NEW
Font size
Worksheets10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ 11:ಭಾಗ 03:ರಚನೆ: ನಟರಾಜ &ಭಾಗ್ವತ್
Total questions: 15
Worksheet time: 8mins
ಈಶಾನ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಬಂಗಾಳಕೊಲ್ಲಿಯಲ್ಲಿ ಸಂಭವಿಸುವ ಇವು ಹೆಚ್ಚು ವಿನಾಶಕಾರಿ.
ನೈಋತ್ಯ ಮಾನ್ಸೂನ್ ಮಾರುತಗಳು
ಉಷ್ಣವಲಯದ ಆವರ್ತಮಾರುತಗಳು
ಸುನಾಮಿ
ಭೂಕಂಪ
ಭಾರತದ ಪೂರ್ವ ಕರಾವಳಿಯ ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾ ತೀರಗಳು ತೀವ್ರ ಸವೆತಕ್ಕೆ ಕಾರಣವಾಗುವುದು
ಸುನಾಮಿ
ನೈಋತ್ಯ ಮಾನ್ಸೂನ್ ಮಾರುತಗಳು
ಉಷ್ಣವಲಯದ ಆವರ್ತಮಾರುತಗಳು
ಕೊಟ್ಟಿರುವ ಯಾವುದೂ ಅಲ್ಲ
ವಿಶೇಷವಾಗಿ ಪೂರ್ವಕರಾವಳಿ ಮತ್ತು ಅಂಡಮಾನ-ನಿಕೋಬಾರ್ ದ್ವೀಪಗಳ ಕರಾವಳಿಗಳ ಕೊರೆತದಲ್ಲಿ ಹೆಚ್ಚು ಪರಿಣಾಮ ಬೀರುವುದು ಯಾವುದು?
ಸುನಾಮಿ
ಉಷ್ಣವಲಯದ ಆವರ್ತಮಾರುತಗಳು
ನೈಋತ್ಯ ಮಾನ್ಸೂನ್ ಮಾರುತಗಳು
ವಾಯುಭಾರ ಕುಸಿತ
ಈ ಕೆಳಗಿನ ಮಾನವನ ಯಾವ ಕೃತ್ಯಗಳು ಸಮುದ್ರ ತೀರಗಳ ಕೊರೆತಕ್ಕೆ ಕಾರಣವಾಗುತ್ತವೆ?
ಮರಳು ಗಣಿಗಾರಿಕೆ,
ಅಲೆತಡೆಗಳ ನಿರ್ಮಾಣ ಮೊದಲಾದವು.
ಮಿತಿಮೀರಿದ ಮರಳು ಮತ್ತು ಕಲ್ಲು ಗಣಿಗಾರಿಕೆ
ಕೊಟ್ಟಿರುವ ಎಲ್ಲವುಗಳಿಂದ
ಈ ಕೆಳಗಿನ ಯಾವುದು ಸಮುದ್ರ ಕೊರೆತದ ಪರಿಣಾಮ?
ಕರಾವಳಿ ಪ್ರದೇಶದ ಕಟ್ಟಡ ಮತ್ತು ಮರಗಳು ಕೊಚ್ಚಿಹೋಗುವುದು.
ಕರಾವಳಿಯ ರಸ್ತೆ ಮತ್ತು ರೈಲು ಮಾರ್ಗಗಳಿಗೆ ಧಕ್ಕೆ.
ಹೆಚ್ಚು ಕಾಲ ಕರಾವಳಿಯಲ್ಲಿ ನೀರು ತುಂಬಿಕೊಳ್ಳುವುದರಿಂದ
ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸುವ ಸಮಸ್ಯೆ.
ಕೊಟ್ಟಿರುವ ಎಲ್ಲವೂ ಸಮುದ್ರ ಕೊರೆತದ ಪರಿಣಾಮಗಳೇ ಆಗಿವೆ.
ಸಮುದ್ರ ಕೊರೆತವನ್ನು ನಾವು ಹೇಗೆ ನಿಯಂತ್ರಿಸಬಹುದು?
ಸಮುದ್ರ ಅಲೆಗಳ ಹೊಡೆತವನ್ನು ನಿಯತ್ರಿಸಲು ಸಮುದ್ರ ಗೋಡೆ, ತಡೆಗಟ್ಟು
ಮತ್ತು ಅಲೆತಡೆಗಳ ನಿರ್ಮಾಣ.
ತೀರಗಳಲ್ಲಿ ಮರಳು ಮತ್ತು ಗಣಿಗಾರಿಕೆಗಳ ನಿಷೇಧ .
ಸಮುದ್ರ ದಡ ಮತ್ತು ಮರಳು ರಾಶಿಗಳನ್ನು ಉಳಿಸಲು ಮತ್ತು ಸುಸ್ಥಿರತೆಗಾಗಿ ಮರಗಳನ್ನು ಬೆಳೆಸುವುದು.
ಕೊಟ್ಟಿರುವ ಎಲ್ಲಾ ಕ್ರಮಗಳಿಂದ ಸಮುದ್ರ ಕೊರೆತವನ್ನು ನಾವು ನಿಯಂತ್ರಿಸಬಹುದು
ನೈಸರ್ಗಿಕ ವಿಪತ್ತುಗಳಲ್ಲಿ ಒಂದಾದ ಇದು ಭೂಚಿಪ್ಪಿನಲ್ಲಾಗುವ ರಭಸವಾದ ಕಂಪನ.
