NEW
Font size
Worksheetsಸಮಾಸಗಳು
Total questions: 25
Worksheet time: 13mins
ಎರಡು ಅಥವಾ ಅನೇಕ ವಿಭಿನ್ನ ಅರ್ಥ ಕೊಡುವ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವದೇ ?
ಸಂಧಿಗಳು
ಸಮಾಸಗಳು
ವಿಭಕ್ತಿಗಳು
ಅರಿಸಮಾಸ
ಸಮಾಸವಾಗಿರುವ ಪದವನ್ನು ಯಾವ ಅರ್ಥದಲ್ಲಿ ಸೇರಿವೆ ಎಂಬುವದನ್ನು ವಿವರಿಸುವದೇ?
ಸಮಾಸ
ಪೂರ್ವಪದ
ವಿಗ್ರಹವಾಕ್ಯ
ಸಮಾಸ ಪದ
ಸಮಾಸ ಕ್ರಿಯೆಯ ನಿಬಂಧನೆಗಳು ?
ಸಂಸ್ಕೃತ - ಸಂಸ್ಕೃತ ಪದ ಸೇರಿ ಸಮಾಸ ಮಾಡಬಹುದು.
ಕನ್ನಡ – ಕನ್ನಡ ಪದ ಸೇರಿ ಸಮಾಸ ಮಾಡಬಹುದು.
ತದ್ಭವ – ತದ್ಭವ ಪದ ಸೇರಿ ಸಮಾಸ ಮಾಡಬಹುದು.
ಎಲ್ಲವೂ
ಕನ್ನಡ ಪದದೊಡನೆ ಸಂಸ್ಕೃತ ಪದ ಸೇರಿ ಸಮಾಸ ಮಾಡಬಾರದು ಹಾಗೆ ಮಾಡಿದರೆ ಅದನ್ನು -------------- ಎನ್ನುವರು.
ತತ್ಪುರುಷಸಮಾಸ
ದ್ವಿಗು ಸಮಾಸ
ಅರಿ ಸಮಾಸ
ಅಂಶಿ ಸಮಾಸ
ಅರಿ ಸಮಾಸ ದೋಷವಿಲ್ಲದ ಸಮಾಸಗಳು?
ತತ್ಪುರುಷ - ಕರ್ಮಧಾರೆಯ
ದ್ವಿಗು - ಅಂಶಿ
ದ್ವಂದ್ವ - ಬಹುವ್ರೀಹಿ
ಕ್ರಿಯಾ - ಗಮಕ
ಇದು ಅರಿ ಸಮಾಸಕ್ಕೆ ಉದಾಹರಣೆಯಾದ ಪದ?
ಮಳೆಗಾಲ
ದಳಪತಿ
ಮಂಗಳಾರತಿ
ಎಲ್ಲವೂ
ಸಮಾಸದ ಪ್ರಕಾರಗಳೆಷ್ಟು?
04
06
08
10
ತತ್ಪುರುಷ ಸಮಾಸ ಎಂದರೇ?
ಉತ್ತರ ಪದದ ಅರ್ಥ ಪ್ರಧಾನವಾಗಿದ್ದು, ಪೂರ್ವೋತ್ತರ ಪದಗಳು ವಿಶೇಷಣ + ವಿಶೇಷ ಸಂಬಂಧದಿಂದ ಕೂಡಿರುವುದೇ ಕರ್ಮಧಾರೆಯ ಸಮಾಸ.
ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರದ ನಾಮಪದದೊಡನೆ ಸೇರಿ ಸಮಾಸವಾದರೆ ಅದುವೇ ದ್ವಿಗು ಸಮಾಸ. ಇಲ್ಲಿ ಉತ್ತರ ಪದದ ಅರ್ಥವು ಪ್ರಧಾನವಾಗಿರುತ್ತದೆ.
