wayground logo

Free Printable Worksheets

NEW

Font size

S
M
L
XL
Worksheets

3.1. ಲಂಡನ್ ನಗರ - ಹಲಗಲಿ- ಭಗತ್ ರಸಪ್ರಶ್ನೆ

Total questions: 50

Worksheet time: 39mins

Name
Class
Date
1.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು

a)

ವಾಚನಾಲಯ

b)

ಕವೀಶ್ವರ

c)

ಅತ್ಯಾದರ

d)

ಸಂಗ್ರಹಾಲಯ

2.

"ನಿಮ್ಮ ದೇಶದ ಗೌರವವನ್ನು ಕಾಯಿರಿ, ಇದು ದೊಡ್ಡದಾದ ರಾಷ್ಟ್ರ" ಈ ವಾಕ್ಯದ ಕ್ರಿಯಾಪದದ ರೂಪ

a)

ಸಂಭವನಾರ್ಥಕ

b)

ಕಾಲಾರ್ಥಕ

c)

ವಿದ್ಯರ್ಥಕ

d)

ನಿಷೇಧಾರ್ಥಕ

3.

ವರ್ತಮಾನ ಕಾಲದ ಉತ್ತಮ ಪುರುಷದಲ್ಲಿ ಕ್ರಿಯಾಪದ ಈ ಕೆಳಗಿನಂತೆ ಸರಿ ಇರುತ್ತದೆ

a)

ತಿನ್ನುತ್ತಾರೆ

b)

ತಿನ್ನುವೆನು

c)

ತಿಂದೆನು

d)

ತಿನ್ನುತ್ತೇನೆ

4.

'ಟಾರಾ' ಪದದ ಸಮಾನಾರ್ಥಕ ಪದವಿದು

a)

ಬೆಂಕಿ

b)

ಸೈನ್ಯ

c)

ನಾಶ

d)

ಆಯುಧ

5.

ಅರ್ಕ ; ಎಕ್ಕ : ; ವಿದ್ಯಾಧರ ; ..........

a)

ಗಣಪ

b)

ಬಿಜ್ಜೋದರ

c)

ಬೆನಕ

d)

ಬಿಜ್ಜೆ

6.

ಈ ಕೆಳಗಿನವುಗಳಲ್ಲಿ ತಪ್ಪಾದ ಪದ ಗುಂಪು ಯಾವುದು

a)

ಅಬಕಾರಿ — ಫಾರ್ಸಿ

b)

ಉರ್ದು —ಕಿಮ್ಮತ್ತು

c)

ಸಲಾಮು — ಹಿಂದುಸ್ತಾನಿ

d)

ದಿನಾರ — ಗ್ರೀಕ್-ರೋಮನ್

e)

ಚೊಂಬು — ಅರಬ್ಬಿ

7.

ಕೆಳಗಿನವುಗಳಲ್ಲಿ ಅಂಶಿ ಸಮಾಸ ಪದವಲ್ಲ

a)

ನಡುರಾತ್ರಿ

b)

ಮೋಸ ಮಾಡು

c)

ಮುಂಗೈ

d)

ಅಂಗೈ

8.

ಬ್ರಿಟಿಷರು ಎಂದೆಂದಿಗೂ ಇಸವಾಸ ಇಲ್ಲದ ಜನರು ಎಂದು ನಮ್ಮ ಗುರುಗಳು ಹೇಳಿದರು" ಈ ವಾಕ್ಯದಲ್ಲಿ ಗ್ರಾಮ್ಯ ಪದ ಯಾವುದು?

a)

ಬ್ರಿಟಿಷರು

b)

ಇಸವಾಸ

c)

ಗುರುಗಳು

d)

ಜನರು

e)

ನಮ್ಮ

9.

ಈ ಕೆಳಗಿನವುಗಳಲ್ಲಿ ಪೋರ್ಚುಗೀಸ್ ಪದ ಯಾವುದು

a)

ಸಾಬೂನು

b)

ಚೌಕಾಷಿ

c)

ಸಲಾಮು

d)

ಹುಕುಂ

10.