ಸುನಾಮಿ
ಭೂಕುಸಿತ
ಭೂಕಂಪ
ಸಮುದ್ರ ಕೊರೆತ
ಕೆಳಗಿನವುಗಳಲ್ಲಿ ಭೂಕಂಪನಕ್ಕೆ ಮಾನವ ನಿರ್ಮಿತ ಕಾರಣ ಯಾವುದು ?ಗುರುತಿಸಿ
ಭೂಫಲಕಗಳ ಚಲನೆ,
ಜ್ವಾಲಾಮುಖಿ, ಶಿಲಾಸ್ತರಗಳ ಭಂಗ ಮತ್ತು ಮಡಿಕೆ,
ಜಲಾಶಯಗಳ ನೀರಿನ ಭಾರ .
ಅಂತರ್ಗುಹೆ ಮೇಲ್ಛಾವಣಿಯ ಕುಸಿತ
ಭಾರತದಲ್ಲಿ ಈವರೆಗೆ ಸಂಭವಿಸಿರುವ ಭೂಕಂಪನಗಳಲ್ಲಿ ಬಹಳಷ್ಟು ಸಂಭವಿಸಿರುವುದು
ಭೂಫಲಕಗಳ ಚಲನೆಯಿಂದ
ಶಿಲಾಸ್ತರಗಳ ಭಂಗ ಮತ್ತು ಮಡಿಕೆ ಯಿಂದ
ಮಾನವ ನಿರ್ಮಿತ ಜಲಾಶಯಗಳ ನೀರಿನ ಭಾರದಿಂದ
ಅಂತರ್ಗುಹೆ ಮೇಲ್ಛಾವಣಿಯ ಕುಸಿತದಿಂದ
ಅಂತರ್ಜಲ ಮಟ್ಟದಲ್ಲಿ ವ್ಯತ್ಯಾಸ, ನದಿ ವ್ಯವಸ್ಥೆಯ ವಿಚಲನೆ ಅಥವಾ ಅಡಚಣೆ ಇತ್ಯಾದಿ ಸಂಭವಿಸುವುದು ಕೊಟ್ಟಿರುವ ಯಾವುದರ ಪರಿಣಾಮದಿಂದ?
ಜ್ವಾಲಾಮುಖಿಯಿಂದ
ಸಮುದ್ರ ಕೊರೆತದಿಂದ
ಭೂಕಂಪನದಿಂದ
ಆವರ್ತಮಾರುತಗಳಿಂದ
ಭಾರತದಲ್ಲಿ ಹೆಚ್ಚು ತೀವ್ರತೆಯುಳ್ಳ ಭೂಕಂಪನ ವಲಯ
ಹಿಮಾಲಯ ವಲಯ
ಸಿಂಧೂ-ಗಂಗ ವಲಯ
ಪರ್ಯಾಯ ದ್ವೀಪವಲಯ
ಕರಾವಳಿ ತೀರ
ಹಿಮಾಲಯ ವಲಯದಲ್ಲಿ ಹೆಚ್ಚು ಭೂಕಂಪನ ಸಂಭವಿಸುವುದು ಈ ಕಾರಣದಿಂದ
ಅಂತರ್ಜಲ ಗುಹೆಗಳ ಕುಸಿತದಿಂದ
ಭೂಫಲಕಗಳ ಚಲನೆಯ ಪರಿಣಾಮದಿಂದ
ಜ್ವಾಲಾಮುಖಿಗಳಿಂದ
ಭೂ ಕುಸಿತದಿಂದ
ಭಾರತದಲ್ಲಿ ಮಧ್ಯಮ ತೀವ್ರತೆಯುಳ್ಳ ಭೂಕಂಪನ ವಲಯ
ಸಿಂಧೂ-ಗಂಗ ವಲಯ
ಹಿಮಾಲಯ ವಲಯ
ಪರ್ಯಾಯ ದ್ವೀಪ ವಲಯ
ಕೊಟ್ಟಿರುವ ಯಾವುದೂ ಅಲ್ಲ
ಭಾರತದ ಈ ಭಾಗವನ್ನು ಅಚಲವಾದ ಭೂಭಾಗವೆಂದು
ಪರಿಗಣಿಸಲಾಗಿದ್ದು, ಈ ವಲಯದಲ್ಲಿ ಭೂಕಂಪಗಳು ಸಂಭವಿಸುವುದು ಕಡಿಮೆ. ಹೀಗಾಗಿ ಇತ್ತೀಚಿಗೆ ಈ ವಲಯವನ್ನು `ಕನಿಷ್ಠ ಭೂಕಂಪ ತೀವ್ರತೆಯ ವಲಯ’ ಎಂದು ಪರಿಗಣಿಸಲಾಗಿದೆ.
ಹಿಮಾಲಯ ವಲಯ
ಸಿಂಧೂ-ಗಂಗ ವಲಯ
ಪರ್ಯಾಯ ದ್ವೀಪ
ಕೊಟ್ಟಿರುವ ಯಾವುದೂ ಅಲ್ಲ
ಉತ್ತಮ ದರ್ಜೆಯ ಕಟ್ಟಡ ನಿರ್ಮಾಣದ ವಸ್ತುಗಳ ಬಳಕೆ ಮತ್ತು ಬಹುಮಹಡಿ ಕಟ್ಟಡ
ನಿರ್ಮಾಣವನ್ನು ಕೈಬಿಡುವುದು, ಅಂತರ್ಜಲಕ್ಕಾಗಿ ಬಾವಿಗಳ ಆಳಕೊರೆತವನ್ನು ನಿಷೇಧಿಸುವುದು , ಬಹುದೊಡ್ಡ ಅಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣಕ್ಕೆ ನಿಷೇಧ ಇವೆಲ್ಲ ಯಾವುದರ ಮುನ್ನೆಚ್ಚರಿಕೆ ಕ್ರಮಗಳು?
ಜ್ವಾಲಾಮುಖಿ
ಭೂಕಂಪ
ಆವರ್ತಮಾರುತ
ಸಮುದ್ರ ಕೊರೆತ
