NEW
Font size
Worksheetsದುಡಿಮೆ
Total questions: 15
Worksheet time: 15mins
ದಿ ರಿಪಬ್ಲಿಕ್ ಪುಸ್ತಕವನ್ನು ಬರೆದವರು ಯಾರು?
ಪ್ಲೇಟೋ
ಅರಿಸ್ಟಾಟಲ್
ಕಾರ್ಲ್ ಮಾರ್ಕ್ಸ್
ಯಾರು ಅಲ್ಲ
ಮಾನವ ಸಮಾಜವು ಸ್ವಾಭಾವಿಕ ಅಸಮಾನತೆಗಳಿಂದ ರೂಪುಗೊಳ್ಳುತ್ತದೆ ಈ ಸ್ವಾಭಾವಿಕ ಅಸಮಾನತೆಯು ಶ್ರಮ ವಿಭಜನೆಯಿಂದ ಕೂಡಿರುತ್ತದೆ ಎಂದು ಹೇಳಿದವರು ಯಾರು?
ಅರಿಸ್ಟಾಟಲ್
ಪ್ಲೇಟೋ
ವಿಲಿಯಂ ಸಾಂಗ್
ರಾಬರ್ಟ್ ಕ್ಲೈವ್
ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ ಎಂದು ಹೇಳಿದವರು ಯಾರು ?
ಡಾ. ಬಿ ಅರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಕಾರ್ಲ್ ಮಾರ್ಕ್ಸ್
ಪ್ಲೇಟೋ
ವಿಶೇಷ ಪರಿಣಿತಿ ಎಂದರೆ
ಆರ್ಥಿಕ ಶ್ರಮ ವಿಭಜನೆಯು ತಾಂತ್ರಿಕ ಅಂಶಗಳ ಜೊತೆಗೆ ಕಾರ್ಮಿಕರ ಸಹಕಾರದಿಂದ ಹೆಚ್ಚಾಗಿ ನಡೆಯುತ್ತದೆ
ಯಾವುದಾದರೂ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ ತರಬೇತಿ ಅಥವಾ ಕೌಶಲ್ಯ ಪಡೆಯುವುದು ಎಂದರ್ಥ
ಸಾಮಾಜಿಕ ಶ್ರಮ ವಿಭಜನೆಯು ವರ್ಗ ಸ್ಥಾನ ಮತ್ತು ಶ್ರೇಣಿಯ ಮೂಲಕ ಸಾಮಾಜಿಕ ನಿಯಂತ್ರಣವನ್ನು ಸಾಧಿಸುತ್ತದೆ
ಇವು ಸರಿಯಾದ ಉತ್ತರ ಗಳಲ್ಲ
ದುಡಿಮೆ ಎಂದರೆ
ಒಬ್ಬ ವ್ಯಕ್ತಿ ದೈಹಿಕ ಪರಿಶ್ರಮದಿಂದ ಅಥವಾ ಬೌದ್ಧಿಕ ಪರಿಶ್ರಮದಿಂದ ಆದಾಯ ಅಥವಾ ವಸ್ತುರೂಪದಲ್ಲಿ ಪ್ರತಿಫಲವನ್ನು ಪಡೆಯುವುದು ದುಡಿಮೆ.
ವಿಶೇಷ ಪರಿಣತಿ
ಉದ್ಯೋಗದಲ್ಲಿ ತೊಡಗಿರುವುದು
ಯಾವುದೇ ಕೆಲಸ ಮಾಡದಿರುವುದು
ದುಡಿಮೆಯ ಅಸಮಾನತೆ ಎಂದರೆ ?
