NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಎರಡು ಅಂಕದ ಪ್ರಶ್ನೆಗಳು-2
Total questions: 20
Worksheet time: 15mins
Name
Class
Date
1.
ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
a)
ಶೋಷಣೆಗೊಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ ಭರವಸೆಗಳನ್ನು ಮೂಡಿಸುವುದರ ನಡುವೆ
b)
ಭಾಷೆ, ಜಾತಿ, ಮತಧರ್ಮಗಳ ಭೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ. ಅವುಗಳನ್ನು ಕೆಡವುದರ ನಡುವೆ
c)
ಮನುಜ ಮನುಜರ ನಡುವೆ ಪ್ರೀತಿ, ಸ್ನೇಹ, ವಿಶ್ವಾಸದ ಸೇತುವೆಯಾಗಬೇಕಿದೆ.
d)
ಈ ಎಲ್ಲವೂ
2.
ಮುಂಗಾರಿನ ಮಳೆಯಾದಾಗ ಪ್ರಕೃತಿ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ವಸಂತನಕಾಲದ ಆಗಮನ ಬರಡಾಗಿರುವ ಕಾಡು-ಮೇಡುಗಳಲ್ಲಿ ಮರಗಿಡಗಳು ಸಮೃದ್ಧವಾಗಿ ಚಿಗುರಿ ಪ್ರಕೃತಿಗೆ ನವಚೈತನ್ಯದ ರೀತಿಯಲ್ಲಿ ಮುಟ್ಟಬೇಕಾಗಿದೆ - ಇದು ಯಾವ ಪ್ರಶ್ನೆಗೆ ಉತ್ತರವಾಗಿದೆ.
a)
ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
b)
ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?
c)
ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ?
d)
ಯಾವುದು ಅಲ್ಲ
3.
ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?
a)
ಮತಪಂಥಗಳೆಲ್ಲವೂ ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ ಮಾರ್ಗಗಳೆಂದು ತಿಳಿದು ಎಚ್ಚರಿಕೆಯಲ್ಲಿ ನಾವು ಬದುಕಬೇಕು.
b)
ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗಗಳೆಂದು ತಿಳಿದು ಎಚ್ಚರಿಕೆಯಲ್ಲಿ ನಾವು ಬದುಕಬೇಕು.
c)
ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ, ಕನಸ್ಸನ್ನು ಬಿತ್ತುತ್ತ ಬದುಕು ನಡೆಸಬೇಕು.
d)
ಈ ಎಲ್ಲಾ ರೀತಿಯಲ್ಲಿ
4.
ಕಾಲದ ಹಕ್ಕಿಯ ರೆಕ್ಕೆ ಪುಚ್ಚ ಗರಿಗಳನ್ನು ಯಾವ ಯಾವ ಬಣ್ಣಗಳಿಗೆ ಹೋಲಿಸಿದ್ದಾರೆ?
a)
ರೆಕ್ಕೆಗಳನ್ನು ಕೆಂಪಾದ, ಹೊಳೆಯುವ ಹೊನ್ನಿನ ಬಣ್ಣ ಬಣ್ಣಗಳಿಗೆ ಹೋಲಿಸಿದ್ದಾರೆ.
b)
ಪುಚ್ಚಗಳನ್ನು ಕಪ್ಪು ಮತ್ತು ಬಿಳಿ ಬಣ್ಣಕ್ಕೆ ಹೋಲಿಸಿದ್ದಾರೆ.
c)
ಹಕ್ಕಿಯ ಗರಿಗಳನ್ನು ಬಿಳಿ-ಹೊಳೆ ಬಣ್ಣಕ್ಕೆ ಹೋಲಿಸಿದ್ದಾರೆ.
d)
ಈ ಎಲ್ಲವೂ
5.
ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು?
a)
ಕುಂಪಣಿ ಸರಕಾರ ನಿಶ್ಶಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿದ್ದರಿಂದ
b)
ಹಲಗಲಿಗೆ ಬಂದು ಜೋರ ಮಾಡಿ ಬೇಡರ ಆಯುಧಗಳನ್ನು ಕಸಿದುಕೊಳ್ಳಲು ಹೋಗಿದ್ದರಿಂದ
c)
ರಾಮ, ಬಾಲ, ಹನುಮ, ಜಡಗ ಮೊದಲಾದ ಹಲಗಲಿ ಬೇಡರು ತಮ್ಮಲ್ಲಿರುವ ಆಯುಧಗಳನ್ನು ಕೊಡಲೊಪ್ಪದೆ ಇರುವುದು
d)
ಈ ಎಲ್ಲಾ ಕಾರಣಗಳಿಂದ
6.