ಹಲಗಲಿ ಬೇಡರ ದಂಗೆ ಹೇಳಲು ಪ್ರಮುಖ ಕಾರಣಗಳೇನು

a)

ಬ್ರಿಟಿಷರ ನಿಶಸ್ತ್ರೀಕರಣ ಆದೇಶ

b)

ಬ್ರಿಟಿಷರು ಭಾರತ ಆಳ್ವಿಕೆ ವಿರುದ್ಧ

c)

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಆದೇಶದ ವಿರುದ್ಧ

d)

ಭಾರತೀಯರು ಅನುಮತಿ ಇಲ್ಲದೆ ಶಸ್ತ್ರಗಳನ್ನು ಹೊಂದುವಂತಿಲ್ಲ ಈ ಕಾರಣದಿಂದ

e)

ಏ ಮತ್ತು ಡಿ ಸರಿ

11.

ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ

a)

ವೀರತನ ಸಾಹಸವನ್ನು ವರ್ಣಿಸುವುದರಿಂದ

b)

ವೀರರು ಬ್ರಿಟಿಷರ ವಿರುದ್ಧ ಸೋಲಿನ ಕಥೆ ವರ್ಣನೆ

c)

ಏಕ ಘಟನೆಯನ್ನು ಆಧರಿಸಿ ಕಥನಾತ್ಮಕ ವಾಗಿರುವ ವರ್ಣನೆ ಇರುವುದರಿಂದ

d)

ಎ ಮತ್ತು ಸಿ ಸರಿ

e)

ಎ ಮತ್ತು ಬಿ ಸರಿ

12.

ಹಲಗಲಿಯ ಬೇಡರ ದಾಳಿಯಿಂದ ಬೆಂಕಿ ಚೂರಾದ ಸಾಹೇಬ ಯಾರು

a)

ಕಾರ ಸಾಹೇಬ

b)

ಹೆಬಲಕ್ ಸಾಹೇಬ

c)

ಸೆಟೆನ್ ಕರ್ ಸಾಹೇಬ

d)

ಕರ್ನಲ್ ವಿಲ್ಲೆ ಸಾಹೇಬ

13.

ಬ್ರಿಟಿಷರ 500 ಮಂದಿ ಸೈನಿಕರಿಗೆ ಎದುರಾಗಿ ನಿಂತವನು ಯಾರು

a)

ರಾಮ

b)

ಭೀಮ

c)

ಹನುಮ

d)

ಬಾಲ

14.

ಹಲಗಲಿಯ ಅಗಸಿ ಬಾಗಿಲಿಗೆ ಬಂದು ಬುದ್ದಿಮಾತು ಹೇಳಿದ ಸಾಹೇಬರು ಯಾರು

a)

ವಿಲಿಯಂ ಕೆರ್ರೆ

b)

ಸೆಟೆನ್ ಕೆರ್

c)

ಹೆಬಲಕ್

d)

ಹರ್ಸ್ಟ್

15.

ಹಲಗಲಿ ಬೇಡರು ಪದ್ಯ ವನ್ನು ಸಂಪಾದಿಸಿದವರು ಯಾರು

a)

ಡಿ ಜವರೇಗೌಡ

b)

ಬಿ ಎಸ್ ಗದ್ದಗಿಮಠ

c)

ಬಿಎಸ್ ಹಿರೇಮಠ

d)

ಜೀಶಂಪ

16.

ಬಿಎಸ್ ಗದ್ದಗಿಮಠ ಅವರ ಸಂಪಾದಿತ ಕೃತಿ ಯಾವುದು

a)

ಕರ್ನಾಟಕ ಭಾರತ ಕಥಾಮಂಜರಿ

b)

ಕರ್ನಾಟಕ ಗತ ವೈಭವ

c)

ಕನ್ನಡ ಜನಪದ ಗೀತೆಗಳು

d)

ಕನ್ನಡ ಜನಪದ ಲಾವಣಿ

17.

