Worksheetsಗದ್ಯಭಾಗದ 3/4 ವಾಕ್ಯಗಳ ರಸಪ್ರಶ್ನೆ
Total questions: 25
Worksheet time: 40mins
ವಿಮಾನದ ಪೈಲೆಟ್ ರಾಹಿಲನಿಗೆ ಏನು ಹೇಳಿದನು?
1. ಇದು ನಮ್ಮ ಪ್ರದೇಶವೇ? ವೈರಿಗಳ ಪ್ರದೇಶವೆಂದು ಕೂಡ ಗೊತ್ತಾಗ್ತಾ ಇಲ್ಲ
2. ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ . ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ
3. ಎಲ್ಲಾದರೂ ಹೇಗಾದರೂ ಇಳಿಯೋಣ ವೆಂದರೆ ಈ ಕತ್ತಲೆಯಲ್ಲಿ ಏನು ಕಾಣಿಸ್ತಾ ಇಲ್ಲವಲ್ಲ.
1 , 2 ಸರಿ 3 ತಪ್ಪು
1 ತಪ್ಪು 2 ,3 ಸರಿ
ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆ ಗಳೇನು?
1. ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ?
2. ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು. ಇಂತಹ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ?
3. ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ? ಅವಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆಯೇ?
1,2 ಸರಿ 3 ತಪ್ಪು
2,3 ಸರಿ 1 ತಪ್ಪು
ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
1. ಇಷ್ಟು ವರ್ಷಗಳಿಂದಲೂ ಹಂಬಲಿಸಿದ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲ
2. ಈ ಯುದ್ಧವಿಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವೆಲ್ಲ ದೇವರೇ?
3. ಈ ಮನುಷ್ಯರಿಗೆ ಎಂಥ ಬುದ್ಧಿ ಕೊಡುತ್ತೀಯಾ?
1,2, ಮತ್ತು 3 ಸರಿ
1, 2 ಸರಿ, 3 ಮಾತ್ರ ತಪ್ಪು
ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳ ಸರಿಯಾದ ಕ್ರಮ ತಿಳಿಸಿ.
1. ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ. ಯುದ್ಧವಂತೆ ಯುದ್ಧ
2. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು. ಜಮೀನು ಆಸ್ತಿ ನಮಗೆ ಸಾಕಾಗುವಷ್ಟು ಇತ್ತು . ಈಗಲೂ ಇದೆಯೆನ್ನು
3.ನೋಡಪ್ಪ ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ
1,2 ಮತ್ತು 3 ಸರಿಯಾದ ಕ್ರಮ
3, 2 ಮತ್ತು 1 ಸರಿಯಾದ ಕ್ರಮ
ಸೈನಿಕರು ವೈರಿಗಾಗಿ ಹುಡುಕುತ್ತಾ ಒಳ ಪ್ರವೇಶಿಸಿದಾಗ ಮುದುಕಿ ಅಳುತ್ತಾ ಏನು ಹೇಳಿದಳು?
1. ಯುದ್ದಕ್ಕೆ ಹೋಗಿದ್ದಾನೆ. ನನ್ನ ಮಗನಿನ್ನೂ ಚಿಕ್ಕ ಹುಡುಗನಾಗಿದ್ದಾಗ ಯುದ್ಧಕ್ಕೆ ಹೋದ ಅವನ ತಂದೆ ಹಿಂತಿರುಗಲಿಲ್ಲ. ಎದೆ ತುಂಬಾ ಬೂದಿ ಮುಚ್ಚಿದ ಕೆಂಡ ಎದೆಯ ಗಾಯ ಎಂದಿಗೂ ಇದೆ ನೋಡಿ
ಹ್ಞೂಂ.. ನೋಡಿ; ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ ; ಅದನ್ನು ನೋಡಿ! ಈ ಯುದ್ಧ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ? ಯಾರಿಗಾಗಿ, ಯಾತಕ್ಕಾಗಿ ಈ ಯುದ್ಧ? ಅದನ್ನಾದರೂ ಹೇಳಿರಲ್ಲ.
ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು. ಅಷ್ಟರಲ್ಲಿ ಬಂತು ಈ ಯುದ್ಧ.
ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
1. ದೊರೆವಳೇ ಸೀತೆ! ಭೂಮಿಜಾತೆ ಆತ್ಮ ಕಾಮಕಲ್ಪಲತೆ! ಅವಳ ನೆನಪಿನ ಸೆಳೆತಕ್ಕೆ ಎನ್ನಾತ್ಮ ಸಿಲ್ಕೆ
2.ದೊರೆವಳೇ ಸೀತೆ! ಭೂಮಿಜಾತೆ ಆತ್ಮ ಕಾಮಕಲ್ಪಲತೆ ದೊರೆವಳೆ ಚೆಲುವೆ! ಎರೆವೆ ಎರವೆ ಗಿರಿವನವೇ, ಪೇಳಿರಿ ನಾನೆರೆವೆ ದೊರೆವಳೇ ? ದೊರೆವಳೇ?
3. ಅವಳ ನೆಲೆ ಯಾರು ಅರಿಯಿರೇ, ಪೇಳಿ ಎನ್ನರಸಿ ದೊರೆಯಳೇ?
1, 2 ಸರಿ 3 ತಪ್ಪು
1 ತಪ್ಪು , 2, 3 ಸರಿ
ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ತಾಳಿಕೋ ಅಣ್ಣ ತಾಳಿಕೋ! ಸೂರ್ಯನೇ ತೇಜಗೆಡೆ ತೇಜಕೆಡೆ ಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು?
ತಾಳಿಕೋ ಅಣ್ಣ ತಾಳಿಕೋ! ಚಂದ್ರನೇ ತೇಜಗೆಡೆ ತೇಜಕೆಡೆ ಯಾರು? ನಾವೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು?
ತಾಳಿಕೋ ಅಣ್ಣ ತಾಳಿಕೋ! ಸೂರ್ಯ ಉದಯಿಸಿದ ಮೇಲೆ ಅತ್ತಿಗೆ ಹುಡುಕೋಣ? ನೀನು ದುಃಖಿಸಬೇಡ, ನಾನಿರುವೆ
ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ಸವಿಯಾದ ಬಗೆ ಬಗೆಯ ಕಾಯಿಗಳು, ತಂಪಾದ ನೀರು, ಹಾಲು, ಮಜ್ಜಿಗೆ ಬೆಣ್ಣಿ, ಶರಬತ್ತು , ವನಮಾಲೆಗಳನ್ನು ಸಿದ್ಧ ಮಾಡಿಕೊಂಡಿದ್ದಳು.
ಸವಿಯಾದ ಬಗೆ ಬಗೆಯ ಹಣ್ಣುಗಳು ,ಜೇನುತುಪ್ಪ ಮಧುಪರ್ಕ ಸುವಾಸನೆಯಿಂದ ಕೂಡಿದ ಹೂಗಳು ಮತ್ತು ವನಮಾಲೆಗಳನ್ನು ಸಿದ್ಧ ಮಾಡಿಕೊಂಡಿದ್ದಳು
ಸವಿಯಾದ ತಿಂಡಿ ತಿನಿಸುಗಳು, ಜೇನುತುಪ್ಪ ,ಮಜ್ಜಿಗೆ, ಅಲಂಕಾರಿಕ ಹೂವುಗಳು, ಬೆಲ್ಲದ ಪಾನಕ ಸಿದ್ಧ ಮಾಡಿಕೊಂಡಿದ್ದಳು
ರಾಮಲಕ್ಷ್ಮಣರು ಆತಿಥ್ಯ ಸ್ವೀಕರಿಸಿದ ನಂತರ ಶಬರಿಗೆ ಏನು ಹೇಳಿದರು?
