wayground logo

Free Printable Worksheets

NEW

Font size

S
M
L
XL
Worksheets

೧೦ನೇ ತರಗತಿ , ರಸಪ್ರಶ್ನೆ ಕಾರ್ಯಕ್ರಮ, ಗ. ಪಾಠ-೭ ವೃಕ್ಷಸಾಕ್ಷಿ ಭಾಗ-೩

Total questions: 20

Worksheet time: 10mins

Name
Class
Date
1.

1. ವೃತ್ತಗಳ ಆರಂಭವು ಒಂದು ಗುರು(-)ವಿನಿಂದಾದರೆ ಅದು ------- ವೃತ್ತವಾಗಿದೆ.

a)

1. ಉತ್ಪಲ ಮಾಲಾ

b)

2. ಚಂಪಕ ಮಾಲಾ

c)

3. ಸ್ರಗ್ಧರಾ

d)

4. ಮಹಾ ಸೃಗ್ಧರಾ

2.

2.ವೃತ್ತದ ಆರಂಭದಲ್ಲಿ ಮೂರು ಗುರು(-) ಬಂದರೆ ಅದು -------- ವೃತ್ತ.

a)

1. ಸ್ರಗ್ಧರಾ

b)

2. ಮತ್ತೇಭವಿಕ್ರೀಡಿತ

c)

3. ಶಾರ್ದೂಲವಿಕ್ರೀಡಿತ

d)

4. ಚಂಪಕಮಾಲಾ

3.

3. ವೃತ್ತದ ಆರಂಭದಲ್ಲಿ ನಾಲ್ಕು ಗುರು(-) ಬಂದರೆ ಅದು ------- ವೃತ್ತ.

a)

1. ಉತ್ಪಲಮಾಲಾ

b)

2. ಚಂಪಕಮಾಲಾ

c)

3. ಶಾರ್ದೂಲವಿಕ್ರೀಡಿತ

d)

4. ಸ್ರಗ್ಧರಾ

4.

4. ವೃತ್ತದ ಆರಂಭದಲ್ಲಿ ಎರಡು ಲಘು, ಎರಡು ಗುರು ಬಂದರೆ ಅದು -------- ವೃತ್ತವಾಗಿದೆ.

a)

1. ಸೃಗ್ಧರಾ

b)

2. ಮತ್ತೇಭವಿಕ್ರೀಡಿತ

c)

3. ಉತ್ಪಲಮಾಲಾ

d)

4. ಮಹಾಸ್ರಗ್ಧರಾ

5.

5. ವೃತ್ತದ ಆರಂಭದಲ್ಲಿ ಎರಡು ಲಘು, ಮೂರು ಗುರುಗಳು ಬಂದರೆ ಅದು ------- ವೃತ್ತ.

a)

1. ಮಹಾಸ್ರಗ್ಧರಾ

b)

2. ಸ್ರಗ್ಧರಾ

c)

3. ಮತ್ತೇಭವಿಕ್ರೀಡಿತ

d)

4. ಉುತ್ಪಲಮಾಲಾ

6.

6. ವೃತ್ತದ ಆರಂಭದಲ್ಲಿ ನಾಲ್ಕು ಲಘು ಬಂದರೆ ಅದು -------- ವೃತ್ತವಾಗಿದೆ.

a)

1. ಚಂಪಕಮಾಲಾ

b)

2. ಉತ್ಪಲಮಾಲಾ

c)

3. ಸ್ರಗ್ಧರಾ

d)

4. ಮತ್ತೇಭವಿಕ್ರೀಡಿತ

7.

7. ಉತ್ಪಲಮಾಲಾ ವೃತ್ತದಲ್ಲಿ ಬರುವ ಅಕ್ಷರಗಳ ಸಂಖ್ಯೆ -------

a)

1. 20

b)

2. 21

c)

3. 22

d)

4. 19

8.

8. ' ಉತ್ಪಲಮಾಲೆಯಪ್ಪುದು ಭರಂನಭಭಂರಲಗಂ ನೆಗಳ್ದಿರಲ್' ಈ ಸೂತ್ರವು ತಿಳಿಸುವ ಅಂಶವೆಂದರೆ;

a)

1. ಉತ್ಪಲಮಾಲೆಯು ವೃತ್ಯಾನುಪ್ರಾಸವನ್ನು ಹೊಂದಿದೆ.

b)

2. ಉತ್ಪಲಮಾಲೆಯು ಗಮಕ ವಾಚನಕ್ಕೆ ಯೋಗ್ಯವಾದ ವೃತ್ತವಾಗಿದೆ.

c)

3. ಉತ್ಪಲಮಾಲೆಯಲ್ಲಿ ಭ ರ ನ ಭ ಭ ರ ಎಂಬ ಆರು ಗಣಗಳು ಬಂದು ಕೊನೆಯಲ್ಲಿ ಒಂದು ಲಘು, ಗುರು ಉಳಿಯುತ್ತದೆ.

d)

4. ಉತ್ಪಲಮಾಲೆಯು ಒಂದು ಸಾಲಿನ ಪದ್ಯವಾಗಿದೆ.

9.

9. ಇದು 19 ಅಕ್ಷರಗಳನ್ನು ಹೊಂದಿರುವ ವೃತ್ತವಾಗಿದೆ.

a)

1. ಚಂಪಕಮಾಲೆ

b)

2. ಸ್ರಗ್ಧರಾ

c)

3. ಶಾರ್ದೂಲವಿಕ್ರೀಡಿತ

d)

4. ಮತ್ತೇಭವಿಕ್ರೀಡಿತ

10.

