NEW
Font size
Worksheets'KSEEB ಪ್ರಥಮ ಪ್ರಶ್ನೆಪತ್ರಿಕೆಯ ರಸಪ್ರಶ್ನೆ'
Total questions: 20
Worksheet time: 10mins
'ಕಣ್ದೆರೆ' ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ದ್ವಿಗು ಸಮಾಸ
ಗಮಕ ಸಮಾಸ
ಕ್ರಿಯಾ ಸಮಾಸ
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಬಳಸುವ ಲೇಖನ ಚಿಹ್ನೆ ಇದು
ಪೂರ್ಣವಿರಾಮ
ಅರ್ಧವಿರಾಮ
ಅಲ್ಪವಿರಾಮ
ಭಾವಸೂಚಕ
ಹಳಗನ್ನಡದ ಪಂಚಮೀ ವಿಭಕ್ತಿ ಪ್ರತ್ಯಯವಿದು
ಇಂದಂ
ಅನ್ಮು
ಅತ್ತಣಿಂ
ಒಳ್
'ಧಗಧಗ' ಪದ ಈ ಅವ್ಯಯಕ್ಕೆ ಉದಾಹರಣೆ
ಅನುಕರಣಾವ್ಯಯ
ಸಾಮಾನ್ಯಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಭಾವಸೂಚಕಾವ್ಯಯ
'ಇಸವಾಸ' ಪದದ ಗ್ರಾಂಥಿಕ ರೂಪವಿದು
ವಿಶೇಷ
ವಿಶ್ವಾಸ
ವಿಷವಾಸ
ವಿಶೆಶ
ಇವುಗಳಲ್ಲಿ ವಿದ್ಯರ್ಥಕ ಕ್ರಿಯಾ ರೂಪವಿದು
ಮಾಡೀತು
ಮಾಡದು
ಮಾಡಲಿ
ಮಾಡಿಯಾವು
ಪ್ರಸಾದ:ಹಸಾದ::ಯುದ್ಧ:-
ಅಜ್ಜ
ಕಜ್ಜ
ಜುದ್ದ
ಗೆದ್ದ
ಯೋಗವಾಹಗಳು:ಎರಡು::ಸ್ವರಗಳು:-
ಆರು
ಏಳು
ಹದಿಮೂರು
ಒಂಬತ್ತು
ಅರ್ತಿ:ಪ್ರೀತಿ::ಅಬ್ಬೆ:-
ತಂದೆ
ತಾಯಿ
ಅಜ್ಜಿ
ಅಣಬೆ
ಕೈಯನ್ನು:ಆಗಮಸಂಧಿ::ಊರೂರು:
ಸವರ್ಣದೀರ್ಘ ಸಂಧಿ
ಆಗಮಸಂಧಿ
ಆದೇಶಸಂಧಿ
ಲೋಪಸಂಧಿ
ರಾಹಿಲನು ಯಾರು?
ವೈದ್ಯ
ಪಂಡಿತ
ವೈದ್ಯ ಸೈನಿಕ
ಸಹಾಯಕ
ಗಡಿಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಯಾವ ನಿಯಮ ಪಾಲಿಸಲಾಗುತ್ತದೆ?
ಗಡಿ ರಕ್ಷಣಾ ನಿಯಮ
ಬಾಕ್ ಔಟ್ ನಿಯಮ
ಬ್ಲಾಕ್ ಔಟ್ ನಿಯಮ
ಹೊರಗೆ ಬರೆದಿರುವುದು
ವಚನಕಾರರಿಗೆ ಯಾವುದು ದೇವರಾಗಿತ್ತು?
ಅರಿವು
ವಚನಗಳು
ಜ್ಞಾನ
ಪ್ರಜ್ಞೆ
ಶಾನುಭೋಗರು ಇರಸಾಲಿಗಾಗಿ ಯಾವ ಊರಿಗೆ ಹೋಗಿದ್ದರು?
ದೊಡ್ಡನಾಯಕನಹಳ್ಳಿ
ಚಿಕ್ಕೇರೂರು
ಚಿಕ್ಕನಾಯಕನಹಳ್ಳಿ
ಚಿಕ್ಕಮಂಗಳೂರು
ಹಕ್ಕಿಯು ತನ್ನ ಚುಂಚವನ್ನು ದಿಗ್ಮಂಡಲಗಳ ಆಚೆಗೆ ಚಾಚಲು ಕಾರಣವೇನು?
