wayground logo

Free Printable Worksheets

NEW

Font size

S
M
L
XL
Worksheets

10ನೇ ಸವಿ:ರಾ.ಶಾ.ಅಧ್ಯಾಯ 01:ಭಾಗ :03:By_Nataraj &Bhagwat

Total questions: 15

Worksheet time: 8mins

Name
Class
Date
1.

ಒಳ್ಳೆಯ ರಾಜಕೀಯ ನಾಯಕತ್ವ, ಉತ್ತಮ ಅಧಿಕಾರಿ ವರ್ಗ ಹಾಗೂ ರಾಜಕೀಯ ಪರಿಜ್ಞಾನ ಹಾಗೂ ಪೌರತ್ವದ ಅರಿವು ಹೊಂದಿದ ಜನತೆ ಜಂಟಿಯಾಗಿ ಇದರ ವಿರುದ್ಧ ಹೋರಾಟ ನಡೆಸಬಹುದಾಗಿದೆ.

a)

ಕಾರ್ಪೋರೇಟ್ ತಂತ್ರಗಾರಿಕೆ

b)

ನಿರುದ್ಯೋಗ

c)

ಭ್ರಷ್ಟಾಚಾರ

d)

ತಾರತಮ್ಯ

2.

ಭ್ರಷ್ಟಾಚಾರವನ್ನು ನಿವಾರಿಸಲು ಈ ಎಲ್ಲಾ ಸ್ತರಗಳಲ್ಲಿಯೂ ಅತ್ಯಗತ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿರುತ್ತದೆ.

a)

ಸರ್ಕಾರಿ ಕಛೇರಿಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸುವುದು ಮತ್ತು ಕಛೇರಿಯ ಕಾರ್ಯನಿರ್ವಹಣೆಯ ವೇಗವನ್ನು ಹೆಚ್ಚಿಸುವುದು

b)

ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸುವುದು.

c)

ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ಸಾಧ್ಯವಾದಷ್ಟು ಬೇಗನೆ ನ್ಯಾಯ ನಿರ್ಣಯ ನೀಡುವುದು

d)

ಕೊಟ್ಟಿರುವ ಎಲ್ಲಾ ಅಂಶಗಳು

3.

ಭ್ರಷ್ಟಾಚಾರ ನಿಯಂತ್ರಣದಲ್ಲಿ ಪೂರಕ ಶಕ್ತಿ ಒದಗಿಸಬಲ್ಲ ಸಂಸ್ಥೆಗಳು

a)

ಲೋಕಪಾಲ,

b)

ಲೋಕಾಯುಕ್ತ

c)

ಲೋಕಪಾಲ & ಲೋಕಾಯುಕ್ತ

d)

ಕೊಟ್ಟಿರುವ ಯಾವುದೂ ಅಲ್ಲ

4.

ಭಾರತ ಸರ್ಕಾರ ಮಹಿಳೆಯರಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿ ಹಾಗೂ ರಾಜಕೀಯವಾಗಿಯೂ ಸ್ಥಳೀಯ ಸಂಸ್ಥೆಗಳ ಪ್ರಾತಿನಿಧಿತ್ವದಲ್ಲಿಕ್ಕಿಂತ ಕಡಿಮೆ ಇಲ್ಲದಷ್ಟು ಸ್ಥಾನಗಳ ಮೀಸಲಾತಿಯನ್ನು ನೀಡಿರುವುದು ಯಾವ ಉದ್ದೇಶದಿಂದ?

a)

ಲಿಂಗ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ

b)

ಭ್ರಷ್ಟಾಚಾರ ನಿಗ್ರಹಕ್ಕೆ

c)

ನಿರುದ್ಯೋಗ ನಿವಾರಣೆಗೆ

d)

ಕಾರ್ಪೋರೇಟ್ ತಂತ್ರಗಾರಿಕೆ ನಿಯಂತ್ರಣಕ್ಕೆ

5.

