Worksheets10ನೇ ಸವಿ:ಇತಿಹಾಸ:ಅಧ್ಯಾಯ:03:ಭಾಗ:02-By Nataraj& Bhagwat
Total questions: 10
Worksheet time: 5mins
ಬ್ರಿಟೀಷ್ ಭಾರತದಲ್ಲಿ ‘ಪೋಲೀಸ್ ಕಾಯ್ದೆ’ಯನ್ನು ಜಾರಿಗೊಳಿಸಲಾದ ವರ್ಷ.
1861ರಲ್ಲಿ
1866ರಲ್ಲಿ
1856ರಲ್ಲಿ
1858ರಲ್ಲಿ
ಬ್ರಿಟೀಷ್ ಭಾರತದಲ್ಲಿ ಈ ಕಾಯ್ದೆಯು ವಿದ್ಯಾರ್ಹತೆಯನ್ನು ಪಡೆದವರನ್ನು ಅಧಿಕಾರಿ ಹುದ್ದೆಗೆ ನೇಮಿಸುವ ಅವಕಾಶವನ್ನು ಕಲ್ಪಿಸಿತು
1861 ರ ಪೋಲೀಸ್ ಕಾಯ್ದೆ
1902ರ ಪೋಲೀಸ್ ಕಮಿಷನ್ ಕಾಯ್ದೆ
1773ರ ರೆಗುಲೇಟಿಂಗ್ ಶಾಸನ
ಕೊಟ್ಟಿರುವ ಯಾವುದೂ ಅಲ್ಲ
ಈ ಶಿಫಾರಸ್ಸುಗಳ ಆಧಾರದ ಮೇಲೆ ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲಾಯಿತು.
ಮೆಕಾಲೆ ಸಮಿತಿ
ವುಡ್ ವರದಿ
ಪೀಲ್ ಸಮಿತಿ
ಕೊಟ್ಟಿರುವ ಯಾವುದೂ ಅಲ್ಲ
ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಲಾರ್ಡ ಕಾರ್ನವಾಲಿಸ್ 1793ರಲ್ಲಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದ ಹೊಸ ಕಂದಾಯ ಪದ್ಧತಿಯನ್ನು
ಖಾಯಂ ಜಮೀನ್ದಾರಿ ಪದ್ಧತಿ ಎಂದು ಕರೆಯಲಾಯಿತು
ಮಹಲ್ವಾರಿ ಪದ್ಧತಿ ಎಂದು ಕರೆಯಲಾಯಿತು
ರೈತವಾರಿ ಪದ್ಧತಿ ಎಂದು ಕರೆಯಲಾಯಿತು
ಕೊಟ್ಟಿರುವ ಯಾವುದೂ ಅಲ್ಲ
ಕೆಳಗೆ ಕೊಟ್ಟಿರುವ ಯಾವುದು ಜಮೀನ್ಧಾರಿ ಪದ್ಧತಿಯ ಲಕ್ಷಣ?
ಈ ಪದ್ಧತಿಯಲ್ಲಿ ಜಮೀನ್ದಾರನು ಭೂಮಾಲೀಕನಾದನು. ಈ ಹೊಸ ಯೋಜನೆಯ ಪ್ರಕಾರ ಜಮೀನ್ದಾರನು ಪ್ರತಿವರ್ಷವೂ ನಿರ್ದಿಷ್ಟ ದಿನಕ್ಕೆ ಮೊದಲೇ ಅವನು ಒಪ್ಪಿಕೊಂಡಿದ್ದ ಕಂದಾಯದ ಮೊತ್ತವನ್ನು ಸರಕಾರಕ್ಕೆ ಸಲ್ಲಿಸಬೇಕಿತ್ತು.
ಭೂಮಾಲೀಕನಿಗೆ ಈ ಪದ್ಧತಿಯಿಂದ ಹೆಚ್ಚಿನ ಲಾಭವಾಯಿತು. ಏಕೆಂದರೆ ಸರಕಾರಕ್ಕೆ ಸಲ್ಲಿಬೇಕಾದ ಹಣದ ಮೊತ್ತಕ್ಕಿಂತ ಹೆಚ್ಚಿಗೆ ವಸೂಲು ಮಾಡಿದ ಹಣವನ್ನು ಅವನೇ ಇಟ್ಟುಕೊಳ್ಳಬಹುದಾಗಿತ್ತು.
ಬರಗಾಲ (ಅನಾವೃಷ್ಟಿ) ಅಥವಾ ವಿಪರೀತ ಮಳೆ ಅತಿವೃಷ್ಟಿಯ ಕಾರಣದಿಂದ ಕಂದಾಯವನ್ನು ವಸೂಲಿ ಮಾಡಲು ಸಾಧ್ಯವಾಗದೆ ಸರಕಾರಕ್ಕೆ ಸಲ್ಲಿಸಬೇಕಾದ ಹಣದ ಮೊತ್ತವನ್ನು ಸಲ್ಲಿಸಲಾಗದಿದ್ದರೆ, ಬ್ರಿಟಿಷ ಸರಕಾರವೂ ಭೂಮಿಯ
ಒಡೆತನವನ್ನು ಅವನಿಂದ ಕಸಿದುಕೊಳ್ಳುತ್ತಿತ್ತು.
