NEW
Font size
Worksheets10ನೇ ಸವಿ:ಇತಿಹಾಸ:ಅಧ್ಯಾಯ:06::By Nataraj &Bhagwat
Total questions: 15
Worksheet time: 8mins
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಜಾರಿಗೆ ತಂದ ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು.
ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ
ಯುದ್ಧ ನೀತಿ
ಈ ಕೆಳಗಿನ ಯಾವ ರಾಜಕೀಯ ಕಾರಣಗಳು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣವಾದವು?
ಬ್ರಿಟಿಷರು ಜಾರಿಗೆ ತಂದಿದ್ದ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯಿಂದಾಗಿ ಹಲವು
ದೇಶೀ ರಾಜರು ತಮ್ಮ ರಾಜ್ಯಗಳನ್ನು ಕಳೆದುಕೊಳ್ಳಬೇಕಾಯಿತು.
ಡಾಲ್‍ಹೌಸಿಯು ತಂಜಾವೂರು ಮತ್ತು ಕರ್ನಾಟಿಕ್ ನವಾಬರಿಗಿದ್ದ ರಾಜ
ಪದವಿಗಳನ್ನು ರದ್ದುಪಡಿಸಿದನು.
ಮೊಘಲ್ ಚಕ್ರವರ್ತಿ, ಔದ್‍ನ ನವಾಬ ಮೊದಲಾದ ರಾಜರುಗಳನ್ನು ಇಂಗ್ಲಿಷರು ಅಧಿಕಾರದಿಂದ ಪದಚ್ಯುತಗೊಳಿಸಿದರು. ಪರಿಣಾಮವಾಗಿ ಇವರನ್ನು ಅವಲಂಬಿಸಿದ
ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.
ಕೊಟ್ಟಿರುವ ಎಲ್ಲವೂ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜಕೀಯ ಕಾರಣಗಳು
ಕೊಟ್ಟಿರುವ ಯಾವುದು 1857ರ ಕ್ರಾಂತಿಗೆ ಆರ್ಥಿಕ ಕಾರಣವಾಗಿದೆ?
ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಭಾರತದ ಕರಕುಶಲತೆ
ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು.
ಭಾರತದಲ್ಲಿದ್ದ ಕರಕುಶಲಗಾರರು ನಿರುದ್ಯೋಗಿಗಳಾದರು. ವಿಶೇಷವಾಗಿ ಬಟ್ಟೆ
ಮತ್ತು ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು.
ಗೃಹಕೈಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕನಷ್ಟ ಅನುಭವಿಸಿ ಶಿಥಿಲಗೊಂಡವು. ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು.
ಕೊಟ್ಟಿರುವ ಎಲ್ಲವೂ 1857ರ ಕ್ರಾಂತಿಗೆ ಆರ್ಥಿಕ ಕಾರಣವಾಗಿದೆ
ಕೊಟ್ಟಿರುವ ಯಾವುದು 1857ರ ಕ್ರಾಂತಿಯ ವೇಳೆ ರೈತರ ಪ್ರತಿಭಟನೆಗೆ ಕಾರಣವಾಯಿತು?
ಜಮೀನ್ದಾರಿ ಪದ್ಧತಿಯಿಂದಾಗಿ ಸರ್ಕಾರ ಮತ್ತು ರೈತನ ಮಧ್ಯೆ ಇದ್ದ ಮಧ್ಯವರ್ತಿ ಜಮೀನ್ದಾರನು ಕೃಷಿಕರನ್ನು ಶೋಷಿಸುತ್ತಿದ್ದನು.
ಕಂದಾಯ ವಸೂಲಿ ಮಾಡಲು ತಾಲ್ಲೂಕುದಾರರಿಗೆ ನೀಡಿದ್ದ ಹಕ್ಕುಗಳನ್ನು ಹಿಂಪಡೆಯಲಾಯಿತು.
ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು. ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ ಮತ್ತು ಆರ್ಥಿಕಸಂಕಷ್ಟ ಅನುಭವಿಸಿದರು.
ಕೊಟ್ಟಿರುವ ಎಲ್ಲವೂ 1857ರ ಕ್ರಾಂತಿಯ ವೇಳೆ ರೈತರ ಪ್ರತಿಭಟನೆಗೆ ಕಾರಣವಾಯಿತು.
ಈ ಕೆಳಗಿನ ಯಾವುದು 1857ರ ಕ್ರಾಂತಿಗೆ ಕಾರಣವಾದ ಆಡಳಿತಾತ್ಮಕ ಕಾರಣವಾಗಿದೆ?
ಇಂಗ್ಲಿಷರು ಹೊಸ ನಾಗರಿಕ ಮತ್ತು ಅಪರಾಧ ಕಾಯ್ದೆಗಳನ್ನು ಜಾರಿಗೆ
ತಂದರು. ಕಾನೂನಿನಲ್ಲಿ ಪಕ್ಷಪಾತ ಮತ್ತು ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.
ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಯಿತು. ಇಂಗ್ಲಿಷ್ ನ್ಯಾಯಾಧೀಶರು ಬಹುತೇಕವಾಗಿ ಇಂಗ್ಲಿಷರ ಪರವಾಗಿ ನ್ಯಾಯದಾನ ನೀಡುತ್ತಿದ್ದರು.
ಹೊಸ ಕಾನೂನಿನ ಆಶಯಗಳು ಜನರಿಗೆ ಅರಿವಾಗಲಿಲ್ಲ.
ಕೊಟ್ಟಿರುವ ಎಲ್ಲವೂ 1857ರ ಕ್ರಾಂತಿಗೆ ಕಾರಣವಾದ ಆಡಳಿತಾತ್ಮಕ ಕಾರಣವಾಗಿದೆ.
1857ರ ಕ್ರಾಂತಿಗೆ ಕಾರಣವಾದ ಸೈನಿಕ ಕಾರಣಗಳನ್ನು ಗುರುತಿಸಿ
ಬ್ರಿಟಿಷರ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿಯು ಗಂಭೀರವಾಗಿತ್ತು.
ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ, ವೇತನ, ಬಡ್ತಿ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ.
ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.
ಕೊಟ್ಟಿರುವ ಎಲ್ಲವೂ 1857ರ ಕ್ರಾಂತಿಗೆ ಕಾರಣವಾದ ಸೈನಿಕ ಕಾರಣಗಳಾಗಿವೆ.
1857ರ ದಂಗೆಗೆ ತಕ್ಷಣದ ಕಾರಣ ಗುರುತಿಸಿ
ಸೈನಿಕರಿಗೆ ‘ರಾಯಲ್ ಎನ್‍ಫೀಲ್ಡ್’ ಎಂಬ ನವೀನ ಬಂದೂಕುಗಳನ್ನು ನೀಡುತ್ತಿದ್ದರು.
ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು.
ಮೊಘಲ್ ಸುಲ್ತಾನರನ್ನು ವಜಾ ಗೊಳಿಸಿದ್ದು
ನಾನಸಾಹೇಬನಿಗೆ ಕೊಡುತ್ತಿದ್ದ ಪೆನ್ಶನ್ ನಿಲ್ಲಿಸಿದ್ದು
ಕೊಟ್ಟಿರುವ ಯಾವುದೂ ಅಲ್ಲ
ಸೈನಿಕರಿಗೆ ತುಪಾಕಿಯನ್ನು ಹಲ್ಲಿನಿಂದ ಕಚ್ಚಿ ತೆಗೆಯುವಂತೆ ಇಂಗ್ಲಿಷರು ಆದೇಶಿಸಿದಾಗ ಇದನ್ನು ತಿರಸ್ಕರಿಸಿ ಮೇಲಾಧಿಕಾರಿಗಳ ವಿರುದ್ಧ ಇಲ್ಲಿನ ಸೈನಿಕರು ಬಂಡಾಯವೆದ್ದರು
ಮೀರತ್
ಬ್ಯಾರಕ್ ಪುರ
ಕಾನ್ಪುರ
ದೆಹಲಿ
ಹಲ್ಲಿನಿಂದ ಕಚ್ಚಿ ತೆಗೆಯುವಂತೆ ಇಂಗ್ಲಿಷರು ಆದೇಶಿಸಿದಾಗ ಇದನ್ನು ತಿರಸ್ಕರಿಸಿ
ಬ್ರಿಟಿಷ್ ಸೈನ್ಯದ ಅಧಿಕಾರಿಯೊಬ್ಬನನ್ನು ಕೊಂದವನು.
ಮಂಗಲಪಾಂಡೆ
ಬಹುದ್ದೂರ ಷಾ
ನಾನಾ ಸಾಹೇಬ
ತಾತ್ಯಾ ಟೋಪೆ
ಇದು ಸ್ವಾತಂತ್ರ್ಯ ಸಂಗ್ರಾಮದ ಬೀಜಾಂಕುರಕ್ಕೆ ನಾಂದಿಯಾದ ಘಟನೆ
ಮಂಗಲಪಾಂಡೆಯನ್ನು ಗಲ್ಲಿಗೇರಿಸಿದ್ದು
ಮೀರತ್‍ನಲ್ಲಿ ಸೈನಿಕರು ಸೆರಮನೆಗೆ ನುಗ್ಗಿ ಈಗಾಗಲೇ
ಬಂಧಿತರಾಗಿದ್ದ ಭಾರತೀಯ ಸಿಪಾಯಿಗಳನ್ನು ಬಿಡುಗಡೆಗೊಳಿಸಿದ್ದು
ಮೊಘಲ್ ದೊರೆ ಎರಡನೇ ಬಹುದ್ದೂರ ಷಾ ನನ್ನು ಭಾರತದ ಚಕ್ರವರ್ತಿ
ಎಂದು ಘೋಷಿಸಿದ್ದು
ಕೊಟ್ಟಿರುವ ಯಾವುದೂ ಅಲ್ಲ
1857ರ ಸ್ವಾತಂತ್ರ್ಯ ಸಂಗ್ರಾಮದ ನಾಯಕರು & ಸ್ಥಳವನ್ನು ಕೊಟ್ಟಿದ್ದು ತಪ್ಪಾದ ಆಯ್ಕೆಯನ್ನು ಗುರುತಿಸಿ
ನಾನಾ ಸಾಹೇಬ-ಕಾನ್ಪುರ
ಲಕ್ಷ್ಮೀಬಾಯಿ-ಝಾನ್ಸಿ
ಬಹದ್ದೂರ್ ಷಾ-ದೆಹಲಿ
ತಾತ್ಯಾಟೋಪೆ-ಮೀರತ್
1857ರ ಕ್ರಾಂತಿಯ ಈ ನಾಯಕರು ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ
ಹೆಮ್ಮೆಯ ಸ್ಥಾನವನ್ನು ಹೊಂದಿದ್ದಾರೆ.
