wayground logo

Free Printable Worksheets

NEW

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

Total questions: 20

Worksheet time: 15mins

Name
Class
Date
1.

ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು

a)

ಬಕ್ಸಾರ್ ಕದನದ ಮೂಲಕ

b)

ಪ್ಲಾಸಿ ಕದನದ ಮೂಲಕ

c)

ಕರ್ನಾಟಿಕ್ ಯುದ್ಧಗಳ ಮೂಲಕ

d)

ಮೈಸೂರು ಯುದ್ಧಗಳ ಮೂಲಕ

2.

ಭಾರತದ ಪಶ್ಚಿಮ ಭಾಗದಲ್ಲಿ ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು

a)

ಹೈದರಾಲಿ

b)

ಮೊಘಲರು

c)

ಮರಾಠರು

d)

ಸಿಖ್ಖರು

3.

19ನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಯಶಸ್ವಿಯಾಗಿ ಸಂಘಟಿಸಿದವನು

a)

ವಿಜಯ್ ಸಿಂಗ್

b)

ರಾಜ ಹರಿಸಿಂಗ್

c)

ರಣಜಿತ್ ಸಿಂಗ್

d)

ರಾಣ ಪ್ರತಾಪಸಿಂಗ್

4.

ವಾಯುವ್ಯ ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲ ವಿರೋಧಿಗಳಾಗಿದ್ದವರು

a)

ಟರ್ಕರು

b)

ಮೊಘಲರು

c)

ಮಂಗೋಲಿಯನ್ನರು

d)

ಸಿಖ್ಖರು

5.

ಬ್ರಿಟಿಷರು ಭಾರತೀಯ ರಾಜ್ಯಗಳನ್ನು ಕಬಳಿಸಲು ಉಪಯೋಗಿಸಿದ ನೀತಿ

a)

ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

b)

ವಸಾಹತುಶಾಹಿ ನೀತಿ

c)

ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ

d)

ಒಡೆದು ಆಳುವ ನೀತಿ ಮತ್ತು ವಸಾಹತುಶಾಹಿ ನಿತಿ

6.

ಬಕ್ಸಾರ್ ಕದನದಲ್ಲಿ ಸೋತಿದ್ದ ಎರಡನೇ ಷಾ ಆಲಂನನ್ನು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದವರು

a)

ಟಿಪ್ಪು

b)

ರಣಜಿತ್ ಸಿಂಗ್

c)

ಮರಾಠರು

d)

ಬ್ರಿಟಿಷರು

7.

ನಾರಾಯಣರಾಯನ ನಂತರ ಮರಾಠ ಪೇಶ್ವೆಯಾಗಿ ಅಧಿಕಾರ ವಹಿಸಿಕೊಂಡವರು

a)

ರಘುನಾಥರಾವ್

b)

ನಾನಾ ಫಡ್ನವೀಸ್

c)

ಎರಡನೇ ಮಾಧವರಾವ್

d)

ಎರಡನೇ ಬಾಜಿರಾವ್

8.

ಮರಾಠರ ವಿರುದ್ಧವೇ ಬ್ರಿಟಿಷರ ಬೆಂಬಲ ಕೋರಿದ ಮರಾಠ ನಾಯಕ

a)

ಹೊಳ್ಕರ್

b)

ಯಶವಂತರಾವ್

c)

ಅಪ್ಪ ಸಾಹೇಬ

d)

ರಘೋಬ

9.

ಮೊದಲ ಆಂಗ್ಲೋ ಮರಾಠ ಯುದ್ಧವು ಈ ಒಪ್ಪಂದದ ಮೂಲಕ ಕೊನೆಗೊಂಡಿತ್ತು

a)

ಸಾಲ್ಬಾಯ್ ಒಪ್ಪಂದ

b)

ಪೂನಾ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಲಾಹೋರ್ ಒಪ್ಪಂದ

10.

ಎರಡನೇ ಆಂಗ್ಲೋ - ಮರಾಠ ಯುದ್ಧಕ್ಕೆ ಕಾರಣ

a)

ರಘೋಬನು ಪೇಶ್ವೆಯಾಗಲು ಪ್ರಯತ್ನಿಸಿದ್ದು

b)

ಮರಾಠ ಒಕ್ಕೂಟಗಳಲ್ಲಿನ ಸಂಘರ್ಷ

c)

ಮರಾಠರು ಸಹಾಯಕ ಸೈನ್ಯ ಪದ್ದತಿಯನ್ನು ತಿರಸ್ಕರಿಸಿದ್ದು

d)

ಮರಾಠ ಮನೆತನಗಳ ಘನತೆಯನ್ನು ಉಳಿಸಿಕೊಳ್ಳುವುದು

11.