ಕೊಟ್ಟಿರುವ ಎಲ್ಲವೂ ಸಂಬಂಧಿಸಿವೆ
ಕೊಟ್ಟಿರುವ ಯಾವುದು ಜಮೀನ್ಧಾರಿ ಪದ್ಧತಿಯ ದುಷ್ಪರಿಣಾಮ?
ಈ ಪದ್ಧತಿಯಿಂದ ಬ್ರಿಟಿಷರಿಗೆ ಮತ್ತು ಜಮೀನ್ದಾರರಿಗೆ ಲಾಭವಾಯಿತೇ ವಿನಃ ರೈತರಿಗಾಗಲಿಲ್ಲ.
ಬ್ರಿಟಿಷರು ತಮಗೆ ನೆರವಾಗುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರರನ್ನು ಸೃಷ್ಟಿ ಮಾಡಿದರು. ರೈತರು, ರೈತ ಕೂಲಿಕಾರ್ಮಿಕರು ಜಮೀನ್ದಾರರ ಭೂಮಿಯಲ್ಲಿ ಕೆಲಸ ಮಾಡಲು ನಿರಂತರ ಅವಕಾಶಗಳೂ ಸಿಗದೆ ಬಹುಮುಖಿ ಶೋಷಣೆಗೆ ಒಳಗಾದರು ಅತಂತ್ರ ಸ್ಥಿತಿಯಲ್ಲೇ ಬದುಕನ್ನು ಕಳೆಯತೊಡಗಿದರು.
“ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು”.
ಕೊಟ್ಟಿರುವ ಎಲ್ಲವೂ ಜಮೀನ್ಧಾರಿ ಪದ್ಧತಿಯ ದುಷ್ಪರಿಣಾಮಗಳೇ ಆಗಿವೆ
ಬ್ರಿಟಿಷ್ ಭೂಕಂದಾಯ ನೀತಿಗಳಿಂದ “ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು”.ಈ ಹೇಳಿಕೆ
ಲಾರ್ಡ್ ಕಾರ್ನವಾಲೀಸ್ ನದು
ಚಾರ್ಲ್ಸ ಮೆಟಕಾಫ್
ಮೆಕಾಲೆ
ಪೀಲ್
ಆರ್.ಎಂ. ಬರ್ಡ್ ಮತ್ತು ಜೇಮ್ಸ್ ಥಾಮ್ಸನ್ ಪ್ರಯೋಗಿಸಿದ ಕಂದಾಯ ಪದ್ಧತಿ
ಖಾಯಂ ಜಮೀನ್ಧಾರಿ
ಮಹಲ್ವಾರಿ
ರೈತವಾರಿ
ಕೊಟ್ಟಿರುವ ಯಾವುದೂ ಅಲ್ಲ
ಮಹಲ್ವಾರಿ ಪದ್ಧತಿಯ ಲಕ್ಷಣಗಳು/ಪರಿಣಾಮಗಳು ಯಾವುವು?
ಮಹಲ್ಲುಗಳೇ ಸಾಮೂಹಿಕ ಒಪ್ಪಂದಗಳನ್ನು ಮಾಡಿಕೊಂಡು, ಸರಕಾರಕ್ಕೆ ತೆರಿಗೆಯನ್ನು ಸಲ್ಲಿಸುವ ಪದ್ಧತಿ
ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಈ ಪದ್ಧತಿಯ ಅನುಷ್ಠಾನದಲ್ಲಿ ವ್ಯತ್ಯಾಸಗಳಿದ್ದವು. ದೊಡ್ಡ ಮತ್ತು ಸಣ್ಣ ಪ್ರಮಾಣದ ಜಮೀನ್ದಾರರು ಈ ಪದ್ಧತಿಯ ಭಾಗವಾಗಿದ್ದರು.
ಕಂಪನಿಯ ಸರ್ಕಾರದ ಅಧಿಕಾರಿಗಳು ಜಮೀನಿನಲ್ಲಿ ಆಗುವ ಉತ್ಪಾದನೆಗಿಂತಲೂ ಹೆಚ್ಚಿನ ಮೊತ್ತದ ವಾರ್ಷಿಕ ಪಾವತಿಗಳನ್ನು ನಿರ್ಧರಿಸಿದ್ದರಿಂದ ಅನೇಕ ಜಮೀನ್ದಾರರು ತಮ್ಮ ಭೂಮಾಲಿ ಕತ್ವವನ್ನು ಕಳೆದುಕೊಂಡರು. ಅವರನ್ನೇ ನೆಚ್ಚಿ ಬದುಕುತ್ತಿದ್ದ ಸಣ್ಣ ಕೃಷಿಕರು, ಕೃಷಿ ಕೂಲಿಕಾರರು ನಿರ್ಗತಿಕರಾದರು.
ಕೊಟ್ಟಿರುವ ಎಲ್ಲವೂ
ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಮಹಲ್ ಪ್ರಾಂತ್ಯದಲ್ಲಿ 1792ರಲ್ಲಿ ಜಾರಿಗೊಳಿಸಿದವರು
ಅಲೆಕ್ಸಾಂಡರ್ ರೀಡ್
ಥಾಮಸ್ ಮನ್ರೊ
ಕಾರ್ನ ವಾಲೀಸ್
ಆರ್.ಎಂ. ಬರ್ಡ್ ಮತ್ತು ಜೇಮ್ಸ್ ಥಾಮ್ಸನ್