ಹಲಗಲಿ ಬೇಡರು ಪದ್ಯ ವನ್ನು ರಚಿಸಿದವರು ಯಾರು

a)

ಕುವೆಂಪು

b)

ಬಿ ಎಸ್ ಗದ್ದಗಿಮಠ

c)

ಜನಪದರು

d)

ವಿದ್ಯಾವಂತರು

18.

" ನಂಬಿಗಿಲ್ಲ ನಮಗ ಪಿತೂರಾ ಮೋಸಮಾಡಿ ನಮ್ಮದೇಶ ಗೆದಿತಾರೊ ಮುಂದ ನಮಗ ಘೋರಾ" ಈ ಮಾತನ್ನು ಯಾರು ಯಾರಿಗೆ ಹೇಳುತ್ತಾರೆ?

a)

ಭೀಮ ಜನರಿಗೆ

b)

ಬಾಲ ಬ್ರಿಟಿಷರಿಗೆ

c)

ಪೂಜಾರಿ ಹನುಮ ಭೀಮನಿಗೆ

d)

ಜಡಗ ಹಲಗಲಿ ಜನಕ್ಕೆ

19.

"ಗುಂಡು ಹೊಡಿದು ಕೆರ ಕೆಡವು ನಷ್ಟ ಬಾರ" ಈ ಮಾತನ್ನು ಯಾರು ಹೇಳುತ್ತಾರೆ?

a)

ಬ್ಯಾಡರ ಬಾಲ

b)

ಪೂಜಾರಿ ಹನುಮ

c)

ಜಡಗ ರಾಮ

d)

ಭೀಮ

20.

"ಕುರ್ತುಕೋಟಿ ಕಲ್ಮೇಶನ ದಯದಿಂದ ಹಾಡಿದೆನಣ್ಣಾ ಜನಕಾ " ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಲಾವಣಿಕಾರ ಜನರಿಗೆ

b)

ಬೇಡರು ಬ್ರಿಟಿಷರಿಗೆ

c)

ಸೈನಿಕರು ಬೇಡರಿಗೆ

d)

ಶ್ರೀಮಂತರು ಜನಪದರಿಗೆ

21.

" ವೂಲವರ್ಥ ಸ್ಟೇಷನರಿ ಅಂಗಡಿಯು ಪ್ರಾಚೀನ ಮಹಾಕಾವ್ಯದಂತೆ ಇದೊಂದು ಮಹಾ ಕೋಶವಾಗಿದೆ" ಇದು ಯಾವ ಅಲಂಕಾರವಾಗಿದೆ?

a)

ರೂಪಕ ಅಲಂಕಾರ

b)

ದೃಷ್ಟಾಂತ ಅಲಂಕಾರ

c)

ಲುಪ್ತೋಪಮಾಲಂಕಾರ

d)

ಪೂರ್ಣೋಪಮಾಲಂಕಾರ

22.

" ವೂಲವರ್ಥ ಸ್ಟೇಷನರಿ ಅಂಗಡಿಯು ಪ್ರಾಚೀನ ಮಹಾಕಾವ್ಯದಂತೆ ಇದೊಂದು ಮಹಾ ಕೋಶವಾಗಿದೆ" ಈ ಅಲಂಕಾರದಲ್ಲಿರುವ ಉಪಮೇಯ ಪದ ಯಾವುದು?

a)

ಪ್ರಾಚೀನ ಮಹಾಕಾವ್ಯ

b)

ವೂಲವರ್ಥ ಸ್ಟೇಷನರಿ ಅಂಗಡಿ

c)

ಕಾವ್ಯದಂತೆ

d)

ಮಹಾಕೋಶ

23.