10. ' ಕಣ್ಗೊಪ್ಪಲ್ ಮಸಜಂಸತಂತಗಮುಮಾ ಶಾರ್ದೂಲವಿಕ್ರೀಡಿತಂ' ಶಾರ್ದೂಲವಿಕ್ರೀಡಿತ ವೃತ್ತದ ಈ ಸೂತ್ರವು ತಿಳಿಸುವ ಮುಖ್ಯಾಂಶವೆಂದರೆ;

a)

ವೃತ್ತವು ಕಣ್ಣು, ಮನಕ್ಕೆ ತಂಪೆರೆಯುವ ಹಾಗಿದೆ.

b)

2. ವೃತ್ತದಲ್ಲಿ ಮ ಸ ಜ ಸ ತ ತ ಎಂಬ ಆರು ಗಣಗಳು ಬಂದು ಕೊನೆಯಲ್ಲಿ ಒಂದು ಗುರು ಉಳಿಯುತ್ತದೆ.

c)

ವೃತ್ತದಲ್ಲಿ ಮಸಜಸತತ ಈ ಅಕ್ಷರಗಳು ಸತತವಾಗಿ ಬರುತ್ತವೆ.

d)

4. ವೃತ್ತವು ಹುಲಿಯ ಘರ್ಜನೆಯನ್ನು ಹೋಲುವಂತೆ ರಚಿತವಾಗಿರುತ್ತದೆ.

11.

11. ಬಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ' ಈ ವಾಕ್ಯದಲ್ಲಿರುವ ಅಲಂಕಾರ ;

a)

1. ರೂಪಕ

b)

2. ಉಪಮಾ

c)

3. ದೃಷ್ಟಾಂತ

d)

4. ಅರ್ಥಾಂತರ ನ್ಯಾಸ

12.

ಕೋಕಿಲಾ- ಈ ಪದದ ತದ್ಭವ ಪದ;

a)

1. ಕೋಗಿಲಾ

b)

2. ಕುಕ್ಕುಟ

c)

3. ಕೋಳಿ

d)

4. ಕೋಗಿಲೆ

13.

13. ಸಾಕ್ಷಿ ಮಾಡಿ- ಈ ಪದವು ಈ ಸಮಾಸಕ್ಕೆ ಉದಾ:

a)

1. ದ್ವಿಗು

b)

2. ಕ್ರಿಯಾ

c)

3. ಅಂಶಿ

d)

4. ಕರ್ಮಧಾರಯ

14.

14. ಆದಿತ್ಯೋದಯ- ಈ ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

1. ಸವರ್ಣದೀರ್ಘ

b)

2. ಯಣ್

c)

3. ಆಗಮ

d)

4. ಲೋಪ

15.

15. ಕ್ರಮಕ್ರಮದೆ- ಈ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.

a)

1. ಜೋಡುನುಡಿ

b)

2. ಅನುಕರಣಾವ್ಯಯ

c)

3. ಅವ್ಯಯ

d)

4. ದ್ವಿರುಕ್ತಿ

16.

16. ಕಳ್ತಲೆ- ಈ ಪದದ ಹೊಸಗನ್ನಡ ರೂಪ;

a)

1. ಕಪ್ಪಾದ ತಲೆ

b)

2. ಕತ್ತಲೆ

c)

3. ಕಳಲೆ

d)

4. ಅರಿವು

17.

17. ನೇಸರ- ಈ ಪದದ ಅರ್ಥ;

a)

1. ಚಂದ್ರ

b)

2. ನಕ್ಷತ್ರ

c)

3. ಸೂರ್ಯ

d)

4. ಆಕಾಶ

18.

18. ವೃಕ್ಷ ಸಾಕ್ಷಿ - ಈ ಪಾಠದಲ್ಲಿರುವ 'ಮೇದಿನಿಯಂ ಕ್ರಮಕ್ರಮದೆ......' ಈ ವೃತ್ತವು -------- ವೃತ್ತಕ್ಕೆ ಉದಾಹರಣೆಯಾಗಿದೆ.

a)

1. ಉತ್ಪಲಮಾಲೆ

b)

2. ಚಂಪಕಮಾಲೆ

c)

3. ಮತ್ತೇಭವಿಕ್ರೀಡಿತ

d)

4. ಸ್ರಗ್ಧರಾ

19.

19. "ಹಾ ಹಾ ಕೆಟ್ಟೆನ್" ಈ ವಾಕ್ಯದಲ್ಲಿ ಬರಬೇಕಾದ ಲೇಖನ ಚಿಹ್ನೆ -------

a)

1. ಅಲ್ಪವಿರಾಮ

b)

2. ಉದ್ಧರಣ

c)

3. ವಾಕ್ಯವೇಷ್ಠನ

d)

4. ಭಾವಸೂಚಕ

20.

20. ವ್ಯಾಪಾರಿ- ಈ ಪದವು ಈ ನಾಮಕ್ಕೆ ಉದಾಹರಣೆಯಾಗಿದೆ.

a)

1. ರೂಢ

b)

2. ಅನ್ವರ್ಥ

c)

3. ಸರ್ವನಾಮ

d)

4. ಅಂಕಿತ