NEW
Font size
Worksheetsಪ್ರಥಮ ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣಾಂಶಗಳು
Total questions: 10
Worksheet time: 5mins
1. ಎರಡು ಸಂಸ್ಕೃತ ಪದಗಳು ಸೇರಿ ಆಗುವ ಸಂಧಿಯನ್ನು ---------- ಸಂಧಿ ಎನ್ನುವರು.
1. ಕನ್ನಡ
2. ಸಂಸ್ಕೃತ
3. ಸ್ವರ
4. ವ್ಯಂಜನ
2. ಪದಗಳೆರಡು ಸಂಸ್ಕೃತ ಪದಗಳಾಗಿದ್ದು, ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಆ ಸಂಧಿಯನ್ನು --------- ಸಂಧಿ ಎನ್ನುವರು.
1. ಕನ್ನಡ
2. ಸಂಸ್ಕೃತ
3. ಸಂಸ್ಕೃತ ಸ್ವರ
4. ಕನ್ನಡ ಸ್ವರ
3. ಸವರ್ಣ ದೀರ್ಘ, ಗುಣ, ವೃದ್ಧಿ, ಯಣ್ ಇವು 4 -------------- ಸಂಧಿಗಳು.
1. ಕನ್ನಡ ವ್ಯಂಜನ
2. ಕನ್ನಡ ಸ್ವರ
3. ಸಂಸ್ಕೃತ ಸ್ವರ
4. ಸಂಸ್ಕೃತ ವ್ಯಂಜನ
4. ಸವರ್ಣ ಸ್ವರಗಳು ಒಂದರ ಮುಂದೆ ಒಂದು ಬಂದು ಅವೆರಡು ಸೇರಿ ಸಂಧಿಯಾಗುವಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘ ಸ್ವರವು ಆದೇಶವಾಗಿ ಬರುವ ಸಂಧಿಯು --------- ಸಂಧಿಯಾಗಿದೆ.
1. ಗುಣ
2. ಯಣ್
3. ವೃದ್ಧಿ
4. ಸವರ್ಣ ದೀರ್ಘ
5. ಅ,ಆ + ಅ,ಆ = 'ಆ' ದೀರ್ಘ ಸ್ವರ ಆದೇಶ
ಇ,ಈ + ಇ,ಈ = 'ಈ' ದೀರ್ಘ ಸ್ವರ ಆದೇಶ
ಉ,ಊ+ ಉ, ಊ = 'ಊ' ದೀರ್ಘ ಸ್ವರ ಆದೇಶ - ಈ ನಿಯಮವು --------- ಸಂಧಿಯ ನಿಯಮವಾಗಿದೆ.
1. ಸವರ್ಣ ದೀರ್ಘ
2. ಯಣ್
3. ಗುಣ
4. ವೃದ್ಧಿ
6. ಹಿಮ + ಆಲಯ = ಹಿಮಾಲಯ
ಅ+ ಆ = 'ಆ' ದೀರ್ಘ ಸ್ವರ ಆದೇಶ
ಗಿರಿ + ಈಶ = ಗಿರೀಶ
ಇ+ ಈ ='ಈ' ದೀರ್ಘ ಸ್ವರ ಆದೇಶ
ಗುರು + ಉಪದೇಶ= ಗುರೂಪದೇಶ
ಉ+ ಉ = 'ಊ' ದೀರ್ಘ ಸ್ವರ ಆದೇಶ - ಇವು ------- ಸಂಧಿಗೆ ಉದಾಹರಣೆಯಾಗಿವೆ.
1. ಸವರ್ಣ ದೀರ್ಘ
2. ಗುಣ
3. ಆದೇಶ
4. ವೃದ್ಧಿ
7. ಪೂರ್ವಪದ ಮತ್ತು ಉತ್ತರ ಪದಗಳು ಕೂಡಿ ಸಂಧಿಕಾರ್ಯ ನಡೆಯುವಾಗ ಪೂರ್ವ ಪದದ ಕೊನೆಯಲ್ಲಿ ಅ, ಆ ಕಾರಗಳು ಬಂದು, ಅವುಗಳ ಮುಂದೆ ಇ,ಈ ಕಾರಗಳು ಬಂದಾಗ 'ಏ' ಕಾರವೂ, ಉ, ಊ ಕಾರಗಳು ಬಂದಾಗ 'ಓ' ಕಾರವೂ, ಋ ಕಾರವು ಬಂದಾಗ 'ಅರ್ ' ಕಾರವು ಆದೇಶವಾಗಿ ಬರುವುದು ಈ ಸಂಧಿಯನ್ನು ---------- ಸಂಧಿ ಎನ್ನುವರು.
1. ಯಣ್
2. ಸವರ್ಣ ದೀರ್ಘ
3. ಗುಣ
4. ವೃದ್ಧಿ
8. ಅ,ಆ + ಇ,ಈ = 'ಏ' ಕಾರ ಆದೇಶ
ಅ,ಆ + ಉ, ಊ = 'ಓ' ಕಾರ ಆದೇಶ
ಅ,ಆ + ಋ = ' ಅರ್' ಆದೇಶ- ಇದು --------- ಸಂಧಿಯ ನಿಯಮ.
1. ಗುಣ
2. ಯಣ್
3. ವೃದ್ಧಿ
4 . ಜಶ್ತ್ವ
9. ಈ ಕೆಳಗಿನವುಗಳಲ್ಲಿ ಗುಣ ಸಂಧಿಗೆ ಉದಾಹರಣೆಯಾದ ಪದಗಳ ಗುಂಪು;
1. ಮನೆಯನ್ನು, ಮರವನ್ನು, ಈಯೋಲೆ
2. ಚಳಿಗಾಲ , ಹುಲಿದೊಗಲು, ಕಂಬನಿ
3. ಅತ್ಯಂತ, ಮನ್ವಂತರ, ಮಾತೃಂಶ
4. ಸೂರ್ಯೋದಯ, ರಾಜರ್ಷಿ, ದೇವೇಂದ್ರ
10. ಪೂರ್ವಪದ ಮತ್ತು ಉತ್ತರ ಪದಗಳು ಕೂಡಿ ಸಂಧಿಕಾರ್ಯ ನಡೆಯುವಾಗ ಪೂರ್ವಪದದ ಕೊನೆಯಲ್ಲಿ ಅ,ಆ ಕಾರಗಳು ಬಂದು ಅವುಗಳ ಮುಂದೆ ಏ,ಐ ಕಾರಗಳು ಬಂದಾಗ 'ಐ' ಕಾರವೂ, ಓ,ಔ ಕಾರಗಳು ಬಂದಾಗ 'ಔ' ಕಾರವೂ ಆದೇಶವಾಗಿ ಬರುವುದು. ಈ ಸಂಧಿಯನ್ನು -------- ಸಂಧಿ ಎನ್ನುವರು.
1. ವೃದ್ಧಿ
2. ಗುಣ
3. ಸವರ್ಣ ದೀರ್ಘ
4. ಯಣ್
