Worksheetsಕನ್ನಡ ವ್ಯಾಕರಣ
Total questions: 12
Worksheet time: 17mins
ಖಿರ್ದಿ ಪುಸ್ತಕವು ಶಾನುಭೋಗರ ಸಂತತಿಯರ ಕೈಯಿಂದ ಈಗಲೂ ಪೂಜೆಯನ್ನು ಕೈಗೊಳ್ಳುತ್ತಿದೆ. ಇಲ್ಲಿ ಕಾರಣಾರ್ಥಕಾರಕ ಪದ ಯಾವುದು?
ಶಾನುಭೋಗರ
ಪೂಜೆಯನ್ನು
ಸಂತತಿಯವರ ಕೈಯಿಂದ
ಕೈಗೊಳ್ಳುತ್ತಿದೆ
ಈ ಕೆಳಗಿನ ಜೋಡಿಗಳಲ್ಲಿ ಯಾವ ಜೋಡಿ ತಪ್ಪಿದೆ.
ಬೆಂಬತ್ತು: ಆದೇಶ ಸಂಧಿ:: ಮನ್ವಂತರ: ಯಣ್ ಸಂಧಿ
ಚೆಲುವಿಕೆ: ತದ್ಧಿತಾಂತ ಭಾವನಾಮ:: ನಾಚಿಕೆ: ಕೃದಂತ ಭಾವನಾಮ
ತಾನು: ಆತ್ಮಾರ್ಥಕ ಸರ್ವನಾಮ:: ನೀವು: ಉತ್ತಮ ಪುರುಷ
ಇದಿರ್ಚಿ: ಹೋರಾಡಿ:: ಮೇಗಿಲ್ಲದೆ: ಮೇಲ್ಲಿಲ್ಲದೆ
ಈ ಕೆಳಗಿನ ಜೋಡಿಗಳಲ್ಲಿ ಯಾವ ಜೋಡಿ ತಪ್ಪಿದೆ.
ಹುಸಿಯದ ಬೇಹಾರಿಯೇ ಇಲ್ಲ: ಧರ್ಮಬುದ್ಧಿ:: ತಸ್ಕರಸ್ಯ ಅನೃತಂ ಬಲ: ದುಷ್ಟಬುದ್ಧಿ
ಸೈತಾನ ಹಿಂದಿರುಗು: ಹುಲಿ::ಮಡಿಯುವುದಾದರೆ ಮಾಡಿಯೇ ಮಾಡಿಯುತ್ತೇನೆ: ಶಾನುಭೋಗರು
ಸ್ಟೋನ್ ಆಫ್ ಸ್ಕೋನ್ : ವೆಸ್ಟ್ ಮಿನಿಸ್ಟರ್ ಅಭೆ:: ಮಾಣಿಕದುಂಗರ: ಛಿತ್ರಕದ ಧ್ವಾರ
ಹಣ್ಣು,ಹೂ,ಚಿಗುರು: ಶಭರಿ:: ಆಗ್ನೇಯ, ವಾಯುವ್ಯ, ಪೌರಂದಾರಾದಿ ಅಸ್ತ್ರಗಳು: ಕೆಮ್ಮನೆ ಮೀಸೆವೊತ್ತೆನೆ.
ಈ ಕೆಳಗಿನವುಗಳಲ್ಲಿ ಯಾವ ಜೋಡಿ ತಪ್ಪಿದೆ
1430: ಕುಮಾರ ವ್ಯಾಸ:: 1550: ಲಕ್ಷ್ಮೀಶ
ಮೈಸೂರು ಜಿಲ್ಲೆಯ ನಂಜನ ಗೂಡ: ದೇವನೂರು ಮಹಾದೇವ :: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ: ಕುವೆಂಪು
ಹಂಸ ದಮಯಂತಿ: ಪು.ತಿ.ನ:: ಅಜಿತ ತೀರ್ಥಂಕರ ಪುರಾಣ ತಿಲಕಂ: ರನ್ನ
ದ.ರಾ.ಬೇಂದ್ರೆ: ಜ್ಞಾನಪೀಠ ಪ್ರಶಸ್ತಿ:: ಗೋಕಾಕ್: ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ.