ತಾತ್ಯಾಟೋಪೆ
ಝಾನ್ಸಿರಾಣಿ ಲಕ್ಷ್ಮೀ ಬಾಯಿ
ನಾನಾಸಾಹೇಬ
ಮಂಗಲಪಾಂಡೆ
1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಹಲವಾರು ಕಾರಣಗಳಿಂದ ವಿಫಲವಾಯಿತು. ಹಾಗಾದರೆ ಆ ಕಾರಣಗಳನ್ನು ಗುರುತಿಸಿ
ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ. ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ರಾಜರ/ರಾಣಿಯರ ಸ್ವಹಿತಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು.
ಇದು ಯೋಜಿತ ದಂಗೆಯಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು. ಬ್ರಿಟಿಷ್ ಸೈನ್ಯದಲ್ಲಿನ ಒಗಟ್ಟು ಮತ್ತು ಭಾರತೀಯ ಸೈನಿಕರಲ್ಲಿದ್ದ ಭಿನ್ನತೆ
ದಂಗೆಗೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರತೆ ಭಾರತೀಯರಲ್ಲಿ ಯುದ್ಧ ತಂತ್ರ, ಸೈನಿಕ ಪರಿಣತಿ, ಸೂಕ್ತ ಸೇನಾ ನಾಯಕತ್ವ ಮತ್ತು ಶಿಸ್ತು ಮುಂತಾದವುಗಳ ಕೊರತೆ ,
ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ. ಹಲವಾರು ದೇಶೀಯ ಸಂಸ್ಥಾನಗಳ ರಾಜರು ಬ್ರಿಟಿಷರಿಗೆ ನಿಷ್ಠೆ ತೋರಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ. ಸಿಪಾಯಿಗಳು ಮಾಡಿದಂತಹ ಲೂಟಿ, ದರೋಡೆ ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು.
ಕೊಟ್ಟಿರುವ ಎಲ್ಲವೂ
1857ರ ದಂಗೆಯ ಪರಿಣಾಮಗಳನ್ನು ಸೂಕ್ತವಾಗಿ ಗುರುತಿಸಿ
ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಬ್ರಿಟನ್ ಸಾಮ್ರಾಜ್ಞಿಗೆ ಆಡಳಿತವು ವರ್ಗಾವಣೆಗೊಂಡಿತು.
ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ
ಕಾರ್ಯದರ್ಶಿಗೆ ಒಪ್ಪಿಸಲಾಯಿತು.
1858ರಲ್ಲಿ ಬ್ರಿಟನ್ ರಾಣಿಯು ಒಂದು ಘೋಷಣೆ ಹೊರಡಿಸಿದರು.
ಭಾರತೀಯರ ಪ್ರೀತಿ, ಬೆಂಬಲ, ವಿಶ್ವಾಸವಿಲ್ಲದಿದ್ದರೆ ನಾವು ಶಾಂತಿಯಿಂದ ಆಳ್ವಿಕೆ ಮಾಡಲು ಸಾಧ್ಯವಿಲ್ಲವೆಂಬುದನ್ನು ಬ್ರಿಟಿಷರು ಅರಿತರುಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಒಳಗೊಳ್ಳುವ‘ ನೀತಿಯನ್ನು ಜಾರಿಗೊಳಿಸಿದರು.
ಕೊಟ್ಟಿರುವ ಎಲ್ಲವೂ 1857ರ ದಂಗೆಯ ಪರಿಣಾಮಗಳು
1858ರಲ್ಲಿ ಬ್ರಿಟನ್ ರಾಣಿಯು ಹೊರಡಿಸಿದ ಘೋಷಣೆಯಲ್ಲಿ ಈ ಕೆಳಗಿನ ಯಾವ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು?.
ಕಂಪನಿಯು ದೇಶೀ ರಾಜರೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಅಂಗೀಕರಿಸಲಾಯಿತು. ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು.
ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು. ಕಾನೂನಿನ ಮುಂದೆ ಸಮಾನತೆ.
ಧಾರ್ಮಿಕ ಸಹಿಷ್ಣುತೆಯೊಂದಿಗೆ ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ
ಕೊಟ್ಟಿರುವ ಎಲ್ಲವೂ
