wayground logo

Free Printable Worksheets

NEW

Font size

S
M
L
XL
Worksheets

ಅನುವಂಶೀಯತೆ ಮತ್ತು ಜೀವವಿಕಾಸ

Total questions: 12

Worksheet time: 6mins

Name
Class
Date
1.

ಹೆಚ್ಚಿನ ಪ್ರಮಾಣದ ಭಿನ್ನತೆಯನ್ನು ಈ ವಿಧದ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ವೀಕ್ಷಿಸಬಹುದಾಗಿದೆ

a)

ಲೈಂಗಿಕ ಸಂತಾನೋತ್ಪತ್ತಿ ಕ್ರಿಯೆ

b)

ಅಲೈಂಗಿಕ ಸಂತಾನೋತ್ಪತ್ತಿ ಕ್ರಿಯೆ

c)

ಮೇಲಿನ ಎರಡು ಸರಿ

d)

ಯಾವುದು ಅಲ್ಲ

2.

ಇವರನ್ನು ಆಧುನಿಕ ತಳಿವಿಜ್ಞಾನದ ಪಿತಾಮಹ ಎಂದು ಕರೆಯುತ್ತಾರೆ

a)

ಸರ್ ಐಸಾಕ್ ನ್ಯೂಟನ್

b)

ಜಗದೀಶ್ಚಂದ್ರ ಬೋಸ್

c)

ಮೈಕಲ್ ಫ್ಯಾರಡೆ

d)

ಗ್ರೆಗೋರ್ ಜೋಹಾನ್ ಮೆಂಡಲ್

3.

ಮೆಂಡಲ್ ಅವರು ತಮ್ಮ ಪ್ರಯೋಗಕ್ಕೆ ಈ ಸಸ್ಯವನ್ನು ಬಳಸಿಕೊಂಡರು

a)

ಗುಲಾಬಿ ಸಸ್ಯ

b)

ಬಟಾಣಿ ಸಸ್ಯ

c)

ದಾಸವಾಳ ಸಸ್ಯ

d)

ಸಂಪಿಗೆ

4.

ಏಕತಳೀಕರಣ ದಲ್ಲಿ ಎತ್ತರ ಹಾಗೂ ಗಿಡ್ಡ ಸಸ್ಯಗಳ ವ್ಯಕ್ತರೂಪ ಅನುಪಾತ

a)

1:2:1

b)

3:1

c)

1:3

d)

9:3

5.

F1 ಪೀಳಿಗೆಯಲ್ಲಿ ಯಾವಾಗಲೂ ಈ ರೀತಿಯ ಪರಾಗಸ್ಪರ್ಶ ಕ್ರಿಯೆ ಯನ್ನು ನಡೆಸಲಾಗುತ್ತದೆ

a)

ಪರಕೀಯ ಪರಾಗಸ್ಪರ್ಶ ಕ್ರಿಯೆ

b)

ಸ್ವಕೀಯ ಪರಾಗಸ್ಪರ್ಶ ಕ್ರಿಯೆ

c)

ಎಲ್ಲವೂ ಸರಿ

d)

ಯಾವುದು ಅಲ್ಲ

6.

ಈ ಚಿತ್ರವು ಯಾವ ರೀತಿಯ ಅಂಗಗಳನ್ನು ವ್ಯಕ್ತಪಡಿಸುತ್ತದೆ

a)

ರಚನಾನುರೂಪಿ ಅಂಗಗಳು

b)

ಕಾರ್ಯಾನುರೂಪಿ ಅಂಗಗಳು

c)

ಎರಡು ಸರಿ

d)

ಯಾವುದು ಅಲ್ಲ

7.

ಪ್ರಭೇದೀಕರಣ ವು ಯಾವಾಗ ಉಂಟಾಗುತ್ತದೆ

a)

ಜೀವಿಗಳು ಭೌಗೋಳಿಕವಾಗಿ ಪ್ರತ್ಯೇಕವಾದ

b)

ಜೀವಿಗಳು ನಿಸರ್ಗದ ಆಯ್ಕೆಗೆ ಒಳಪಟ್ಟಾಗ

c)

ಜೀವಿಗಳ ಡಿಎನ್ಎ ಯಲ್ಲಿ ಬದಲಾವಣೆಯಾದಾಗ

d)

ಮೇಲಿನ ಎಲ್ಲವೂ ಸರಿ

8.

ಒಬ್ಬ ತಾಯಿಗೆ ಗಂಡು ಮಗುವಿನ ಜನನ ವಾಗಬೇಕಾದರೆ ಈ ಕೆಳಗಿನವರಲ್ಲಿ ಯಾರ ವರ್ಣತಂತುಗಳು ನಿರ್ಣಾಯಕ

a)

ತಂದೆಯ ವರ್ಣತಂತುಗಳು

b)

ತಾಯಿಯ ವರ್ಣತಂತುಗಳು

c)

ಪೂರ್ವಜರ ವರ್ಣತಂತುಗಳು

d)

ಎಲ್ಲವೂ ಸರಿ

9.

ಪೂರ್ವಜರಿಂದ ಸಾಮ್ಯತೆ ಗೆ ಕಾರಣವಾಗುವ ಹಲವಾರು ಗುಣಲಕ್ಷಣಗಳು ತಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆ ಯಾವುದನ್ನು ಹೀಗೆನ್ನುವರು

a)

ವರ್ಗಾವಣೆ

b)

ಡಿಎನ್ಎ ಸ್ವಪ್ರತೀಕರಣ

c)

ಅನುವಂಶಿಯತೆ

d)

ಉತ್ಪರಿವರ್ತನೆ

10.

ಜೀವಿಗಳಲ್ಲಿ ಯಾವಾಗ ಅನುವಂಶೀಯ ಭಿನ್ನತೆಗಳು ಕಾಣಿಸಿಕೊಳ್ಳುತ್ತವೆ

a)

ಜೀವಿಗಳಲ್ಲಿ ಹಸಿವಿನ ಕಾರಣದಿಂದ

b)

ಲಿಂಗಾಣು ಕೋಶಗಳ ಡಿಎನ್ಎ ದಲ್ಲಿ ಬದಲಾವಣೆಯಾದಾಗ

c)

ಅಲೈಂಗಿಕ ಅಂಗಾಂಶದಲ್ಲಿ ಆಗುವ ಬದಲಾವಣೆಗಳು

d)

ಮೇಲಿನ ಯಾವುದೂ ಅಲ್ಲ

11.

ಮಾನವರಲ್ಲಿ ಕಂಡುಬರುವ ವರ್ಣತಂತುಗಳ ಸಂಖ್ಯೆ

a)

64 ವರ್ಣತಂತುಗಳು

b)

46 ವರ್ಣತಂತುಗಳು

c)

44 ವರ್ಣತಂತುಗಳು

d)

36 ವರ್ಣತಂತುಗಳು

12.

ಜೀವಿಗಳಲ್ಲಿ ಕಾಲನಿರ್ಣಯ (ಆಯಸ್ಸನ್ನು ಅಂದಾಜು ಮಾಡಲು) ಈ ಧಾತುವನ್ನು ಬಳಸುತ್ತಾರೆ

a)

ಗಂಧಕ

b)

ಆಮ್ಲಜನಕ

c)

ಪೊಟ್ಯಾಶಿಯಂ

d)

ಕಾರ್ಬನ್