ವೀರ ಕಲಿಗಳ ವೀರಸಾಹಸ, ವೀರರ ಉಜ್ವಲ ಜೀವನದ ಘಟನೆಗಳನ್ನಾಧರಿಸಿದ ಕಥನಾತ್ಮಕ ಕಾವ್ಯಗಳಾಗಿದ್ದು ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ಏನೆಂದು ಕರೆಯಲಾಗುತ್ತದೆ ?
a)
ಭಾವಗೀತೆಗಳೆಂದು
b)
ವೀರಗೀತೆಗಳೆಂದು
c)
ಜನಪದಗೀತೆಗಳೆಂದು
d)
ಶಿಶುಗೀತೆಗಳೆಂದು
7.
ಇವರನ್ನು ಹೊಡಿಯಿರಿ, ಇವರು ಸಂಪೂರ್ಣವಾಗಿ ಮೋಸಗಾರರು, ವಿಶ್ವಾಸವಂಚಕರು ಇವರ ಮೇಲೆ ನಂಬಿಗೆ ಇಲ್ಲ. ಒಳಸಂಚಿನಿಂದ ಮೋಸಮಾಡಿ ನಮ್ಮ ದೇಶ ಗೆಲ್ಲುತ್ತಾರೆ. ಮುಂದೆ ನಮಗೆ ಆಪತ್ತು ಕಾದಿದೆ ಎಂದು ಯಾರು ಹೇಳಿದರು ?
a)
ಜಡಗ
b)
ಹೆಬಲಕ್
c)
ಕಾರಸಾಹೇಬ
d)
ಸಿಪಾಯಿ
8.
ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?
a)
ಬ್ರಿಟಿಷ್ ದಂಡಿನ ಸಿಪಾಯಿಗಳು ಹಲಗಲಿಯ ಬೇಡರನ್ನು ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು.
b)
ಬೇಡರನ್ನು ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು ಸಾಯಿಸಿದರು.
c)
ಸಿಕ್ಕದ್ದನ್ನೆಲ್ಲ ತೆಗೆದುಕೊಂಡು ಊರಿಗೆ ಕೊಳ್ಳಿ ಇಟ್ಟು ಗುರುತು ಉಳಿಯದಂತೆ ಸುಟ್ಟು ಬೂದಿ ಮಾಡಿ ಹೋದರು.
d)
ಈ ಎಲ್ಲಾ ರೀತಿಯಲ್ಲಿ
9.
“ಕರ್ಣ ನಿಮ್ಮೊಳಗೆ ಯಾದವರೊಳಗೆ, ಕೌರವರೊಳಗೆ ಯಾವುದೇ ವ್ಯತ್ಯಾಸ ಇಲ್ಲ. ವಂಶವನ್ನು ಪ್ರತಿಪಾದಿಸಿ ಹೇಳುವುದಾದರೆ ಮೊದಲೆರಡಿಲ್ಲ. ನಿನ್ನಾಣೆಗೂ ನೀನು ಈ ಭೂಮಿಯ ಒಡೆಯ, ನಿನ್ನ ಮನಸ್ಸಿನಲ್ಲಿ ಇದರ ಅರಿವು ಯಾವುದು ಇಲ್ಲ.” ಈ ರೀತಿಯಾಗಿ ಕರ್ಣನ ಮನದಲ್ಲಿ ಭಯವನ್ನು ಬಿತ್ತಿದವರು ಯಾರು ?
a)
ಕೃಷ್ಣ
b)
ಕುಂತಿ
c)
ಧರ್ಮರಾಯ
d)
ರಾಜೀವ ಸಖ
10.
ಕುಂತಿ, ಮಾದ್ರಿಯರು ಯಾರ್ಯಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು?
a)
ಸೂರ್ಯದೇವನ ಅನುಗ್ರಹದಿಂದ ಕರ್ಣನನ್ನು, ಯಮಧರ್ಮನ ಅನುಗ್ರಹದಿಂದ ಧರ್ಮರಾಯನನ್ನು ಪಡೆದರು.
b)
ವಾಯುದೇವನ ಅನುಗ್ರಹದಿಂದ ಭೀಮನನ್ನು, ಇಂದ್ರದೇವನ ಅನುಗ್ರಹದಿಂದ ಅರ್ಜುನನನ್ನು ಪಡೆದಳು.
c)
ಮಾದ್ರಿ ಅಶ್ವಿನಿ ದೇವತೆಯರ ಅನುಗ್ರಹದಿಂದ ನಕುಲ ಮತ್ತು ಸಹದೇವರನ್ನು ಪಡೆದಳು.
d)
ಈ ಎಲ್ಲಾ ರೀತಿಯಲ್ಲಿ
11.
ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ?
a)
ಆಗಸದಲ್ಲಿರುವ ಮುಗಿಲು ಹಸುರಾಗಿ ಕಾಣುತ್ತಿದೆ. ಗದ್ದೆಯ ಬಯಲೆಲ್ಲ ಹಸುರಾಗಿ ಗೋಚರಿಸಿದೆ
b)
ಮಲೆ(ಬೆಟ್ಟ), ಕಣಿವೆಗಳೆಲ್ಲವು ಹಸುರಾಗಿವೆ.
c)
ಸಂಜೆಯ ಬಿಸಿಲು ಕೂಡ ಕವಿಗೆ ಹಸುರು ಕಾಣುತ್ತಿದೆ.
d)
ಈ ಎಲ್ಲದರಲ್ಲೂ
12.
ಕುವೆಂಪುರವರು ಪ್ರಕೃತಿಯ ಯಾವ ಯಾವ ಅಂಶಗಳಲ್ಲಿ ಹಸುರನ್ನು ಗುರುತಿಸಿದ್ದಾರೆ ?
a)
ಆಗಸ, ಮುಗಿಲು, ಬಯಲು, ಬೆಟ್ಟ, ಕಣಿವೆ, ಬಿಸಿಲು
b)
ಭತ್ತದ ಗದ್ದೆ, ಅಡಕೆಯ ತೋಟ, ಹೂವಿನ ಕಂಪು, ಗಾಳಿಯ ತಂಪು
c)
ಹಕ್ಕಿಯ ದ್ವನಿ, ಇಳೆಯ ಗಾಳಿ, ಕಡಲು ಹಾಗೂ ತಮ್ಮ ಒಡಲಿನ ರಕ್ತ
d)
ಈ ಎಲ್ಲದರಲ್ಲೂ
13.
ಈ ನೆಲಕ್ಕಾಗಿ ಹೋರಾಡುವೆನೆಂದು ಭಾವಿಸಿದಿರಾ? ಇಲ್ಲ. ಛಲಕ್ಕಾಗಿಯೇ ಪಾಂಡುವಿನ ಮಕ್ಕಳಲ್ಲಿ ಹೋರಾಡುತ್ತೇನೆ. ಪ್ರೀತಿಯ ಗೆಳೆಯ ಕರ್ಣ, ಪ್ರೀತಿಯ ತಮ್ಮ ದುಶ್ಯಾಸನ, ಎನ್ನ ನೂರು ಮಕ್ಕಳನ್ನು ಕೊಲ್ಲಿಸಿದ ಈ ನೆಲ ನನಗೆ ಹಾಳು ಬಿದ್ದಿರುವ ನೆಲ. ಸತ್ತವರು ಮತ್ತೆ ಹುಟ್ಟಿಬರುವುದಿಲ್ಲ ಆದ್ದರಿಂದ ನಾನು ಛಲಕ್ಕಾಗಿ ಹೋರಾಡುತ್ತಿರುವುದು” - ಎಂದು ಹೇಳುವವರು
a)
ದುರ್ಯೋಧನ
b)
ಕರ್ಣ
c)
ಭೀಷ್ಮ
d)
ದ್ರುಪದ
14.
ನಾನು ಹೇಳುವ ಮಾತನ್ನು ಒಪ್ಪುವೆಯಾದರೆ ಪಾಂಡವರನ್ನು ಒಪ್ಪಿಸಿ, ಸಂಧಿಯನ್ನು ಮಾಡಿಸಿ ಮೊದಲಿನಂತೆಯೇ ನಡೆದುಕೊಳ್ಳುವ ಹಾಗೆ ಮಾಡುವೆನು. ಈಗಲಾದರೂ ಅವರು ನಾನು ಹೇಳುವುದನ್ನು ಒಪ್ಪಿಕೊಳ್ಳದೆ ಮೀರುವವರಲ್ಲ. ನೀನು ನಾನು ಹೇಳುವುದುನ್ನು ಮೀರದೆ ನಡೆದುಕೊಳ್ಳಬೇಕು” ಎಂದು ದುರ್ಯೋಧನನಿಗೆ ಸಂಧಿಗೆ ಒಪ್ಪಿಸಲು ಪ್ರಯತ್ನಿಸುವವರು ಯಾರು ?
a)
ಕರ್ಣ
b)
ಕೃಷ್ಣ
c)
ಭೀಷ್ಮ
d)
ಧೃತರಾಷ್ಟ್ರ
15.