ನಿನ್ನ ಉಪಚಾರದಿಂದ ನನಗೆ ಸಂತೋಷವಾಗಿದೆ. ಇನ್ನು ನಮ್ಮ ಹಸಿವು ಬಾಯಾರಿಕೆ ತಣಿದಿಲ್ಲ. ಇನ್ನೂ ಹೆಚ್ಚು ಉಪಚಾರ ಬಯಸಿದ್ದೆವು
ನಿಮ್ಮ ಆತಿಥ್ಯ ತುಂಬಾ ಚೆನ್ನಾಗಿದೆ. ನೀನು ಮಾಡಿದ ಪಾನಕ ರುಚಿಕರವಾಗಿತ್ತು ನಿಮ್ಮನ್ನು ನಾವು ಮಮತೆಯಿಂದ ಕಂಡೆವು
ಕಣ್ಣ ನೀರಿದೇಕೆ ತಾಯೆ ತುಸುವೂಣೆಯವಿಲ್ಲ, ನಮ್ಮ ಅರಮನೆಯೊಳು ಇದಕ್ಕೂ ಲೇಸು ಸಲ್ಲ. ಇಂದು ಈ ಕಾಡನ್ನು ಮರೆತೆವು ಇಲ್ಲೇ ಮನೆಯನ್ನು ಅರಿತೆವು . ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದು ತಿಳಿದೆವು.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?
1. ಸ್ಥಳೀಯ ಸಂಸ್ಥೆಗಳನ್ನು ರಚಸಿ ಆಡಳಿತ ವಿಕೇಂದ್ರೀಕರಣ ಅನುವು ಮಾಡಿಕೊಟ್ಟರು. ನಗರಪಾಲಿಕೆಗಳು ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸಲು ಆರಂಭವಾದವು. ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ,ನೀರಿನ ಸೌಕರ್ಯ , ಪ್ರಯಾಣ ಸೌಲಭ್ಯ ಸ್ವಯಂ ಆಡಳಿತ ಕ್ಷೇತ್ರಗಳಾದವು
1. ದೇಶಿಯ ಸಂಸ್ಥೆಗಳನ್ನು ರಚಸಿ ಆಡಳಿತ ಏಕೀಕರಣಕ್ಕೆ ಅನುವು ಮಾಡಿಕೊಟ್ಟರು. ಗ್ರಾಮ ನ್ಯಾಯಾಲಯ ಕಾರ್ಯನಿರ್ವಹಿಸಲು ಆರಂಭವಾದವು. ಕೈಗಾರಿಕೆ, ಮೀನುಗಾರಿಕೆ, ಕೃಷಿ ಇಲಾಖೆ, ನೀರಿನ ಸೌಕರ್ಯ , ಪ್ರಯಾಣ ಸೌಲಭ್ಯ ಸ್ವಯಂ ಆಡಳಿತ ಕ್ಷೇತ್ರಗಳಾದವು
1. ಸ್ಥಳೀಯ ಸಂಸ್ಥೆಗಳನ್ನು ರಚಸಿ ಆಡಳಿತ ಕೇಂದ್ರೀಕರಣ ಮಾಡಿಕೊಟ್ಟರು. ನಗರಪಾಲಿಕೆಗಳು ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸಲು ಆರಂಭವಾದವು. ಪಶುಸಂಗೋಪನೆ, ಮೀನುಗಾರಿಕೆ, ಹೈನುಗಾರಿಕೆ,ನೀರಿನ ಸೌಕರ್ಯ , ಗಣಿಗಾರಿಕೆ ಸ್ವಯಂ ಆಡಳಿತ ಕ್ಷೇತ್ರಗಳಾದವು
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
1.ಶಿವನಸಮುದ್ರದ ಬಳಿ ಕಾವೇರಿ ನದಿ ಕಣಿವೆ 1900 ರಲ್ಲಿ ಪ್ರಾರಂಭವಾಯಿತು
2. ಕ್ರಿ.ಶ. 1907 ರಲ್ಲಿ ಮಾರಿ ಕಣಿವೆಯಲ್ಲಿ ವಾಣಿವಿಲಾಸ ಸಾಗರ ಅಣೆಕಟ್ಟು ಕಟ್ಟಲಾಯಿತು
3. ಕ್ರಿ.ಶ.1911ರಲ್ಲಿ ಕಾವೇರಿ ನದಿಗೆ ಕನ್ನಂಬಾಡಿಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಲಾಯಿತು
2 ಮತ್ತು 3 ಮಾತ್ರ ಸರಿ
1,2 ಮತ್ತು 3 ಸರಿ
ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯನವರು ಎಂದು ಹೇಳಿದ್ದಾರೆ?
