wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ ಸರಣಿ-1 ಶ್ರೀ ಶರಣಬಸಪ್ಪ ಸಹ ಶಿಕ್ಷಕರು

Total questions: 20

Worksheet time: 3mins

Name
Class
Date
1.

ಭಾರತ ಮತ್ತು ಯುರೋಪಿನ ನಡುವೆ ಪ್ರಾಚೀನ ಕಾಲದಿಂದಲೂ ಪ್ರಮುಖವಾಗಿ ವಾಣಿಜ್ಯ ಸಂಬಂಧಗಳು ಈ ವಿಷಯಕ್ಕೆ ಸಂಬಂಧಪಟ್ಟಿದ್ದವು

a)

ಸಾಂಬಾರ ಪದಾರ್ಥಗಳು

b)

ರೇಷ್ಮೆ

c)

ಪಿಂಗಾಣಿ

d)

ವಜ್ರ

2.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ____ಆಗಿತ್ತು

a)

ವ್ಯಾಟಿಕನ್ ಸಿಟಿ

b)

ಪ್ಯಾರಿಸ್

c)

ಕಾನ್ ಸ್ಟಂಟಿನೋಪಲ್

d)

ಬರ್ಲಿನ್

3.

ಏಷ್ಯಾದ ಸರಕುಗಳನ್ನು ಕಾನ್ ಸ್ಟಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದವರು

a)

ಇಟಲಿಯನ್ನರು

b)

ಅರಬ್ಬರು

c)

ಪೋರ್ಚುಗೀಸರು

d)

ಬ್ರಿಟಿಷರು

4.

ಯುರೋಪಿನ ದೇಶಗಳ ವ್ಯಾಪಾರದ ಮೇಲೆ _______ವರ್ತಕರು ಏಕಸ್ವಾಮ್ಯ ಸಾಧಿಸಿದರು

a)

ಪೋರ್ಚುಗೀಸರು

b)

ಅರಬ್ಬರು

c)

ಫ್ರೆಂಚರು

d)

ಇಟಾಲಿಯನ್ನರು

5.

ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದೆ ಕಾನ್ ಸ್ಟಾಂಟಿನೋಪಲ್ ನಗರವು ಪರಿಗಣಿಸಲ್ಪಟ್ಟಿತು ಏಕೆಂದರೆ___

a)

ಏಷ್ಯಾ ಮತ್ತು ಯುರೋಪ್ ನಡುವಿನ ಅಂತಾರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿತ್ತು

b)

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು

c)

ಆಟೊಮನ್ ಟರ್ಕರು ಕಾನ್ ಸ್ಟಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ

d)

ಯಾವುದೂ ಅಲ್ಲ

6.

ಏಷ್ಯಾ ಮತ್ತು ಯುರೋಪ್ ನಡುವಣ ವ್ಯಾಪಾರ ವ್ಯವಹಾರಗಳು _____ ನಗರದ ಮೂಲಕ ನಡೆಯುತ್ತಿದ್ದವು

a)

ಪ್ಯಾರಿಸ್

b)

ವ್ಯಾಟಿಕನ್ ಸಿಟಿ

c)

ಕಾನ್ ಸ್ಟಂಟಿನೋಪಲ್

d)

ಅಥೆನ್ಸ್

7.

ಸಾ.ಶ.1453ರ ನಂತರ ಕಾನ್ ಸ್ಟಾಂಟಿ ನೋಪಲ್ ನಗರ ಮಾರ್ಗದ ವ್ಯಾಪಾರವು ಯುರೋಪಿನ ವರ್ತಕರಿಗೆ ಲಾಭದಾಯಕವಾಗಿ ಪರಿಣಮಿಸಲಿಲ್ಲ. ಏಕೆಂದರೆ___

a)

ಟರ್ಕರು ಭೂ ಮಾರ್ಗದ ಮೇಲಿನ ತೀವ್ರತರದ ತೆರಿಗೆಗಳನ್ನು ವಿಧಿಸ ತೊಡಗಿದರು

b)

ಯುರೋಪ್ ಮತ್ತು ಏಷ್ಯಾ ಖಂಡದ ವ್ಯಾಪಾರ ನಡುವಿನ ಸಂಬಂಧವು ಅಳಿಸಿಹೋಗಿತ್ತು

c)

ಯುರೋಪಿನ ವರ್ತಕರಿಗೆ ಪರ್ಯಾಯ ವ್ಯಾಪಾರದ ಅನುಕೂಲವಿತ್ತು.

d)

ಯಾವುದೂ ಅಲ್ಲ

8.

ಇಟಲಿಯ ವರ್ತಕರ ವ್ಯಾಪಾರದ ಏಕ ಸ್ವಾಮ್ಯವನ್ನು ಮುರಿಯಲು ಸ್ಪೇನ್ ಪೋರ್ಚುಗಲ್ ದೇಶಗಳು ಕೈಗೊಂಡ ಕ್ರಮವೇನೆಂದರೆ __

a)

ಪರ್ಯಾಯ ಭೂಮಾರ್ಗ ಪ್ರೋತ್ಸಾಹ ನೀಡಿದರು

b)

ಹೊಸ ಸಮುದ್ರಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು

c)

ಅರಬ್ಬರೊಂದಿಗೆ ಒಪ್ಪಂದ ಮಾಡಿಕೊಂಡರು

d)

ಯಾವುದೂ ಅಲ್ಲ

9.

ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ , ಆಸ್ಟ್ರೊಲೋಬ್ ,ಸಿಡಿಮದ್ದು ಮೊದಲಾದವುಗಳು ___ ನೆರವಿಗೆ ಬಂದವು

a)

ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯಲು

b)

ಭಾರತ ದೊಂದಿಗೆ ಯುರೋಪಿಯನ್ನರು ಹೊಂದಿದ್ದ ವ್ಯಾಪಾರ ಸಂಬಂಧ ಮುಂದುವರಿಯಲು

c)

ಪೂರ್ವ ದೇಶಗಳೊಡನೆ ವ್ಯಾಪಾರದ ಲಾಭವನ್ನು ಪಡೆಯಲು

d)

ಈ ಮೇಲಿನ ಎಲ್ಲವೂ

10.

ಭಾರತ ಮತ್ತು ಯುರೋಪಿನ ನಡುವೆ ಮರು ವ್ಯಾಪರ ಸಂಬಂಧವನ್ನು ಬೆಳೆಸಿದ ಮೊದಲ ಯುರೋಪಿನ ರಾಷ್ಟ್ರ ____

a)

ಡಚ್ಚರು

b)

ಫ್ರೆಂಚರು

c)

ಪೋರ್ಚುಗೀಸರು

d)

ಬ್ರಿಟಿಷರು

11.

ಭಾರತಕ್ಕೆ ಹೊಸ ಜಲಮಾರ್ಗವನ್ನು 1453 ರಲ್ಲಿ ಕಂಡು ಹಿಡಿದ ವಾಸ್ಕೋಡಿಗಾಮನು _____ದೇಶದ ವನಾಗಿದ್ದಾನೆ .

a)

ಇಂಗ್ಲೆಂಡ್

b)

ಪೋರ್ಚುಗಲ್

c)

ಫ್ರೆಂಚ್

d)

ಡಚ್ಚ್

12.

ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಬಂದ ಮೊಟ್ಟ ಮೊದಲ ಹಾಗೂ ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ____

a)

ಇಂಗ್ಲಿಷರು

b)

ಫ್ರೆಂಚರು

c)

ಪೋರ್ಚುಗೀಸರು

d)

ಡಚ್ಚರು

13.

ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧಿ ಪಡೆದವನು

a)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

ಡೂಪ್ಲೆ

c)

ರಾಬರ್ಟ್ ಕ್ಲೈವ್

d)

ಆಲ್ಫೋನ್ಸೋ ಅಲ್ಬುಕರ್ಕ್

14.

ಭಾರತದಲ್ಲೇ ಪೋರ್ಚುಗೀಸರು ____ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು

a)

ಪುದುಚೆರಿ

b)

ಗೋವಾ

c)

ಕಲ್ಕತ್ತಾ

d)

ಮದ್ರಾಸ್

15.

ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಲು ಕಾರಣ

a)

ಜಲಮಾರ್ಗವನ್ನು ಕಂಡುಹಿಡಿಯುವ ಉದ್ದೇಶದಿಂದ

b)

ವಸಾಹತು ರಾಷ್ಟ್ರವನ್ನಾಗಿ ಪರಿವರ್ತಿಸಿಕೊಳ್ಳಲು

c)

ಪೂರ್ವದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ

d)

ಯಾವುದೂ ಅಲ್ಲ

16.

ಡಚ್ಚರು ವ್ಯಾಪಾರ ಮಾಡುವ ಉದ್ದೇಶದಿಂದ ಸ್ಥಾಪಿಸಿದ ಕಂಪನಿ __ಆಗಿದೆ

a)

ಫ್ರೆಂಚ್ ಈಸ್ಟ್ ಇಂಡಿಯಾ ಈಸ್ಟ್ ಇಂಡಿಯಾ ಕಂಪನಿ

b)

ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ

c)

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ

d)

ಪೋರ್ಚುಗಲ್ ಈಸ್ಟ್ ಇಂಡಿಯ ಕಂಪನಿ

17.

ಡಚ್ಚರ ವ್ಯಾಪಾರ ಕೇಂದ್ರಗಳಲ್ಲಿ ಇದು ಹೊರತಾಗಿದೆ

a)

ಸೂರತ್

b)

ಬ್ರೋಚ್

c)

ಮಚಲಿಪಟ್ಟಣ

d)

ಮದ್ರಾಸ್

18.

ಭಾರತದಲ್ಲಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು

a)

ಇಂಗ್ಲಿಷರು

b)

ಫ್ರೆಂಚರು

c)

ಡಚ್ಚರು

d)

ರೋಮನ್ನರು

19.

ಡಚ್ಚರು ಸಾಂಬಾರು ದ್ವೀಪಗಳಿಗೆ ಮಾತ್ರ ಸೀಮಿತಗೊಂಡರು ಏಕೆಂದರೆ

a)

ಇಂಗ್ಲಿಷರು ಮತ್ತು ಫ್ರೆಂಚರು ಪೈಪೋಟಿಯನ್ನು ಹೆದರಿಸಲಾರದೆ

b)

ಇಂಗ್ಲಿಷರು ಮತ್ತು ಪೋರ್ಚುಗೀಸರ ಪೈಪೋಟಿಯನ್ನು ಹೆದರಿಸಲಾರದೆ

c)

ಪೋರ್ಚುಗೀಸರ ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾರದೆ

d)

ಭಾರತದೊಂದಿಗೆ ವ್ಯಾಪಾರ

ನಷ್ಟವಾದುದರಿಂದ

20.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯು___ ರಲ್ಲಿ

ಔಪಚಾರಿಕವಾಗಿ ವ್ಯಾಪಾರವನ್ನು ಆರಂಭಿಸಿತು

a)

1614

b)

1615

c)

1613

d)

1616