ

d)

ಲಾರ್ಡ್ ವಾರನ್ ಹೇಸ್ಟಿಂಗ್ಸ್

10.

ಲಾರ್ಡ್ ವೆಲ್ಲೆಸ್ಲಿಯ ಆಗಮನದ ಹೊತ್ತಿಗೆ ಈ ರಾಜ್ಯಗಳು ದುರ್ಬಲಗೊಂಡಿದ್ದು ಬ್ರಿಟೀಷರ ವಿಸ್ತರಣಾ ನೀತಿಗೆ ಅನುಕೂಲಕರವಾಗಿತ್ತು

a)

ಮರಾಠರು

b)

ಮರಾಠ ಮತ್ತು ಮೈಸೂರು ರಾಜ್ಯಗಳು

c)

ಸಿಖ್ಖರು

d)

ಮೊಘಲರು