wayground logo

Free Printable Worksheets

NEW

Font size

S
M
L
XL
Worksheets

ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ

Total questions: 10

Worksheet time: 5mins

Name
Class
Date
1.

ಸರ್ಕಾರದ ವರಮಾನ ಹಾಗೂ ವೆಚ್ಚಗಳ ನಿರ್ವಹಣೆ ಮತ್ತು ಅವುಗಳಲ್ಲಿನ ಹೊಂದಾಣಿಕೆ ಮಾಡುವ ಪ್ರಕ್ರಿಯೆ ಬಗ್ಗೆ ಅಭ್ಯಸಿಸುವುದೆ ಸಾರ್ವಜನಿಕ ಹಣಕಾಸು ಎಂದು ಹೇಳಿದವರು ಯಾರು ?

a)

ಮಿಲ್ಟನ್

b)

ಫ್ರೀಡ್ಮನ್

c)

ಡಾಲ್ಟನ್

d)

ರಾಬಿನ್ಸ್

2.

ಸರಕಾರದ ಒಂದು ವರ್ಷದ ವರಮಾನ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಹೀಗೆಂದು ಕರೆಯುವರು .

a)

ಕೊಶಿಯಾ ಪತ್ರ

b)

ಆಯವ್ಯಯ ಪತ್ರ

c)

ತೆರಿಗೆ

d)

ಸಾರ್ವಜನಿಕ ವೆಚ್ಚ

3.

ಭಾರತದಲ್ಲಿ ಸಾಮಾನ್ಯವಾಗಿ ಮುಂಗಡ ಪತ್ರವನ್ನು ಹಣಕಾಸು ಸಚಿವರು ಈ ತಿಂಗಳಲ್ಲಿ ಲೋಕಸಭೆಯ ಅಧಿವೇಶನದಲ್ಲಿ ಮಂಡಿಸುವರು .

a)

ಜನವರಿ ಅಥವಾ ಫೆಬ್ರವರಿ

b)

ಫೆಬ್ರವರಿ ಅಥವಾ ಮಾರ್ಚ್

c)

ಮಾರ್ಚ್ ಅಥವಾ ಏಪ್ರಿಲ್

d)

ಏಪ್ರಿಲ್ ಅಥವಾ ಮೇ

4.

ಸರ್ಕಾರದ ವರಮಾನವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಹೀಗೆನ್ನುವವರು

a)

ಉಳಿತಾಯ ಆಯವ್ಯಯ

b)

ಕೊರತೆ ಆಯ ವ್ಯಯ

c)

ಸಮತೋಲನ ಆಯವ್ಯಯ

d)

ಆರ್ಥಿಕ ಹಿಂಜರಿತ

5.

ಸರಕಾರದ ವರಮಾನಕ್ಕಿಂತ ವೆಚ್ಚವೇ ಹೆಚ್ಚಾಗಿದ್ದರೆ ಅದನ್ನು ಹೀಗೆಂದು ಕರೆಯಲಾಗುತ್ತದೆ

a)

ಉಳಿತಾಯ ಆಯವ್ಯಯ

b)

ಕೊರತೆ ಆಯವ್ಯಯ

c)

ಸಮತೋಲನ ಆಯ ವ್ಯಯ

d)

ಆರ್ಥಿಕ ಹಿಗ್ಗುವಿಕೆ

6.

ಈ ಕೆಳಗಿನ ಗಳಲ್ಲಿ ಪ್ರತ್ಯಕ್ಷ ತೆರಿಗೆಗಳಲ್ಲಿ ಗುಂಪಿಗೆ ಸೇರದೇ ಇರುವುದನ್ನು ಗುರುತಿಸಿ

a)

ವರಮಾನ ತೆರಿಗೆ

b)

ಕಂಪನಿ ತೆರಿಗೆ

c)

ಸಂಪತ್ತಿನ ತೆರಿಗೆ

d)

ಸೇವಾ ತೆರಿಗೆ

7.

ಈ ಕೆಳಗಿನವುಗಳಲ್ಲಿ ಪರೋಕ್ಷ ತೆರಿಗೆಗಳಲ್ಲಿ ಗುಂಪಿಗೆ ಸೇರದೇ ಇರುವುದನ್ನು ಕಂಡು ಹಿಡಿಯಿರಿ

a)

ಅಭಕಾರಿ ತೆರಿಗೆ

b)

ಮೌಲ್ಯವರ್ಧಿತ ತೆರಿಗೆ

c)

ಸ್ಟ್ಯಾಂಪ್ ಶುಲ್ಕ

d)

ಆಮದು ರಫ್ತು ಸುಂಕ

8.

ಸರಕಾರವು ತೆರಿಗಳನ್ನು ಹೊರತುಪಡಿಸಿ ಇತರೆ ಮೂಲಗಳಿಂದ ಗಳಿಸುವ ತೆರಿಗೆತರ ವರಮಾನದಲ್ಲಿ ಇದು ಸೇರಿಲ್ಲ

a)

ಭಾರತೀಯ ರಿಸರ್ವ್ ಬ್ಯಾಂಕ್ ಗಳಿಸುವ ಲಾಭ

b)

ಭಾರತೀಯ ರೈಲ್ವೆ ಗಳಿಸುವ ಲಾಭ

c)

ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ವರಮಾನ

d)

ಸಾರ್ವಜನಿಕ ಉದ್ದಿಮೆಗಳ ಷೇರುಗಳಿಂದ ಬರುವ ವರಮಾನ

9.

ಆಯವ್ಯಯದಲ್ಲಿ ಸರ್ಕಾರದ ಕಂದಾಯ ವರಮಾನ ಮತ್ತು ಸಾಲೆತರ ಬಂಡವಾಳ ವರಮಾನ ಗಳಿಗಿಂತ ಸರ್ಕಾರದ ಒಟ್ಟು ವೆಚ್ಚ ಹೆಚ್ಚಾಗಿದ್ದರೆ ಇದನ್ನು ಹೀಗೆಂದು ಕರೆಯುತ್ತಾರೆ .

a)

ಆಯವ್ಯಯ ಕೊರತೆ

b)

ವಿತ್ತೀಯ ಕೊರತೆ

c)

ರೆವಿನ್ಯೂ ಕೊರತೆ

d)

ಪ್ರಾಥಮಿಕ ಕೊರತೆ

10.

ಚಾಲ್ತಿ ವರ್ಷದ ವಿತ್ತೀಯ ಕೊರತೆಯಿಂದ ಕಳೆದ ವರ್ಷದ ಬಡ್ಡಿ ಪಾವತಿಯನ್ನು ವಜಾಗೊಳಿಸಿದಾಗ ಇದು ದೊರೆಯುತ್ತದೆ

a)

ವಿತ್ತೀಯ ಕೊರತೆ

b)

ರೆವಿನ್ಯೂ ಕೊರತೆ

c)

ಪ್ರಾಥಮಿಕ ಕೊರತೆ

d)

ಆಯವ್ಯಯ ಕೊರತೆ