NEW
Font size
Worksheets10ನೇ ಸವಿ:ಇತಿಹಾಸ:ಅಧ್ಯಾಯ:04:ಭಾಗ 04:By Nataraj &Bhagwat
Total questions: 10
Worksheet time: 5mins
ಪುಟ್ಟಬಸಪ್ಪನ ಬ್ರಿಟಿಷ್ ವಿರುದ್ಧದ ಕಾರ್ಯಾಚರಣೆಯನ್ನು ಗುರುತಿಸಿ
ಪುಟ್ಟಬಸಪ್ಪ ಬಂಡುಕೋರರನ್ನು ಸಂಘಟಿಸಿ ಜನರನ್ನು ಸಂತೈಸಿದನು.
ಬಂಡುಕೋರರ ಸರ್ಕಾರ ಸ್ಥಾಪನೆಯ ನಂತರ ತಂಬಾಕು ಮತ್ತು ಉಪ್ಪಿನ ಮೇಲಿನ
ಸುಂಕವನ್ನು ರದ್ದು ಮಾಡಲಾಗುವುದು ಎಂದೂ ಘೋಷಿಸಲಾಯಿತು. ಶ್ರೀಮಂತ ರೈತರು, ಪಾರುಪತ್ತೆಗಾರರು, ಭೂಹಿಡುವಳಿದಾರರಿಗೆ ಆಶ್ವಾಸನೆಗಳನ್ನು ನೀಡಲಾಯಿತು. ಬೆಳ್ಳಾರೆಯಲ್ಲಿದ್ದ ಸರ್ಕಾರಿ ಕಛೇರಿಯನ್ನು
ವಶಪಡಿಸಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿದನು
ಸುಳ್ಯ ಮತ್ತು ಆಸುಪಾಸಿನಲ್ಲಿ ಸಾಮಾನ್ಯ ಜನರಿಗೆ ಕಿರುಕುಳ ನೀಡುತ್ತಿದ್ದ ಅಮಲ್ದಾರನೋರ್ವನ ಹತ್ಯೆ ಮಾಡಲಾಯಿತು
ಕೊಟ್ಟಿರುವ ಎಲ್ಲವೂ
ಇವನ ಕಾಲದಲ್ಲಿ ಸುರಪುರ ಬ್ರಿಟಿಷ ವಿರೋಧಿ ಬಂಡಾಯದ ಕಿಚ್ಚನ್ನು ಗಳಿಸಿಕೊಂಡಿತು.
ವೆಂಕಟಪ್ಪ ನಾಯಕ
ಸಂಗೊಳ್ಳಿ ರಾಯಣ್ಣ
ಪುಟ್ಟ ಬಸಪ್ಪ
ಕೆದಂಬಾಡಿ ರಾಮಯ್ಯಗೌಡ
ಬ್ರಿಟಿಷರು ಯಾರನ್ನು ಪೊಲಿಟಿಕಲ್ ಏಜೆಂಟನನ್ನಾಗಿ ನೇಮಿಸಿ ಸಂಸ್ಥಾನದ ಮೇಲೆ ತಮ್ಮ ಪರೋಕ್ಷ ಹತೋಟಿಯನ್ನು ಸ್ಥಾಪಿಸಿದರು.
ಥ್ಯಾಕರೆ
ಥಾಮಸ್ ಮನ್ರೊ
ಮೆಡೋಸ್ ಟೇಲರ್
ಕೃಷ್ಣಪ್ಪ ನಾಯಕ
ಟೇಲರ್ ಸುಧಾರಣಾವಾದಿಯೂ ಆಗಿದ್ದನು ಹೇಗೆಂದರೆ
ಸುರಪುರ ಸಂಸ್ಥಾನವನ್ನು ಅಭಿವೃದ್ಧಿಪಡಿಸಿದನು.
ಪೆದ್ದನಾಯಕನನ್ನು ಸಂಸ್ಥಾನದ ದಿವಾನನನ್ನಾಗಿ ನೇಮಿಸಿದನು.