ಎರಡು ನಾಮಪದಗಳು ಸೇರಿ ಸಮಾಸವಾಗುವಾಗ ಉತ್ತರ ಪದದ ಅರ್ಥಪ್ರಧಾನವಾಗಿದ್ದು ಪೂರ್ವ ಪದವು ತೃತೀಯಾದಿ ವಿಭಕ್ತಿಯಿಂದ ಮೊದಲ್ಗೊಂಡು ಸಪ್ತಮಿ ವಿಭಕ್ತಿಯವರೆಗೆ ಯಾವುದಾದರೊಂದು ವಿಭಕ್ತಿಯಲ್ಲಿ ಅಂತವಾಗಿರಬೇಕು.
ಪೂರ್ವ ಪದವು ವಸ್ತುವಿನ ಒಂದು ಭಾಗವನ್ನು (ಅಂಶ) ಉತ್ತರ ಪದವು ಇಡೀ ವಸ್ತುವನ್ನು (ಅಂಶಿ) ಸೂಚಿಸುವುದಾಗಿದ್ದು ಪೂರ್ವ ಪದದ ಅರ್ಥವು ಪ್ರಧಾನವಾಗಿದ್ದರೆ ಅಂಶಿ ಸಮಾಸ ಎನ್ನುವರು.
ಕರ್ಮಧಾರೆಯ ಸಮಾಸ ಎಂದರೇ?

ದ್ವಿಗು ಸಮಾಸ ಎಂದರೇ?

ಪೂರ್ವ ಪದವು ವಸ್ತುವಿನ ಒಂದು ಭಾಗವನ್ನು (ಅಂಶ) ಉತ್ತರ ಪದವು ಇಡೀ ವಸ್ತುವನ್ನು (ಅಂಶಿ) ಸೂಚಿಸುವುದಾಗಿದ್ದು ಪೂರ್ವ ಪದದ ಅರ್ಥವು ಪ್ರಧಾನವಾಗಿದ್ದರೆ ----------- ಎನ್ನುವರು.
ಗಮಕ ಸಮಾಸ
ದ್ವಿಗು ಸಮಾಸ
ಅಂಶಿ ಸಮಾಸ
ಬಹುವ್ರೀಹಿ ಸಮಾಸ
ಇದು ತತ್ಪುರುಷ ಸಮಾಸಕ್ಕೆ ಉದಾಹರಣೆಯಾದ ಪದ?
ಮಳೆಗಾಲ
ಆ ಹುಡುಗ
ಮುಂಗೈ
ತಲೆನೋವು
ತಂಗಾಳಿ, ಹೆಜ್ಜೇನು, ಸುಖಜೀವನ ಇವು ಈ ಸಮಾಸಕ್ಕೆ ಉದಾಹರಣೆ.
ತತ್ಪುರುಷ ಸಮಾಸ
ಗಮಕ ಸಮಾಸ
ಕರ್ಮಧಾರೆಯ ಸಮಾಸ
ಕ್ರಿಯಾಸಮಾಸ
ಇದು ದ್ವಿಗು ಸಮಾಸಕ್ಕೆ ಉದಾಹರಣೆ.
ಷಟ್ಪದಿ
ಒಗ್ಗಟ್ಟು
ಏಕಾಕ್ಷಿ
ಎಲ್ಲವೂ
ಪೂರ್ವಪದವು ಉತ್ತರ ಪದವಾಗಿ ಬದಲಾಗುವ ಸಮಾಸ?
ಗಮಕ ಸಮಾಸ
ದ್ವಿಗು ಸಮಾಸ
ಅಂಶಿ ಸಮಾಸ
ಎಲ್ಲವೂ
ಎರಡು ಅಥವಾ ಹೆಚ್ಚು ನಾಮಪದಗಳು ಒಂದಕ್ಕೊಂದು ಸೇರಿ ಸಮಾಸವಾಗುವಾಗ ಎಲ್ಲ ಪದಗಳ ಅರ್ಥವು ಪ್ರಧಾನವಾಗಿದ್ದರೆ ಅದನ್ನು --------- ಸಮಾಸ ಎನ್ನುವರು.