ಸಾಂಪ್ರದಾಯಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳು ಪರಮೋಚ್ಛ ಪರಿಹಾರ ಅದನ್ನು ಎಲ್ಲರೂ ಪಡೆಯಲೇಬೇಕು. ಅದು ಕೆಲವು ಜನರ ಜನ್ಮಸಿದ್ಧ ಹಕ್ಕಾಗಬೇಕು
ತಾಂತ್ರಿಕ ಶಿಕ್ಷಣವೇ ಎಲ್ಲಾ ಶಿಕ್ಷಣಕ್ಕಿಂತ ಶ್ರೇಷ್ಠ ಎಲ್ಲರೂ ಶಿಕ್ಷಣವಂತರು ಆಗುವುದು ಜನ್ಮ ಸಿದ್ಧ ಹಕ್ಕು ಆಗಿದೆ
ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ. ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು ಅದು ಕೆಲವೇ ಜನರ ಸ್ವತ್ತಾಗದೇ ಪ್ರಗತಿಪರ ರಾಜ್ಯದಲ್ಲಿ ಆ ಜನ್ಮಸಿದ್ಧ ಹಕ್ಕಾಗಬೇಕು
ನೆಹರೂರವರು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮಶತಮಾನೋತ್ಸವದಲ್ಲಿ ಏನೆಂದು ಹೇಳಿದ್ದಾರೆ?
ದುರದೃಷ್ಟವಶಾತ್ ಭಾರತೀಯರಾದ ನಾವು ಕಡಿಮೆ ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರರು ಎಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಹೆಚ್ಚು ಮಾತನಾಡಿದ್ದೀರಿ; ಕಡಿಮೆ ಕೆಲಸ ಮಾಡಿದ್ದೀರಿ. ಅದನ್ನು ನೀವು ನಮ್ಮಿಂದ ಕಲಿಯೋಣ.
ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರರು ಎಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಕೆಲಸ ಮಾಡಿದ್ದೀರಿ. ಅದನ್ನು ನಾವು ನಿಮ್ಮಿಂದ ಕಲಿಯೋಣ.
ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳು ಯಾವುವು?
ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರಬುನಾದಿ ಹಾಕುವ ಉದ್ದೇಶದಿಂದ 1913ರಲ್ಲಿ ಮೈಸೂರು ಬ್ಯಾಂಕ್ ಸ್ಥಾಪಿಸಿದರು. ಉಳಿತಾಯ ಬ್ಯಾಂಕುಗಳು ,ಕೈಗಾರಿಕಾ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ,ಅಭಿವೃದ್ಧಿ ನಿಧಿ ರಚನೆ, ರೈತರು ಕರಕುಶಲಕಾರರ ಸಾಲಸೌಲಭ್ಯಕ್ಕಾಗಿ ಪ್ರಾಂತೀಯ ಸಹಕಾರಿ ಕ್ಷೇತ್ರ ಬಲವರ್ಧನೆ, ರಾಜ್ಯದ ಆಸ್ತಿ ಹೆಚ್ಚಿಸಿ ಅಭಿವೃದ್ಧಿ ಕಾರ್ಯಗಳ ಪ್ರಭಾವ ಅಳೆಯಲು ಅನುಕೂಲವಾಗಲು ಆಯವ್ಯಯದಲ್ಲಿ ಹೊಸ ದೃಷ್ಟಿಕೋನ ಕಂಡುಕೊಂಡರು
ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರಬುನಾದಿ ಹಾಕುವ ಉದ್ದೇಶದಿಂದ 1913ರಲ್ಲಿ ಕೆನರಾ ಬ್ಯಾಂಕ್ ಸ್ಥಾಪಿಸಿದರು. ಜೀವ ವಿಮೆ ಬ್ಯಾಂಕ್ ,ಕೈಗಾರಿಕಾ ಅಭಿವೃದ್ಧಿಗೆ ಎಕ್ಸಿಸ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆಗಾಗಿ ಕಮರ್ಷಿಯಲ್ ಬ್ಯಾಂಕ್ ಕರಕುಶಲಕಾರರ ಸಾಲಸೌಲಭ್ಯಕ್ಕಾಗಿ ಪ್ರಾಂತೀಯ ಸಹಕಾರಿ ಕ್ಷೇತ್ರ ಬಲವರ್ಧನೆ, ರಾಜ್ಯದ ಆಸ್ತಿ ಹೆಚ್ಚಿಸಿ ಎಲ್ಲ ವಲಯಗಳಿಗೆ ಸಾಲ ನೀಡಲು ಯೋಜನೆ ರೂಪಿಸಿದರು
ವಚನಕಾರರ ದೃಷ್ಟಿಯಲ್ಲಿ ಅವರು ಎಂದರೆ ಏನು? ವಿವರಿಸಿ
1. ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ. ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು.
2. ಕ್ರಿಯೆಯಲ್ಲಿ ಮೂಡಿದ ಜ್ಞಾನ. ಅದು ಮಾತ್ರ ಕರ್ತವ್ಯ. ನಡೆಯಿಂದ ನುಡಿ ಹುಟ್ಟಿದರೆ ಅದು ಜ್ಞಾನವಾಗುತ್ತದೆ
3. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ. ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು
1, 2 ಸರಿ
1. 3 ಸರಿ
ಅಶೋಕ್ ಪೈ ಅವರು ಹೇಳಿದ ಸಂಶೋಧನಾ ಸತ್ಯವೇನು?
ಕೆಲವರು ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ಕೊಲೆ ದೃಶ್ಯವನ್ನು ನೋಡುತ್ತಿರುತ್ತಾರೆ. ಇನ್ನೊಂದು ಕೊಠಡಿಯಲ್ಲಿ ಇದರ ಅರಿವಿಲ್ಲದೆ ತಮ್ಮಷ್ಟಕ್ಕೆ ತಾವಿರುವ ಜನರಿಗೂ ಇದು ಅರಿವಾಗುವುದಿಲ್ಲ. ಇದೇ ರೀತಿ ಕೊಠಡಿಯಲ್ಲಿ ನೃತ್ಯ ದೃಶ್ಯ ನೋಡುತ್ತಿರುವವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದೆ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರದೆ ಸ್ವಲ್ಪಮಟ್ಟಿಗೆ ದುಃಖ ಭಾವನೆ ಉಂಟಾಗುತ್ತದೆ
ಕೆಲವರು ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ಕೊಲೆ ದೃಶ್ಯವನ್ನು ನೋಡುತ್ತಿರುತ್ತಾರೆ. ಇನ್ನೊಂದು ಕೊಠಡಿಯಲ್ಲಿ ಇದರ ಅರಿವಿಲ್ಲದೆ ತಮ್ಮಷ್ಟಕ್ಕೆ ತಾವಿರುವ ಜನರಿಗೂ ಸ್ವಲ್ಪಮಟ್ಟಿಗೆ ದುಗುಡವಾಗುತ್ತದೆ. ಇದೇ ರೀತಿ ಕೊಠಡಿಯಲ್ಲಿ ನೃತ್ಯ ದೃಶ್ಯ ನೋಡುತ್ತಿರುವವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದೆ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸ್ವಲ್ಪಮಟ್ಟಿಗೆ ಸಂತೋಷದ ಭಾವನೆ ಉಂಟಾಗುತ್ತದೆ
ಮದಲಿಂಗನಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?
ಅವರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನಕಣಿವೆಯನ್ನು ದಾಟಿ ನಡೆಯಬೇಕು . ಕಾಡುದಾರಿ, ಹೆಚ್ಚಾಗಿ ಕಾಡುಮೃಗಗಳು ಓಡಾಡುವ ದಾರಿ , ಅಮಾವಾಸ್ಯೆ ದಿನವಾಗಿದ್ದರಿಂದ ಕತ್ತಲಾಗಿತ್ತು , ಸ್ವಲ್ಪ ನಿಧಾನವಾಗಿ ಯೂ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು
ಅವರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನಕಣಿವೆಯನ್ನು ದಾಟಿ ನಡೆಯಬೇಕು . ಕಾಡುದಾರಿ, ಆದರೂ ಬೆಳದಿಂಗಳ ದಿನ , ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು
ಹುಲಿ ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?
ಯಾವುದೇ ಪ್ರಾಣಿ ಹುಲಿಗೆ ಎದುರಾಗಿರದೇ ಅದರ ಕಡೆ ಮುಖಮಾಡಿ ನಡೆಯುತ್ತಿದ್ದರೆ ಯಾರನ್ನೇ ಆಗಲಿ ಭರತಖಂಡದ ಹುಲಿಗಳು ಎದುರಿನಿಂದ ಹಾರಿ ಕೊಲ್ಲುವುದಿಲ್ಲ . ಶತ್ರುವನ್ನು ಆದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮ.
ಯಾವುದೇ ಪ್ರಾಣಿ ಹುಲಿಗೆ ಅಭಿಮುಖವಾಗಿರದೇ ಅದರ ಕಡೆ ಬೆನ್ನು ತಿರುಗಿಸಿ ನಡೆಯುತ್ತಿದ್ದರೆ ಯಾರನ್ನೇ ಆಗಲಿ ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ . ಶತ್ರುವನ್ನು ಆದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವಷ್ಟೆ.
ಯಾವ ನಾಡಿನಲ್ಲಿ ಶ್ರೀರಾಮನಂತ ದೊರೆಗಳು ಆಳಿದರೋ ಅಂಥ ಭರತಭೂಮಿಯಲ್ಲಿ ಹುಲಿಗಳಾದರೂ ಅಧರ್ಮಕ್ಕೆ ಎಡೆ ಕೊಡುವುದಿಲ್ಲ
ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯಿತ್ತನು?
ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ. ಆ ಕಾರಣದಿಂದ ನಿನಗೂ ನನಗೂ ಸಮಾನವಾಗಿ ಹಂಚಿಕೊಳ್ಳೋಣ.
ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ. ಆ ಕಾರಣದಿಂದ ನಿನಗೂ ನನಗೂ ಖರ್ಚಿಗೆ ಹೊನ್ನು ತೆಗೆದುಕೊಳ್ಳದೇ ಎಲ್ಲಾ ಹೊನ್ನು ಇಲ್ಲಿಯೇ ಹೂತು ಬಿಡೋಣ
ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ. ಆ ಕಾರಣದಿಂದ ನಿನಗೂ ನನಗೂ ಖರ್ಚಿಗೆ ಹೊನ್ನು ತೆಗೆದುಕೊಂಡು ಉಳಿದದ್ದನೆಲ್ಲಾ ಇಲ್ಲಿ ಹೂತು ಬಿಡೋಣ
ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು?
ನಿನ್ನ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾಗದೆ ಹಲವು ಕಾಲ ಹಸಿದು ಊಟ ಮಾಡಿ ಬಾಳುವಂತಹ ಸಾಧನೆಯನ್ನು ಮಾಡಬಹುದು. ನೀನು ಆ ಮರದ ಪೊಟರೆಯಲ್ಲಿ ಅಡಗಿದ್ದು ದುಷ್ಟ ಬುದ್ಧಿಯೇ ಹೊನ್ನು ಅಪಹರಿಸಿದನೆಂದು ಹೇಳು
ನಿನ್ನ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾಗಿ ಹಲವು ಕಾಲ ಹಸಿಯದೆ ಊಟ ಮಾಡಿ ಬಾಳುವಂತಹ ಸಾಧನೆಯನ್ನು ಮಾಡಬಹುದು. ನಾನು ಆ ಮರದ ಪೊಟರೆಯಲ್ಲಿ ಅಡಗಿದ್ದು ಧರ್ಮ ಬುದ್ಧಿಯೇ ಹೊನ್ನು ತೆಗೆದುಕೊಂಡು ಹೋದನೆಂದು ಹೇಳುತ್ತೇನೆ.