ಅಚ್ಛೋದ ಸರೋವರವು ತ್ರೈಲೋಕ್ಯ ಲಕ್ಷ್ಮೀಯು ತನ್ನ ಸೌಂದರ್ಯವನ್ನು ನೋಡಲು ಮಾಡಿಟ್ಟ ರನ್ನ ಗನ್ನಡಿಯೋ ಎಂಬಂತೆ ಶೋಭಿಸಿತು.- ಈ ವಾಕ್ಯಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ತಪ್ಪು.
ಉಪಮೇಯ:- ಅಚ್ಛೋದ ಸರೋವರ
ಉಪಮಾನ:- ರನ್ನ ಗನ್ನಡಿ
ಅಲಂಕಾರ:- ಉಪಮಾಲಂಕಾರ
ಅಲಂಕಾರ:- ಉತ್ಪ್ರೇಕ್ಷಾಲಂಕಾರ
ಮೇದಿನಿಯಂಕ್ರಮಕ್ರಮದೆ ಪರ್ವಿದುದಾತ್ತ ನಭೋವಿಭಾಗಮಾ- ಈ ವಾಕ್ಯಕ್ಕೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ತಪ್ಪು.
ಉತ್ಪಲಾಮಾಲಾ ವೃತ್ತ
ಭರನಭಭಮಲಗ ರೀತಿಯ ಗಣಗಳಿವೆ
ಆರು ಗಣ ಮತ್ತು ಒಂದು ಲಘು ಒಂದು ಗುರು ಇರುತ್ತವೆ
ಐದನೇಯ ಗಣ UU- ವಾಗಿದೆ.
ಸುಡುವ ಬೆಂಕಿಯನ್ನು ನೆತ್ತಿ ಮೇಲೆ ಇಟ್ಟುಕೊಂಡಂತಾಗುತ್ತದೆ - ಈ ಹೇಳಿಗೆ ಸಂಬಂಧಿಸಿದಂತೆ ಯಾವುದು ತಪ್ಪು
ದೇವನೂರು ಮಹಾದೇವ ಎದೆಗೆ ಬಿದ್ದ ಅಕ್ಷರ ಗದ್ಯದಲ್ಲಿ ಹೇಳಿದಮಾತು
ವಚನ ಚಳುವಳಿಯ ಹಿನ್ನೆಯಲ್ಲಿ ಹೇಳಿದ ಮಾತು
ವಚನಕಾರರಿಗೆ ಪ್ರಜ್ಞೆಯೇ ದೇವರಾಗಿದ್ದ ಕಾರಣ ಅವರಿಗೆ ಎದುರಾದ ಇಕ್ಕಟ್ಟುನ್ನು ಸೂಚಿಸುತ್ತದೆ
ದುಷ್ಟ ಬುದ್ಧಿಯ ಮಾತನ್ನು ಕೇಳಿದ ಪ್ರೇಮತಿಯ ಸ್ಥತಿ
"ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ"- ಹೇಳಿಗೆ ಸಂಬಂಧಿಸಿದಂತೆ ಯಾವುದು ತಪ್ಪು
ದೇವನೂರು ಮಹಾದೇವ ಎದೆಗೆ ಬಿದ್ದ ಅಕ್ಷರ ಗದ್ಯದಲ್ಲಿ ಹೇಳಿದಮಾತು
ವಚನ ಚಳುವಳಿಯ ಹಿನ್ನೆಯಲ್ಲಿ ಹೇಳಿದ ಮಾತು
ಅಶೋಕಪೈ ಹೇಳಿದ ಸಂಶೋಧನೆಯ ಸತ್ಯದ ಹಿನ್ನೆಯಯಲ್ಲಿ ಹೇಳಿದ ಮಾತು
ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಆ ಪರಿಸರದಲ್ಲಿ ಉಸಿರಾಡುವ ಎಲ್ಲಾ ಜೀವಿಗಳಲ್ಲೂ ಅನುಕಂಪನ ಉಂಟುಮಾಡುತ್ತದೆ
ಈ ಕೆಳಗಿನ ಸಂದರ್ಭ ಸಹಿತಗಳಲ್ಲಿ ಯಾವುದು ತಪ್ಪು.
