wayground logo

Free Printable Worksheets

NEW

Font size

S
M
L
XL
Worksheets

ಅಭಿವೃದ್ಧಿ

Total questions: 20

Worksheet time: 15mins

Name
Class
Date
1.

ಒಂದು ದೇಶದ ಜನರ ಆರ್ಥಿಕ ಆಶೋತ್ತರಗಳನ್ನು ಪೂರೈಸಿ ಸಮಸ್ಯೆಗಳನ್ನು ನಿಯಂತ್ರಿಸುವುದು

a)

ಅಭಿವೃದ್ಧಿ

b)

ಆರ್ಥಿಕ ಅಭಿವೃದ್ಧಿ

c)

ಸಾಮಾಜಿಕ ಅಭಿವೃದ್ಧಿ

d)

ಶೈಕ್ಷಣಿಕ ಅಭಿವೃದ್ಧಿ

2.

ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೇಯರ್ ಮತ್ತು ಬಾಲ್ಡವಿನ್ ಅವರ ವ್ಯಾಖ್ಯೆಯಲ್ಲಿರದ ಅಂಶ

a)

ಒಂದು ಪ್ರಕ್ರಿಯೆ

b)

ನೈಜ ರಾಷ್ಟ್ರೀಯ ವರಮಾನದ ಹೆಚ್ಚಳ

c)

ದೀರ್ಘಾವಧಿ ಹೆಚ್ಚಳ

d)

ಬಂಡವಾಳ ಸಂಚಯನ

3.

ಸರಕುಗಳ ಬೇಡಿಕೆಯಲ್ಲಿನ ಬದಲಾವಣೆಗೆ ಕಾರಣ

a)

ಉತ್ಪಾದನಾಂಗಗಳ ಪೂರೈಕೆ

b)

ಶೈಕ್ಷಣಿಕ ಅಭಿವೃದ್ಧಿ

c)

ಕೌಶಲ್ಯಾಭಿವೃದ್ಧಿ

d)

ಜನರ ಅಭಿರುಚಿಗಳಲ್ಲಿ ಬದಲಾವಣೆ

4.

ನೈಜ ರಾಷ್ಟ್ರೀಯ ವರಮಾನದಲ್ಲಿ 'ನೈಜ' ಎಂಬ ಪದವು ಈ ಅಂಶವನ್ನು ಬಿಂಬಿಸುತ್ತದೆ

a)

ಜನರ ಕೊಳ್ಳುವ ಶಕ್ತಿ

b)

ಜನರ ಬಯಕೆಗಳು

c)

ಜನರ ಅಭಿರುಚಿಗಳು

d)

ಜನರ ಆರ್ಥಿಕ ಕಲ್ಯಾಣ

5.

"ಜನರ ಆರ್ಥಿಕ ಕಲ್ಯಾಣದ ಹೆಚ್ಚಳವೇ ಆರ್ಥಿಕ ಅಭಿವೃದ್ಧಿ" ಎಂದವರು -

a)

ಪ್ರೊ. ಕೋಲಿನ್ ಕ್ಲಾರ್ಕ್

b)

ಪ್ರೊ. ಮೇಯರ್

c)

ಬಾಲ್ಡವಿನ್

d)

ಅಮರ್ತ್ಯ ಸೆನ್

6.

ಒಳಗೊಳ್ಳುವ ಅಭಿವೃದ್ಧಿ ಎಂದರೆ -

a)

ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ದೊರಕುವುದು

b)

ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿ

c)

ಎಲ್ಲಾ ವಲಯಗಳ ಅಭಿವೃದ್ಧಿ

d)

ಎಲ್ಲರನ್ನೂ ಬಡತನದಿಂದ ಹೊರತರುವುದು

7.

ಅನಾಭಿವೃದ್ಧಿ ರಾಷ್ಟ್ರಗಳಲ್ಲಿ ಪ್ರಮುಖವಾಗಿ ಈ ಅಂಶವು ಕಡಿಮೆ ಇರುತ್ತದೆ

a)

ಜನಸಂಖ್ಯೆ

b)

ನಿರುದ್ಯೋಗ

c)

ಬಡತನ

d)

ಉತ್ಪಾದನೆ

8.

ವಿಶ್ವದ ರಾಷ್ಟ್ರಗಳನ್ನು ಅಧಿಕ, ಮಧ್ಯಮ ಮತ್ತು ಕಡಿಮೆ ವರಮಾನದ ರಾಷ್ಟ್ರಗಳೆಂದು ವರ್ಗೀಕರಿಸುವವರು

a)

ವಿಶ್ವಸಂಸ್ಥೆ

b)

ವಿಶ್ವಬ್ಯಾಂಕ್

c)

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ

d)

ಐಎಂಎಫ್

9.

ಆರ್ಥಿಕ ಅಭಿವೃದ್ಧಿಯ ಮಾಪನಕ್ಕಾಗಿ ಅರ್ಥಶಾಸ್ತ್ರಜ್ಞರು ರೂಪಿಸಿರುವ ಆದಾಯೇತರ ಮಾನದಂಡ

a)

ವರಮಾನ ಸೂಚಂಕ

b)

ವಿಶ್ವ ಹಸಿವಿನ ಸೂಚ್ಯಂಕ

c)

ಮಾನವ ಅಭಿವೃದ್ಧಿ ಸೂಚ್ಯಂಕ

d)

ಗುಣಮಟ್ಟ ಅಭಿವೃದ್ಧಿ ಸೂಚ್ಯಂಕ

10.

