wayground logo

Free Printable Worksheets

NEW

Font size

S
M
L
XL
Worksheets

ಅಭಿವೃದ್ಧಿ (ಸಿದ್ಧಪಡಿಸಿದವರು ಅನಂತರಾಜು ಸಿ ಇ)

Total questions: 20

Worksheet time: 10mins

Name
Class
Date
1.
ಒಂದು ರಾಷ್ಟ್ರದ ನೈಜ ರಾಷ್ಟ್ರೀಯ ವರಮಾನವು ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆಯೇ ಆರ್ಥಿಕ ಅಭಿವೃದ್ಧಿ ಎಂದವರು
a)
ಪ್ರೊ.ಮೆಯರ್ ಮತ್ತು ಬಾಲ್ಡವಿನ್
b)
ಪ್ರೊ.ಕೋಲಿನ್ ಕ್ಲಾರ್ಕ್ ಮತ್ತು ಬಾಲ್ಡವಿನ್
c)
ಪ್ರೊ.ಅಮರ್ತ್ಯ ಸೆನ್ ಮತ್ತು ಬಾಲ್ಡವಿನ್
d)
ಪ್ರೊ.ಮೆಹಬೂಬ್ ಉಲ್ ಹಕ್ ಮತ್ತು ಬಾಲ್ಡವಿನ್
2.
ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸಿದ ಎಲ್ಲ ಸರಕು ಸೇವೆಗಳ ಒಟ್ಟು ಮೌಲ್ಯವನ್ನು ಹೀಗೆಂದು ಕರೆಯುತ್ತಾರೆ.
a)
ರಾಷ್ಟ್ರೀಯ ಸಂದಾಯ
b)
ತಲಾ ವರಮಾನ
c)
ರಾಷ್ಟ್ರೀಯ ವರಮಾನ
d)
ರಾಷ್ಟ್ರೀಯ ನೈಜ ವರಮಾನ
3.
ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳವೆಂದು ವಿವರಿಸಿದವರು
a)
ಪ್ರೊ.ಮೆಯರ್
b)
ಪ್ರೊ. ಬಾಲ್ಡವಿನ್
c)
ಪ್ರೊ.ಅಮರ್ತ್ಯ ಸೆನ್
d)
ಪ್ರೊ.ಕೋಲಿನ್ ಕ್ಲಾರ್ಕ್
4.

ನೈರ್ಸಗಿಕ ಸಂಪನ್ಮೂಲಗಳನ್ನು ಮತ್ತು ಪರಿಸರವನ್ನು ಮುಂದಿನ ಪೀಳಿಗೆಯವರಿಗಾಗಿ ಸಂರಕ್ಷಿಸಿ ಪ್ರಯೋಜನ ನೀಡುವಂಥ ಅಭಿವೃದ್ಧಿ

a)

ಗ್ರಾಮೀಣ ಅಭಿವೃದ್ಧಿ

b)

ನಿರಂತರ ಅಭಿವೃದ್ಧಿ

c)

ಸಾಮಾಜಿಕ ಅಭಿವೃದ್ಧಿ

d)