ನಿನ್ನ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾಗಿ ಹಲವು ಕಾಲ ಹಸಿಯದೆ ಊಟ ಮಾಡಿ ಬಾಳುವಂತಹ ಸಾಧನೆಯನ್ನು ಮಾಡಬಹುದು. ನೀನು ಆ ಮರದ ಪೊಟರೆಯಲ್ಲಿ ಅಡಗಿದ್ದು ಧರ್ಮ ಬುದ್ಧಿಯೇ ಹೊನ್ನು ತೆಗೆದುಕೊಂಡು ಹೋದನೆಂದು ಹೇಳು
ಧರ್ಮಧಿಕರಣದವರು ವಟವೃಕ್ಷಕ್ಕೆ ಏನು ಹೇಳಿದರು?
ನೀನಾದರೂ ಯಕ್ಷಾದಿ ದಿವ್ಯ ದೇವತೆಗಳು ವಾಸ ಮಾಡುವಂತಹ ಮತ್ತು ಅವರ ಸೇವೆಯನ್ನು ಪಡೆಯುವಂತಹ ಮರವಾದರೆ. ನಿನ್ನನ್ನು ಸಾಕ್ಷಿಮಾಡಿ ಕೇಳುತ್ತಿದ್ದೇವೆ ನೀನು ತಪ್ಪದೆ ಧರ್ಮಬುದ್ದಿ ಪರವಾಗಿ ನುಡಿ
ನೀನಾದರೂ ಯಕ್ಷಾದಿ ದಿವ್ಯ ದೇವತೆಗಳು ವಾಸ ಮಾಡುವಂತಹ ಮತ್ತು ಅವರ ಸೇವೆಯನ್ನು ಪಡೆಯುವಂತಹವನು. ನಿನ್ನನ್ನು ಸಾಕ್ಷಿಮಾಡಿ ಕೇಳುತ್ತಿದ್ದೇವೆ ನೀನು ತಪ್ಪದೆ ಸಾಕ್ಷಿಯನ್ನು ನುಡಿ
ನೀನಾದರೂ ಯಕ್ಷಾದಿ ದಿವ್ಯ ದೇವತೆಗಳು ವಾಸ ಮಾಡುವಂತಹ ಮತ್ತು ಅವರ ಸೇವೆಯನ್ನು ಪಡೆಯುವಂತಹ ಮರವಲ್ಲ. ನಿನ್ನನ್ನು ಸಾಕ್ಷಿಮಾಡಿ ಕೇಳುತ್ತಿದ್ದೇವೆ ನೀನು ತಪ್ಪದೆ ಸಾಕ್ಷಿಯನ್ನು ನುಡಿಯದಿರು
ಇಂದಲ್ಲ ನಾಳೆ ಫಲ ಕೊಡುವ ಅಂಶಗಳು ಯಾವುವು?
ಭೂಮಿಗೆ ಬಿದ್ದ ಗೊಬ್ಬರ, ಎದೆಗೆ ಬಿದ್ದ ನೀರು ಇಂದಲ್ಲ ನಾಳೆ ಫಲ ಕೊಡುವುದು
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅನ್ನ ಇಂದಲ್ಲ ನಾಳೆ ಫಲ ಕೊಡುವುದು
ವಿಶ್ವೇಶ್ವರಯ್ಯನವರು ಹೈದರಾಬಾದ್ ಪ್ರಾಂತ್ಯದಲ್ಲಿ ಸಲ್ಲಿಸಿದ ಸೇವೆಯೇನು?
