wayground logo

Free Printable Worksheets

NEW

Font size

S
M
L
XL
Worksheets

ಇತಿಹಾಸ ಅಧ್ಯಾಯ-06ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

Total questions: 20

Worksheet time: 10mins

Name
Class
Date
1.

ಭಾರತದಲ್ಲಿ ಬ್ರಿಟೀಷರು ತಮ್ಮ ಅಧಿಕಾರದ ವಿಸ್ತರಣೆಗಾಗಿ ಜಾರಿಗೆ ತಂದ ನೀತಿಗಳು.

a)

ಎ.ಸಹಾಯಕ ಸೈನ್ಯಪದ್ಧತಿ,

b)

ಬಿ.ದತ್ತು ಮಕ್ಕಳಿಗೆ ಹಕ್ಕಿಲ್ಲ

c)

ಸಿ.ಎರಡೂ ನೀತಿಗಳು ಹೌದು

d)

ಡಿ.ಏರಡೂ ನೀತಿಗಳು ಅಲ್ಲ.

2.

2.1857ರ ಘಟನೆಯನ್ನು ಭಾರತದ ಇತಿಹಾಸಕಾರರು ಹೀಗೆ ಕರೆದಿದ್ದಾರೆ.

a)

ಎ.ಸಿಪಾಯಿದಂಗೆ

b)

ಬಿ.ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

c)

ಸಿ.ಕಾರ್ಮಿಕರ ದಂಗೆ

d)

ಡಿ.ಭಾರತದ ಅಂತಿಮ ಸ್ವಾತಂತ್ರ್ಯ ಸಂಗ್ರಾಮ

3.

3.ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವನು

a)

ಎ.ರಾಬರ್ಟ್ ಕ್ಲೈವ್

b)

ಬಿ.ಲಾರ್ಡ್ ವೆಲ್ಲೆಸ್ಲಿ

c)

ಸಿ.ಲಾರ್ಡ್ ಡಾಲ್ ಹೌಸಿ.

d)

ಡಿ.ಲಾರ್ಡ್ ಕರ್ಜನ್

4.

4.ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಂತೆ ರಾಜಪದವಿಗಳನ್ನು ರದ್ದು ಪಡಿಸಲಾದವರು.

a)

ಎ.ತಂಜಾವೂರಿನ ನವಾಬ,

b)

ಬಿ.ಕರ್ನಾಟಿಕ್ ನವಾಬ

c)

ಸಿ.ಇಬ್ಬರು ಹೌದು

d)

ಡಿ.ಇಬ್ಬರೂ ಅಲ್ಲ

5.

5.ಭಾರತದ ಕರಕುಶಲತೆ ಮತ್ತು ದೇಶೀಯ ಕೈಗಾರಿಕೆಗಳ ನಾಶಕ್ಕೆ ಕಾರಣ

a)

ಎ. ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ

b)

ಬಿ.ಇಂಗ್ಲೆಂಡಿನಲ್ಲಾದ ಸ್ವಾತಂತ್ರ್ಯ ಕ್ರಾಂತಿ

c)

ಸಿ.ಇಂಗ್ಲೆಂಡಿನಲ್ಲಾದ ವಾಣಿಜ್ಯ ಕ್ರಾಂತಿ

d)

ಡಿ.ಇಂಗ್ಲೆಂಡಿನಲ್ಲಾದ ಆರ್ಥಿಕ ಕ್ರಾಂತಿ

6.

6. 1857 ರ ಘಟನೆಗೆ ಕಾರಣವಾದ ರಾಯಲ್ ಎನ್ ಫೀಲ್ಡ್ ಎಂಬುದು

a)

ಎ.ತುಪಾಕಿ

b)

ಬಿ.ಯುದ್ಧನೌಕೆ

c)

ಸಿ.ಯುದ್ಧವಿಮಾನ

d)

ಡಿಬಂದೂಕು

7.

7.ಬ್ಯಾರಕ್ ಪುರದಲ್ಲಿ ಒಬ್ಬ ಅಧಿಕಾರಿಯನ್ನು ಕೊಂದು ಗಲ್ಲಿಗೇರಿಸಲ್ಪಟ್ಟ ಮಂಗಲಪಾಂಡೆ ಒಬ್ಬ.

a)

ಎ.ರಾಜ

b)

ಬಿ.ದಂಡನಾಯಕ

c)

ಸಿ.ಬ್ರಿಟೀಷರ ಸಾಮಂತ

d)

ಡಿ.ಸೈನಿಕ

8.