ಶೈಕ್ಷಣಿಕ ಅಭಿವೃದ್ಧಿ

5.
ನೀಡಿರುವ ಹೇಳಿಕೆಗಳಲ್ಲಿ ಯಾವುದು ಅನಾಭಿವೃದ್ಧಿ ರಾಷ್ಟ್ರದ ಲಕ್ಷಣವಾಗಿರುವುದಿಲ್ಲ.
a)
ಜನಸಂಖ್ಯೆ ಕಡಿಮೆ
b)
ಉತ್ಪಾದನೆ ಕಡಿಮೆ
c)
ತಲಾವರಮಾನ ಕಡಿಮೆ
d)
ರಾಷ್ಟ್ರೀಯ ವರಮಾನ ಕಡಿಮೆ
6.
ತಲಾವರಮಾನವನ್ನು ಲೆಕ್ಕ ಹಾಕುವ ವಿಧಾನ
a)
ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸುವುದು.
b)
ರಾಷ್ಟ್ರೀಯ ವೆಚ್ಚವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸುವುದು.
c)
ರಾಷ್ಟ್ರೀಯ ಕಂದಾಯ ವರಮಾನವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸುವುದು.
d)
ರಾಷ್ಟ್ರೀಯ ನೈಜ ವರಮಾನವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸುವುದು.
7.
ಮಧ್ಯಮ ಮತ್ತು ಕಡಿಮೆ ವರಮಾನ ಹೊಂದಿದ ರಾಷ್ಟ್ರಗಳನ್ನು ಹೀಗೆಂದು ಕರೆಯುತ್ತಾರೆ.
a)
ಅಭಿವೃದ್ಧಿ ರಾಷ್ಟ್ರಗಳು
b)
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು
c)
ಹಿಂದುಳಿದ ರಾಷ್ಟ್ರಗಳು
d)
ಅಭಿವೃದ್ಧಿ ಹೊಂದದ ರಾಷ್ಟ್ರಗಳು
8.
ರಾಷ್ಟ್ರೀಯ ವರಮಾನದಿಂದ ದೇಶದ ಆರ್ಥಿಕ ಅಭಿವೃದ್ಧಿ ಅಳೆಯು ಸಾಧ್ಯವಿಲ್ಲ ಏಕೆಂದರೆ
a)
ರಾಷ್ಟ್ರೀಯ ವರಮಾನದ ಪ್ರತಿ ವರ್ಷ ಹೆಚ್ಚಾಗುವುದರಿಂದ
b)
ರಾಷ್ಟ್ರೀಯ ವರಮಾನದ ಜೊತೆಗೆ ತಲಾ ವರಮಾನ ಹೆಚ್ಚಾಗುವುದರಿಂದ
c)
ರಾಷ್ಟ್ರೀಯ ವರಮಾನದ ಜೊತೆಗೆ ಜನಸಂಖ್ಯೆಯು ಹೆಚ್ಚಾಗುವುದರಿಂದ
d)
ರಾಷ್ಟ್ರೀಯ ವರಮಾನ ದೀರ್ಘಾವಧಿಯವರೆಗೆ ಹೆಚ್ಚಾಗುವುದರಿಂದ
9.
HDI ವಿಸ್ತೃತ ರೂಪ
a)
ಮಾನವ ಅಭಿವೃದ್ಧಿ ಪ್ರಗತಿ
b)
ಮಾನವ ಅಭಿವೃದ್ಧಿ ಸಂಸ್ಥೆ
c)
ಮಾನವ ಕಲ್ಯಾಣ ಅಭಿವೃದ್ಧಿ ಸಂಸ್ಥೆ
d)
ಮಾನವ ಅಭಿವೃದ್ಧಿ ಸೂಚ್ಯಂಕ
10.
ಮಾನವ ಅಭಿವೃದ್ಧಿ ಸೂಚ್ಯಂಕ ಮಾನದಂಡವನ್ನು ರಚಿಸಿದವರು
a)
UNCHR
b)
UNDP
c)
UNO
d)
UNICEF
11.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಿರೀಕ್ಷೀತ ಜೀವಿತಾವಧಿ ಎಂದರೆ
a)
ಜನರು ಜೀವಿಸುವ ಸರಾಸರಿ ಆಯಸ್ಸು
b)
ಆರೋಗ್ಯವಂತ ಜನರ ಸರಾಸರಿ ಆಯಸ್ಸು
c)
50ವರ್ಷ ಮೇಲ್ಪಟ್ಟ ಜನರ ಸರಾಸರಿ ಆಯಸ್ಸು