ಹೈದರಾಬಾದ್ ನಗರಕ್ಕೆ ಈಸಿ ಮತ್ತು ಪಂಜ್ರಾ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸಿದ್ದು ಅದನ್ನು ತಡೆಯಲು ಎರಡು ನದಿಗಳಿಗೂ ಒಂದೇ ಜಲಾಶಯ ನಿರ್ಮಿಸುವುದರ ಮೂಲಕ ಸಮಸ್ಯೆಯನ್ನು ಪರಿಹರಿಸಿದರು
ಹೈದರಾಬಾದ್ ನಗರಕ್ಕೆ ಕೃಷ್ಣ ಮತ್ತು ಗೊಇದಾವರಿ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸಿದ್ದು ಅದನ್ನು ತಡೆಯಲು ಎರಡು ನದಿಗಳಿಗೂ ಒಂದೇ ಜಲಾಶಯ ನಿರ್ಮಿಸುವುದರ ಮೂಲಕ ಸಮಸ್ಯೆಯನ್ನು ಪರಿಹರಿಸಿದರು
ಹೈದರಾಬಾದ್ ನಗರಕ್ಕೆ ಈಸಿ ಮತ್ತು ಮೂಸಿ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸಿದ್ದು ಅದನ್ನು ತಡೆಯಲು ಎರಡು ನದಿಗಳಿಗೂ ಪ್ರತ್ಯೇಕ ಜಲಾಶಯ ನಿರ್ಮಿಸುವುದರ ಮೂಲಕ ಸಮಸ್ಯೆಯನ್ನು ಪರಿಹರಿಸಿದರು
ಈ ಕೆಳಗಿನವುಗಳಲ್ಲಿ ವಿಶ್ವೇಶ್ವರಯ್ಯನವರು ಬರೆದ ಕೃತಿಗಳು ಯಾವುದಲ್ಲ?
ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ
ಮೆಮೊರಿಸ ಆಫ್ ಮೈ ವರ್ಕಿಂಗ್ ಲೈಫ್
ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ
ರಿಕನ್ ಸ್ಟ್ರಕ್ಟಿಂಗ್ ಇಂಡಿಯ
ಇಂಡಿಯನ್ ಪ್ಲಾನಿಂಗ್
ಪ್ರೇಮ ಮತಿಯು ತನ್ನ ಮಗನಿಗೆ ಹೇಳಿದ ಬುದ್ಧಿವಾದವೇನು?
ಬೇರೆಯವರ ಹಣವನ್ನು ಕದಿಯುವುದು, ನಂಬಿಕೆದ್ರೋಹ , ಸ್ವಾಮಿದ್ರೋಹ ಮಾಡುವುದರಿಂದ ಇವೆಲ್ಲವೂ ನಮ್ಮ ಸಂಪತ್ತು ಹೆಚ್ಚಾಗುತ್ತದೆ ಇದು ತಿಳಿದಿದ್ದರಿಂದ ನೀನು ನನ್ನನ್ನು ಸಾಕ್ಷಿ ಮಾಡಲು ಬಯಸಿದೆ ನಿನ್ನ ಯೋಚನೆ ನಮ್ಮ ವಂಶವನ್ನು ಉಳಿಸುವ ರೀತಿಯದು
ಬೇರೆಯವರ ಹಣವನ್ನು ಕದಿಯುವುದು, ನಂಬಿಕೆದ್ರೋಹ , ಸ್ವಾಮಿದ್ರೋಹ ಮಾಡುವುದರಿಂದ ಇವೆಲ್ಲವೂ ನಾಶಮಾಡುವಂತಹವು ಇದು ತಿಳಿದಿದ್ದು ನೀನು ನನ್ನನ್ನು ಸಾಕ್ಷಿ ಮಾಡಿ ಕೆಡಿಸಲು ಬಯಸಿದೆ ನಿನ್ನ ಯೋಚನೆ ನಮ್ಮ ವಂಶವನ್ನು ನಾಶಮಾಡುವಂತಹ ರೀತಿಯದು