ದಯವಿಟ್ಟು ಬಾಗಿಲು ತೆಗೆಯಿರಿ - ಸಾ.ರಾ.ಅಬೂಬಕರ್, ಚಪ್ಪಲಿಗಳು, ರಾಹೀಲ್ ಹೇಳಿದ ಮಾತು
ಆವುದೀ ಮರುಳು? ಇತ್ತಲೆ ಬರುತಿಹುದು- ಪು.ತಿ.ನಾ, ಏಕಾಂಕ ನಾಟಕಗಳು, ಲಕ್ಷ್ಮಣ ಹೇಳಿದ ಮಾತು
ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ- ವಿ.ಕೃ.ಗೋಕಾಕ್, ಸಮುದ್ರದಾಚೆಯಿಂದ, ಬೇಕನ್ ಹೇಳಿದ ಮಾತು
ತಾವು ಕಡಿಮೆಮಾತನಾಡಿದ್ದೀರಿ; ಹೆಚ್ಚು ಕೆಲಸಮಾಡಿದ್ದೀರಿ- ಜಯಪ್ಪಗೌಡ,ನೆಹರು ಹೇಳಿದ ಮಾತು, ಬೆಂಗಳೂರಿನಲ್ಲಿ
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ-----
ಭಯ ಸಂಶಯದೊಳು ಕಂದಿದ ಕಣ್ಣೋಳು
ನಾಳಿನ ಕನಸನು-----
ಹೆಚ್ಚರದೊಳು & ಬಿತ್ತೋಣ
ಹೆಚ್ಚರದೊಳು & ಕಾಣೋಣ
ಹೆಚ್ಚರದೊಳು ಬದುಕೋಣ & ಬಿತ್ತೋಣ
ಬದುಕೋಣ & ಬಿತ್ತೋಣ
ಕೆಳಗಿನ ಕವಿಗಳ ಕಾಲ, ಸ್ಥಳ, ಕೃತಿಗಳಲ್ಲಿ ಯಾವುದು ತಪ್ಪಿದೆ.
ಜಿ.ಎಸ್.ಶಿವರುದ್ರಪ್ಪ-೧೯೨೬,ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಎದೆತುಂಬಿ ಹಾಡಿದೆನು
ದ.ರಾ.ಬೇಂದ್ರೆ-೧೮೯೬,ಧಾರವಾಡ,ನಾದಲೀಲೆ
ರನ್ನ- ೯೪೯ ಮುಧೋಳ, ವಿಕ್ರಮಾರ್ಜುನ ವಿಜಯ
ಪಂಪ-೯೦೨,ವೆಂಗಿ ಮಂಡಲದ ವೆಂಗಿಪಳು, ಪಂಪಾಭಾರತ.
UUUU/--/-UU
--/-UU/UUUU/-UU/
ಇದಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ
ಇದು ಕಂದ ಪದ್ಯದ ಮಾತ್ರಗಣದ ಲಕ್ಷಣ ಆದರೆ ತಪ್ಪು
ಇದು ಕಂದ ಪದ್ಯದ ಮಾತ್ರ ವಿನ್ಯಾಸ ಮತ್ತು ಸರಿ ಇದೆ
ಕಂದ ಪದ್ಯ ಇನ್ನು ಒಂದು ಸಾಲಿದೆ
ಕಂದ ಪದ ಮಾತ್ರ ವಿನ್ಯಾಸವಲ್ಲ, ಆದರೆ ಸರಿಇದೆ