d)
60ವರ್ಷ ಮೇಲ್ಪಟ್ಟ ಜನರ ಸರಾಸರಿ ಆಯಸ್ಸು
12.
2014ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ
a)
187
b)
136
c)
135
d)
131
13.
ಮಾನವನ ಸಾಮರ್ಥ್ಯಗಳನ್ನು ವಿಸ್ತರಿಸುವ ಪ್ರಕ್ರಿಯೆಯೇ ಮಾನವ ಅಭಿವೃದ್ಧಿ ಎಂದು ವ್ಯಾಖ್ಯಾನಿಸಿದವರು
a)
ಪ್ರೊ. ಬಾಲ್ಡವಿನ್
b)
ಪ್ರೊ.ಮೆಹಬೂಬ್ ಉಲ್ ಹಕ್
c)
ಪ್ರೊ.ಕೋಲಿನ್ ಕ್ಲಾರ್ಕ್
d)
ಪ್ರೊ.ಅಮರ್ತ್ಯ ಸೆನ್
14.
ಲಿಂಗಾನುಪಾತ ಎಂದರೆ
a)
ಪ್ರತಿ 2000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ
b)
ಪ್ರತಿ 1000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ
c)
ಪ್ರತಿ 100 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ
d)
ಪ್ರತಿ 5000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ
15.
2011ರ ಜನಗಣಿತಿ ಪ್ರಕಾರ ಪುರುಷರ ಸಾಕ್ಷರತಾ ದರ
a)
ಶೇ 82.14
b)
ಶೇ 85.14
c)
ಶೇ 87.14
d)
ಶೇ 84.14
16.
2011ರ ಜನಗಣಿತಿ ಪ್ರಕಾರ ಮಹಿಳೆಯರ ಸಾಕ್ಷರತಾ ದರ
a)
ಶೇ 62.46
b)
ಶೇ 63.46
c)
ಶೇ 65.46
d)
ಶೇ 64.46
17.
ಭಾರತದಲ್ಲಿ ಲಿಂಗಾನುಪಾತ ಕುಸಿಯುತ್ತಿರಲು ಪ್ರಮುಖ ಕಾರಣ
a)
ಹೆಣ್ಣು ಶಿಶು ಮರಣ ದರ ಆಧಿಕ
b)
ಹೆಣ್ಣು ಮಕ್ಕಳ ಅಪೌಷ್ಟಿಕತೆ ಆಧಿಕ
c)
ತಾಯಂದಿರ ಮರಣ ದರ ಆಧಿಕ
d)
ಹೆಣ್ಣು ಭ್ರೂಣ ಹತ್ಯೆ
18.
ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆಯ ಪ್ರಮುಖ ಉದ್ದೇಶ
a)
ಕುಟುಂಬದ ವರಮಾನ ಹೆಚ್ಚಿಸಲು
b)
ಮಹಿಳಾ ಸಬಲೀಕರಣ
c)
ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ
d)
ಲಿಂಗ ತಾರತ್ಯಮ ನಿವಾರಣೆಗಾಗಿ
19.
ಜೀವಿತಾವಧಿಯ, ಸಾಕ್ಷರತೆಯ ಪ್ರಮಾಣ ಮತ್ತು ತಲಾ ವರಮಾನ ಈ ಮೂರು ಸೂಚಿಗಳ ಸರಾಸರಿ ಸೂಚ್ಯಂಕವೇ
a)
ಮಾನವನ ಆರೋಗ್ಯ ಸೂಚ್ಯಂಕ
b)
ಮಾನವನ ಕಲ್ಯಾಣ ಸೂಚ್ಯಂಕ
c)
ಮಾನವ ಅಭಿವೃದ್ಧಿ ಸೂಚ್ಯಂಕ
d)
ಮಾನವನ ಆರ್ಥಿಕ ಸೂಚ್ಯಂಕ
20.
2011ರ ಜನಗಣಿತಿಯ ಅನುಸಾರ ಭಾರತದ ಲಿಂಗಾನುಪಾತವು
a)
945
b)
963
c)
989
d)
930