ಮರಾಠ ಪೇಶ್ವೆಯು ಬ್ರಿಟಿಷರೊಂದಿಗೆ ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ

a)

ತನ್ನ ಸೋಲನ್ನು ಒಪ್ಪಿಕೊಂಡನು

b)

ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು

c)

ಪೂನಾ ಪ್ರಾಂತ್ಯವನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು

d)

ಬ್ರಿಟಿಷರ ಪ್ರಾಬಲ್ಯವನ್ನು ಮುರಿದನು

12.

ಲಾರ್ಡ್ ವೆಲ್ಲೆಸ್ಲಿಯ ಯುದ್ಧಪ್ರಿಯ ನೀತಿಯಿಂದ ಉಂಟಾದ ಪರಿಣಾಮ

a)

ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಯಾಯಿತು

b)

ಭಾರತೀಯ ರಾಜರು ಸೋತರು

c)

ಕಂಪನಿಗೆ ಸಾಲದ ಹೊರೆ ಹೆಚ್ಚಿತು

d)

ಬ್ರಿಟಿಷರಿಗೆ ಆರ್ಥಿಕ ಲಾಭ ಉಂಟಾಯಿತು

13.

1818ರಲ್ಲಿ ಪೇಶ್ವೆ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧದ ಈ ಯುದ್ಧಗಳಲ್ಲಿ ಸೋತು ಶರಣಾದನು

a)

ಕೋರೇಗಾವ್ ಮತ್ತು ಅಷ್ಟಿ

b)

ಕೊರೇಗಾವ್ ಮತ್ತು ಪೂನಾ

c)

ಕೊರೇಗಾವ್ ಮತ್ತು ಬೆಸ್ಸಿನ್

d)

ಅಷ್ಟಿ ಮತ್ತು ಸಾಲ್ಬಾಯ್

14.

ಪೇಶ್ವೆ ಪದವಿ ರದ್ದಾದ ನಂತರ ಸತಾರಾದಿಂದ ಮರಾಠರ ಆಡಳಿತ ಮುಂದುವರೆಸಿದ ಶಿವಾಜಿಯ ವಂಶಸ್ಥ

a)

ರಾಜಾ ಮಹಾಸಿಂಹ

b)

ಪ್ರತಾಪ ಸಿಂಹ

c)

ಜಯಸಿಂಹ

d)

ಸಾಹು

15.

ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆದೋರಲು ಕಾರಣ

a)

ಬ್ರಿಟಿಷರ ಆಕ್ರಮಣ

b)

ರಣಜಿತ್ ಸಿಂಗನ ಮರಣ

c)

ವಿದೇಶಿಯರ ದಾಳಿ

d)

ತೀವ್ರ ಬರಗಾಲ

16.

ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವನು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಕಾರ್ನ್ ವಾಲೀಸ್

c)

ಲಾರ್ಡ್ ಡಾಲ್ ಹೌಸಿ

d)

ಲಾರ್ಡ್ ವಾರನ್ ಹೇಸ್ಟಿಂಗ್

17.

ಲಾಹೋರ್ : ಚಟ್ಟಾರ್ ಸಿಂಗ್ ಅಟ್ಟಾರಿವಾಲ : : ಮುಲ್ತಾನ್ : _________

a)

ಮೂಲರಾಜ್

b)

ಶಿವರಾಜ್

c)

ರಾಮರಾಜ್

d)

ರಣಜಿತ್ ಸಿಂಗ್

18.

ಬ್ರಿಟಿಷರು ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಸಂಚು ರೂಪಿಸಿದರು

a)

ಮುಲ್ತಾನ್ ಒಪ್ಪಂದ

b)

ಲಾಹೋರ್ ಒಪ್ಪಂದ

c)

ಬಾಂಬೆ ಒಪ್ಪಂದ

d)

ನಿರಂತರ ಮೈತ್ರಿ ಒಪ್ಪಂದ

19.

ಬ್ರಿಟಿಷರು ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಲು ಕಾರಣವಾದ ಅಂಶ

a)

ಪ್ಲಾಸಿ ಮತ್ತು ಬಕ್ಸಾರ್ ಕದನಗಳಲ್ಲಿನ ಜಯ

b)

ಆಂಗ್ಲೋ ಮರಾಠ ಯುದ್ಧಗಳಲ್ಲಿನ ಜಯ

c)

ಆಂಗ್ಲೋ ಸಿಖ್ ಯುದ್ಧಗಳಲ್ಲಿನ ಜಯ

d)

ಹೈದರಾಲಿಯ ಮೇಲಿನ ಜಯ

20.

ಸಿಖ್ಖರು ಅವಮಾನಕರ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ವರ್ಷ

a)

1818

b)

1805

c)

1846

d)

1848