wayground logo

Free Printable Worksheets

NEW

Font size

S
M
L
XL
Worksheets

ಭಾರತದ ವಾಯುಗುಣ ಮತ್ತು ಭಾರತದ ಮಣ್ಣುಗಳು

Total questions: 20

Worksheet time: 10mins

Name
Class
Date
1.

ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರದಿರುವ ಅಂಶ

a)

ಜಲರಾಶಿಗಳು

b)

ಮೇಲ್ಮೈ ಲಕ್ಷಣ

c)

ಸಸ್ಯವರ್ಗ

d)

ಮಾನ್ಸೂನ್ ಮಾರುತಗಳು

2.

ಚಳಿಗಾಲದಲ್ಲಿ ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದ ಮೇಲೆ ಬೀಳುವುದರಿಂದ ಭಾರತದಲ್ಲಿ

a)

ಉಷ್ಣಾಂಶವು ಕಡಿಮೆ ಇರುತ್ತದೆ

b)

ಆರ್ದ್ರತೆಯು ಹೆಚ್ಚಿರುತ್ತದೆ

c)

ಉಷ್ಣಾಂಶವು ಹೆಚ್ಚುತ್ತದೆ

d)

ಆಕಾಶವು ಮೋಡ ಸಹಿತವಾಗಿರುತ್ತದೆ

3.

ಭಾರತದಲ್ಲೇ ಅತಿ ಕಡಿಮೆ ಉಷ್ಣಾಂಶ ದಾಖಲಾಗಿರುವ ಪ್ರದೇಶ

a)

ರೂಯ್ಲಿ

b)

ಮಾಸಿನ್ ರಾಮ್

c)

ಆಂಧಿಸ್

d)

ಡ್ರಾಸ್

4.

ಕರ್ನಾಟಕ : ಕಾಫಿ ಹೂಮಳೆ : : ಪಶ್ಚಿಮ ಬಂಗಾಳ : ___________

a)

ಆಂಧಿಸ್

b)

ಕಾಲಬೈಸಾಕಿ

c)

ಮಾವಿನ ಹೂಯ್ಲು

d)

ಮೌಸಿನ್

5.

ಭಾರತದಲ್ಲೇ ಅತಿ ಹೆಚ್ಚು ಮಳೆ ಪಡೆಯುವ "ಮಾಸಿನ್ ರಾಮ್" ಇರುವ ರಾಜ್ಯ

a)

ಅಸ್ಸಾಂ

b)

ನಾಗಾಲ್ಯಾಂಡ್

c)

ಮಣಿಪುರ

d)

ಮೇಘಾಲಯ

6.

ಅಕ್ಟೋಬರ್ ತಿಂಗಳ ಆರಂಭದಲ್ಲಿ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ನಿರ್ಮಾಣವಾಗುವುದರ ಪರಿಣಾಮ

a)

ನೈರುತ್ಯ ಮಾನ್ಸೂನ್ ಮಾರುತಗಳು ಮುಂದುವರೆಯುತ್ತವೆ

b)

ನೈರುತ್ಯ ಮಾನ್ಸೂನ್ ಮಾರುತಗಳು ಹಿಂದಿರುಗುತ್ತವೆ

c)

ಈಶಾನ್ಯ ಮಾನ್ಸೂನ್ ಮಾರುತಗಳು ಹಿಂದಿರುಗುತ್ತವೆ

d)

ಈಶಾನ್ಯ ಮಾನ್ಸೂನ್ ಮಾರುತಗಳು ತಟಸ್ಥವಾಗುತ್ತವೆ

7.

ಕೆಲವೊಮ್ಮೆ ಭಾರತದ ಪೂರ್ವ ತೀರದಲ್ಲಿ ಮಾತ್ರ ಹೆಚ್ಚಿನ ಹಾನಿ ಸಂಭವಿಸಲು ಕಾರಣ

a)

ಮಾನ್ಸೂನ್ ಮಾರುತಗಳು

b)

ಕಡಲ ಕೊರೆತ

c)

ಆವರ್ತ ಮಾರುತಗಳು

d)

ಭೂಕಂಪ

8.

ಭಾರತದ ಅತ್ಯಂತ ಶುಷ್ಕ ಪ್ರದೇಶ

a)

ರಣಥಂಬೋರ್

b)

ಜಲ್ದಪಾರ

c)

ಕಾಜಿರಂಗ

d)

ರೂಯ್ಲಿ

9.

ಭಾರತದಲ್ಲಿ ಈ ಮಾದರಿಯ ವಾಯುಗುಣ ಕಂಡುಬರುತ್ತದೆ

a)

ಉಷ್ಣವಲಯದ ಮಾದರಿ

b)

ಉಷ್ಣವಲಯದ ಮಾನ್ಸೂನ್ ಮಾದರಿ

c)

ಶೀತವಲಯದ ಮಾನ್ಸೂನ್ ಮಾದರಿ

d)

ಶೀತವಲಯದ ಮಾದರಿ

10.

ಭಾರತದ ಅತ್ಯಂತ ಶೀತಮಯವಾದ ತಿಂಗಳು

a)

ಫೆಬ್ರವರಿ

b)

ಡಿಸೆಂಬರ್

c)

ಜನವರಿ

d)

ಮಾರ್ಚ್

11.