8.ಬ್ಯಾರಕ್ ಪುರದ ನಂತರ ಸಿಪಾಯಿದಂಗೆ ಪ್ರಾರಂಭವಾದದ್ದು

a)

ಎ.ದೆಹಲಿ

b)

ಬಿ.ಮೀರತ್

c)

ಸಿ.ಆಗ್ರಾ

d)

ಡಿ.ಕಾನ್ಪುರ

9.

9.ಭಾರತೀಯ ಸಿಪಾಯಿಗಳು ಭಾರತದ ಚಕ್ರವರ್ತಿ ಎಂದು ಘೋಷಿಸಿದವರು.

a)

ಎ.ರಾಣಿಲಕ್ಷ್ಮೀಭಾಯಿ

b)

ಬಿ.ನಾನಾಸಾಹೇಬ

c)

ಸಿ.ಬೇಗಮ್ ಹಜರತ್ ಮಹಲ್

d)

ಡಿ.ಮೊಘಲ್ ದೊರೆ ಎರಡನೇ ಬಹದ್ದೂರ್ ಷಾ

10.

10.ಕಾನ್ಪುರದಲ್ಲಿ ದಂಗೆಯ ನಾಯಕತ್ವ ವಹಿಸಿದ್ದವನು

a)

ಎ.ರಾಣಿಲಕ್ಷ್ಮೀಭಾಯಿ

b)

ಬಿ.ನಾನಾಸಾಹೇಬ

c)

ಸಿ.ಬೇಗಮ್ ಹಜರತ್ ಮಹಲ್

d)

ಡಿ.ಮೊಘಲ್ ದೊರೆ ಎರಡನೇ ಬಹದ್ದೂರ್ ಷಾ

11.

11.ಝಾನ್ಸಿಯಲ್ಲಿ ದಂಗೆಯ ನಾಯಕತ್ವವನ್ನು ವಹಿಸಿದ್ದವರು.

a)

ಎ.ರಾಣಿಲಕ್ಷ್ಮೀಭಾಯಿ

b)

ಬಿ.ನಾನಾಸಾಹೇಬ

c)

ಸಿ.ಬೇಗಮ್ ಹಜರತ್ ಮಹಲ್

d)

ಡಿ.ಮೊಘಲ್ ದೊರೆ ಎರಡನೇ ಬಹದ್ದೂರ್ ಷಾ

12.

12.ಭಾರತದ ಸಿಪಾಯಿಗಳು ಜನಸಾಮಾನ್ಯರ ವಿಶ್ವಾಸ ಕಳೆದುಕೊಳ್ಳಲು ಪ್ರಮುಖ ಕಾರಣ

a)

ಎ.ಅಶಿಸ್ತು

b)

ಬಿ.ಸಂಘಟನೆಯ ಕೊರತೆ

c)

ಸಿ.ಸಿಪಾಯಿಗಳು ಮಾಡಿದ ಲೂಟಿ,ದರೋಡೆ

d)

ಡಿ.ಸಿಪಾಯಿಗಳು ಬ್ರಿಟೀಷರೊಂದಿಗೆ ವಿನಾಕಾರಣ ಹೋರಾಡಿದ್ದು

13.

13.1857 ರ ಘಟನೆಯ ಸಂಧರ್ಭದಲ್ಲಿ ಕೆಲವು ಭಾರತೀಯ ಅರಸರು ಬ್ರಿಟೀಷರಿಗೆ ನಿಷ್ಠರಾಗಿದ್ದರು ಇದರ ಪರಿಣಾಮ

a)

ಎ.ಸಿಪಾಯಿಗಳ ಸೋಲು

b)

ಬಿ.ಭಾರತೀಯ ರಾಜರ ಸೋಲು

c)

ಸಿ.ಬ್ರಿಟೀಷರ ಸೋಲು

d)

ಡಿ.ಅಂತಹ ಅರಸರ ವಿನಾಶ

14.

