NEW
Font size
Worksheets9th ಸೇತುಬಂಧ
Total questions: 20
Worksheet time: 20mins
ಅವರು, ಅವಳು, ಅದು, ಅರಿವು
ಈ ಮೇಲಿನ ಪದಗಳನ್ನು ಅಕಾರಾದಿಯಾಗಿ ಜೋಡಿಸಿದ ಯಾವ ಕ್ರಮ ಸರಿಯಾಗಿದೆ ?
ಅರಿವು, ಅದು, ಅವಳು, ಅವರು
ಅದು, ಅರಿವು, ಅವರು, ಅವಳು
ಅವರು, ಅರಿವು ಅದು ಅವಳು
ಅವಳು, ಅದು ಅವರು ಅರಿವು
ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಾದೆ ?
ಕನ್ನಡ ವರ್ಣಮಾಲೆಯಲ್ಲಿ 13 ಸ್ವರಗಳಿವೆ
ಕನ್ನಡ ವರ್ಣಮಾಲೆಯಲ್ಲಿ 34 ವ್ಯಂಜನಗಳಿವೆ
'ಔ' ಹೃಸ್ವ ಸ್ವರವಾಗಿದೆ
ವರ್ಗೀಯ ವ್ಯಂಜನಗಳ ಸಂಖ್ಯೆ 25
ಕೆಳಗಿನವುಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರ ಯಾವುದು ?
ಕತ್ತರಿ
ಮದ್ದು
ಸಕ್ಕರೆ
ವಿದ್ಯೆ
ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ.
ಗುರು + ಅನ್ನು = ಗುರುವನ್ನು
ಮಾತು + ಇಲ್ಲ = ಮಾತಿಲ್ಲ
ಕೈ + ಅಲ್ಲಿ = ಕೈಯಲ್ಲಿ
ಮನೆ + ಇಂದ = ಮನೆಯಿಂದ
ನಾಮಪದದ ಮೂಲ ರೂಪವನ್ನು ನಾಮ ಪ್ರಕೃತಿ ಎನ್ನುವರು
ಈ ಮೇಲಿನ ಹೇಳಿಕೆ ಸರಿಯೊ, ತಪ್ಪೊ ತಿಳಿಸಿ
ಸರಿ
ತಪ್ಪು
'ಹಣ್ಣನ್ನು' ಪದದಲ್ಲಿರುವ ವಿಭಕ್ತಿ ಪ್ರತ್ಯಯ.........
ಪ್ರಥಮಾ ವಿಭಕ್ತಿ ಪ್ರತ್ಯಯ
ದ್ವಿತೀಯಾ ವಿಭಕ್ತಿ ಪ್ರತ್ಯಯ
ಪಂಚಮೀ ವಿಭಕ್ತಿ ಪ್ರತ್ಯಯ
ತೃತೀಯಾ ವಿಭಕ್ತಿ ಪ್ರತ್ಯಯ
'ಶಿಕ್ಷಕರು ತರಗತಿಯನ್ನು ಆರಂಭಿಸಿದರು'
ಮೇಲಿನ ವಾಕ್ಯದಲ್ಲಿರುವ ಕರ್ಮ ಪದ ಯಾವುದು
ಶಿಕ್ಷಕ
ತರಗತಿ
ಆರಂಭಿಸು
'ಪತ್ರಗಳನ್ನಿಡು' ಪದವನ್ನು ಬಿಡಿಸಿ ಬರೆದಾಗ .......... ಆಗುತ್ತದೆ
ಪತ್ರ + ಗಳನ್ನಿಡು
ಪತ್ರಗಳನ್ನು + ಇಡು
ಪತ್ರಗಳು + ಇಡು
ಕೆಳಗಿನವುಗಳಲ್ಲಿ ಪಡೆನುಡಿಗೆ ಉದಾಹರಣೆ ಯಾವುದು ?