" ವೂಲವರ್ಥ ಸ್ಟೇಷನರಿ ಅಂಗಡಿಯು ಪ್ರಾಚೀನ ಮಹಾಕಾವ್ಯದಂತೆ ಇದೊಂದು ಮಹಾ ಕೋಶವಾಗಿದೆ" ಈ ಅಲಂಕಾರದಲ್ಲಿರುವ ಉಪಮಾನ ಪದ ಯಾವುದು?

a)

ಪ್ರಾಚೀನ ಮಹಾಕಾವ್ಯ

b)

ವೂಲವರ್ಥ ಸ್ಟೇಷನರಿ ಅಂಗಡಿ

c)

ಅಂತೆ

d)

ಮಹಾಕೋಶ

24.

ಅಕ್ಷರಗಣ ರಚನೆಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆ ಯಾವುದು ಸರಿಯಾಗಿದೆ?

a)

ಪ್ರತಿ ನಾಲ್ಕು ನಾಲ್ಕು ಮಾತ್ರೆಗಳಿಗೊಮ್ಮೆ ಗಣರಚನೆ

b)

ಪ್ರತಿ ಮೂರು ಮೂರು ಮಾತ್ರೆ ಗಳಿಗೊಮ್ಮೆ ಗಣ ರಚನೆ

c)

ಪ್ರತಿ ನಾಲ್ಕು ಅಕ್ಷರಗಳಿಗೊಮ್ಮೆ ಗಣ ರಚನೆ

d)

ಪ್ರತಿ ಮೂರು ಮೂರು ಅಕ್ಷರಗಳಿಗೊಮ್ಮೆ ಗಣ ರಚನೆ

25.

ಇದು ಉತ್ಪಲಮಾಲಾವೃತ್ತದ ಗಣ ರಚನೆಯಾಗಿದೆ

a)

ಸ,ತ,ತ,ನ,ಸ,ರ,ರ

b)

ಸ,ಭ,ರ,ನ,ಮ,ಯ

c)

ಭ,ರ,ನ,ಭ,ಭ,ರ

d)

ನ, ಜ, ಭ,ಜ,ಜ,ಜ,ರ

26.

ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು — ಈ ವಾಕ್ಯದ ಛಂದಸ್ಸು ಹೆಸರಿಸಿ

a)

ಉತ್ಪಲಮಾಲಾವೃತ್ತ

b)

ಚಂಪಕಮಾಲಾ ವೃತ್ತ

c)

ಮತ್ತೇಭವಿಕ್ರೀಡಿತ ವೃತ್ತ

d)

ಸ್ರಗ್ಧರಾ ವೃತ್ತ

27.

"ಕೆಲವನ್ನು ನೋಡಿ ತಿಳಿಯುವುದು , ಕೆಲವನ್ನು ಓದಿ ತಿಳಿಯುವುದು, ಪ್ರಪಂಚದ ಹಲವು ಮಾರ್ಗಗಳಿಂದ ನಮ್ಮ ಜ್ಞಾನ ಸಂಪಾದಿಸಬಹುದು" ಎಂಬರ್ಥ ಇರುವ ಈ ಕೆಳಗಿನ ಗಾದೆ ಯಾವುದು?

a)

ಬೆಟ್ಟ ಸುತ್ತಿ ನೋಡು ಲೆಕ್ಕ ಮಾಡಿ ನೋಡು

b)

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

c)

ದೇಶ ಸುತ್ತಿ ನೋಡು ಕೋಶ ಓದಿ ನೋಡು

d)

ರವಿಗೆ ಕಾಣದ್ದು ಕವಿಗೆ ಕಂಡೀತು

28.

ಪ್ರಪಂಚದಲ್ಲಿ ಏನನ್ನಾದರೂ ಕಟ್ಟುವುದು ಸಂಪಾದಿಸುವುದು ತುಂಬಾ ಕಷ್ಟ ಆದರೆ ನಾಶಪಡಿಸುವುದು ತುಂಬಾ ಸುಲಭ - ಈ ಮಾತು ಕೆಳಗಿನ ಯಾವ ಗಾದೆಗೆ ಅನ್ವಯಿಸುತ್ತದೆ?

a)

ಕಾಯಕವೇ ಕೈಲಾಸ

b)

ಎಮ್ಮಿಗೆ ವರುಷ ಕುದುರೆಗೆ ನಿಮಿಷ

c)

ಬೆಳ್ಳಗಿರುವುದೆಲ್ಲಾ ಹಾಲಲ್ಲ

d)

ಕಟ್ಟುವುದು ಕಠಿಣ ಕೆಡಿಸುವುದು ಸುಲಭ

29.

ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತಿನ ಅರ್ಥ ಏನು?

a)

ಕೈಕೆಸರಾದರೆ ತೊಳೆಯುವುದು ಕಷ್ಟ, ಬಾಯಿ ಮೊಸರಾದರೆ ತೊಳೆಯುವುದು ಸುಲಭ

b)

ಕಷ್ಟ ಪಟ್ಟು ದುಡಿದು ಸಂಪಾದಿಸಿದರೆ ಮುಂದಿನ ಭವಿಷ್ಯದಲ್ಲಿ ಸುಖವಾಗಿರಬಹುದು

c)

ಕಷ್ಟಪಟ್ಟು ದುಡಿಯದೇ ಶ್ರೀಮಂತರಾಗುವುದು ತುಂಬಾ ಸುಲಭ

d)

ಕಷ್ಟಪಟ್ಟು ದುಡಿದು ಸಂಪಾದಿಸಿದರೆ ಮುಂದೆ ಕಷ್ಟ ಪಟ್ಟು ಬಾಳಬೇಕಾಗುತ್ತದೆ

30.

" ನೀವು ಅಯನ / ಆರ್ಯ , ನೇತಾಜಿ ಪ್ರೌಢಶಾಲೆ ದಾವಣಗೆರೆ ಎಂದು ಭಾವಿಸಿ, ನಿಮ್ಮ ವಿದ್ಯಾನಗರದಲ್ಲಿ ಹೊಸ ಉದ್ಯಾನವನಕ್ಕಾಗಿ ದಾವಣಗೆರೆಯ ತೋಟಗಾರಿಕೆ ಇಲಾಖೆ ನಿರ್ದೇಶಕರಿಗೆ ಒಂದು ಮನವಿ ಪತ್ರ ಬರೆಯಿರಿ" - ಈ ಪತ್ರಲೇಖನದಲ್ಲಿ ವಿಷಯವನ್ನು ಏನೆಂದು ಬರೆಯುವಿರಿ.

a)

ಉದ್ಯಾನವನ ಮುಚ್ಚುವಂತೆ ಕೋರಿ

b)

ಉದ್ಯಾನವನವನ್ನು ಕೆಡಿಸುವಂತೆ ಕೋರಿ

c)

ಉದ್ಯಾನವನವನ್ನು ನಿರ್ಮಿಸಿಕೊಡುವಂತೆ ಕೋರಿ

d)

ಉದ್ಯಾನವನವನ್ನು ಸ್ಥಳಾಂತರ ಮಾಡುವಂತೆ ಕೋರಿ

31.

" ನೀವು ಅಯನ / ಆರ್ಯ , ನೇತಾಜಿ ಪ್ರೌಢಶಾಲೆ ದಾವಣಗೆರೆ ಎಂದು ಭಾವಿಸಿ, ನಿಮ್ಮ ವಿದ್ಯಾನಗರದಲ್ಲಿ ಹೊಸ ಉದ್ಯಾನವನಕ್ಕಾಗಿ ನಿಮ್ಮ ಹತ್ತಿರದ ಸಂಬಂಧಿಸಿದ ಇಲಾಖೆಗೊಂದು ಮನವಿ ಪತ್ರ ಬರೆಯಿರಿ" - ಇಲ್ಲಿ ನೀವು ಯಾರಿಗೆ ಪತ್ರ ಬರೆಯಬೇಕಿದೆ

a)

ನಿರ್ದೇಶಕರು ತೋಟಗಾರಿಕೆ ಇಲಾಖೆ ದಾವಣಗೆರೆ

b)

ಸದಸ್ಯರು ಮಹಾನಗರಪಾಲಿಕೆ ವಿನೋಬನಗರ

c)

ನಿರ್ದೇಶಕರು ಕೃಷಿ ಇಲಾಖೆ ದಾವಣಗೆರೆ

d)

ನ್ಯಾಯಾಧೀಶರು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ದಾವಣಗೆರೆ

32.