“ಭೂಮಂಡಲದಲ್ಲಿ ಕೌಸಲ್ಯ ಪಡೆದ ಕುಮಾರ ಶ್ರೀರಾಮನೊಬ್ಬನೇ ವೀರನು, ಆತನ ಯಜ್ಞನದ ಕುದುರೆ ಇದು. ನಿರ್ವಹಿಸಲು ಸಮರ್ಥರಾದವರು ಯಾರಾದರೂ ಇದ್ದರೆ ತಡೆಯಲಿ” ಎಂದು ಎಲ್ಲಿ ಬರೆಯಲಾಗಿತ್ತು ?
a)
ಯಜ್ಞಾಶ್ವದ ಬಾಲದಲ್ಲಿ ಬರೆಯಲಾಗಿತ್ತು
b)
ಯಜ್ಞಾಶ್ವದ ಬೆನ್ನಮೇಲೆ ಬರೆಯಲಾಗಿತ್ತು
c)
ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಬರೆಯಲಾಗಿತ್ತು
d)
ಯಜ್ಞಾಶ್ವದ ಹೊಟ್ಟೆಯಲ್ಲಿ ಬರೆಯಲಾಗಿತ್ತು
16.
“ಬೇಡ ಬೇಡ ರಾಜರ ಕುದುರೆಯನ್ನು ಬಿಡು ನಮ್ಮನ್ನು ಅವರು ಬಡಿಯುತ್ತಾರೆ.” ಎನ್ನುತ್ತಾರೆ. ಆಗ ಲವನು ನಗುತ್ತ “ಬ್ರಾಹ್ಮಣರ ಮಕ್ಕಳು ಹೆದರಿದರೆ ಸೀತೆಯ ಮಗನು ಇದಕ್ಕೆ ಹೆದರುವನೆ, ಹೋಗಿ ನೀವು” - ಈ ರೀತಿಯ ಸಂಭಾಷಣೆ ಯಾವ ವಿಚಾರದಲ್ಲಿ ನಡೆಯಿತು ?
a)
ಕುದುರೆಯನ್ನು ಬಿಡುವ ವಿಚಾರದಲ್ಲಿ
b)
ಕುದುರೆಯನ್ನು ಕಟ್ಟುವ ವಿಚಾರದಲ್ಲಿ
c)
ಕುದುರೆಯನ್ನು ನೋಡುವ ವಿಚಾರದಲ್ಲಿ
d)
ಕುದುರೆಯನ್ನು ಓಡಿಸುವ ವಿಚಾರದಲ್ಲಿ
17.
ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅಘ್ರ್ಯವನ್ನು ಕೊಡಲು ಕಾರಣವೇನು?
a)
ಪರುಶುರಾಮನು ಒಡವೆಗಳನ್ನೆಲ್ಲ ಬೇಡಿದವರಿಗೆ ಕೊಟ್ಟಿದ್ದನು.
b)
ಭೂಮಂಡಲವನ್ನು ಗುರುಗಳಿಗೆ ಕೊಟ್ಟಿದ್ದನು.
c)
ಕನಕಪಾತ್ರೆ ಇಲ್ಲದಿರುವುದರಿಂದ
d)
ಈ ಎಲ್ಲಾ ಕಾರಣಗಳಿಂದ
18.
“ನಿನ್ನನ್ನು ನಾನು ತಿಳಿಯೆನು. ಎನ್ನನ್ನು ನೀನು ಅದೆಲ್ಲಿ ಕಂಡಿದ್ದಿಯೋ? ರಾಜನಿಗೂ ಬ್ರಾಹ್ಮಣವಂಶದವನಿಗೂ ಯಾವ ವಿಧವಾದ ಗೆಳೆತನ? ಹೀಗೆ ಮನುಷ್ಯರಾದವರು ನಾಚಿಕೆಯಿಲ್ಲವರಾಗು ತ್ತಾರೆಯೇ” - ಎಂದು ಗರ್ವದಿಂದ ಯಾರು ಯಾರಿಗೆ ಹೇಳಿದರು ?
a)
ದ್ರೋಣ - ದ್ರಪದರಿಗೆ
b)
ದ್ರುಪದ - ದ್ರೋಣರಿಗೆ
c)
ಕೃಷ್ಣ - ಕರ್ಣನಿಗೆ
d)
ಪರಶುರಾಮ - ದ್ರೋಣರಿಗೆ
19.
ದ್ರೋಣನು ಶಪಥ ಮಾಡುವಾಗ ಹೇಳಿದ ಮಾತುಗಳಾವುವು?
a)
ಎಲೈ ದುಷ್ಟನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು ಎನ್ನುವ ಹಾಗೆ ನಿನ್ನ ಪರಾಕ್ರಮ ನನ್ನವರೆಗೂ ಉಂಟೆ?
b)
ಜೊತೆಯಲ್ಲಿ ಓದಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ.
c)
ಜೊತೆಯಲ್ಲಿ ಓದಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ.
d)
ಈ ಎಲ್ಲಾ ಮಾತುಗಳು
20.
ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು?
a)
ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ.
b)
ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ.
c)
ಶೂದ್ರರು, ಅಸ್ಪøಶ್ಯರು ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿದ್ದಾರೆ.
d)
ಈ ಎಲ್ಲಾ ರೀತಿಯಲ್ಲಿ
Reset