ವೇತನವನ್ನು ತೆಗೆದುಕೊಳ್ಳದೇ ಇರುವುದು
ಕೆಲಸ ಮಾಡದಿರುವುದು
ಇಬ್ಬರು ವ್ಯಕ್ತಿಗಳು ಒಂದೇ ಕೆಲಸವನ್ನು ಒಂದೇ ಸಮಯದಲ್ಲಿ ಮಾಡಿದಾಗ ಒಬ್ಬರಿಗೆ ಹೆಚ್ಚು ವೇತನವನ್ನು ಮತ್ತೊಬ್ಬರಿಗೆ ಕಡಿಮೆ ವೇತನವನ್ನು ನೀಡುವುದು
ಕಡಿಮೆ ವೇತನ ತೆಗೆದುಕೊಳ್ಳುವುದು
ಈ ನಮ್ಮ ಸಮಾಜದಲ್ಲಿ ಕನಿಷ್ಠ ವೇತನ ಕ್ಕಿಂತಲೂ ಕಡಿಮೆ ಸಂಭಾವನೆಯನ್ನು ತೆಗೆದುಕೊಂಡು ಕೆಲಸ ಮಾಡುವವರು ಯಾರು ?
ಚರಂಡಿ ಬೆಳೆಯುವವರು
ಎಲ್ಲ ಉತ್ತರ ಸರಿ ಇವೆ
ಕರ್ಮಚಾರಿಗಳು
ಕಸಗುಡಿಸುವವರು
ಸಂಭಾವನೆ ರಹಿತ ದುಡಿಮೆ ಎಂದರೆ ?
ದುಡಿಮೆಯು ಕೆಲವೊಮ್ಮೆ ಆರ್ಥಿಕ ಲಾಭ ಅಥವಾ ಪ್ರತಿಫಲವಿಲ್ಲದ ಕ್ರಿಯೆಯಾಗಿರುತ್ತದೆ
ದುಡಿಮೆಗಾರರು ಯಾವುದೇ ರೀತಿಯ ಕೂಲಿಯನ್ನು ಅಥವಾ ಸಂಭಾವನೆಯನ್ನೂ ಪಡೆಯುವುದಿಲ್ಲ ಅಥವಾ ನೀಡಲಾಗುವುದಿಲ್ಲ
ಒಬ್ಬರ ದುಡಿಮೆಗೆ ಪ್ರತಿಯಾಗಿ ಯಾವುದೇ ರೀತಿಯ ಸಂಭಾವನೆ ಅಥವಾ ವಸ್ತುಗಳ ರೂಪದಲ್ಲಿ ಯಾವುದೇ ಪ್ರತಿಫಲ ಇಲ್ಲದೆ ದುಡಿಮೆಯ ಚಟುವಟಿಕೆಗೆ ಸಂಭಾವನೆ ರಹಿತ ದುಡಿಮೆ ಎಂದು ಕರೆಯುತ್ತಾರೆ
ಈ ಎಲ್ಲ ಉತ್ತರಗಳು ಸರಿ ಇವೆ
ಸಂಭಾವನೆ ರಹಿತ ದುಡಿಮೆಗೆ ಇದು ಸಂಬಂಧಿಸಿಲ್ಲ.
ನಿಗದಿತ ವೇತನವನ್ನು ಗಂಟೆಗಳ ಆಧಾರದಲ್ಲಿ ಪಡೆಯುವುದು
ನಿಗದಿತ ವೇತನವನ್ನು ದಿನಗೂಲಿಯ ಆಧಾರದಲ್ಲಿ ಪಡೆಯುವುದು
ನಿಗದಿತ ವೇತನವನ್ನು ವಾರದ ಆಧಾರದಲ್ಲಿ ಅಥವಾ ತಿಂಗಳದ ಆಧಾರದಲ್ಲಿ ಪಡೆಯುವುದು
ನಿಗದಿತ ವೇತನವನ್ನು ಪಡೆಯದೇ ಇರುವುದು
ಬಹುತೇಕ ಸಮಯದಲ್ಲಿ ದೈಹಿಕ ಶ್ರಮ ಆಧಾರಿತ ದುಡಿಮೆಗೆ ಹಣದ ಬದಲಾಗಿ ವಸ್ತುಗಳನ್ನು ಮತ್ತು ಆಹಾರ ಪದಾರ್ಥಗಳನ್ನು ದುಡಿಮೆಗಾರರಿಗೆ ಸಂಭಾವನೆ ರೂಪದಲ್ಲಿ ನೀಡಲಾಗುತ್ತಿದೆ ಇದು ಯಾವುದಕ್ಕೆ ಸಂಬಂದಿಸಿದೆ?