". ನೀವು, ನಿಮ್ಮ ವಿದ್ಯಾನಗರದಲ್ಲಿ ಹೊಸ ಉದ್ಯಾನವನಕ್ಕಾಗಿ ನಿಮ್ಮ ಹತ್ತಿರದ ಸಂಬಂಧಿಸಿದ ಇಲಾಖೆಗೊಂದು ಮನವಿ ಪತ್ರ ಬರೆಯಿರಿ" - ಇಲ್ಲಿ ಪತ್ರ ಬರೆಯಬೇಕಾದರೆ ' ಇಂದ ವಿಳಾಸ' ದಲ್ಲಿ ಏನೆಂದು ಬರೆಯಬಹುದು.

a)

ನಿರ್ದೇಶಕರು ತೋಟಗಾರಿಕೆ ಇಲಾಖೆ ದಾವಣಗೆರೆ

b)

ಲೇಖನ / ಲೋಹಿತ್ ವಿದ್ಯಾನಗರ

c)

ಗಿರಿಜಾ /ಗಿರೀಶ್ ವಿದ್ಯಾನಗರ

d)

ವರ್ಷಾ/ ವರುಣ್ ವಿದ್ಯಾನಗರ

e)

B,C,D ಮೂರು ಸರಿ

33.

C. ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾ

B. ಗಂಗಳ ಚೆರಗಿ ಮಂಗಳಸೂತ್ರ ಹೋದವು ಬೀಸುಕಲ್ಲಾ

A. ಉಪ್ಪು ಎಣ್ಣಿ ಅರಿಸಿನ ಜೀರಗಿ ಅಕ್ಕಿ ಸಕ್ಕಾರಿ ಬೆಲ್ಲಾ.

D. ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ

ಈ ಮೇಲಿನ ಪದ್ಯದ ಸಾಲಿನ ಸರಿಯಾದ ಕ್ರಮವನ್ನು ತಿಳಿಸಿ

a)

CABD

b)

ABCD

c)

DCBA

d)

ACBD

34.

A. ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾ

B. ಗಂಗಳ ಚೆರಗಿ ಮಂಗಳಸೂತ್ರ ಹೋದವು ಬೀಸುಕಲ್ಲಾ

C ಉಪ್ಪು ಎಣ್ಣಿ ಅರಿಸಿನ ಜೀರಗಿ ಅಕ್ಕಿ ಸಕ್ಕಾರಿ ಬೆಲ್ಲಾ.

D. ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ

ಈ ಮೇಲಿನ ಪದ್ಯ ಭಾಗದ 2 ನೇ ಸಾಲು ಯಾವುದು?

a)

A ಸಾಲು

b)

B ಸಾಲು

c)

C ಸಾಲು

d)

D ಸಾಲು

35.

A. ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾ

B. ಗಂಗಳ ಚೆರಗಿ ಮಂಗಳಸೂತ್ರ ಹೋದವು ಬೀಸುಕಲ್ಲಾ

C ಉಪ್ಪು ಎಣ್ಣಿ ಅರಿಸಿನ ಜೀರಗಿ ಅಕ್ಕಿ ಸಕ್ಕಾರಿ ಬೆಲ್ಲಾ.

D. ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ

ಈ ಮೇಲಿನ ಪದ್ಯ ಭಾಗದ 3 ನೇ ಸಾಲು ಯಾವುದು?

a)

A ಸಾಲು

b)

B ಸಾಲು

c)

C ಸಾಲು

d)

D ಸಾಲು

36.

A. ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾ

B. ಗಂಗಳ ಚೆರಗಿ ಮಂಗಳಸೂತ್ರ ಹೋದವು ಬೀಸುಕಲ್ಲಾ

C. ಸಿಕ್ಕದ್ದು ತಗೊಂಡು ಸರದ ನಿಂತರೊ ಊರಿಗೆ ಕೊಳ್ಳಿ ಕೊಟ್ಟಾ

D. ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ

ಈ ಮೇಲಿನ ಪದ್ಯ ಭಾಗಕ್ಕೆ ಸೇರದಿರುವ ಸಾಲು ಯಾವುದು?

a)

A ಸಾಲು

b)

B ಸಾಲು

c)

C ಸಾಲು

d)

D ಸಾಲು

37.

ಹಲಗಲಿಯ ಅಗಸಿ ಬಾಗಿಲಿಗೆ ಬಂದು ಬುದ್ದಿಮಾತು ಹೇಳಿದ ಸಾಹೇಬರು ಯಾರು

a)

ವಿಲಿಯಂ ಕೆರ್ರೆ

b)

ಸೆಟೆನ್ ಕೆರ್

c)

ಹೆಬಲಕ್

d)

ಹರ್ಸ್ಟ್

38.

ಶಶಿ ; ಸಸಿ : ; ಕುಠಾರ ; _______

a)

ಕೊಠಡಿ

b)

ಕಠಾರಿ

c)

ಕೊಡಲಿ

d)

ಕೋರೆ

39.

'ಹುಕುಂ' ಪದವು ಈ ಅನ್ಯದೇಶ ಪದ ವಾಗಿದೆ

a)

ಅರಬ್ಬೀ

b)

ಉರ್ದು

c)

ಹರಸಿ ಫಾರ್ಸಿ

d)

ಹಿಂದೂಸ್ಥಾನಿ

40.

'ಮುಂಗೈ' ಪದದ ಸಮಾಸದ ಹೆಸರು ಇದು:

a)

ಅಂಶಿ

b)

ಗಮಕ

c)

ತತ್ಪುರುಷ

d)

ಕ್ರಿಯಾ

41.

ಹಲಗಲಿ ಬೇಡರ ನಾಲ್ಕು ಜನರ ವೀರರ ಹೆಸರು ಇವು;

a)

ಹನುಮ ಬಾಲ ಜಡಗ ರಾಮ

b)

ಹನುಮ ಭೀಮ ಲಕ್ಷ್ಮಣ ರಾಮ

c)

ಜಡಗ ಕಲ್ಮೇಶ ಭೀಮ ಅರ್ಜುನ

d)

ಬಾಲ ಲಕ್ಷ್ಮಣ ಹನುಮ ಬೀರ

42.

ಅನ್ಯ ದೇಶ್ಯಕ್ಕೆ ಸೇರಿದ ಸರಿಯಾದ ಪದಗಳ ಗುಂಪು ಇದು ಅಲ್ಲ ;

a)

ಫಾರ್ಸಿ :- ಅಬಕಾರಿ, ರಸ್ತೆ, ಅಜಮಾಯಿಸಿ,ಚೌಕಾಸಿ

b)

ಉರ್ದು:- ಕಿಮ್ಮತ್ತು ,ತಾರೀಕು , ಬಂದೂಕು, ತಾಲೂಕು

c)

ಹಿಂದುಸ್ಥಾನಿ :- ಅರ್ಜಿ, ಹುಕುಂ, ಕಾಗದ, ಕಚೇರಿ

d)

ಪೋರ್ಚುಗೀಸ್:- ಮೇಜು, ಸಾಬೂನು, ಚೊಂಬು, ಕಾಯ್ದೆ

43.

"ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ" ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಬ್ರಿಟಿಷ್ ಕುಂಪಣಿ ಸರ್ಕಾರ ಅಧಿಕಾರಿಗಳಿಗೆ ಹೇಳಿತು

b)

ಹನುಮನು ಹಲಗಲಿ ಬೇಡರಿಗೆ ಹೇಳಿದನು

c)

ಜನಪದರು ಸಾಮಾನ್ಯ ಜನರಿಗೆ ಹೇಳಿದರು

d)

ಹೆಬಲಕ್ ಸಾಹೇಬ ಹಲಗಲಿ ಬೇಡರಿಗೆ ಹೇಳಿದನು

44.

"ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರು ಸಿಡಿಲ ಸಿಡಿದಾಂಗ" ಈ ವಾಕ್ಯವು ಯಾವ ಅಲಂಕಾರಕ್ಕೆ ಸೇರಿದೆ?

a)

ಉಪಮಾಲಂಕಾರ

b)

ರೂಪಕಾಲಂಕಾರ

c)

ಉತ್ಪ್ರೇಕ್ಷೆ ಅಲಂಕಾರ

d)

ದೃಷ್ಟಾಂತ ಅಲಂಕಾರ

45.

ಈ ಕೆಳಗಿನವುಗಳಲ್ಲಿ ತಪ್ಪಾದ ಸಮನಾರ್ಥಕ ಪದ ಜೋಡಿ ಇದು;

a)

ಅಗಸಿ — ಹೆಬ್ಬಾಗಿಲು

b)

ಕುಮುಕಿ — ಸಹಾಯ

c)

ಹತಾರ — ಆಯುಧ

d)

ವಿಲಾತಿ — ದೇಶ

46.

ಹಲಗಲಿಗೆ ಕಲಾದಗಿಯಿಂದ ದಂಡು ಕಳಿಸಿದ ಬ್ರಿಟಿಷ್ ಅಧಿಕಾರಿಯ ಹೆಸರೇನು?

a)

ಕಾರ ಸಾಹೇಬ( ಅಲೆಕ್ಸಾಂಡರ್ ವಿಲಿಯಂ ಕೆರ್ರೆ)

b)

ಹೆಬಲಕ್ ಸಾಬ್( ಹೆನ್ರಿ ಹ್ಯಾವ್ ಲಾಕ್)

c)

ಸೆಟೆನ್ ಕರ್

d)

ಸ್ಟಂಡ್ ಹರ್ಸ್ಟ್

47.

"ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರು ಸಿಡಿಲ ಸಿಡಿದಾಂಗ" ಈ ವಾಕ್ಯದಲ್ಲಿರುವ ಉಪಮೇಯ ಪದ ಇದು;

a)

ಮುಂಗಾರು ಸಿಡಿಲ ಸಿಡಿಯುವುದು

b)

ಒಳಗಿನ ಮಂದಿ ಗುಂಡು ಹೊಡೆಯುವುದು

c)

ಬ್ರಿಟಿಷರು ಗುಂಡು ಹೊಡೆಯುವುದು

d)

ಹಿಂಗಾರು ಸಿಡಿಲು ಸಿಡಿಯುವುದು

48.

"ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರು ಸಿಡಿಲ ಸಿಡಿದಾಂಗ" ಈ ವಾಕ್ಯದಲ್ಲಿರುವ ಉಪಮಾನ ಪದ ಇದು;

a)

ಮುಂಗಾರು ಸಿಡಿಲ ಸಿಡಿಯುವುದು

b)

ಒಳಗಿನ ಮಂದಿ ಗುಂಡು ಹೊಡೆಯುವುದು

c)

ಬ್ರಿಟಿಷರು ಗುಂಡು ಹೊಡೆಯುವುದು

d)

ಹಿಂಗಾರು ಸಿಡಿಲು ಸಿಡಿಯುವುದು

49.

ಹಲಗಲಿ ಬೇಡರು ಪದ್ಯದ ಜನಪದರ ಆರಾಧ್ಯ ದೈವ ಯಾರು?

a)

ಕಲ್ಮೇಶ

b)

ಕಲ್ಲೇಶ

c)

ಭೀಮೇಶ

d)

ರಾಮೇಶ

50.

ಹಲಗಲಿ ಈಗ ಯಾವ ಜಿಲ್ಲೆಗೆ ಸೇರಿದೆ?

a)

ಬಾಗಲಕೋಟೆ

b)

ಕಲಾದಗಿ

c)

ಮುಧೋಳ

d)

ಬೆಳಗಾವಿ