ಕಟ್ಟಕಡೆ
ಅವಳಿ ಜವಳಿ
ಹೊಂಚು ಹಾಕು
ಕಲ್ಲು : ಮಣ್ಣು : : ಗುಡ್ಡ : ..........
ಗದ್ದೆ
ಬೆಟ್ಟ
ಈ ಚಿತ್ರದಲ್ಲಿರುವ ಕವಿಯತ್ರಿ ಯಾರು ?
ಡಾ. ನಿರುಪಮಾ
ಶಾಂತಿ ನಾಯಕ
ಸವಿತಾ ನಾಗ ಭೂಷಣ
ವಿಜಯಮಾಲಾ ರಂಗನಾಥ
ಕೆಳಗಿನ ಕವಿ / ಕವಿಯತ್ರಿ ಮತ್ತು ಅವರ ಕೃತಿಗಳ ತಪ್ಪಾ ಜೋಡಿಯನ್ನು ಗುರುತಿಸಿ.
ಶಾಂತಿ ನಾಯಕ - ಜೀವ ಉಳಿಸುವ ಮರಗಳು
ಗೋರೂರು ರಾಮ ಸ್ವಾಮಿ ಅಯ್ಯಂಗಾರ - ನಮ್ಮ ಊರಿನ ರಸಿಕರು
ಡಾ. ನಿರುಪಮಾ - ರಣ ಹದ್ದು
ಜಿ.ಎಸ್. ಬಸವರಾಜ ಶಾಸ್ತ್ರಿ - ಬೆಳಕಿನೆಡೆಗೆ
ಕವಿ ಜಿ.ಎಸ್.ಎಸ್ ಅವರು ದೇವರನ್ನು ......... ರೂಪದಲ್ಲಿ ಕಂಡರು
ಗುಡಿ
ಕಲ್ಲು ಮಣ್ಣು
ಪ್ರೀತಿ ಸ್ನೇಹ
ಕೋಟೆ
'ಕೀರ್ತಿ' ಪದದ ವಿರುದ್ಧಾರ್ಥಕ ಪದ .....
ಅಕೀರ್ತಿ
ಅಪಕೀರ್ತಿ
'ತೀ' ಗುಣಿತಾಕ್ಷರದಲ್ಲಿರುವ ಸ್ವರ ......
ಇ
ಈ
ತ್
ನಿನಗೆ + ಅಲ್ಲದೆ = ನಿನಗಲ್ಲದೆ
ಇಲ್ಲಿ ಉತ್ತರ ಪದ ಯಾವುದು ?
ನಿನಗೆ
ಅಲ್ಲದೆ
ನಿನಗಲ್ಲದೆ
ಕೆಳಗಿನವುಗಳಲ್ಲಿ ವ್ಯಾಕರಣ ಶುದ್ಧ ಪದವನ್ನು ಗುರುತಿಸಿ.
ಬಳಳಿ
ಬಳಲಿ
ಬಲಿಳ
( ; ) ಮತ್ತು ( , ) ಇವು ಯಾವ ಲೇಖನ ಚಿಹ್ನೆಗಳು
ಅರ್ಧ ವಿರಾಮ ಮತ್ತು ಅಲ್ಪ ವಿರಾಮ
ಪ್ರಶ್ನಾರ್ಥಕ ಮತ್ತು ಆಶ್ಚರ್ಯ ಚಿಹ್ನೆ
ಉದ್ಧರಣಾ ಚಿಹ್ನೆಗಳು
ಸ್ನೇಹಿತೆ, ರಾಣಿ, ಅರಸಿ, ಹೆಣ್ಣುಮಗು
ಇವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು
ಸ್ನೇಹಿತೆ
ರಾಣಿ
ಅರಸಿ
ಹೆಣ್ಣುಮಗು
ಕುಂಬಾರನಿಗೆ ವರುಷ ದೊಣ್ಣೆಗೆ .......
ಹರುಷ
ನಿಮಿಷ