ಭಾರತ ಸಂವಿಧಾನದ ಯಾವ ಬಾಗದಲ್ಲಿ ಮೂಲಭೂತ ಹಕ್ಕುಗಳ

ಪಟ್ಟಿಯಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ನೀಡುವ ಮೂಲಕ ಜಾತಿ ಆಧಾರಿತ ತಾರತಮ್ಯವನ್ನು ಗಣನೀಯವಾಗಿ ತಗ್ಗಿಸಲು ಪೂರಕವಾದ ಕ್ರಮಗಳನ್ನು ಅಳವಡಿಸಲಾಗಿದೆ?

a)

ನಾಲ್ಕನೇ ಭಾಗದಲ್ಲಿ

b)

ಮೂರನೇ ಭಾಗದಲ್ಲಿ

c)

ಐದನೇ ಭಾಗದಲ್ಲಿ

d)

ಕೊಟ್ಟಿರುವ ಯಾವುದೂ ಅಲ್ಲ

6.

ಸಮಾಜದಲ್ಲಿ ಮುಕ್ತ ಮನಸ್ಸಿನಿಂದ ಕೂಡಿದ ಸಮಾಜ ನಿರ್ಮಾಣ ಮಾಡುವ ಇಚ್ಛೆಯನ್ನು ನಾಗರಿಕ ಸಮಾಜ ಅಳವಡಿಸಿಕೊಂಡಾಗ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯವಾಗುವುದು

a)

ಜಾತಿ ವ್ಯವಸ್ಥೆಯನ್ನು

b)

ಲಿಂಗ ತಾರತಮ್ಯವನ್ನು

c)

ಭ್ರಷ್ಟಾಚಾರವನ್ನು

d)

ನಿರುದ್ಯೋಗವನ್ನು

7.

ಕೆಲವು ರಾಜ್ಯಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಹುಟ್ಟುಹಾಕುವ ಮಟ್ಟಕ್ಕೆ ಕಾರಣವಾದ ಅಂಶ

a)

ಕೋಮುವಾದ

b)

ಬಡತನ

c)

ನಿರುದ್ಯೋಗ

d)

ಪ್ರಾದೇಶಿಕ ಅಸಮತೋಲನ

8.

2001ರಲ್ಲಿನ ಡಿ.ಎಂ. ನಂಜುಂಡಪ್ಪ ಸಮಿತಿಯ ವರದಿಗೆ

ಪೂರಕವಾಗಿ ಸಂವಿಧಾನಕ್ಕೆ ವಿಧಿ 371 (ಜೆ) ಸೇರ್ಪಡೆ ಮಾಡುವುದರ ಮೂಲಕ

ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನವನ್ನು ಈ ರಾಜ್ಯದಲ್ಲಿ ನೀಡಲಾಗಿದೆ

a)

ಮಹಾರಾಷ್ಟ್ರ

b)

ಕರ್ನಾಟಕ

c)

ಉತ್ತರಪ್ರದೇಶ

d)

ಬಿಹಾರ

9.

ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು

ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳಸಿಕೊಳ್ಳುವುದು

a)

ಪ್ರಾದೇಶಿಕತೆ

b)

ಕೋಮುವಾದ

c)

ಭ್ರಷ್ಟಾಚಾರ

d)

ತಾರತಮ್ಯ

10.

ಸಾಮಾಜಿಕವಾಗಿ ಭಿನ್ನತೆ, ಪರಸ್ಪರ ಅಪನಂಬಿಕೆ ಹಾಗೂ ಭಯದ ವಾತಾರವಣವನ್ನು

ಸೃಷ್ಠಿಸುವುದು

a)

ಕೋಮುವಾದ

b)

ಪ್ರಾದೇಶಿಕತೆ

c)

ತಾರತಮ್ಯ

d)

ಭ್ರಷ್ಟಾಚಾರ

11.

ಕೊಟ್ಟಿರುವ ಯಾವುದು ಸಮಾಜದಲ್ಲಿ ಗುಂಪುಗಾರಿಕೆ ,ಆರ್ಥಿಕ ವೈಷಮ್ಯ ಮತ್ತು ರಾಜಕೀಯ ಪೈಪೋಟಿಯಲ್ಲಿ ಪ್ರಕಟವಾಗುವುದು ?

a)

ಭ್ರಷ್ಟಾಚಾರ

b)

ಪ್ರಾದೇಶಿಕತೆ

c)

ಕೋಮುವಾದ

d)

ತಾರತಮ್ಯ

12.

