NEW
Font size
Worksheetsಸಾಮಾಜಿಕ ಚಳುವಳಿಗಳು
Total questions: 20
Worksheet time: 10mins
1. ದೊಂಬಿಯ ಲಕ್ಷಣ
ಹಿಂಸಾತ್ಮಕ ಮತ್ತು ವಿನಾಶಾತ್ಮಕ ಸ್ವರೂಪ
ಯಾವುದೇ ಪೂರ್ವಯೋಜನೆ ಇಲ್ಲದೇ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿ
ನಿಶ್ಚಿತವಾದ ಗುರಿ ಇರುತ್ತದೆ
ಆಸ್ತಿಪಾಸ್ತಿ ಹಾಗೂ ಜೀವಹಾನಿ ಉಂಟುಮಾಡುವುದಿಲ್ಲ
2. ಮದ್ಯಪಾನ ನಿಷೇಧ ಚಳವಳಿಯಲ್ಲಿ ಪ್ರಾಣ ಇವರು ಕಳೆದುಕೊಂಡರು
ಮೇಧಾ ಪಾಟ್ಕರ್
ಶಿವರಾಮ ಕಾರಂತ
ಸುಂದರಲಾಲ ಬಹುಗುಣ
ಕುಸುಮ ಸೊರಬ
3." ಸತ್ಯವೇ ದೇವರು" ಎಂದು ಹೇಳಿದವರು
ಡಾ.ಬಿ.ಆರ್.ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಸುಂದರಲಾಲ ಬಹುಗುಣ
ಜ್ಯೋತಿರಾವ್ ಫುಲೆ
4. ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಸಮಾಜ ಪರಿವರ್ತನೆಗೆ ನಾಂದಿ ಹಾಡಿದವರು
ಶ್ರೀ ಬಸವಲಿಂಗಪ್ಪ
ಪ್ರೊ.ಎಂ.ಡಿ. ನಂಜುಂಡ ಸ್ವಾಮಿ
ಡಿ.ದೇವರಾಜ ಅರಸು
ಎಚ್.ಎಸ್.ರುದ್ರಪ್ಪ
5. ಮಹಿಳೆಯರ ಮದ್ಯಪಾನ ನಿಷೇಧ ಚಳವಳಿಯು ಈ ಚಳವಳಿಯ ಭಾಗವಾಗಿ ರೂಪುಗೊಳ್ಳುತ್ತದೆ
ಚಿಪ್ಕೊ ಚಳವಳಿ
ಕಾರ್ಮಿಕ ಚಳವಳಿ
ರೈತ ಚಳವಳಿ
ಅಸ್ಪೃಶ್ಯತೆ ವಿರೋಧಿ ಚಳವಳಿ
6. ಡಾ.ಶಿವರಾಮ ಕಾರಂತರ ನಾಯಕತ್ವದಲ್ಲಿ ನಡೆದ ಪರಿಸರ ಚಳವಳಿ
ಅಪ್ಪಿಕೋ ಚಳವಳಿ
ಕರಾವಳಿ ತೀರದ ಪರಿಸರ ಚಳವಳಿ
ಚಿಪ್ಕೋ ಚಳವಳಿ
ಕೈಗಾ ಅಣುಸ್ಥಾವರ ವಿರುದ್ಧದ ಚಳವಳಿ
7. ಚಾತುರ್ವರ್ಣ ಆಧಾರಿತ ಮಾನವವಿರೋಧಿ ಆಚರಣೆಗಳನ್ನು ಮತ್ತು ಅವುಗಳ ಪ್ರಾಬಲ್ಯವನ್ನು ತಡೆಯುವುದು ಈ ಚಳವಳಿಯ ಉದ್ದೇಶ
ಕಾರ್ಮಿಕ ಚಳವಳಿ
ಮಹಿಳಾ ಚಳವಳಿ
ಅಸ್ಪೃಶ್ಯತೆ ಆಚರಣೆ ವಿರೋಧಿ ಚಳವಳಿ
ರೈತ ಚಳವಳಿ
8. ಆತ್ಮಗೌರವ ಚಳವಳಿ ನಡೆಸಿದವರು
ಪೆರಿಯಾರ್ ರಾಮಸ್ವಾಮಿ
ಡಾ.ಬಿ.ಆರ್.ಅಂಬೇಡ್ಕರ್
ಜ್ಯೋತಿ ರಾವ್ ಫುಲೆ
ಎನ್.ಡಿ.ಸುಂದರೇಶ್
9. ಕೇರಳದ ಪಾಲ್ಘಾಟ್ ತಾಲ್ಲೂಕಿನಲ್ಲಿ ನಡೆದ ಪರಿಸರ ಚಳವಳಿ
ನರ್ಮದಾ ಬಚಾವೋ ಆಂದೋಲನ
ಅಪ್ಪಿಕೋ ಚಳವಳಿ
ಚಿಪ್ಕೋ ಚಳವಳಿ
ಮೌನ ಕಣಿವೆ ಆಂದೋಲನ
10. ಮೇಧಾ ಪಾಟ್ಕರ್ ನಡೆಸಿದ ಬಹುದೊಡ್ಡ ಪರಿಸರ ಚಳವಳಿ
ಮೌನಕಣಿವೆ ಆಂದೋಲನ
ನರ್ಮದಾ ಬಚಾವೊ ಆಂದೋಲನ
ಅಪ್ಪಿಕೋ ಚಳವಳಿ
ಚಿಪ್ಕೋ ಚಳವಳಿ
11. ಚಿಪ್ಕೋ ಚಳವಳಿ ಇಲ್ಲಿ ನಡೆಯಿತು
ಉತ್ತರ ಪ್ರದೇಶದ ತೆಹ್ರಿ ಘರ್ವಾಲ್ ಜಿಲ್ಲೆಯ ರೆನ್ನಿ ಗ್ರಾಮದಲ್ಲಿ
ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮದಲ್ಲಿ
ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ
ಕೇರಳದ ಪಾಲ್ಘಾಟ್ ತಾಲೂಕಿನಲ್ಲಿ
12 . ಈ ಕೆಳಗಿನ ಯಾವುದು ಅಪ್ಪಿಕೋ ಚಳವಳಿಯ ಉದ್ದೇಶವಲ್ಲ
ಮರಗಳ ಕಳ್ಳ ಸಾಗಾಣಿಕೆ ತಪ್ಪಿಸುವುದು
ಗಿಡಮರಗಳನ್ನು ಬೆಳೆಸುವುದು
ಅಣೆಕಟ್ಟು ನಿರ್ಮಾಣವನ್ನು ತಡೆಗಟ್ಟುವುದು
ಪರಿಸರದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು
13. " ಮೂಕ ನಾಯಕ" ಪತ್ರಿಕೆಯನ್ನು ಆರಂಭಿಸಿದವರು
ಪೆರಿಯಾರ್ ರಾಮಸ್ವಾಮಿ
ಡಾ.ಬಿ.ಆರ್.ಅಂಬೇಡ್ಕರ್
ಎಚ್.ಎಸ್.ರುದ್ರಪ್ಪ
ಶ್ರೀ ಬಸವಲಿಂಗಪ್ಪ
14. ಕರ್ನಾಟಕದಲ್ಲಿ ಇವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸ್ಥಾಪನೆಯಾಯಿತು
ಪ್ರೊ.ಎಂ.ಡಿ.ನಂಜುಂಡ ಸ್ವಾಮಿ
ಎಚ್.ಎಸ್.ರುದ್ರಪ್ಪ
ಎನ್.ಡಿ.ಸುಂದರೇಶ್
ಶ್ರೀ ಬಸವಲಿಂಗಪ್ಪ
15. 1980 ರ ದಶಕದಲ್ಲಿ ಪಕ್ಷಾತೀತವಾಗಿ ನಡೆದ ಸಾಮೂಹಿಕ ಚಳವಳಿ
ರೈತ ಚಳವಳಿ
ಕಾರ್ಮಿಕ ಚಳವಳಿ
ಮದ್ಯಪಾನ ನಿಷೇಧ ಚಳವಳಿ
ಮಹಿಳಾ ಚಳವಳಿ
16. ಎಂಭತ್ತರ ದಶಕದಲ್ಲಿ ಹೆಚ್ಚು ಗಮನ ಸೆಳೆದ ಸಾಮಾಜಿಕ ಚಳವಳಿಗಳಲ್ಲಿ ಪ್ರಮುಖವಾದುದು
ಮಹಿಳಾ ಚಳವಳಿ
ರೈತ ಚಳವಳಿ
ಕಾರ್ಮಿಕ ಚಳವಳಿ
ಮದ್ಯಪಾನ ನಿಷೇಧ ಚಳವಳಿ
17. ನರ್ಮದಾ ಬಚಾವೋ ಆಂದೋಲನ ಚಳುವಳಿಯ ನೇತೃತ್ವವನ್ನು ವಹಿಸಿದ ಪರಿಸರ ಪ್ರೇಮಿ
ಕುಸುಮಾ ಸೊರಬ
ಶಿವರಾಮ ಕಾರಂತ
ಎಚ್ಎಸ್ ರುದ್ರಪ್ಪ
ಮೇಧಾ ಪಾಟ್ಕರ್
18. ನಾವು ಆಳುವ ವರ್ಗ ವಾಗಬೇಕೆಂದು ಅಸ್ಪೃಶ್ಯರಿಗೆ ಕರೆ ಕೊಟ್ಟವರು
ಮಹಾತ್ಮ ಗಾಂಧೀಜಿ
ಡಾ ಬಿ ಆರ್ ಅಂಬೇಡ್ಕರ್
ಪ್ರೊ ನಂಜುಂಡ ಸ್ವಾಮಿ
ಡಿ ದೇವರಾಜ ಅರಸು
19. ಮೊತ್ತಮೊದಲ ಕಾರ್ಮಿಕರ ಸಂಘಟನೆಯ ಇಲ್ಲಿ ಆರಂಭವಾಯಿತು
ಲಂಡನ್
ಪ್ಯಾರಿಸ್
ಕೋಲ್ಕತ್ತಾ
ವಾಷಿಂಗ್ಟನ್
20. ಈ ಕೆಳಗೆ ರೈತ ಚಳುವಳಿಯ ಪ್ರಮುಖ ಬೇಡಿಕೆಗಳನ್ನು ನೀಡಿದೆ ಅವುಗಳಲ್ಲಿ ಯಾವುದು ಗುಂಪಿಗೆ ಸೇರುವುದಿಲ್ಲ
ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು
ಮದ್ಯಪಾನವನ್ನು ನಿಷೇಧಿಸಬೇಕು
ಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು
ಜಪ್ತಿ ಕಾರ್ಯಕ್ರಮಗಳನ್ನು ನಿಲ್ಲಬೇಕು
ಸ್ಥಳೀಯ ನೈಸರ್ಗಿಕ ಸಂಪತ್ತಿನಲ್ಲಿ ಸ್ಥಳೀಯ ಗ್ರಾಮಗಳಿಗೆ ಪಾಲು ದೊರೆಯಬೇಕು