14.1857 ರ ಘಟನೆಯಿಂದಾಗಿ ಭಾರತದಲ್ಲಿ ಇವರ ಅಧಿಕಾರ ಕೊನೆಗೊಂಡಿತು.

a)

ಎ.ಬ್ರಿಟೀಷರ

b)

ಬಿ.ಫ್ರೆಂಚರ

c)

ಸಿ.ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ

d)

ಡಿ.ಬ್ರಿಟೀಷ್ ಸಾಮ್ರಾಜ್ಞಿಯ

15.

15.1857ರ ಘಟನೆಯ ನಂತರ ಭಾರತದ ಆಡಳಿತವು ಇವರಿಗೆ ವರ್ಗಾವಣೆಗೊಂಡಿತು.

a)

ಎ.ಬ್ರಿಟೀಷರ

b)

ಬಿ.ಫ್ರೆಂಚರ

c)

ಸಿ.ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ

d)

ಡಿ.ಬ್ರಿಟೀಷ್ ಸಾಮ್ರಾಜ್ಞಿಯ

16.

16.ಭಾರತೀಯ ಆಡಳಿತಕ್ಕೆ ಸಂಬಂಧಿಸಿದಂತೆ ಬ್ರಿಟನ್ ರಾಣಿಯು ಒಂದು ಘೋಷಣೆ ಹೊರಡಿಸಿದ ವರ್ಷ.

a)

ಎ.1857

b)

ಬಿ.1858

c)

ಸಿ.1859

d)

ಡಿ.1860

17.

17.ಬ್ರಿಟೀಷರು ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಒಳಗೊಳ್ಳುವ ನೀತಿಯನ್ನು ಜಾರಿಗೆ ತಂದ ಉದ್ದೇಶ.

a)

ಎ.ಭಾರತೀಯರನ್ನು ಓಲೈಸಲು

b)

ಬಿ.ಭಾರತೀಯ ಹೋರಾಟವನ್ನು ಹತ್ತಿಕ್ಕಲು

c)

ಸಿ.ಭಾರತಕ್ಕೆ ಸ್ವಾತಂತ್ರ್ಯ ನೀಡಲು

d)

ಡಿ.ಬ್ರಿಟೀಷರ ಬಗ್ಗೆ ಇದ್ದ ಭಾರತೀಯರ ಅಭಿಪ್ರಾಯಗಳನ್ನು ತಿಳಿಯಲು.

18.

18.1857ರ ಘಟನೆಯನ್ನು ಬ್ರಿಟೀಷ್ ಇತಿಹಾಸ ಕಾರರು ಹೀಗೆ ಕರೆದಿದ್ದಾರೆ.

a)

ಎ.ಸಿಪಾಯಿ ದಂಗೆ

b)

ಬಿ.ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

c)

ಸಿ.ಕಾರ್ಮಿಕರ ದಂಗೆ

d)

ಡಿ.ಭಾರತದ ಅಂತಿಮ ಸ್ವಾತಂತ್ರ್ಯ ಸಂಗ್ರಾಮ

19.

19.1857 ದಂಗೆಯ ಸಂಧರ್ಭದಲ್ಲಿ ಬ್ರಿಟೀಷ್ ಅಧಿಕಾರಿಯನ್ನು ಕೊಂದವರು.

a)

ಎ.ರಾಣಿಲಕ್ಷ್ಮೀಭಾಯಿ

b)

ಬಿ.ನಾನಾಸಾಹೇಬ

c)

ಸಿ.ಬೇಗಮ್ ಹಜರತ್ ಮಹಲ್

d)

ಡಿ.ಮಂಗಲಪಾಂಡೆ

20.

20.ಝಾನ್ಸಿಯ ರಾಣಿ ಲಕ್ಷ್ಮೀಭಾಯಿ ಬ್ರಿಟೀಷರ ವಿರುದ್ಧ ಯುದ್ಧದಲ್ಲಿ ವಶಕ್ಕೆ ಪಡೆದ ಪ್ರದೇಶ.

a)

ಎ.ಝಾನ್ಸಿ

b)

ಬಿ.ಸತಾರ.

c)

ಸಿ.ಗ್ವಾಲಿಯರ್

d)

ಡಿ.ಕಾನ್ಪುರ.