ಭಾರತದ ಮಟ್ಟಿಗೆ ಕೆಳಗಿನ ಯಾವುದು ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯನ್ನು ಭಂಗಪಡಿಸುವ, ಅಪಾಯ ತಂದೊಡ್ಡುವ ಶಕ್ತಿಯಾಗಿದ್ದು ಸಮಾಜದ ನೆಮ್ಮದಿಯನ್ನು ಕೆಡಿಸುವುದಲ್ಲದೆ ವ್ಯಕ್ತಿಗಳ ಜೀವ ಹಾಗೂ ಸೊತ್ತುಗಳ ನಾಶಕ್ಕೂ ಕಾರಣವಾಗುತ್ತದೆ?

a)

ಪ್ರಾದೇಶಿಕತೆ

b)

ಲಿಂಗ ತಾರತಮ್ಯ

c)

ಕೋಮುವಾದ

d)

ನಿರುದ್ಯೋಗ

13.

ಇವುಗಳಲ್ಲಿ ಕೋಮುವಾದವನ್ನು ಹಿಮ್ಮೆಟ್ಟಿಸುವ ಉಪಾಯಗಳು ಯಾವುವು?

a)

ಏಕರೂಪ ನಾಗರಿಕ ಸಂಹಿತೆ, ಎಲ್ಲಾ ನಾಗರಿಕರನ್ನು ಸಮಾನ ದೃಷ್ಟಿಯಿಂದ ಕಾಣುವಿಕೆ

b)

ಜಾತ್ಯತೀತ ಮನೋಭಾವಕ್ಕೆ ಸಾಮಾಜಿಕ ಜೀವನದ

ಎಲ್ಲಾ ರಂಗಗಳಲ್ಲೂ ಪ್ರಾಶಸ್ತ್ಯ,

c)

ಸಂಕುಚಿತ ವಿಭಾಗೀಯ ಚಿಂತನೆಗಳಿಂದ ಮೇಲುಸ್ತರದ ರಾಷ್ಟ್ರೀಯ ಚಿಂತನೆಗೆ

ಹೆಚ್ಚು ಒತ್ತು

d)

ಕೊಟ್ಟಿರುವ ಎಲ್ಲಾ ಅಂಶಗಳು

14.

ಕೋಮುವಾದವನ್ನು ತಡೆಗಟ್ಟುವ ವಿಧಾನ

a)

ನಮ್ಮ ಭಾರತದ ಎಲ್ಲಾ ಮತ ಸಂಪ್ರದಾಯಗಳು ಜನರಲ್ಲಿ ಸಾಮಾನ್ಯ ಹಾಗೂ ಆರೋಗ್ಯಕರ ರಾಷ್ಟ್ರೀಯ ಚಿಂತನೆಗಳನ್ನು ಬೆಳೆಸಲು ಯತ್ನಿಸಬೇಕು.

b)

ಮತೀಯ ಮೂಲಭೂತವಾದ ಬಹುತ್ವದ ಸಮಗ್ರತೆ, ಸಮಾನತೆ, ಸೋದರತೆ ಮತ್ತು ಸಾಂಸ್ಕøತಿಕ ಬಹುರೂಪತೆಗೆ ಧಕ್ಕೆಯಾಗದಂತೆ ತಡೆಗಟ್ಟಬೇಕು.

c)

ಜಾತ್ಯಾತೀತ ತತ್ವಕ್ಕೆ ಬದ್ಧರಾಗುವ ಮನೋಧರ್ಮ

d)

ಕೊಟ್ಟಿರುವ ಎಲ್ಲಾ ಅಂಶಗಳು

15.

ದೇಶದ ಅಭಿವೃದ್ಧಿಗೆ ಸಮಸ್ಯೆಯಾಗಿ ಕಾಡುವ ಇದು ಸಾಮಾಜಿಕ ಪದ್ದತಿಗಳು, ಬಡತನ ಮತ್ತು ಅನಕ್ಷರತೆಯಂತಹ ಕಾರಣಗಳಿಂದ ಪ್ರಗತಿಯ ಪಥದಲ್ಲಿ ಹಿಂದಿರುತ್ತದೆ.

a)

ಸ್ತ್ರೀಯರ ಸ್ಥಾನಮಾನ

b)

ನಿರುದ್ಯೋಗ

c)

ಕೋಮುವಾದ

d)

ಪ್ರಾದೇಶಿಕತೆ