ಕೆಂಪು ಮಣ್ಣಿನಲ್ಲಿ ತೇವಾಂಶ ಸಂಗ್ರಹದ ಸಾಮರ್ಥ್ಯವು ಕಡಿಮೆ ಇರಲು ಕಾರಣ ಈ ಮಣ್ಣಿನಲ್ಲಿ

a)

ಮರಳಿನಾಂಶ ಕಡಿಮೆ ಮತ್ತು ಜೇಡಿಯ ಪ್ರಮಾಣ ಹೆಚ್ಚು

b)

ಸಸ್ಯಾಂಶ ಕಡಿಮೆ ಮತ್ತು ಉಪ್ಪಿನಾಂಶ ಹೆಚ್ಚು

c)

ಸಸ್ಯಾಂಶ ಹೆಚ್ಚು ಮತ್ತು ಉಪ್ಪಿನಾಂಶ ಕಡಿಮೆ

d)

ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ

12.

ಜಂಬಿಟ್ಟಿಗೆ ಮಣ್ಣು ಜಲವಿಲೀನೀಕರಣಕ್ಕೆ ಒಳಪಡುವುದರಿಂದ ಆಗುವ ಪರಿಣಾಮ

a)

ಕೃಷಿಗೆ ಹೆಚ್ಚು ಉಪಯುಕ್ತವಾಗಿರುತ್ತದೆ

b)

ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ

c)

ಹೆಚ್ಚು ಫಲವತ್ತಾಗಿರುತ್ತದೆ

d)

ಜೈವಿಕಾಂಶವನ್ನು ಹೆಚ್ಚಾಗಿ ಹೊಂದಿರುತ್ತದೆ

13.

ಮರುಭೂಮಿ ಮಣ್ಣು ಭಾರತದ ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ

a)

ಈಶಾನ್ಯ

b)

ವಾಯುವ್ಯ

c)

ನೈರುತ್ಯ

d)

ಆಗ್ನೇಯ

14.

ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶದಲ್ಲಿ ಕಂಡುಬರುವ ಮಣ್ಣಿನ ವಿಧ

a)

ಮೆಕ್ಕಲು ಮಣ್ಣು

b)

ಕೆಂಪು ಮಣ್ಣು

c)

ಕಪ್ಪು ಮಣ್ಣು

d)

ಪರ್ವತ ಮಣ್ಣು

15.

ಪರ್ವತ ಮಣ್ಣು ಈ ಬೆಳೆಗಳ ಬೇಸಾಯಕ್ಕೆ ಸೂಕ್ತವಾದುದು

a)

ಹತ್ತಿ ಮತ್ತು ಕಬ್ಬು ಬೆಳೆಗಳು

b)

ಭತ್ತ ಮತ್ತು ಶೇಂಗಾ ಬೆಳೆಗಳು

c)

ತಂಬಾಕು ಬೆಳೆ

d)

ನೆಡುತೋಟ ಬೆಳೆಗಳು

16.

ಮಣ್ಣಿನ ಸವೆತದ ಪರಿಣಾಮವಾಗಿ ಕೃಷಿ ಉತ್ಪಾದನೆ ಕಡಿಮೆಯಾಗುತ್ತದೆ. ಏಕೆಂದರೆ

a)

ಅಂತರ್ಜಲ ಮಟ್ಟ ಕುಸಿಯುತ್ತದೆ

b)

ಬರ ಪರಿಸ್ಥಿತಿ ಹೆಚ್ಚುತ್ತದೆ

c)

ನದಿಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ

d)

ಮಣ್ಣಿನ ಸಾರವು ಕಡಿಮೆಯಾಗುತ್ತದೆ

17.

ಪಂಚವಾರ್ಷಿಕ ಯೋಜನೆಗಳಲ್ಲಿ ಆದ್ಯ ಗಮನವನ್ನು ನೀಡಿರುವ ಅಂಶ

a)

ಅರಣ್ಯ ಸಂರಕ್ಷಣೆ

b)

ಮಣ್ಣಿನ ಸಂರಕ್ಷಣೆ

c)

ಜಲ ಸಂರಕ್ಷಣೆ

d)

ವನ್ಯಜೀವಿ ಸಂರಕ್ಷಣೆ

18.

ಮಣ್ಣಿನ ಸವೆತಕ್ಕೆ ಕಾರಣವಾಗುವ ಅಂಶ

a)

ಅರಣ್ಯನಾಶ

b)

ಅತಿಯಾಗಿ ಮೇಯಿಸುವುದು

c)

ಅವೈಜ್ಞಾನಿಕ ಬೇಸಾಯ ಪದ್ಧತಿ

d)

ಮೇಲಿನ ಎಲ್ಲವೂ

19.

ಕೆಂಪು ಮಣ್ಣು : ಸ್ಪಟಿಕ ಶಿಲೆಗಳ ಶಿಥಿಲೀಕರಣ : : ಕಪ್ಪು ಮಣ್ಣು : __________

a)

ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ

b)

ಜೈವಿಕ ವಸ್ತುಗಳ ಮಿಶ್ರಣ

c)

ನದಿ ಸಂಚಯನ

d)

ಬಸಾಲ್ಟ್ ಶಿಲಾಕಣಗಳು

20.

ನದಿಗಳ ಸಂಚಯನದಿಂದ ನಿರ್ಮಾಣಗೊಂಡ ಮಣ್ಣು

a)

ಕಪ್ಪು ಮಣ್ಣು

b)

ಮೆಕ್ಕಲು ಮಣ್ಣು

c)

ಕೆಂಪು ಮಣ್ಣು

d)

ಲ್ಯಾಟರೈಟ್ ಮಣ್ಣು