ತಲಾ ಆದಾಯವನ್ನು ಲೆಕ್ಕಹಾಕುವ ವಿಧಾನ

a)

ಒಟ್ಟು ಜನಸಂಖ್ಯೆ ÷ ರಾಷ್ಟ್ರೀಯ ವರಮಾನ

b)

ರಾಷ್ಟ್ರೀಯ ವರಮಾನ ÷ ಒಟ್ಟು ಜನಸಂಖ್ಯೆ

c)

ರಾಷ್ಟ್ರೀಯ ವರಮಾನ ÷ ಒಟ್ಟು ಭೂಪ್ರದೇಶ

d)

ರಾಷ್ಟ್ರೀಯ ವರಮಾನ ÷ ತಲಾ ವರಮಾನ

11.

ಆರ್ಥಿಕ ಪ್ರಗತಿಯ ಮುಖ್ಯ ಉದ್ದೇಶ

a)

ದೇಶದ ಉತ್ಪಾದನೆಯನ್ನು ಹೆಚ್ಚಿಸುವುದು

b)

ಜನರ ಕಲ್ಯಾಣವನ್ನು ಹೆಚ್ಚಿಸುವುದು

c)

ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿ

d)

ಶೈಕ್ಷಣಿಕ ಅಭಿವೃದ್ಧಿ

12.

ಅಮರ್ತ್ಯ ಸೆನ್ ಅವರ ಪ್ರಕಾರ ಮಾನವ ಅಭಿವೃದ್ಧಿ ಎಂದರೆ

a)

ಮಾನವನ ಜೀವಿತಾವಧಿಯನ್ನು ಹೆಚ್ಚಿಸುವುದು

b)

ಮಾನವನ ಸಾಮರ್ಥ್ಯಗಳನ್ನು ವಿಸ್ತರಿಸುವುದು

c)

ಆರೋಗ್ಯ ಮತ್ತು ಪೌಷ್ಟಿಕ ಆಹಾರ ದೊರಕುವುದು

d)

ಜನರ ಜೀವನ ಮಟ್ಟ ಸುಧಾರಿಸುವುದು

13.

ಮಾನವ ಅಭಿವೃದ್ಧಿ ಸೂಚ್ಯಂಕ ಎಂಬ ಹೊಸ ಮಾನದಂಡವನ್ನು ರಚಿಸಿದವರು

a)

ವಿಶ್ವ ಆರೋಗ್ಯ ಸಂಸ್ಥೆ

b)

ಐಎಂಎಫ್

c)

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ

d)

ಆಹಾರ ಮತ್ತು ಕೃಷಿ ಸಂಸ್ಥೆ

14.

ಆರೋಗ್ಯ ಮಾಪನ : ನಿರೀಕ್ಷಿತ ಜೀವಿತಾವಧಿ : : ಜೀವನ ಮಟ್ಟ ಮಾಪನ : ___________

a)

ರಾಷ್ಟ್ರೀಯ ವರಮಾನ

b)

ತಲಾ ವರಮಾನ

c)

ಸಾಕ್ಷರತೆ

d)

ಮಾನವ ಅಭಿವೃದ್ಧಿ

15.

2012 ರಲ್ಲಿ ಜಾಗತಿಕವಾಗಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕದ ಸ್ಥಾನ

a)

137

b)

136

c)

133

d)

135

16.

2011 ರ ಜನಗಣತಿಯ ಪ್ರಕಾರ ಭಾರತದ ಲಿಂಗಾನುಪಾತ

a)

954

b)

970

c)

940

d)

945

17.

ಭಾರತದಲ್ಲಿ ಲಿಂಗಾನುಪಾತವು ಕುಸಿಯಲು ಕಾರಣ

a)

ಅಧಿಕ ಜನಸಂಖ್ಯೆ

b)

ಅನಕ್ಷರತೆ

c)

ಹೆಣ್ಣು ಭ್ರೂಣ ಹತ್ಯೆ

d)

ಬಡತನ

18.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ _________ ಗಳನ್ನು ಸ್ಥಾಪಿಸಲಾಗಿದೆ

a)

ಸ್ತ್ರೀ ಶಕ್ತಿ ಸಂಘ

b)

ಸ್ವಸಹಾಯ ಸಮೂಹ

c)

ಮಹಿಳಾ ಬ್ಯಾಂಕ್

d)

ರಾಜಕೀಯ ಸಂಸ್ಥೆ

19.

ಮಹಿಳಾ ಸ್ವಸಹಾಯ ಸಮೂಹಗಳ ಸ್ಥಾಪನೆಯಿಂದ ಆದ ಪರಿಣಾಮ

a)

ಮಹಿಳೆಯರ ಘನತೆ ಮತ್ತು ಸ್ವಾಯತ್ತತೆ ಹೆಚ್ಚಿದೆ

b)

ಮಹಿಳಾ ಲಿಂಗಾನುಪಾತ ಹೆಚ್ಚಿದೆ

c)

ಮಹಿಳಾ ಸಾಕ್ಷರತೆ ಹೆಚ್ಚಿದೆ

d)

ಮಹಿಳಾ ಸಾಲ ಹೆಚ್ಚಿದೆ

20.

ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸಿದ ಎಲ್ಲಾ ಸರಕು-ಸೇವೆಗಳ ಒಟ್ಟು ಮೌಲ್ಯ

a)

ರಾಷ್ಟ್ರೀಯ ವರಮಾನ

b)

ನೈಜ ರಾಷ್ಟ್ರೀಯ ವರಮಾನ

c)

ಆರ್ಥಿಕ ಅಭಿವೃದ್ಧಿ

d)

ತಲಾ ವರಮಾನ