NEW
Font size
Worksheets೧೦ನೇ ತರಗತಿ, ರಸಪ್ರಶ್ನೆಗಳು, ಗದ್ಯಪಾಠ-೧,ಯುದ್ಧ
Total questions: 20
Worksheet time: 10mins
1. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳ ಸಂಖ್ಯೆ;
1. ೧೧
2. ೧೦
3. ೦೯
4. ೧೩
2. ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಾಕ್ಷರಗಳಿವು;
1. ಏ,ಐ
2. ಓ,ಔ
3. ಏ,ಔ
4. ಐ,ಔ
3. ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಸ್ವರಗಳಿಗೆ ಹೀಗೆನ್ನುವರು;
1. ಪ್ಲುತ ಸ್ವರ
2. ದೀರ್ಘ ಸ್ವರ
3. ಹೃಸ್ವ ಸ್ವರ
4. ಸ್ವರ
೪. ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘ ಸ್ವರಗಳಿವು;
೧. ಆ ಈ ಊ ಏ ಐ ಓ ಔ
೨. ಅ ಇ ಉ ಋ ಏ ಐ
೩. ಙ ಞ ಣ ನ ಮ
೪. ಅ ಆ ಇ ಈ ಉ ಊ
5. ಕನ್ನಡ ವರ್ಣ ಮಾಲೆಯಲ್ಲಿರುವ ಒಟ್ಟು ಸ್ವರಗಳು;
1. ೧೪
2. ೧೩
3. ೦೬
4. ೦೭
6. ಕನ್ನಡ ವರ್ಣ ಮಾಲೆಯಲ್ಲಿರುವ ಒಟ್ಟು ವ್ಯಂಜನಗಳ ಸಂಖ್ಯೆ;
1. ೦೯
2. ೨೫
3. ೪೯
4.೩೪
7. ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು ಹೀಗೆನ್ನುವರು;
1. ಮಹಾಪ್ರಾಣ
2. ಅನುನಾಸಿಕ
3. ಅಲ್ಪಪ್ರಾಣ
4. ಹೃಸ್ವ ಸ್ವರ
8. ಖಛಠಥಫ ಘಝಢಧಭ- ಇವು ಈ ಅಕ್ಷರಗಳಾಗಿವೆ;
1. ಮಹಾಪ್ರಾಣ
2. ಅನುನಾಸಿಕ
3. ಸಂಧ್ಯಾಕ್ಷರ
4. ಅಲ್ಪಪ್ರಾಣ
9. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ;
1. ೦೯
2. ೦೫
3. ೨೫
4. ೧೦
10. ಯರಲವಶಷಸಹಳ- ಇವು ಈ ಅಕ್ಷರಗಳಾಗಿವೆ;
1. ವ್ಯಂಜನಗಳು
2. ವರ್ಗೀಯ ವ್ಯಂಜನಗಳು
3. .ಅವರ್ಗೀಯ ವ್ಯಂಜನಗಳು
4. ಸ್ವರಗಳು
11. ಕನ್ನಡ ವರ್ಣ ಮಾಲೆಯ ಅಕ್ಷರಗಳನ್ನು ಈ ಪ್ರಕಾರವಾಗಿ ವಿಂಗಡಿಸಿದೆ;
1. ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕಗಳು
2. ಹೃಸ್ವ ಸ್ವರ, ದೀರ್ಘ ಸ್ವರ, ಪ್ಲುತ ಸ್ವರಗಳು
3. ಸ್ವರಗಳು, ವರ್ಗೀಯ ವ್ಯಂಜನಗಳು, ಅವರ್ಗೀಯ ವ್ಯಂಜನಗಳು
4. ಸ್ವರಗಳು, ವ್ಯಂಜನಗಳು, ಯೋಗವಾಹಗಳು
12. ಕಾರ್ಯ- ಪದವು ಈ ಜಾತಿಯ ಸಂಯುಕ್ತಾಕ್ಷರವಾಗಿದೆ;
1. ಸಜಾತೀಯ ಸಂಯುಕ್ತಾಕ್ಷರ
2. ವಿಜಾತೀಯ ಸಂಯುಕ್ತಾಕ್ಷರ
3. ಸಂಯುಕ್ತಾಕ್ಷರ
4. ಒತ್ತಕ್ಷರ
13. ಸಜಾತೀಯ ಸಂಯುಕ್ತಾಕ್ಷರವೆಂದರೆ;
1. ಒಂದೇ ಜಾತಿಯ ಎರಡು ವ್ಯಂಜನಗಳಿಗೆ ಸ್ವರ ಸೇರುವುದು.
2. ವ್ಯಂಜನಗಳಿಗೆ ಸ್ವರ ಸೇರುವುದು.
3. ಬೇರೆ ಬೇರೆ ಜಾತಿಯ ವ್ಯಂಜನಗಳಿಗೆ ಸ್ವರ ಸೇರುವುದು.
4. ಸ್ವರದ ಜೊತೆ ವ್ಯಂಜನ ಸೇರುವುದು.
14. ಗ್ರೌಂಡ್- ಪದವು ಈ ಭಾಷೆಯ ಪದವಾಗಿದೆ;
1. ಅರಬ್ಬೀ
2. ಇಂಗ್ಲಿಷ್
3. ಹಿಂದೂಸ್ತಾನಿ
4. ಫೋರ್ಚುಗೀಸ್
15. ಯುದ್ಧ- ಪದದ ತದ್ಭವ ಪದ;
1. ಜುದ್ಧ
2. ಯುದ
3. ಕಾಳಗ
4. ಸಮರ
16. ನಿಟ್ಟುಸಿರು- ಈ ಪದವು ಈ ಸಮಾಸಕ್ಕೆ ಉದಾ;
1. ತತ್ಪುರುಷ
2. ಕರ್ಮಧಾರೆಯ
3. ಗಮಕ
4. ಕ್ರಿಯಾ
17. ಮುದುಕಿ- ಈ ಪದವು ಈ ನಾಮಕ್ಕೆ ಉದಾ;
1. ಅಂಕಿತ
2. ರೂಢ
3. ಸರ್ವನಾಮ
4. ಅನ್ವರ್ಥ
18. "ಅಮ್ಮಾ, ಬಾಗಿಲು ತೆಗೆಯಿರಿ." - ಈ ವಾಕ್ಯದಲ್ಲಿರುವ ಕ್ರಿಯಾಪದದ ರೂಪ;
1. ಸಂಭವನಾರ್ಥಕ
2. ವಿಧ್ಯರ್ಥಕ
3. ನಿಷೇಧಾರ್ಥಕ
4. ವರ್ತಮಾನ ಕಾಲ
19. ತಲೆಗೂದಲು- ಈ ಪದವು ಈ ಸಂಧಿಗೆ ಉದಾ;
1. ಆಗಮ
2. ಲೋಪ
3. ಆದೇಶ
4. ಯಣ್
20. 'ರಾಹಿಲನು ಪರೀಕ್ಷಿಸುತ್ತಿದ್ದಂತೆ ನೋವೊಂದು ಅಲೆಯಂತೆ ಬಂದು ಆಕೆ ಕೂಗಿಕೊಳ್ಳುವಂತೆ ಮಾಡಿತು'- ಈ ವಾಕ್ಯದಲ್ಲಿರುವ ಅಲಂಕಾರ;
1. ರೂಪಕ
2. ದೃಷ್ಟಾಂತ
3. ಯಮಕ
4. ಉಪಮಾ