ದ್ವಿಗು
ದ್ವಂದ್ವ
ಅಂಶಿ
ಗಮಕ
ಇದು ದ್ವಂದ್ವ ಸಮಾಸಕ್ಕೆ ಉದಾಹರಣೆ.
ರಾಮಲಕ್ಷ್ಮಣಸೀತೆ
ಭೀಮಾರ್ಜುನರು
ಗಿಡಮರಬಳ್ಳಿ
ಎಲ್ಲವೂ
ಪೂರ್ವ ಪದದ ಅಥವಾ ಉತ್ತರ ಪದದ ಅರ್ಥವಾಗಲಿ ಪ್ರಧಾನವಾಗಿರದೆ ಅನ್ಯಪದವೊಂದರ ಅರ್ಥ ಪ್ರಧಾನವಾಗಿದ್ದರೆ ಅದನ್ನು------------ ಸಮಾಸ ಎನ್ನುವರು.
ಅಂಶಿ
ಗಮಕ
ಬಹುವ್ರೀಹಿ
ತತ್ಪುರುಷ
ಮುಕ್ಕಣ್ಣ, ಚಕ್ರಪಾಣಿ, ಉರಗಪತಾಕ ಇವು ಈ ಸಮಾಸಕ್ಕೆ ಉದಾಹರಣೆ.
ಬಹುವ್ರೀಹಿ ಸಮಾಸ
ಗಮಕ ಸಮಾಸ
ಕರ್ಮಧಾರೆಯ ಸಮಾಸ
ದ್ವಿಗು ಸಮಾಸ
ಪೂರ್ವಪದ ಸರ್ವನಾಮ, ಕೃದಂತಗಳಲ್ಲಿ ಒಂದಾಗಿದ್ದು, ಉತ್ತರಪದದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ---------- ಸಮಾಸ ಎನ್ನುವರು.
ಕ್ರಿಯಾ ಸಮಾಸ
ದ್ವಂದ್ವಸಮಾಸ
ಗಮಕ ಸಮಾಸ
ಅಂಶಿ ಸಮಾಸ
ಇದು ಗಮಕ ಸಮಾಸಕ್ಕೆ ಉದಾಹರಣೆಯಾದ ಪದ?
ಆ ಹುಡುಗ
ಸಿಡಿಮದ್ದು
ಈ ಮನೆ
ಎಲ್ಲವೂ
ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯಾ ಪದದೊಡನೆ ಸೇರಿ ಆಗುವ ಸಮಾಸವನ್ನು ---------- ಸಮಾಸ ಎನ್ನುವರು.
ಗಮಕ
ಕ್ರಿಯಾ
ಅಂಶಿ
ತತ್ಪುರುಷ
ಕಂಗೆಡು, ಉಡಿತುಂಬು ಇವು ಈ ಸಮಾಸಕ್ಕೆ ಉದಾಹರಣೆ.
ಕ್ರಿಯಾಸಮಾಸ
ಬಹುವ್ರೀಹಿ ಸಮಾಸ
ಅಂಶಿ ಸಮಾಸ
ಎಲ್ಲವೂ
ಕೆಂಪಾದ + ಅಕ್ಕಿ = _________
ಕೆಂಪಕ್ಕಿ
ಕೆಂಪುಅಕ್ಕಿ
ಕೇಸಕ್ಕಿ
ಕೆಂಪಾಕ್ಕಿ
ಉತ್ತರ ಪದದ ಅರ್ಥ ಪ್ರಧಾನವಾಗಿರುವ ಸಮಾಸ?
ತತ್ಪುರುಷ
ಕರ್ಮಧಾರೆಯ
ದ್ವಿಗು
ಎಲ್ಲವೂ