ಸಂಸ್ಥಾನದಾದ್ಯಂತ ಭೂಸಮೀಕ್ಷೆ ಮಾಡಿಸಿದನು. ವೆಂಕಟಪ್ಪ ನಾಯಕನಿಗೆ
ಸೂಕ್ತವಾದ ಶಿಕ್ಷಣವನ್ನು ಕೊಡಿಸುವ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟನು
ಕೊಟ್ಟಿರುವ ಎಲ್ಲವೂ ಸಂಬಂಧಿಸಿವೆ
1857ರಲ್ಲಿ ಬ್ರಿಟಿಷರು ಸುರಪುರದ ರಾಜನನ್ನು ಸಂಶಯದಿಂದ ಕಾಣುವಂತಾಯಿತು ಏಕೆಂದರೆ ---
ಸುರಪುರವು ಕಿತ್ತೂರಿನ ಜೊತೆ ಸೇರಿತ್ತು
ಸುರಪುರವು ಸಂಗೊಳ್ಳಿ ರಾಯಣ್ಣನಿಗೆ ಸಹಾಯ ಮಾಡಿತು
1857ರಲ್ಲಿ ಪ್ರಾರಂಭದ ಹೋರಾಟದಲ್ಲಿನ ನಾನಾಸಾಹೇಬನ ಪ್ರತಿನಿಧಿಗಳು ಸುರಪುರದಲ್ಲಿದ್ದಾರೆ ಎಂಬ ಪುಕಾರು ಕಂಡುಬಂದಿತು
ಕೊಟ್ಟಿರುವ ಯಾವುದೂ ಅಲ್ಲ
ಕರ್ನಾಟಕದ ಚರಿತ್ರೆಯಲ್ಲಿ 1857ರ ಕ್ರಾಂತಿಯ ನಾಯಕನೆಂದೂ ಇತಿಹಾಸಕಾರರು ವರ್ಣಿಸಿರುವುದು ----
ಸಂಗೊಳ್ಳಿ ರಾಯಣ್ಣನನ್ನು
ಸುರಪುರ ವೆಂಕಟಪ್ಪ ನಾಯಕನನ್ನು
ಕೊಪ್ಪಳದ ವೀರಪ್ಪನನ್ನು
ದೋಂಡಿಯವಾಘನನ್ನು
ಕೊಪ್ಪಳದ ವೀರಪ್ಪನು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವನ್ನು ಗುರುತಿಸಿ
ವೀರಪ್ಪ ಜಮೀನ್ದಾರನಾಗಿದ್ದು ಬಂಡೆದ್ದು ಕೊಪ್ಪಳ ಮತ್ತು ಸನಿಹದ ಕೋಟೆಗಳನ್ನು ತನ್ನ ಸುಪರ್ದಿಗೆ ವಹಿಸಿಕೊಂಡನು.
ವೀರಪ್ಪನ ಈ ಉದ್ದೇಶದ ಮರ್ಮ ಅರಿತ ಅನೇಕ ರೈತರು ಮತ್ತು ಜಮೀನ್ದಾರರು
ಆತನೊಂದಿಗೆ ಕೈ ಜೋಡಿಸಿದರು.
ಕಡಿಮೆ ಸೈನಿಕರ ಬೆಂಬಲವನ್ನು ಹೊಂದಿದ್ದ ವೀರಪ್ಪ ಸತತವಾಗಿ ಹೋರಾಟವನ್ನು ನಡೆಸಿ ಮರಣ ಹೊಂದಿದನು.
ಕೊಟ್ಟಿರುವ ಎಲ್ಲವೂ ವೀರಪ್ಪನು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವೇ ಆಗಿವೆ
ಹಲಗಲಿ ಎಂಬುದು ಒಂದು ಪುಟ್ಟಗ್ರಾಮವು ಹಿಂದೆ ಈ ಸಂಸ್ಥಾನದ ಆಳ್ವಿಕೆಗೆ ಒಳಪಟ್ಟಿತು.
ಮುದೋಳ
ಕಿತ್ತೂರು
ಸುರಪುರ
ಸುಳ್ಯ
ಹಲಗಲಿಯ ಬೇಡರು ಬ್ರಿಟಿಷರ ವಿರುದ್ದ ಸಿಡಿದೇಳಲು ಕಾರಣ
ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳುವ ಉದ್ದೇಶದಿಂದ
ಸಂಗೊಳ್ಳಿ ರಾಯಣ್ನನಿಗೆ ಸಹಕರಿಸಲು
ಬ್ರಿಟಿಷರ ತೆರಿಗೆ ನೀತಿ ವಿರೋಧಿಸಿ
ಕೊಟ್ಟಿರುವ ಯಾವುದೂ ಅಲ್ಲ
ಸುರಪುರವು ಈಗಿನ _________ ಜಿಲ್ಲೆಯಲ್ಲಿದೆ.
ರಾಯಚೂರು
ಯಾದಗಿರಿ
ವಿಜಯಪುರ
ಬಾಗಲಕೋಟೆ