ಸಾಟಿ ವಿನಿಮಯ ಪದ್ಧತಿ
ಸಂಭಾವನೆ ರಹಿತ ಪದ್ಧತಿ
ಸಂಭಾವನೆ ರಹಿತ ದುಡಿಮೆ ಪದ್ದತಿ
ವಿಶೇಷ ಪರಿಣತಿ ಪದ್ಧತಿ
ಈ ಕೆಳಗಿನದು ಸಂಘಟಿತ ವಲಯಗಳ ದುಡಿಮೆಗಾರರಿಗೆ ಸಂಬಂಧಿಸಿದ್ದು ಅಲ್ಲ
ಇದು ಕಾನೂನಿನ ಚೌಕಟ್ಟಿನೊಳಗೆ ನಡೆಯುತ್ತದೆ
ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ
ಉದ್ಯೋಗದ ಭರವಸೆ ಇರುತ್ತದೆ
ನಿಗದಿತ ವೇತನವನ್ನು ಕಾನೂನಿನ ಚೌಕಟ್ಟಿನಲ್ಲಿ ನಿಗದಿಯಾಗಿರುತ್ತದೆ
ಸೇವಾ ಭದ್ರತೆ ಇರುವುದಿಲ್ಲ
ಸಂಘಟಿತ ವಲಯದ ಕಾನೂನಿನ ಚೌಕಟ್ಟು ಗಳು ಯಾವವು ?
ಕನಿಷ್ಠ ವೇತನ ಕಾಯ್ದೆ
ಕಾರ್ಖಾನೆಗಳ ಕಾಯ್ದೆ
ವಿಶೇಷ ಬತ್ತೆಗಳ ಕಾಯ್ದೆ
ಮೇಲಿನ ಎಲ್ಲವೂ ಸರಿ ಇದೆ
ಈ ಕೆಳಗಿನದ್ದು ಸಂಘಟಿತ ವಲಯದಲ್ಲಿ ಬರುವುದಿಲ್ಲ ?
ಶಾಲೆಗಳು
ಆಸ್ಪತ್ರೆಗಳು
ಕೈಗಾರಿಕೆಗಳು
ಕಟ್ಟಡ ಕೆಲಸ ಮಾಡುವವರು
ಅಸಂಘಟಿತ ವಲಯಗಳ ದುಡಿಮೆಗಾರರು ಸಂಬಂಧಿಸಿದ್ದಲ್ಲ
ದುಡಿಮೆಗೆ ಸಂಬಂಧಿಸಿದಂತೆ ಯಾವುದೇ ಕಾನೂನಿನ ಚೌಕಟ್ಟು ಇಲ್ಲದಿರುವುದು
ಈ ವಲಯದಲ್ಲಿ ದುಡಿಯುವ ಮತ್ತು ದುಡಿಸಿಕೊಳ್ಳುವವರ ನಡುವೆ ಯಾವುದೇ ರೀತಿಯ ಕಾನೂನಾತ್ಮಕ ಸಂಬಂಧಗಳು ನಿಗದಿ ಆಗಿರುವುದಿಲ್ಲ
ಅಸಂಘಟಿತ ದುಡಿಮೆ ವಲಯಕ್ಕೆ ಸರ್ಕಾರಗಳ ನೊಂದಣಿ ಅಗತ್ಯವಿಲ್ಲ
ಉದ್ಯೋಗದ ಭದ್ರತೆ ಇರುತ್ತದೆ
ಇದು ಅಸಂಘಟಿತ ವಲಯಗಳ ದುಡಿಮೆಗಾರರಲ್ಲಿ ಬರುವುದಿಲ್ಲ
ಮೋಟಾರು ವಾಹನ ರಿಪೇರಿ
ತಲೆ ಮೇಲೆ ತಳ್ಳುವ ಗಾಡಿಯ ಮೂಲಕ ತರಕಾರಿ ಮಾಡುವುದು
ಸೈಕಲ್ ರಿಪೇರಿ
ಶಾಲೆಗಳಲ್ಲಿ ಶಿಕ್ಷಕನಾಗಿ ಕೆಲಸ ಮಾಡುವುದು