ಜಗತ್ತಿನ ರಹಸ್ಯವನ್ನು ಭೇದಿಸಲು
ದಿಕ್ಕುಗಳ ಬಗ್ಗೆ ತಿಳಿಯಲು
ಹಾರಾಡಲು
2 ಮತ್ತು 3 ಸರಿ
ಕರ್ಣನು ಚತುರಂಗ ಬಲದಲ್ಲಿ ಹೇಗೆ ಹೋರಾಡುವೆನೆಂದು ಹೇಳುತ್ತಾನೆ?
ವೀರಾವೇಶದಿಂದ
ಪಾಂಡವರ ವಿರುದ್ಧ ವೀರಾವೇಶದಿಂದ
ಕೌರವನ ಋಣ ತೀರುವವರೆಗೆ
ಭೀಮಾರ್ಜುನರು ಸಾಯುವವರೆಗೆ
ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
ಆಟವಾಡುತ್ತಿದ್ದಾರೆ
ಮುಸುರೆ ತಿಕ್ಕುತ್ತಿದ್ದಾಳೆ
ಹಾಡು ಹೇಳುತ್ತಿದ್ದಾಳೆ
ಕುಣಿಯುತ್ತಿದ್ದಾಳೆ
ಪು. ತಿ. ನರಸಿಂಹಾಚಾರ್ ಅವರ ಪ್ರಮುಖ ಕೃತಿಗಳು
ಸಾಹಸಭೀಮ ವಿಜಯಂ ಅಜಿತ ತೀರ್ಥಂಕರ ಪುರಾಣ ತಿಲಕಂ ಪರಶುರಾಮ ಚರಿತಂ ಚಕ್ರೇಶ್ವರಚರಿತಂ ರನ್ನಕಂದ
ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ವಿಕಟಕವಿ, ವಿಜಯ ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ
ದ್ಯಾವನೂರು, ಒಡಲಾಳ, ಎದೆಗೆ ಬಿದ್ದ ಅಕ್ಷರ, ನೋಡು ಮತ್ತು ಕೂಡು
ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದಹೆಜ್ಜೆ, ಅನಾವರಣ, ಸೌಂದರ್ಯ ಸಮೀಕ್ಷೆ
ರನ್ನನ ಬಗ್ಗೆ ಸರಿಯಾದ ಹೇಳಿಕೆ
ಕನ್ನಡದ ರತ್ನತ್ರಯರಲ್ಲಿ ಒಬ್ಬನಾದ ರನ್ನ ಮಹಾಕವಿಯು ಕ್ರಿ.ಶ. 949 ರಲ್ಲಿ ಬಾಗಲಕೋಟೆ ಜಿಲ್ಲೆಯ ಮುದುವೊಳಲು ಎಂಬ ಗ್ರಾಮದಲ್ಲಿ ಜನಿಸಿದನು. ಇವನಿಗೆ ಕವಿಚಕ್ರವರ್ತಿ ಎಂಬ ಬಿರುದುಯಿತ್ತು.
ರನ್ನನು ಕ್ರಿಸ್ತ ಶಕ ೧೯೦೫ ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ
ರನ್ನನು ಕ್ರಿಸ್ತಶಕ 902 ರಲ್ಲಿ ವೆಂಗಿಮಂಡಲ ದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದನು. ಇವನಿಗೆ ಸರಸ್ವತಿ ಮಣಿಹಾರ, ಸಂಸಾರ ಸಾರೋದಯ ಕವಿತಾಗುಣಾರ್ಣವ ಎಂಬ ಬಿರುದುಗಳಿವೆ
ರನ್ನ ಕವಿಯು ಕ್ರಿಸ್ತಶಕ 1430ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದರು. ಇವರಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಇದೆ
'ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ ಈ ವಾಕ್ಯ ........... ಅಲಂಕಾರಕ್ಕೆ ಉದಾಹರಣೆ
ರೂಪಕ ಅಲಂಕಾರ
ಉತ್ಪ್ರೇಕ್ಷೆ ಅಲಂಕಾರ
ಉಪಮಾಲಂಕಾರ
ದೃಷ್ಟಾಂತಾಲಂಕಾರ
